ಕೊರೋನಾ ಸಮಸ್ಯೆಯಿಂದಾಗಿ ಹಲವರು ಉದ್ಯೋಗ ಬಿಟ್ಟು ಊರು ಸೇರಿಕೊಂಡಿದ್ದಾರೆ. ಈಗ ಅನ್‌ಲಾಕ್ 4.0 ಮಾರ್ಗಸೂಚಿ ಅನ್ವಯ ಅನೇಕ ಕಂಪೆನಿಗಳು ಮತ್ತೆ ಕೆಲಸ ಪ್ರಾರಂಭಿಸಿವೆ. ಈಗ ಅನೇಕ ಅಭ್ಯರ್ಥಿಗಳು ಕೂಡ ಉದ್ಯೋಗ ಹುಡುಕಲು ಪ್ರಾರಂಭಿಸಿರುತ್ತಾರೆ. ಈಗ ಉದ್ಯೋಗ ಹುಡುಕುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಹಾಗಾಗಿ ನಿಮ್ಮದೇ ಶೈಲಿಯಲ್ಲಿ ಉದ್ಯೋಗ ಹುಡುಕುವುದು ಹೇಗೆ ಎಂದು ಕರಿಯರ್ ಇಂಡಿಯಾ ಸಲಹೆ ನೀಡುತ್ತಿದೆ.

ಮಾನಸಿಕವಾಗಿ ಸದೃಢವಾಗಿರಿ:
ಕೊರೋನಾ ಸೋಂಕು ಹೆಚ್ಚುತ್ತಿರುವ ನಡುವೆಯೂ ಉದ್ಯೋಗ ಹುಡುವಿಕೆ ಸವಾಲೇ ಸರಿ. ಆದರೆ ನಮ್ಮ ಜೀವನದ ಅಗತ್ಯತೆಗಳು ಅಷ್ಟೇ ಮುಖ್ಯವಾಗಿದೆ. ಹಾಗಾಗಿ ಈಗಿರುವ ಸಂದರ್ಭಕ್ಕೆ ಹಲವರಿಗೆ ಉದ್ಯೋಗ ಅನಿವಾರ್ಯ ಹಾಗಾಗಿ ಕೊರೋನಾ ನಡುವೆಯೂ ಉದ್ಯೋಗ ಹುಡುಕಲು ಮಾನಸಿಕವಾಗಿ ಸದೃಢವಾಗಿರಿ.

ನಿಮ್ಮ ಗುರಿ ಸ್ಪಷ್ಟಪಡಿಸಿಕೊಳ್ಳಿ:
ಅಭ್ಯರ್ಥಿಗಳು ಉದ್ಯೋಗ ಹುಡುಕುವ ಮುನ್ನ ನಿಮ್ಮ ಗುರಿ ಸ್ಪಷ್ಟಪಡಿಸಿಕೊಳ್ಳಿ. ಯಾವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅದರ ಸಾಧಕ ಮತ್ತು ಭಾದಕಗಳ ಬಗೆಗೆ ಸಂಪೂರ್ಣ ಚಿಂತನೆ ನಡೆಸಿ. ನಿಮಗೆ ಇರುವ ಗುರಿ ಏನು ಅದಕ್ಕೆ ನೀವು ಆಯ್ಕೆ ಮಾಡಿಕೊಳ್ಳುವ ಉದ್ಯೋಗ ಪೂರಕ ವಾಗಿದೆಯೇ ? ಎಂದು ಆಲೋಚಿಸಿ. ನಿಮಗೆ ಸಂಪರ್ಕವುಳ್ಳ ಸಹುದ್ಯೋಗಿಗಳನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದುಕೊಳ್ಳಿ. ನಂತರ ನಿಮ್ಮ ಹುಡುಕಾಟದ ಪ್ರಯತ್ನ ನಡೆಸಿ.

ಲಿಂಕ್ಡಿನ್ ಸೋರ್ಸ್ ಬಳಸಿ:
ಅನೇಕರು ಈಗೀಗ ಉದ್ಯೋಗ ಹುಡುಕಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಇನ್ನು ಉದ್ಯೋಗ ಹುಡುಕಲು ಅನೇಕ ಸೋರ್ಸ್ ಗಳಿವೆ ಅದರಲ್ಲಿ ಲಿಂಕ್ಡಿನ್ ಕೂಡ ಒಂದು. ಇಲ್ಲಿ ಅನೇಕರು ನೇಮಕಾತಿ ಮಾಡಲು ಅಭ್ಯರ್ಥಿಗಳನ್ನು ಹುಡುಕುತ್ತಾರೆ ಹಾಗೂ ಅಭ್ಯರ್ಥಿಗಳು ಕೂಡ ಲಿಂಕ್ಡಿನ್ ನಲ್ಲಿ ಉದ್ಯೋಗ ಹುಡುಕಬಹುದು. ಹಾಗಾಗಿ ಲಿಂಕ್ಡಿನ್ ನಲ್ಲಿ ನಿಮ್ಮ ನಿಖರವಾದ ಮಾಹಿತಿಯನ್ನು ಸೇರಿಸಿ ಉದ್ಯೋಗ ಹುಡುಕಲು ಪ್ರಾರಂಭಿಸಿ.

ವೀಡಿಯೋ ಸಂದರ್ಶನಕ್ಕೆ ತಯಾರಿ ನಡೆಸಿ:
ಪ್ರಸ್ತುತ ಹವಾಮಾನವನ್ನು ಗಮನಿಸಿದರೆ, ಕೊರೋನಾ ಸಮಸ್ಯೆಯಿಂದಾಗಿ ಹಲವು ಸಂಸ್ಥೆಗಳು ಝೂಮ್, ಸ್ಕೈಪ್ ಅಥವಾ ಇತರ ಕೆಲವು ವೀಡಿಯೊ ಕಾನ್ಫರೆನ್ಸಿಂಗ್ ಸಾಫ್ಟ್‌ವೇರ್ ಮೂಲಕ ಸಂದರ್ಶನ ಮಾಡಲಾಗುತ್ತಿದೆ. ಹಾಗಾಗಿ ನೀವು ಇದಕ್ಕೆ ತಯಾರಿ ನಡೆಸಿ, ಇದಕ್ಕೆ ಅವಶ್ಯಕವಾದ ಇಂಟರ್ನೆಟ್ ಸೌಲಭ್ಯ ಒದಗಿಸಿಕೊಳ್ಳಿ. ನಂತರ ಕ್ಯಾಮೆರಾ ನೋಡಿ ಮಾತನಾಡುವುದು ಮತ್ತು ಮುಖದಲ್ಲಿ ಸ್ವಲ್ಪ ಆತ್ಮವಿಶ್ವಾಸ, ಕಿರುನಗೆಯಿಟ್ಟು ಮಾತನಾಡುವುದನ್ನು ಕಲಿತುಕೊಳ್ಳಿ. ಈ ರೀತಿಯಾಗಿ ವೀಡಿಯೋ ಸಂದರ್ಶನಕ್ಕೆ ಹೆಚ್ಚು ಅಭ್ಯಾಸ ನಡೆಸಿ ಇದರಿಂದ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

ವೃತ್ತಿ ಪಿವೋಟ್ ಅನ್ನು ಪರಿಗಣಿಸಿ:
ನೀವು ಕೆಲಸ ಮಾಡುವ ಸ್ಥಳದಲ್ಲಿ ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ, ಅಲ್ಲಿ ಎದುರಾದ ತೊಡಕುಗಳನ್ನು ಗಮನಿಸಿ. ಉದಾಹರಣೆಗೆ ನಿಮ್ಮಲ್ಲಿರುವ ಕೌಶಲ್ಯಗಳನ್ನು ಅಭಿವೃದ್ಧಿಸಿಕೊಳ್ಳಲು ಉತ್ತಮ ಸಮಯವಿದು ಎಂದು ಪರಿಗಣಿಸಿ. ಒಂದು ವೇಳೆ ಈ ಉದ್ಯೋಗಗಳಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದಲ್ಲಿ ಮುಂದೆ ಏನು ಮಾಡಬಹುದು ಎಂದು ಆಲೋಚಿಸಿ. ಸ್ವಂತ ಉದ್ಯೋಗ ಮಾಡಬಹುದೇ ಅಥವಾ ಇನ್ಯಾವುದೇ ವ್ಯವಹಾರಗಳಲ್ಲಿ ತೊಡಗಿಕೊಳ್ಳಲು ಸಶಕ್ತರೇ ಎಂದು ಚಿಂತಿಸಿ.
ಯಾವುದೇ ಕ್ಷೇತ್ರವಾಗಲಿ ನಿಮ್ಮ ಸಾಮರ್ಥ್ಯ ಎಷ್ಟಿದೆ ಅದಕ್ಕೆ ನಮ್ಮ ಪರಿಶ್ರಮ ಸಮರ್ಪಕವಾಗಿದೆಯೇ ಎಂಬುದನ್ನು ಗಮನಿಸಿಕೊಂಡು ಹೆಜ್ಜೆ ಇಡಿ.