Karnataka 2nd PUC Exam 2020: ಪರೀಕ್ಷೆಯಲ್ಲಿ ಹೀಗೆ ಟೈಂ ಮ್ಯಾನೇಜ್ಮೆಂಟ್ ಮಾಡಿದ್ರೆ ಉತ್ತಮ ರಿಸಲ್ಟ್ ಖಚಿತ

ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿತ್ತು ಆದರೆ ಬರೆಯೋಕೆ ಸಮಯ ಸಾಕಾಗಲಿಲ್ಲ ಅನ್ನುವುದು. ಹೌದು ಈ ಸಮಸ್ಯೆಯನ್ನು ಅನೇಕ ವಿದ್ಯಾರ್ಥಿಗಳು ಎದುರಿಸುತ್ತಾರೆ ಹಾಗಾಗಿ ನಾವಿಲ್ಲಿ ಪರೀಕ್ಷಾ ಹಾಲ್ ನಲ್ಲಿ ಟೈಂ ಮ್ಯಾನೇಜ್ ಮಾಡೋದ್ಹೇಗೆ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಲು ಕೆಲವು ಅಂಶಗಳನ್ನು ಗಮನದಲ್ಲಿಡಬೇಕಾಗಿದೆ. ಮುಖ್ಯವಾಗಿ ಟೈಂ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾದದ್ದು ಯಾಕಂದ್ರೆ ಪರೀಕ್ಷಾ ಹಾಲ್ ನಿಂದ ಹೊರ ಬಂದ ವಿದ್ಯಾರ್ಥಿಗಳು ಹೇಳುವುದೇನೆಂದರೆ ನನಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿತ್ತು ಆದರೆ ಬರೆಯೋಕೆ ಸಮಯ ಸಾಕಾಗಲಿಲ್ಲ ಅನ್ನುವುದು. ಹೌದು ಈ ಸಮಸ್ಯೆಯನ್ನು ಅನೇಕ ವಿದ್ಯಾರ್ಥಿಗಳು ಎದುರಿಸುತ್ತಾರೆ ಹಾಗಾಗಿ ನಾವಿಲ್ಲಿ ಪರೀಕ್ಷಾ ಹಾಲ್ ನಲ್ಲಿ ಟೈಂ ಮ್ಯಾನೇಜ್ ಮಾಡೋದ್ಹೇಗೆ ಅನ್ನೋದನ್ನ ತಿಳಿಸಲಿದ್ದೇವೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ರೂ ಉತ್ತರಿಸೋಕೆ ಸಮಯ ಯಾಕೆ ಸಾಕಾಗಲ್ಲ?

ವಿದ್ಯಾರ್ಥಿಗಳಿಗೆ ಉಪಯುಕ್ತವಾಗು ಉದ್ದೇಶದಿಂದ ಕೆಲವು ಟಿಪ್ಸ್ ಅನ್ನು ನಾವಿಲ್ಲಿ ನೀಡಲಿದ್ದೇವೆ.

1. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು 15 ನಿಮಿಷಗಳ ಕಾಲ ಸಂಪೂರ್ಣವಾಗಿ ಗಮನಿಸಿ:

1. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು 15 ನಿಮಿಷಗಳ ಕಾಲ ಸಂಪೂರ್ಣವಾಗಿ ಗಮನಿಸಿ:

ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ ನಲ್ಲಿ ಪ್ರಶ್ನೆಯನ್ನು ಪಡೆದ ತಕ್ಷಣವೇ ಎಷ್ಟು ಪ್ರಶ್ನೆಗಳಿಗೆ ಮತ್ತು ಎಷ್ಟು ಪುಟಗಳ ಪ್ರಶ್ನೆಗಳಿವೆ ಎನ್ನುವುದನ್ನು ಮೊದಲು ಚೆಕ್ ಮಾಡಿಕೊಳ್ಳಿ. ನಂತರ ಪ್ರಶ್ನೆಪತ್ರಿಕೆಯಲ್ಲಿ ಏನಾದರು ಲೋಪವಿದೆಯೇ ಎಂದು ಪರೀಕ್ಷಿಸಿಕೊಳ್ಳಿ ನಂತರ ಕೊಟ್ಟಿರುವ ಪ್ರಶ್ನೆಗಳನ್ನು ಚೆಕ್ ಮಾಡಿಕೊಳ್ಳಿ ಯಾವುದು ಸುಲಭ ಮತ್ತು ಯಾವ ಪ್ರಶ್ನೆಗಳಿಗೆ ಉತ್ತರಿಸಲು ಸಮಯದ ಅಗತ್ಯವಿದೆ ಎನ್ನುವುದನ್ನು ನೋಟ್ ಮಾಡಿಕೊಳ್ಳಿ.ಇದರಿಂದ ಉತ್ತರವನ್ನು ಬರೆಯಲು ಇನ್ನಷ್ಟು ಸುಲಭವಾಗಬಹುದು.

2: ಹೀಗೆ ಆರ್ಡರ್ ನಲ್ಲಿ ಬರೆಯಬೇಕೆಂದು ನಿಯಮ ಹಾಕಿಕೊಳ್ಳಬೇಡಿ:

2: ಹೀಗೆ ಆರ್ಡರ್ ನಲ್ಲಿ ಬರೆಯಬೇಕೆಂದು ನಿಯಮ ಹಾಕಿಕೊಳ್ಳಬೇಡಿ:

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯುವಾಗ ಪ್ರಶ್ನೆಪತ್ರಿಕೆಯ ಸೆಕ್ಷನ್ A ಇಂದ ಪ್ರಾರಂಭ ಮಾಡಬೇಕು ಅಥವಾ ಸೆಕ್ಷನ್ D ಇಂದ ಪ್ರಾರಂಭ ಮಾಡಬೇಕು ಎನ್ನುವ ನಿಯಮ ಹಾಕಿಕೊಳ್ಳಬೇಡಿ. ಮೊದಲೇ ಹೇಳಿದಂತೆ 15 ನಿಮಿಷಗಳ ಕಾಲ ಪ್ರಶ್ನೆ ಪತ್ರಿಕೆಯನ್ನು ಪರಿಶೀಲಿಸಿಕೊಳ್ಳಿ ನಂತರ ಯಾವ ಪ್ರಶ್ನೆ ಸುಲಭ ಎನಿಸುವುದೋ ಆ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಪ್ರಾರಂಭಿಸಬಹುದು.

3. ನಿಗದಿತ ಸಮಯಕ್ಕೆ ಉತ್ತರ ಬರೆಯಲು ಪ್ಲಾನ್ ಹಾಕಿ:
 

3. ನಿಗದಿತ ಸಮಯಕ್ಕೆ ಉತ್ತರ ಬರೆಯಲು ಪ್ಲಾನ್ ಹಾಕಿ:

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಮಯ ಸಾಕಾಗಲಿಲ್ಲ ಎನ್ನುವ ಬದಲು ಪ್ರತಿ ಪ್ರಶ್ನೆಗಳಿಗೂ ಇಂತಿಷ್ಟು ಸಮಯದೊಳಗೆ ಬರೆದು ಮುಗಿಸಬೇಕು ಎಂದು ಪ್ಲಾನ್ ಮಾಡಿಕೊಳ್ಳಿ ಆಗ ಕೇಳಲಾಗಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಬರೆಯಬಹುದು ಮತ್ತು ಕೊನೆಯಲ್ಲಿ ಉತ್ತರ ಪರೀಕ್ಷೆಯನ್ನು 10 ನಿಮಿಷಗಳ ಕಾಲ ಪರಿಶೀಲಿಸಿಕೊಳ್ಳಬಹುದು. ಆಗ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಲು ಮರೆತಿದ್ದಲ್ಲಿ ಅಥವಾ ಖಾಲಿ ಜಾಗ ಬಿದ್ದಲ್ಲಿ ಉತ್ತರಿಸಲು ಸಹಾಯವಾದೀತು. ಸುಲಭ ಪ್ರಶ್ನೆಗಳನ್ನು ಬೇಗನೆ ಉತ್ತರಿಸಿದರೆ , ಕಠಿಣ ಪ್ರಶ್ನೆಗಳನ್ನು ಸ್ವಲ್ಪ ಸಮಯವನ್ನು ತೆಗೆದುಕೊಂಡು ಉತ್ತರಿಸಲು ಈ ಪ್ಲಾನ್ ಸಹಾಯವಾಗಬಹುದು.

 

 

4. ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಯೊಂದಿಗೆ ಸಮಯ ವ್ಯರ್ಥ ಮಾಡದಿರುವುದು:

4. ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಯೊಂದಿಗೆ ಸಮಯ ವ್ಯರ್ಥ ಮಾಡದಿರುವುದು:

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರಿಸುವಾಗ ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಉತ್ತರ ಸರಿಯಾಗಿ ನೆನಪಾಗದಿದ್ದಲ್ಲಿ 1 ರಿಂದ 2ನಿಮಿಷಗಳ ಕಾಲ ಅಲೋಚಿಸಿ ನಂತರ ಉತ್ತರಿಸಿ, ಕೆಲವೊಮ್ಮೆ ಎಷ್ಟೇ ಆಲೋಚಿಸಿದರೂ ಉತ್ತರ ನೆನಪಾಗದಿದ್ದಲ್ಲಿ ವಿದ್ಯಾರ್ಥಿಗಳು ಆ ಪ್ರಶ್ನೆಯ ಬದಲು ಬೇರೆ ಪ್ರಶ್ನೆಗೆ ಉತ್ತರಿಸಲು ನಿರ್ಧರಿಸಿ ಅಥವಾ ವಿದ್ಯಾರ್ಥಿಗಳು ಉತ್ತರ ನೆನಪಾಗದಿದ್ದಲ್ಲಿ ಇನ್ನುಳಿದ ಪ್ರಶ್ನೆಗಳನ್ನು ಉತ್ತರಿಸಿ ನಂತರ ಖಾಲಿ ಬಿಟ್ಟು ಈ ಪ್ರಶ್ನೆಯನ್ನು ಉತ್ತರಿಸುವುದು ಒಳಿತು.

ಹೀಗೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಟೈಂ ಮ್ಯಾನೇಜ್ಮೆಂಟ್ ಮಾಡಿಕೊಂಡ್ರೆ ಎಲ್ಲಾ ಪ್ರಶ್ನೆಗಳಿಗೂ ಯಾವುದೇ ಗೊಂದಲವಿಲ್ಲದೇ ಹಾಗೇ ಟೆನ್ಷನ್ ಇಲ್ಲದೇ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸೋಕೆ ಸುಲಭ ಆಗತ್ತೆ. ಇದರಿಂದ ನಿಮ್ಮ ಫಲಿತಾಂಶ ಕೂಡ ಉತ್ತಮವಾಗಿರುತ್ತದೆ.

 

 

For Quick Alerts
ALLOW NOTIFICATIONS  
For Daily Alerts

English summary
Here we are are giving time management tips for second puc students about how to manage time in exam hall.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X