ನಿಮ್ಮ ಮಕ್ಕಳು 10 ನೇ ತರಗತಿ ಪರೀಕ್ಷೆ ಬರೆಯಲಿದ್ದಾರಾ? ಹಾಗಾದ್ರೆ ಇದನ್ನು ಗಮನದಲ್ಲಿಡಿ

By Kavya

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಹಾಗಾಗಿ ಮಕ್ಕಳ ಮೇಲೆ ಓದಿನ ಬಗ್ಗೆ ಸಾಕಷ್ಟು ಒತ್ತಡವನ್ನು ಹೇರಲಾಗುತ್ತದೆ. ಪ್ರಾಥಮಿಕ ಶಾಲೆಯಿಂದಲೇ ಪ್ರಾರಂಭವಾಗುತ್ತದೆ. ಈ ಒತ್ತಡವು ಬೋರ್ಡ್ ಪರೀಕ್ಷೆಯನ್ನು ಬರೆಯುವಾಗ ಇನ್ನಷ್ಟು ಹೆಚ್ಚಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭನೇ ಈ ಒತ್ತಡ ಯಾಕೆ ಹೆಚ್ಚುತ್ತದೆಂದರೆ ಇದರಲ್ಲಿ ಉತ್ತಮ ಅಂಕ ಪಡೆದರೆನೇ ಮುಂದಿನ ಕೆರಿಯರ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಬೇಕಾದ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು. ಇನ್ನು ಮಕ್ಕಳನ್ನು ಅವರ ಸ್ನೇಹಿತರ ಜೊತೆ ಅಥವಾ ಸಂಬಂಧಿಕರ ಮಕ್ಕಳ ಜೊತೆ ಹೋಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಎಸ್‌ಎಸ್‌ಎಲ್‌ಸಿ ಪಿಯುಸಿ ಕಲಿಯುವ ಮಕ್ಕಳ ಹೆತ್ತವರಿಗೊಂದು ಕಿವಿಮಾತು

 

ತಮ್ಮ ಮಕ್ಕಳಿಗೆ ಮುಂದಿನ ಭವಿಷ್ಯ ಉತ್ತಮವಾಗಿರಬೇಕಾದರೆ ಎಸ್‌ಎಸ್‌ಎಲ್‌ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕೆಂಬುದು ಪ್ರತಿಯೊಬ್ಬ ಹೆತ್ತವರ ಆಸೆಯಾಗಿರುತ್ತದೆ. ಆದರೆ ಹೆತ್ತವರು ಮಕ್ಕಳ ಮೇಲೆ ಹಾಕುವ ಒತ್ತಡ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಬಲ್ಲದು. ಅದರ ಬದಲು ಹೆತ್ತವರು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಹುರಿದುಂಬಿಸಲು ಪ್ರಯತ್ನಿಸಬೇಕು.

ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳ ಹೆತ್ತವರು ಗಮನದಲ್ಲಿಡಬೇಕಾದ ಕೆಲವು ವಿಷ್ಯಗಳು ಇಲ್ಲಿವೆ.

1. ಇತರ ಮಕ್ಕಳಿಗೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ

1. ಇತರ ಮಕ್ಕಳಿಗೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ

ಬೇರೆ ಯಾರದ್ದಾದರೂ ಮಗ ಅಥವಾ ಮಗಳು ನಿಮ್ಮ ಮಗನಿಗಿಂತ ಕಲಿಕೆಯಲ್ಲಿ ಮುಂದಿರಬಹುದು. ಹಾಗಂತ ನೀವು ನಿಮ್ಮ ಮಕ್ಕಳನ್ನು ಅವರ ಜೊತೆ ಹೋಲಿಸಬೇಡಿ. ನಿಮ್ಮ ಮಗನೂ ಕಡಿಮೆ ಏನಿಲ್ಲ ಎನ್ನುವುದನ್ನು ನೆನಪಿಡಿ. ನಿಮ್ಮ ಮಗ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದನೆನ್ನುವ ಮಾತ್ರಕ್ಕೆ ಆತ ಜೀವನದಲ್ಲೇ ಫೈಲ್ ಆದ ಎಂದು ಅರ್ಥವಲ್ಲ. ಕಲಿಕೆಯ ವಿಷ್ಯದಲ್ಲಿ ನಿಮ್ಮ ಮಗನಿಗಿಂತ ಜಾಣನಾಗಿರುವ

2. ಒಳ್ಳೆಯ ನಿದ್ದೆ

2. ಒಳ್ಳೆಯ ನಿದ್ದೆ

ನಿಮ್ಮ ಮಕ್ಕಳು ಚೆನ್ನಾಗಿ ಕಲಿಯಬೇಕೆಂದಾದರೆ ಸರಿಯಾಗಿ ನಿದ್ದೆ ಮಾಡಬೇಕು. ಒಂದು ವೇಳೆ ನಿಮ್ಮ ಮಗ ಸರಿಯಾಗಿ ನಿದ್ದೆ ಮಾಡುತ್ತಿಲ್ಲವೆಂದಾದಲ್ಲಿ ನಿದ್ದೆ ಮಾಡುವ ಮೊದಲು ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಯೋಗ ಮಾಡಿ.

3. ಸಾಧನೆಯನ್ನು ಪ್ರಶಂಶಿಸಿ
 

3. ಸಾಧನೆಯನ್ನು ಪ್ರಶಂಶಿಸಿ

ಒಂದು ವೇಳೆ ನಿಮ್ಮ ಮಗ ಅಥವಾ ಮಗಳು ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದರೆ ಅವರಿಗೆ ಸಿಗಬೇಕಾದ ಕ್ರೆಡಿಟ್‌ನ್ನು ನೀಡಿ. ಪ್ರಶಂಶಿಸಿ. ಗಿಫ್ಟ್‌ ನೀಡಿ. ಇದರಿಂದ ಅವರು ತಮ್ಮ ಕಲಿಕೆಯನ್ನು ಅದೇ ರೀತಿ ಮುಂದುವರಿಸಲು ಪ್ರಯತ್ನಿಸುತ್ತಾರೆ.

4. ಸರಿಯಾದ ಡಯೆಟ್‌ನ್ನು ಅನುಸರಿಸಿ

4. ಸರಿಯಾದ ಡಯೆಟ್‌ನ್ನು ಅನುಸರಿಸಿ

ಹೆತ್ತವರು ಮಕ್ಕಳಿಗೆ ಓದುವಂತೆ ಸೂಚಿಸಬಹುದಷ್ಟೇ. ಆದರೆ ಸರಿಯಾಗಿ ಓದುವುದು ನಿಮ್ಮ ಮಗ/ಮಗಳ ಕರ್ತವ್ಯ. ಅವರು ಸರಿಯಾದ ಆಹಾರವನ್ನೇ ಸೇವಿಸುತ್ತಿದ್ದಾರಾ ಎನ್ನುವುದನ್ನು ನೋಡಿಕೊಳ್ಳುವುದು ಹೆತ್ತವರ ಜವಾಬ್ದಾರಿ. ಸರಿಯಾದ ಪ್ರಮಾಣದಲ್ಲಿ ನ್ಯೂಟ್ರೀಶನ್ ಸಿಗುತ್ತಿದೆಯಾ ಎನ್ನುವುದನ್ನು ಕಂಡುಕೊಳ್ಳಿ.

5. ಜೀವನ ಶೈಲಿಯನ್ನು ಬದಲಾಯಿಸಿ

5. ಜೀವನ ಶೈಲಿಯನ್ನು ಬದಲಾಯಿಸಿ

ಹೊಸ ರೂಲ್ಸ್‌ಗಳನ್ನು ಜಾರಿಗೆ ತನ್ನಿ . ಬೋರ್ಡ್ ಪರೀಕ್ಷೆಯ ಸಂದರ್ಭ ಮನೆಯಲ್ಲಿ ಯಾರೂ ಟಿವಿ ನೋಡುವ ಹಾಗಿಲ್ಲ. ಅಥವಾ ತಮ್ಮ, ತಂಗಿಯಂದಿರು ಆಟ ಆಡುವಂತಿಲ್ಲ ಎನ್ನುವ ರೂಲ್ಸ್‌ ಜಾರಿಗೆ ತನ್ನಿ. ಇದರಿಂದ ಓದುವ ಮಕ್ಕಳ ಮನಸ್ಸು ಇತರೆಡೆ ಸೆಳೆಯುವುದಿಲ್ಲ.

6. ವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳಿ

6. ವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳಿ

ನಿಮ್ಮ ಮಗು ಶೈಕ್ಷಣಿಕವಾಗಿ ನಿಂತಿದೆ ಎನ್ನುವುದನ್ನು ತಿಳಿಯಿರಿ ಅವರಿಂದಲೂ ಅದನ್ನೇ ಬಯಸಿ. ಹೆಚ್ಚು ನೀರಿಕ್ಷೆಯನ್ನು ಇಟ್ಟುಕೊಳ್ಳಬೇಡಿ. ಇದು ನಿಮ್ಮ ಮಗುವಿಗೆ ಇನ್ನಷ್ಟು ಕಠಿಣತೆಯನ್ನುಂಟಾಗಿಸಬಹುದು.

ಅವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಪಟ್ಟಿಮಾಡಿಟ್ಟುಕೊಳ್ಳಿ.

ಪರೀಕ್ಷೆಗೆ ಹೊರಡುವ ಮುನ್ನ ಅವರ ಬ್ಯಾಗ್‌ನಲ್ಲಿ ಪರೀಕ್ಷೆಗೆ ಬೇಕಾದ ಎಲ್ಲಾ ವಸ್ತುಗಳು ಇದೆಯಾ ಎನ್ನುವುದನ್ನು ಚೆಕ್ ಮಾಡಿ. ಪ್ರವೇಶ ಪತ್ರ, ಪೆನ್‌, ಕ್ಯಾಲ್ಕುಲೇಟರನ್ನು ಹಿಡಿದುಕೊಂಡಿದ್ದಾನೋ ಎನ್ನುವುದನ್ನು ನೋಡಿ.

7. ಪರೀಕ್ಷೆಯೇ ಎಲ್ಲವೂ ಅಲ್ಲ

7. ಪರೀಕ್ಷೆಯೇ ಎಲ್ಲವೂ ಅಲ್ಲ

ಸಾಕಷ್ಟು ಜನ ತಮ್ಮ ಬೋರ್ಡ್‌ ಪರೀಕ್ಷೆಯನ್ನು ಚೆನ್ನಾಗಿ ಮಾಡಿಲ್ಲ. ಅವರು ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಪರೀಕ್ಷೆ ಎಷ್ಟು ಮುಖ್ಯವಾದರೂ ಪರವಾಗಿಲ್ಲ. ಜೀವನಕ್ಕಿಂತ ಮುಖ್ಯವಾದುದು ಯಾವುದು ಇಲ್ಲ. ಇದನ್ನು ನೀವು ನಿಮ್ಮ ಮಕ್ಕಳಿಗೆ ಮನದಟ್ಟಾಗಿಸಬೇಕು.

8. ಓದಿನಲ್ಲಿ ಸಹಾಯ ಮಾಡಿ

8. ಓದಿನಲ್ಲಿ ಸಹಾಯ ಮಾಡಿ

ಮಕ್ಕಳು ಓದುವ ಎಲ್ಲಾ ವೊಷ್ಯವು ನಿಮಗೆ ಗೊತ್ತಿಲ್ಲದೇ ಇರಬಹುದು. ಆದರೆ ಕೆಲವೊಂದು ನಿಮಗೆ ತಿಳಿದಿರಬಹುದು. ಹಾಗಾಗಿ ನಿಮಗೆ ತಿಳಿದಿರುವ ವಿಷ್ಯಗಳ ಬಗ್ಗೆ ಅವರಿಗೆ ಓದಿನಲ್ಲಿ ಸಹಕರಿಸಿ. ನಿಮ್ಮ ಮಕ್ಕಳು ನಿಮ್ಮ ಸಹಾಯ ಬೇಡ ಎನ್ನ ಬಹುದು. ಆದರೂ ನೀವು ನಿಮ್ಮ ಮಕ್ಕಳಿಗೆ ಕಲಿಕೆಯಲ್ಲಿ ಅವರೊಂದಿಗೆ ಕೂತು ಸಹಕರಿಸುವುದರಿಂದ ಅವರಿಗೂ ಖುಷಿಯಾಗುತ್ತದೆ.

9. ಪ್ರಶ್ನಾಪತ್ರಿಕೆಯನ್ನು ಚರ್ಚಿಸಬೇಡಿ

9. ಪ್ರಶ್ನಾಪತ್ರಿಕೆಯನ್ನು ಚರ್ಚಿಸಬೇಡಿ

ಒಮ್ಮೆ ಪರೀಕ್ಷೆ ಬರೆದ ನಂತರ ಮತ್ತೆ ಆ ಪ್ರಶ್ನೆಪತ್ರಿಕೆಯ ಬಗ್ಗೆ ಚರ್ಚಿಸಬೇಡಿ. ಇದರಿಂದ ಕೇಲವ ಟೆನ್ಷನ್ ಹೆಚ್ಚುತ್ತದೆ. ನೀವು ಯಾವುದಾದರೂ ತಪ್ಪು ಉತ್ತರಗಳನ್ನು ಬರೆದಿದ್ದಲ್ಲಿ ಅದೇ ನಿಮ್ಮ ತಲೆಯಲ್ಲಿರುತ್ತದೆ. ಹಾಗಾಗಿ ಪ್ರಶ್ನೆ ಪತ್ರಿಕೆಯ ಚರ್ಚೆ ಮಾಡೋದೇ ಬೇಡ.

10. ಅವರು ಹೇಳೋದನ್ನು ಕೇಳಿ

10. ಅವರು ಹೇಳೋದನ್ನು ಕೇಳಿ

ಪ್ರಶ್ನೆ ಪತ್ರಿಕೆಗಳ ಬಗ್ಗೆ ಚರ್ಚಿಸಬೇಡಿ ಎಂದಿದ್ದಷ್ಟೇ ಹೊರತು ಅವರಲ್ಲಿ ಆ ಬಗ್ಗೆ ಮಾತಾಡೋದೇ ಬೇಡ ಎಂದಿಲ್ಲ. ಪರೀಕ್ಷೆ ಮುಗಿದ ನಂತರ ಪರೀಕ್ಷೆ ಹೇಗಾಯಿತು ಎನ್ನುವುದನ್ನು ಕೇಳಿ. ಅವರು ಹೇಳುವುದನ್ನು ತಾಳ್ಮೆಯಿಂದ ಆಲಿಸಿ. ಅವರು ಏನನ್ನು ಮಾತನಾಡ ಬಯಸುತ್ತಾರೋ ಎಲ್ಲವನ್ನೂ ಮಾತನಾಡಲಿ.

11. ಮಕ್ಕಳ ಪರೀಕ್ಷೆಯ ದಿನಾಂಕವನ್ನು ತಿಳಿಯಿರಿ

11. ಮಕ್ಕಳ ಪರೀಕ್ಷೆಯ ದಿನಾಂಕವನ್ನು ತಿಳಿಯಿರಿ

ಮಕ್ಕಳ ಪರೀಕ್ಷೆಯ ಶೆಡ್ಯೂಲ್ ಬಗ್ಗೆ ಮನೆ ಮಂದಿಗೆಲ್ಲಾ ಗೊತ್ತಿರಲಿ. ಅದನ್ನು ಒಂದು ಚೀಟಿಯಲ್ಲಿ ಬರೆದು ಫ್ರಿಡ್ಡ್ಜ್ ಮೇಲೋ ಅಥವಾ ಇನ್ಯಾವುದೋ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಅಂಟಿಸಿ. ಇದರಿಂದ ಮಕ್ಕಳ ಪರೀಕ್ಷೆಯ ಸಂದರ್ಭ ಮನೆ ಮಂದಿಯೂ ಅವರ ಓದಿನ ಕಡೆಗೆ ಹೆಚ್ಚು ಮಹತ್ವ ನೀಡುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Study Tips in Kannada: Find the latest tips for studying which will boost your exam results. Also get tips for students, teachers & parents to learn & explore more at Kannada Careerindia.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X