SSLC Exam 2020: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಲಹೆ

ಕೊರೋನಾ ಸಮಸ್ಯೆ ನಡುವೆಯೇ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಜುಲೈ 4ರ ವರೆಗೆ ಪರೀಕ್ಷೆ ನಡೆಯಲಿದೆ. ಈ ಮುಂಚೆ ಮಾರ್ಚ್ ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು ಆದರೆ ಕೊರೋನಾದಿಂದ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ನಂತರ ಪ್ರಕಟವಾದ ಪರಿಷ್ಕೃತ ವೇಳಾಪಟ್ಟಿಯ ಅನುಸಾರ ನಾಳೆಯಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಆತಂಕ ಪಡದೆ ಈ ಸಲಹೆಗಳನ್ನು ಪಾಲಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದು ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಲಹೆ

ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಿದೆ. ಆದರೆ ಕರ್ನಾಟಕ ಸರ್ಕಾರ ಮುಂಜಾಗ್ರತಾ ಕ್ರಮಗಳೊಂದಿಗೆ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಿದ್ಧವಾಗಿದೆ.

ಹಲವು ದಿನಗಳ ನಂತರ ಕೊರೊನಾ ಸಮಸ್ಯೆ ನಡುವೆಯೇ ಪರೀಕ್ಷೆ ಬರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಆತಂಕ ಪಡದೆ ಸುಗಮವಾಗಿ ಪರೀಕ್ಷೆಯನ್ನು ಎದುರಿಸಲು ಈ ಎಲ್ಲಾ ಸಲಹೆಗಳನ್ನು ಪಾಲಿಸಿ.

ಮಾಸ್ಕ್ ಧರಿಸಿ:

ವಿದ್ಯಾರ್ಥಿಗಳಿಗೆ ಈಗಾಗಲೆ ತಿಳಿದಿರುವಂತೆ ಕೊರೋನಾ ಸಮಸ್ಯೆ ಹೆಚ್ಚುತ್ತಲೇ ಇದೆ ಹಾಗಾಗಿ ಮನೆಯಿಂದ ಹೊರಡುವಾಗಲೇ ಮಾಸ್ಕ್ ಅನ್ನು ಧರಿಸಿ. ಎಲ್ಲಿಯೂ ಮಾಸ್ಕ್ ತೆರೆದು ಮೈಮರೆತು ವರ್ತಿಸಬೇಡಿ. ಮಾಸ್ಕ್ ಅನ್ನು ಮರೆಯದೇ ಜೋಪಾನವಾಗಿ ತೆಗೆದುಕೊಂಡು ಹೋಗಿ.

ಸ್ಯಾನಿಟೈಸರ್ ಉಪಯೋಗಿಸಿ:

ಪರೀಕ್ಷೆ ಎಂದ ಮೇಲೆ ವಿದ್ಯಾರ್ಥಿಗಳು ಆತಂಕ ಮತ್ತು ಭಯದಲ್ಲಿ ಇರುತ್ತೀರಿ ಆದರೆ ವಿದ್ಯಾರ್ಥಿಗಳು ಈ ಸಮಯದಲ್ಲಿ ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಮರೆಯುವಂತಿಲ್ಲ. ಪರೀಕ್ಷೆಗೆ ಹಾಜರಾಗುವ ಮುನ್ನ ಹಾಗೂ ಪರೀಕ್ಷಾ ಕೊಠಡಿಯಿಂದ ಹೊರ ಬಂದ ಮೇಲೆ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಿ.

ಉತ್ತಮ ಆಹಾರ ಸೇವಿಸಿ:

ಪರೀಕ್ಷೆಯ ಭಯದಲ್ಲಿ ಆಹಾರದ ಬಗೆಗೆ ನಿರ್ಲಕ್ಷ್ಯ ಬೇಡ. ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ಮೊದಲು ಆರೋಗ್ಯದ ಕಡೆ ಗಮನ ನೀಡಬೇಕು. ಪರೀಕ್ಷೆ ಸಮಯದಲ್ಲಿ ನಿಯಮಿತ ಆಹಾರ ಸೇವನೆ ಒಳ್ಳೆಯದು. ವಿದ್ಯಾರ್ಥಿಗಳು ಓದಿನ ನಡುವೆ ಊಟದ ಬಗ್ಗೆ ನಿರ್ಲಕ್ಷ್ಯತೇ ವಹಿಸುವುದು ಸಾಮಾನ್ಯ, ಹೆಚ್ಚು ಆಹಾರ ಸೇವಿಸಿದರೆ ನಿದ್ದೆ ಮಾಡಿ ಬಿಡುತ್ತೇವೆ ಅನ್ನೋ ಭಯದಿಂದ ಅನೇಕರು ಹೀಗೆ ಮಾಡುತ್ತಾರೆ. ಆದರೆ ಅದರಿಂದ ತೊಂದರೆಯೇ ಜಾಸ್ತಿ ಹಾಗಾಗಿ ಊಟದ ವಿಚಾರದಲ್ಲಿ ನಿಯಮಿತ ಆಹಾರ ಪದ್ಧತಿ ಅನುಸರಿಸಿ. ಅದರಲ್ಲೂ ಬೆಳಗಿನ ಉಪಹಾರ ಮಾತ್ರ ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಬೆಳಗಿನ ಸಮಯದಲ್ಲಿ ನೀವು ಹೆಚ್ಚು ಸೇವಿಸಿದಷ್ಟು ನಿಮ್ಮ ನೆನಪಿನ ಶಕ್ತಿ ಹೆಚ್ಚುತ್ತದೆ.

ನಿದ್ರೆ ಚೆನ್ನಾಗಿ ಮಾಡಿ:

ಪರೀಕ್ಷೆ ವೇಳೆಯಲ್ಲಿ ಅನೇಕ ವಿದ್ಯಾರ್ಥಿಗಳು ರಾತ್ರಿಯ ವೇಳೆಯಲ್ಲೇ ಹೆಚ್ಚು ಓದುವ ಪ್ರಯತ್ನ ಮಾಡುತ್ತಾರೆ. ರಾತ್ರಿಯಲ್ಲಿ ನಿದ್ರೆ ತಡೆಯಲು ಕಾಫಿ ಕುಡಿಯುವುದನ್ನೇ ಚಟವನ್ನಾಗಿಸಿಕೊಳ್ಳುತ್ತಾರೆ. ಅತಿಯಾದ ಕಾಫಿ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲೂ ರಾತ್ರಿಯ ವೇಳೆಯಲ್ಲಿ ನೀವು ಹೆಚ್ಚು ಕಾಫಿ ಕುಡಿಯುವುದರಿಂದ ನಿಮ್ಮ ಮಿದುಳು ಸರಿಯಾಗಿ ಕಾರ್ಯ ನಿರ್ವಹಿಸದೆ ದೇಹಕ್ಕೆ ಆಯಾಸವಾಗುತ್ತದೆ. ಇದರಿಂದ ಮರುದಿನ ನೀವು ಚಟುವಟಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾಳೆ ಪರೀಕ್ಷೆ ಇರುವ ಕಾರಣ ಇಂದು ಹೆಚ್ಚು ನಿದ್ದೆಗೆಡುವುದು ಸೂಕ್ತವಲ್ಲ.

ಪ್ರಯಾಣದಲ್ಲಿ ಗಮನ:

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈ ಕೊರೋನಾ ನಡುವೆಯೂ ಪರೀಕ್ಷೆ ಇರುವ ಕಾರಣ ಪರೀಕ್ಷೆಗೆ ಹಾಜರಾಗಬೇಕಿದೆ ಹಾಗಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಹೆಚ್ಚು ಕಾಳಜಿಯಿಂದಿರಿ. ಮನೆಯಿಂದ ಪರೀಕ್ಷಾ ಕೊಠಡಿಗೆ ಹೋಗುವಾಗ ಮಾಸ್ಕ್ ಮತ್ತು ಸ್ಯಾನಿಟೈಸರ್ ನೊಂದಿಗೆ ಪ್ರಯಾಣ ಮಾಡಿ. ಪ್ರಯಾಣ ಮಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

ಪರೀಕ್ಷಾ ಕೊಠಡಿಯಲ್ಲಿ ಗಮನ:

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಹಾಜರಾಗುವ ಮುನ್ನ ಮತ್ತು ಹಾಜರಾದ ನಂತರವೂ ಹೆಚ್ಚು ಜಾಗರೂಕರಾಗಿರಿ. ಅಗತ್ಯ ವಸ್ತುಗಳನ್ನು ಬಳಕೆ ಮಾಡಿರುತ್ತೀರಿ ಹಾಗಾಗಿ ಪರೀಕ್ಷೆ ನಂತರ ಸ್ಯಾನಿಟೈಸರ್ ಬಳಸಲು ಮರೆಯದಿರಿ.

ಸಾಮಾಜಿಕ ಅಂತರವಿರಲಿ:

ಕೊರೋನಾ ಭೀತಿಯಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಮತ್ತು ಪರೀಕ್ಷೆ ಮುಗಿದ ನಂತರ ಪರಿಚಿತರ ಅಥವಾ ಸ್ನೇಹಿತರೊಂದಿಗೆ ಬೆರೆಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
Tips For Students Who Are Attending To SSLC Exam From Tomorrow. read on
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X