ಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿ

ವಿದೇಶಕ್ಕೆ ಹೋಗೋದು ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಹೌದು ವಿದೇಶಕ್ಕೆ ಪ್ರವಾಸ ಹೋಗೋದು ಅಥವಾ ವಿದೇಶದಲ್ಲಿ ಕೆಲಸಕ್ಕೆ ಸೇರೋದು ಅಥವಾ ವಿದೇಶದಲ್ಲಿ ಓದೋದು ಅಂದ್ರೆ ನಮಗೆ ಎಲ್ಲಿಲ್ಲದ ಆಸಕ್ತಿ ಹುಟ್ಟಿಕೊಳ್ಳುತ್ತೆ. ಹಾಗಿರುವಾಗ ವಿದೇಶದಲ್ಲಿ ನಮ್ಮ ವಿದ್ಯಾಭ್ಯಾಸ ಮಾಡೋದು ಅಂದ್ರೆ ಏನು ಸುಮ್ನೆನಾ? ಅಲ್ಲಿ ವಿದ್ಯಾಭ್ಯಾಸ ಮಾಡಿದ್ರೆ ತುಂಬಾನೆ ಉಪಯೋಗಗಳಿವೆ ಗೊತ್ತಾ ? ಅಲ್ಲಿ ಜನರ ಜೊತೆ ಬೆರೆಯಬಹುದು. ಅಲ್ಲಿನ ವಾತಾವರಣದಿಂದ ಕಲಿಯೋದು ಇರತ್ತೆ, ಹೊಸ ಹೊಸ ಜನರೊಂದಿಗೆ ಸಂವಹನ ನಡೆಸುವುದು ಮತ್ತು ಅಲ್ಲಿನ ತಾಣಗಳನ್ನು ವೀಕ್ಷಿಸುವುದು. ಅಬ್ಬಬ್ಬಾ ಎಷ್ಟೆಲ್ಲಾ ಕುತೂಹಲ ಹುಟ್ಟಿಸುವ ವಿಚಾರಗಳಿವೆ ಅಲ್ವಾ! ಹಾಗಿದ್ರೆ ನಾವು ಯಾಕೆ ಒಮ್ಮೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬಾರದು? ಅಲ್ಲಿ ಸ್ಟಡಿ ಮಾಡಿದ್ರೆ ಏನೆಲ್ಲಾ ಲಾಭ ಇದೆ ಅಂತೀರಾ ಮುಂದೆ ಓದಿ

 

ಇತ್ತೀಚೆಗಷ್ಟೇ ಪಿಯುಸಿ ಫಲಿತಾಂಶ ಬಂದಿದೆ ಹಾಗೆ ಪಿಯುಸಿ ನಂತರ ಕೈಗೊಳ್ಳುವ ನಿರ್ಧಾರಗಳು ಬದುಕಿನ ಹಾದಿಯನ್ನು ನಿರ್ಧರಿಸುವಂತದ್ದು. ಹಾಗಾಗಿ ನೀವು ಈಗ ವಿದೇಶಕ್ಕೆ ಹೋಗಿ ನಿಮ್ಮ ಮುಂದಿನ ವಿದ್ಯಾಭ್ಯಾಸವನ್ನು ಕೈಗೊಂಡರೆ ಎಷ್ಷು ಚೆನ್ನಾಗಿರತ್ತೆ ಅಲ್ವಾ! ಹಾಗಿದ್ರೆ ಇದರಿಂದ ಏನೆಲ್ಲಾ ಲಾಭಗಳಿವೆ ಅಂತೀರಾ ? ಈ ಬಗ್ಗೆ ನಾವು ನಿಮಗೆ ಹೆಚ್ಚು ಮಾಹಿತಿಯನ್ನು ನೀಡಲಿದ್ದೇವೆ.

ವಿದೇಶದಲ್ಲಿ ಅಧ್ಯಯನದಿಂದ ಭಾರೀ ಲಾಭಗಳು

1. ವಿವಿಧ ಕೋರ್ಸ್‌ಗಳು ಲಭ್ಯ:

1. ವಿವಿಧ ಕೋರ್ಸ್‌ಗಳು ಲಭ್ಯ:

ಪಿಯುಸಿ ನಂತರ ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವುದಾದರೆ ಅಲ್ಲಿ ಹಲವಾರು ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು ಕಾರಣ ಅಲ್ಲಿ ವಿವಿಧ ಪ್ರೊಫೆಷನಲ್ ಮತ್ತು ಡಿಪ್ಲೋಮ ಕೋರ್ಸ್‌ಗಳು ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾದುವೆಂದರೆ:

* ಪದವಿ ಕೋರ್ಸ್

* ಇಂಟಿಗ್ರೇಟೆಡ್ ಕೋರ್ಸ್

* ಡಿಪ್ಲೋಮ ಕೋರ್ಸ್

* ಸರ್ಟಿಫಿಕೇಟ್ ಕೋರ್ಸ್

ನೀವು ಏಕಕಾಲಕ್ಕೆ ಎರಡು ಕೋರ್ಸ್‌ಗಳನ್ನು ಮಾಡಬಹುದು ಅಂದರೆ ಡಿಪ್ಲೋಮ ಕೋರ್ಸ್‌ ಜೊತೆ ಜೊತೆಗೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು. ಇವೆರಡು ಅಲ್ಪಾವಧಿಯ ಕೋರ್ಸ್‌ಗಳಾಗಿರುವುದರಿಂದ ಉತ್ತಮ ರೀತಿಯ ಪ್ರಯೋಜನವನ್ನು ಪಡೆಯಬಹುದು. ಪದವಿ ಕೋರ್ಸ್‌ಗಳು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಹಾಗಾಗಿ ವಿದ್ಯಾರ್ಥಿಗಳು ನಿಮ್ಮ ಅವಶ್ಯಕತೆಗನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.

2. ಶೈಕ್ಷಣಿಕ ಗುಣಲಕ್ಷಣಗಳು ಉತ್ತಮ:

2. ಶೈಕ್ಷಣಿಕ ಗುಣಲಕ್ಷಣಗಳು ಉತ್ತಮ:

ಭಾರತದಲ್ಲಿನ ವಿದ್ಯಾಭ್ಯಾಸದಲ್ಲಿ ತರಗತಿಯೊಳಗಿನ ಪಾಠ ಮತ್ತು ಕಲಿಕೆಗೆ ಜೊತೆಗೆ ಸೈದ್ಧಾಂತಿಕ ಜ್ಞಾನವನ್ನು ನೀಡುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಆದರೆ ವಿದೇಶಗಳಲ್ಲಿ ತರಗತಿಯಲ್ಲಿನ ಪಾಠ, ಕಲಿಕೆ ಜೊತೆಗೆ ಪ್ರಾಯೋಗಿಕ ಕಲಿಕೆಗೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ವಿದೇಶದಲ್ಲಿನ ಶೈಕ್ಷಣಿಕ ಗುಣಲಕ್ಷಣಗಳು ಉತ್ತಮವಾಗಿವೆ.

3. ವಿವಿಧ  ಸ್ಥಳಗಳನ್ನು ಆಯ್ಕೆಗಳನ್ನು ಮಾಡುವ ಅವಕಾಶ:
 

3. ವಿವಿಧ ಸ್ಥಳಗಳನ್ನು ಆಯ್ಕೆಗಳನ್ನು ಮಾಡುವ ಅವಕಾಶ:

ಪಿಯುಸಿ ನಂತರ ನೀವು ವಿದೇಶದಲ್ಲಿ ಓದಲು ನಿರ್ಧರಿಸಿದ್ದಲ್ಲಿ ನಿಮಗೆ ಯಾವ ದೇಶದಲ್ಲಿ ಓದಬೇಕೆಂದು ನಿರ್ಧರಿಸಲು ಆಯ್ಕೆಗಳು ನಿಮ್ಮ ಮುಂದಿವೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲಿ ಓದಬೇಕು ಎಂದು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿರುವ ದೇಶಗಳ ವಿವರ ಇಲ್ಲಿದೆ:

* ಯುಎಸ್‌ಎ

* ಯುರೋಪಿಯನ್ ನೇಷನ್ಸ್

* ಕೆನಡಾ

* ಆಸ್ಟ್ರೇಲಿಯಾ

* ನ್ಯೂಜಿಲ್ಯಾಂಡ್

* ಸಿಂಗಾಪೂರ್

4. ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳು ಲಭ್ಯ:

4. ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳು ಲಭ್ಯ:

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳಲ್ಲಿ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆ. ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳು ಯಾವುವೆಂದರೆ:

* ಇಂಜಿನಿಯರಿಂಗ್

* ಫಾರ್ಮೆಸಿ

* ಮೆಡಿಸಿನ್

* ಮ್ಯಾನೇಜ್ಮೆಂಟ್

* ಅಕೌಂಟಿಂಗ್ ಮತ್ತು ಫಿನಾನ್ಸ್

* ಹೋಟೆಲ್ ಮ್ಯಾನೇಜ್ಮೆಂಟ್

* ಕ್ಯುಲಿನರಿ ಆರ್ಟ್ಸ್ ಮತ್ತು ಇತ್ಯಾದಿ.

5.ಪ್ರಮುಖ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಅವಕಾಶ:

5.ಪ್ರಮುಖ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಅವಕಾಶ:

ಪ್ರಸಿದ್ಧಿ ಪಡೆದಿರುವ ದೇಶಗಳಲ್ಲಿ ನೀವು ವಿದ್ಯಾಭ್ಯಾಸ ಮಾಡುವುದಾದರೆ ನಿಮಗೆ ಪ್ರತಿಷ್ಠಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಓದುವ ಅವಕಾಶ ಸಿಗುತ್ತದೆ. ಹಲವಾರು ದೇಶಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿದ್ದು ಅಲ್ಲಿನ ಮೂಲಸೌಕರ್ಯ, ಉತ್ತಮ ಗುಣಮಟ್ಟದ ಬೋಧಕವರ್ಗ ಮತ್ತು ಇತರೆ ಸೌಲಭ್ಯಗಳು ಉತ್ತಮವಾಗಿರುತ್ತವೆ ಅದರಿಂದ ನಿಮ್ಮ ಓದಿಗೆ ಇನ್ನಷ್ಟು ಪ್ರಯೋಜನವಾಗಲಿದೆ.

6. ಹೊಸ ಅನುಭವ ಪಡೆಯಲು ಅವಕಾಶ ಸಿಗುತ್ತದೆ:

6. ಹೊಸ ಅನುಭವ ಪಡೆಯಲು ಅವಕಾಶ ಸಿಗುತ್ತದೆ:

ನೀವೂ ವಿದೇಶಕ್ಕೆ ಹೋಗಿ ಓದೋದಾದ್ರೆ ನಿಮಗೆ ದುಡ್ಡು ಕೊಟ್ಟರೂ ಕೊಂಡುಕೊಳ್ಳಲಾಗದಷ್ಟು ಪ್ರಯೋಜನಗಳಿವೆ ಗೊತ್ತಾ? ವಿದೇಶದಲ್ಲಿ ಕೇವಲ ವಿದ್ಯಾಭ್ಯಾಸ ಮಾಡೋದಷ್ಟೇ ಅಲ್ಲ ವಿಭಿನ್ನ ಸಂಸ್ಕೃತಿಯ ಜನರೊಂದಿಗೆ ಬೆರೆಯಬಹುದು, ಅವರ ಸಂಸ್ಕೃತಿಯನ್ನು ತಿಳಿಯಬಹುದು ಹಾಗೆ ಅವರೊಂದಿಗೆ ನಾವೂ ಬೆರೆತು ನಮ್ಮ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದು. ಹಾಗಾಗಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ನಿಮ್ಮ ಬದುಕಿನ ಶೈಲಿ ವಿಭಿನ್ನವಾಗುತ್ತದೆ.

7. ಪಾರ್ಟ್‌ ಟೈಂ ಕೆಲಸ ಮಾಡುವ ಅವಕಾಶಗಳು ಲಭ್ಯ:

7. ಪಾರ್ಟ್‌ ಟೈಂ ಕೆಲಸ ಮಾಡುವ ಅವಕಾಶಗಳು ಲಭ್ಯ:

ವಿದೇಶದಲ್ಲಿ ನೀವು ಓದುವುದರ ಜೊತೆಗೆ ನಿಮ್ಮ ಖರ್ಚಿಗೆ ನೀವೇ ದುಡಿಯಬಹುದು ಹೇಗೆ ಅಂತೀರಾ! ಅಲ್ಲಿ ವಿದ್ಯಾರ್ಥಿಗಳಿಗೆ ಪಾರ್ಟ್‌ಟೈಂ ಕೆಲಸ ಮಾಡಲು ಹಲವಾರು ಅವಕಾಶಗಳು ಲಭ್ಯವಿವೆ. ಹೀಗೆ ಹಲವಾರು ವಿದ್ಯಾರ್ಥಿಗಳು ಓದಿನ ಜೊತೆಗೆ ದುಡಿದು ಒಳ್ಳೆಯ ಅನುಭವವನ್ನು ಪಡೆದಿದ್ದಾರೆ. ಹಾಗಾಗಿ ನೀವೂ ಕೂಡ ಈ ಅವಕಾಶಗಳನ್ನು ಬಳಸಿಕೊಳ್ಳಬಹುದು.

8. ಭವಿಷ್ಯದ ಓದಿಗೆ ಉತ್ತಮ ಬುನಾದಿ ಹಾಕಿಕೊಳ್ಳಲು ಆಯ್ಕೆಗಳಿವೆ:

8. ಭವಿಷ್ಯದ ಓದಿಗೆ ಉತ್ತಮ ಬುನಾದಿ ಹಾಕಿಕೊಳ್ಳಲು ಆಯ್ಕೆಗಳಿವೆ:

ನೀವು ವಿದೇಶದಲ್ಲಿ ಪದವಿ ಅಥವಾ ಡಿಪ್ಲೋಮ ಕೋರ್ಸ್‌ ಮಾಡಿದ ನಂತರ ನಿಮ್ಮ ಉತ್ತಮ ಭವಿಷ್ಯದ ಬುನಾದಿಗಾಗಿ ನೀವು ಅಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯಬಹುದು ಅಥವಾ ಬೇರೆ ದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ನೀವು ನಿಮ್ಮ ಮುಂದಿನ ಶಿಕ್ಷಣವನ್ನು ಮುಂದುವರೆಸಬಹುದು. ಇದು ನಿಮ್ಮ ಆಸಕ್ತಿಯ ಮೇಲೆ ಅವಲಂಭಿತವಾಗಿರುತ್ತದೆ.

9. ವಿದೇಶದಲ್ಲಿ ಕೆಲಸ ನಿರ್ವಹಿಸಲು ಮತ್ತು ವಾಸ ಹೂಡಲು ದಾರಿಯಾಗಬಹುದು:

9. ವಿದೇಶದಲ್ಲಿ ಕೆಲಸ ನಿರ್ವಹಿಸಲು ಮತ್ತು ವಾಸ ಹೂಡಲು ದಾರಿಯಾಗಬಹುದು:

ನೀವು ವಿದೇಶದಲ್ಲಿ ಸ್ಟಡಿ ಮಾಡಿದ್ರೆ ನೀವು ಅದೃಷ್ಟವಂತರೇ ಹೌದು ಏಕೆಂದರೆ ನೀವು ವಿದೇಶದಲ್ಲಿ ಓದು ಮುಗಿಸಿದ ನಂತರ ನೀವು ಅಲ್ಲಿಯೇ ಕೆಲಸವನ್ನು ಸುಲಭವಾಗಿ ಹುಡುಕಿಕೊಳ್ಳಬಹುದು ಅಥವಾ ನಿಮಗೆ ವಿದೇಶದಲ್ಲಿ ನೆಲೆಸಬೇಕೆಂಬ ಆಸೆ ಇದ್ದಲ್ಲಿ ನೀವು ಅಲ್ಲಿಯೇ ಬಹು ಬೇಗ ಕೆಲಸ ಹುಡುಕಿಕೊಂಡು ನೀವು ಅಲ್ಲಿಯೇ ನೆಲೆಸಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving information to students about advantages of studying abroad after class 12
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more