ಕಾಲೇಜಿಗೆ ಸೇರಿದ ಮೊದಲ ದಿನ ಹೇಗಿರಬೇಕು? ಎನ್ನುವುದಕ್ಕೆ ಇಲ್ಲಿದೆ ಕಿವಿಮಾತು

ಕಾಲೇಜು ಅಂದರೆ ಪ್ರತಿಯೊಬ್ಬರ ಹೃದಯದಲ್ಲೂ ಅರಳುವ ಕಲರ್‌ಫುರ್ ರೈನ್‌ಬೋ ಇದ್ದ ಹಾಗೆ. ಇನ್ನೂ ಎಷ್ಟೋ ಹುಡುಗ ಹುಡುಗಿಯರು ಕಾಲೇಜು ಮೆಟ್ಟಿಲು ಹತ್ತೋಕೆ ರೆಡಿಯಾಗಿ ನಿಂತಿದ್ದೀರಾ. ಹಾಗಿದ್ದರೆ ಕಾಲೇಜಿನ ಮೊದಲ ದಿನ ಹೇಗಿರಬೇಕು? ಮತ್ತು ಹೇಗೆಲ್ಲಾ ತಯಾರಾಗಿ ಹೋಗ್ಬೇಕು ಅನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ.

ಶಾಲೆಗೂ ಕಾಲೇಜಿಗೂ ಅಜಗಜಾಂತರ ವ್ಯತ್ಯಾಸ ಇದೆ.ಶಾಲೆಗಳಲ್ಲಿ ರೆಕ್ಕೆ ಮುದುಡಿ ಕೂರುತ್ತಿದ್ದವರೆಲ್ಲಾ ಕಾಲೇಜು ಅಂದಾಗ ತುಂಬಾನೆ ಫ್ರೀಡಂ ಸಿಕ್ತು ಅನ್ನುವಾ ಹಾಗೆ ಕನಸುಗಳನ್ನು ಕಾಣುವ ಕ್ಷಣ ಇಂತಹ ಸುಂದರವಾದ ದಿನಗಳಿಗೆ ಎಂಟ್ರಿ ಕೊಡುವ ಮೊದಲ ದಿನ ಹೇಗಿರಬೇಕು ಮತ್ತು ಸುಂದರವಾಗಿಸಿಕೊಳ್ಳಬೇಕು ಎನ್ನುವುದಕ್ಕೆ ಈ ಟಿಪ್ಸ್ ಫಾಲೋ ಮಾಡಿ.

ಕಾಲೇಜು ಫಸ್ಟ್ ಡೇ ಕಲರ್‌ಫುಲ್ ಆಗೋಕೆ ಹೀಗೆ ಮಾಡಿ

ಆತ್ಮವಿಶ್ವಾಸದಿಂದಿರಿ :

ಆತ್ಮವಿಶ್ವಾಸದಿಂದಿರಿ :

ಕಾಲೇಜಿನ ಮೊದಲ ದಿನ ಯಾವುದೇ ಆತಂಕಗಳು ಬೇಡ. ಹೊಸ ದಿನಗಳು ಮತ್ತು ಹೊಸ ಗೆಳೆಯ / ಗೆಳತಿಯರು ಎನ್ನು ಭಯವಿಲ್ಲದೆ ಆತ್ಮವಿಶ್ವಾಸದಿಂದ ಕಾಲೇಜಿಗೆ ಹೋಗಿ. ಅಲ್ಲಿ ಪರಿಚಯವಾಗುವ ಸ್ನೇಹಿತರೊಂದಿಗೆ ಶಿಕ್ಷಕರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಿ.

 

ನಗುಮುಖದಿಂದಿರಿ:

ನಗುಮುಖದಿಂದಿರಿ:

ಮುಖದಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ದೂರ ಮಾಡಿ. ಸದಾ ನಗುಮುಖದಿಂದ ಎಲ್ಲರತ್ತ ನೋಡಿ ಮಾತನಾಡಿಸಿ. ಬೇರೆಯವರು ನಿಮ್ಮನ್ನು ನೋಡಿ ಆಕರ್ಷಿತರಾಗಿ ನಿಮ್ಮ ಗೆಳೆತನವನ್ನು ಬೆಳೆಸುವರು. ನೀವು ಸದಾ ನಗುಮುಖದಿಂದಿದ್ದಾಗ ಸ್ನೇಹಿತರಿಗೂ ನಿಮ್ಮ ಸಹವಾಸ ಮಾಡುವ ಆಸೆ ಮೂಡುವುದು.

 

 

ಉತ್ತಮ ರೀತಿಯ ವಸ್ತ್ರ ಧರಿಸಿ:
 

ಉತ್ತಮ ರೀತಿಯ ವಸ್ತ್ರ ಧರಿಸಿ:

ಕಾಲೇಜು ಅಂದಾಕ್ಷಣ ಮನಸ್ಸಿಗೆ ಹೇಗೆ ಬೇಕೋ ಹಾಗೆ ಇರುವುದಲ್ಲ. ಅಲ್ಲಿ ನೀವು ವಿದ್ಯಾಭ್ಯಾಸವನ್ನು ಮಾಡುತ್ತೀರಿ ಹಾಗೆ ಅಲ್ಲಿ ನಿಮ್ಮ ಹಾಗೆ ಹಲವಾರು ವಿದ್ಯಾರ್ಥಿಗಳು ಇರುತ್ತಾರೆ. ಹಾಗಾಗಿ ನೀವು ಕಾಲೇಜಿಗೆ ಹೋಗುವ ಮೊದಲು ದಿನ ಉತ್ತಮ ರೀತಿಯ ವಸ್ತ್ರ ಧರಿಸಿ ಹೋಗಿ. ಇದರಿಂದ ನೀವು ಎಲ್ಲರ ಗಮನವನ್ನು ಸೆಳೆಯಬಹುದು.

 

ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಿ:

ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಿ:

ಕಾಲೇಜಿನ ಮೊದಲ ದಿನ ಎಂದು ನಿರ್ಲಕ್ಷ್ಯಿಸದೆ ನಿಗದಿತ ಸಮಯಕ್ಕೆ ಕಾಲೇಜಿಗೆ ತಲುಪಿ. ಇದರಿಂದ ನೀವು ಸಮಯ ಪಾಲನೆ ಮಾಡಿದಂತಾಗುವುದಲ್ಲದೇ ನಿಮ್ಮ ಫ್ಯಾಧ್ಯಾಪಕರು ಕೂಡ ಮೆಚ್ಚುವರು. ವಿದ್ಯಾರ್ಥಿಗಳಿಗೆ ಶಾಲೆಯಾಗಲಿ ಅಥವಾ ಕಾಲೇಜು ಆಗಲಿ ಶಿಸ್ತು ಮುಖ್ಯ ಹಾಗಾಗಿ ಸಮಯ ಪಾಲನೆ ಮಾಡಲು ಮರೆಯದಿರಿ. ಅದರಲ್ಲೂ ಮೊದಲ ದಿನ ಅಂತು ನಿಗದಿತ ಸಮಯಕ್ಕೂ ಮುಂಚಿತವಾಗಿಯೇ ತರಗತಿಯನ್ನು ತಲುಪಿ.

 

ಅಗತ್ಯ ವಸ್ತುಗಳನ್ನು ಒಯ್ಯಲು ಮರೆಯದಿರಿ:

ಅಗತ್ಯ ವಸ್ತುಗಳನ್ನು ಒಯ್ಯಲು ಮರೆಯದಿರಿ:

ನೀವು ಕಾಲೇಜಿಗೆ ಸೇರಿದ ನಂತರ ಮೊದಲ ದಿನ ಕಾಲೇಜಿಗೆ ಹೆಜ್ಜೆ ಇಡುವಾಗ ನಿಮ್ಮ ದಾಖಲಾತಿಯ ಅಗತ್ಯ ದಾಖಲೆಗಳ ಪ್ರತಿಯನ್ನು ಒಯ್ಯಿರಿ. ಏಕೆಂದರೆ ಕಾಲೇಜಿನಲ್ಲಿ ಪ್ರಾಧ್ಯಾಪಕರು ಕೇಳಿದಾಗ ನಿಮ್ಮ ಬಳಿ ಇಲ್ಲದಿದ್ದರೆ ಅದು ಕಸಿವಿಸಿಗೊಳಿಸುವುದು. ಹಾಗೆ ಮೊದಲ ಎಂದು ನಿರ್ಲಕ್ಷಿಸದೆ ಒಂದು ನೋಟ್ ಬುಕ್ ಮತ್ತು ಪೆನ್ ಮತ್ತು ಬ್ಯಾಗ್ ತೆಗೆದುಕೊಂಡು ಹೋಗುವುದು ವಿದ್ಯಾರ್ಥಿಗಳ ಲಕ್ಷಣ.

 

ಗೆಳೆಯ / ಗೆಳತಿಯರೊಂದಿಗೆ ಸ್ನೇಹ ಮಾಡಿ:

ಗೆಳೆಯ / ಗೆಳತಿಯರೊಂದಿಗೆ ಸ್ನೇಹ ಮಾಡಿ:

ಕಾಲೇಜು ಅಂದಾಗ ಅದು ಕಲರ್‌ಫುಲ್ ಆಗಿರೋಕೆ ಸ್ನೇಹಿತರೂ ಮುಖ್ಯ ಪಾತ್ರವಹಿಸುತ್ತಾರೆ. ಹಾಗಾಗಿ ಮೊದಲ ದಿನವೇ ಆದಷ್ಟು ಜನರ ಸ್ನೇಹ ಮಾಡಲು ಪ್ರಯತ್ನಿಸಿ. ಇದರಿಂದ ಮರುದಿನ ಕಾಲೇಜಿಗೆ ಬರಲು ಇನ್ನಷ್ಟು ಹುರುಪು ಸಿಗುತ್ತದೆ. ಅಲ್ಲದೇ ಕಾಲೇಜು ಜೀವನ ನಿಮಗೆ ಇಷ್ಟವಾಗುತ್ತದೆ. ನೀವು ಸ್ನೇಹವನ್ನು ಮಾಡಿದ್ದಲ್ಲಿ ಎಲ್ಲರಿಗೂ ನೀವು ಸ್ನೇಹ ಜೀವಿ ಎಂದು ಪರಿಚಿತರಾಗುತ್ತೀರಿ.

 

ಕ್ಯಾಂಪಸ್ ಫುಲ್ ಸುತ್ತಾಡಿ:

ಕ್ಯಾಂಪಸ್ ಫುಲ್ ಸುತ್ತಾಡಿ:

ಕಾಲೇಜಿನ ಮೊದಲ ದಿನ ಎಂದು ಸುಮ್ಮನೆ ಹೋಗಿ ಕುಳಿತು ಸ್ನೇಹಿತರನ್ನು ಮಾಡಿಕೊಂಡರೆ ಸಾಲದು. ಸ್ನೇಹಿತರೊಂದಿಗೆ ಕೆಲ ಸಮಯ ಕಳೆಯಲು ಅವರೊಡನೆ ಕ್ಯಾಂಪಸ್ ಸುತ್ತಾಡಿ. ಆಗ ಕ್ಯಾಂಪಸ್‌ನಲ್ಲಿ ಏನೆಲ್ಲಾ ಎನ್ನುವುದನ್ನು ತಿಳಿಯುತ್ತೀರಿ. ಜೊತೆಗೆ ಸ್ನೇಹಿತರೊಡನೆ ಸಮಯ ಕಳೆಯುವ ಅವಕಾಶವೂ ಸಿಕ್ಕಿದಂತಾಗುತ್ತದೆ.

 

ಮೊದಲ ದಿನವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ಪ್ರಯತ್ನಿಸಿ:

ಮೊದಲ ದಿನವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ಪ್ರಯತ್ನಿಸಿ:

ಕಾಲೇಜಿನ ಮೊದಲ ದಿನ ಎಂದಾಗ ಸಾಮಾನ್ಯವಾಗಿ ಪಾಠ ಪ್ರಾರಂಭಿಸುವುದು ಕಡಿಮೆ. ಅಲ್ಲಿ ನಿಮ್ಮ ಕ್ರಿಯೇಟಿವಿ ಮತ್ತು ನಿಮ್ಮ ಕೌಶಲ್ಯವನ್ನು ಪರೀಕ್ಷಿಸುವ ಕೆಲವು ಚಟುವಟಿಕೆ ನೀಡುವುದು ಸಾಮಾನ್ಯ. ಅಂತಹ ಅವಕಾಶ ಸಿಕ್ಕಿದ್ದಲ್ಲಿ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲೇ ಬೇಡಿ ನಿಮ್ಮ ಕೌಶಲ್ಯ ಮತ್ತು ನಿಮ್ಮಲ್ಲಿರುವ ಟ್ಯಾಲೆಂಟ್‌ ಅನ್ನು ತೋರಿಸಿಕೊಳ್ಳಿ ಆಗಿ ನೀವು ನಿಮ್ಮ ತರಗತಿಯಲ್ಲಿ ಸೆಂಟರ್‌ ಆಫ್ ಅಟ್ರ್ಯಾಕ್ಷನ್ ಕೂಡ ಆಗಬಹುದು.

 

For Quick Alerts
ALLOW NOTIFICATIONS  
For Daily Alerts

English summary
Here we are giving some tips for students to survive their first day college
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X