Tips To Face Bank Interview : ಎಸ್‌ಬಿಐ ಐಬಿಪಿಎಸ್ ನೇಮಕಾತಿ ಸಂದರ್ಶನಗಳಿಗೆ ಹಾಜರಾಗುವವರಿಗೆ ಸಲಹೆಗಳು ಇಲ್ಲಿವೆ

ಪ್ರತಿ ವರ್ಷವೂ ಅನೇಕ ಆಕ್ಷಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಈ ಪೈಕಿ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಹಾಜರಾಗುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ. ಬ್ಯಾಂಕಿಂಗ್ ಪರೀಕ್ಷೆಯನ್ನು ತೆಗೆದುಕೊಂಡವರಲ್ಲಿ ಅನೇಕರು ಎಡವುದು ಸಂದರ್ಶನ ಪ್ರಕ್ರಿಯೆಯಲ್ಲಿ ಎಂದು ಕೇಳಿರುತ್ತೇವೆ. ಅದಕ್ಕೆ ಕಾರಣಗಳು ಹಲವಾರಿರಬಹುದು ಆದರೆ ಐಬಿಪಿಎಸ್ ಮತ್ತು ಎಸ್‌ಬಿಐ ನಂತಹ ಬ್ಯಾಂಕಿಂಗ್ ನೇಮಕಾತಿಗಾಗಿ ನಡೆಸಲಾಗುವ ಸಂದರ್ಶನಗಳು ನಿಜಕ್ಕೂ ಅಷ್ಟೊಂದು ಸುಲಭವಿರುವುದಿಲ್ಲ, ಹಾಗಾಗಿ ಬ್ಯಾಂಕಿಂಗ್ ನೇಮಕಾತಿಗಳಿಗೆ ಪ್ರಯತ್ನ ನಡೆಸುತ್ತಿರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ತಯಾರಿ ಜೊತೆಗೆ ಸಂದರ್ಶನ ಪ್ರಕ್ರಿಯೆಗೂ ಆದ್ಯತೆ ನೀಡಿ ತಯಾರಿ ನಡೆಸಬೇಕಿರುತ್ತದೆ.

ಎಸ್‌ಬಿಐ, ಐಬಿಪಿಎಸ್ ನೇಮಕಾತಿ ಸಂದರ್ಶನಕ್ಕೆ ಸಲಹೆಗಳು ಇಲ್ಲಿವೆ

ಎಸ್‌ಬಿಐ ಮತ್ತು ಐಬಿಪಿಎಸ್ ನೇಮಕಾತಿಗಾಗಿ ನಡೆಸಲಾಗುವ ಸಂದರ್ಶನಗಳು ಸಾಮಾನ್ಯವಾಗಿ 4-5 ಸದಸ್ಯರನ್ನು ಒಳಗೊಂಡಿರುತ್ತವೆ, ಸಾಮಾನ್ಯವಾಗಿ ಅನುಭವಿ ಬ್ಯಾಂಕಿಂಗ್ ಅಧಿಕಾರಿಗಳು ಮತ್ತು ಮನಶ್ಶಾಸ್ತ್ರಜ್ಞರನ್ನು ಒಳಗೊಂಡಿರುತ್ತದೆ. ಹಾಗಾಗಿ ಆಕ್ಷಾಂಕ್ಷಿಗಳು ಯಾವ ರೀತಿ ಸಂದರ್ಶನಕ್ಕೆ ಹಾಗರಾಗಬಹುದು ಮತ್ತು ಅದಕ್ಕೆ ತಯಾರಿ ಹೇಗಿರಬೇಕು ಎಂಬುದಕ್ಕೆ ಸಲಹೆಗಳು ಇಲ್ಲಿವೆ.

ಆದರೆ ಮನಶ್ಶಾಸ್ತ್ರಜ್ಞರು ಏಕಿರುತ್ತಾರೆ ? :

ನಿಮ್ಮನ್ನು ಮತ್ತು ನಿಮ್ಮ ದೇಹ ಭಾಷೆಯನ್ನು ವೀಕ್ಷಿಸಲು ಮನಶ್ಶಾಸ್ತ್ರಜ್ಞರು ಸಂದರ್ಶನ ಪ್ರಕ್ರಿಯೆ ಸಂದರ್ಭದಲ್ಲಿ ಹಾಜರಿರುತ್ತಾರೆ. ನಮ್ಮ ದೇಹ ಭಾಷೆಯು ಇತರ ವ್ಯಕ್ತಿಯೊಂದಿಗೆ ಸಂವಹನ ನಡೆಸುವಾಗ ಸುಮಾರು 70 ಪ್ರತಿಶತವನ್ನು ಅಳವಡಿಸಿಕೊಂಡಿರುತ್ತದೆ.

ಯಾವುದೇ ಪರಸ್ಪರ ಕ್ರಿಯೆಯಲ್ಲಿ ಒಬ್ಬ ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಅಥವಾ ಉಪಪ್ರಜ್ಞೆಯಿಂದ ಸೆಕೆಂಡುಗಳಲ್ಲಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಅನಿಸಿಕೆಯನ್ನು ಪಡೆದುಕೊಳ್ಳಬಹುದು.

ಐಬಿಪಿಎಸ್, ಎಸ್‌ಬಿಐ ಸಂದರ್ಶನಕ್ಕೆ ಹಾಜರಾಗುವವರಿಗೆ ಸಲಹೆಗಳು :

ಸಂದರ್ಶನಕ್ಕೆ ಸೂಕ್ತ ಉಡುಪನ್ನು ಧರಿಸಿ :

ಸಂದರ್ಶನಕ್ಕೆ ಸೂಕ್ತವಾದ ಉಡುಗೆ ತೊಡುವುದು ಬಹಳ ಮಹತ್ವದ್ದಾಗಿದೆ. ನಿಮ್ಮ ಉಡುಪು ನಿಮ್ಮ ಉದ್ಯೋಗದಾತರಿಗೆ ನಿಮ್ಮ ಮೇಲೆ ಉತ್ತಮ ಅನಿಸಿಕೆಯನ್ನು ನೀಡಲು ಸಹಕರಿಸುತ್ತದೆ. ಯಾವುದೇ ಅಭ್ಯರ್ಥಿಯು ಸ್ಮಾರ್ಟ್, ಚೆನ್ನಾಗಿ ಇಸ್ತ್ರಿ ಮಾಡಿದ ಫಾರ್ಮಲ್ಸ್ ಧರಿಸುವುದು ಉತ್ತಮ. ಕಳಪೆ, ಅವ್ಯವಸ್ಥೆಯ ಅಥವಾ ಇಸ್ತ್ರಿ ಮಾಡದ ಬಟ್ಟೆಗಳು, ತಲೆ ಬಾಚದೆ ಮತ್ತು ಉತ್ತಮ ರೀತಿಯಲ್ಲಿ ಕಾಣಿಸಿಕೊಳ್ಳದೆ ಇದ್ದಲ್ಲಿ, ನಿಮ್ಮ ಬಗ್ಗೆ ಉತ್ತಮ ಭಾವನೆಗಳು ಮೂಡುವುದಿಲ್ಲ.

ಮಹಿಳೆಯರಿಗೆ ಸಲಹೆ: ಮಹಿಳೆಯರು ಸಂದರ್ಶನಕ್ಕೆ ಹೋಗುವಾಗ ಸರಳ ಮತ್ತು ತಿಳಿ ಬಣ್ಣದ ಕಾಟನ್ ಸೀರೆ ಅಥವಾ ಸಲ್ವಾರ್ ಕಮೀಜ್ ಅನ್ನು ಸರಳ ದುಪಟ್ಟಾ ಅಥವಾ ಬ್ಲೇಜರ್ ಜೊತೆಗೆ ತಿಳಿ ಬಣ್ಣದ ಕುಪ್ಪಸ ಮತ್ತು ಪ್ಯಾಂಟ್ ಧರಿಸಬಹುದು. ಕನಿಷ್ಠ ಆಭರಣ ಮತ್ತು ಮೇಕ್ಅಪ್ ಬಳಸಿದ್ದರೆ ನೋಡಲು ಸುಂದರ ಮತ್ತು ಉತ್ತಮ.

ಪುರುಷರಿಗೆ ಸಲಹೆ: ಪುರುಷರು ಸಂದರ್ಶನಕ್ಕೆ ಹೋಗುವಾಗ ಸಾದಾ ತಿಳಿ ಬಣ್ಣದ ಶರ್ಟ್ ಮತ್ತು ಗಾಢ ಬಣ್ಣದ ಪ್ಯಾಂಟ್ ಮತ್ತು ಸರಳ ಟೈ ಹಾಕಿಕೊಂಡರೆ ಒಳಿತು. ಚಳಿಗಾಲದಲ್ಲಿ ಬ್ಲೇಜರ್ ಉತ್ತಮವಾಗಿರುತ್ತದೆ.
ನಿಮ್ಮ ಬೂಟುಗಳನ್ನು ಪಾಲಿಶ್ ಮಾಡಲಾಗಿದೆಯೇ, ನೀವು ಕ್ಲೀನ್ ಶೇವ್ ಆಗಿದ್ದೀರಿ ಮತ್ತು ನಿಮ್ಮ ಕೂದಲು ಅಚ್ಚುಕಟ್ಟಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಮೊದಲ ಆಕರ್ಷಣೆಗೆ ಮಾತ್ರವಲ್ಲ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು
ಸಹಾಯ ಮಾಡುತ್ತದೆ.

2. ಆತ್ಮವಿಶ್ವಾಸದಿಂದ ಹ್ಯಾಂಡ್‌ಶೇಕ್ ಮಾಡಿ :

ಮೊದಲ ನೋಟ ಮತ್ತು ಮೊದಲ ಸಂವಹನ ನಿಜಕ್ಕೂ ಇನ್ನೊಬ್ಬರ ಮೇಲೆ ತಕ್ಷಣವೇ ಪರಿಣಾಮ ಬೀರುತ್ತದೆ. ಹಾಗಾಗಿ ಸಂದರ್ಶನಕ್ಕೆ ಹಾಜರಾದಾಗ ಸಂದರ್ಶಕರಿಗೆ ಉತ್ತಮ ರೀತಿಯಲ್ಲಿ ಹ್ಯಾಂಡ್ ಶೇಕ್ ಮಾಡುವುದರಿಂದ
ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಜೊತೆಗೆ ನಿಮ್ಮ ಮುಕ್ತ ವ್ಯಕ್ತಿತ್ವವನ್ನು ಸಂದರ್ಶಕರಿಗೆ ತೋರಿಸುತ್ತದೆ.

ಅಸಭ್ಯ ಹ್ಯಾಂಡ್‌ ಶೇಕ್ ನಿಮ್ಮ ನಿರಾಸಕ್ತಿ ಮತ್ತು ಹೆದರಿಕೆಯನ್ನು ತೋರಿಸುತ್ತದೆ, ಇದರಿಂದ ನಿಮ್ಮ ಮೇಲೆ ನಿಜವಾಗಿಯೂ ನಕಾರಾತ್ಮಕ ಪ್ರಭಾವ ಬೀರುವಂತೆ ಮಾಡುತ್ತದೆ.

3. ನಿಮ್ಮ ಸಂದರ್ಶನದ ಉಪಸ್ಥಿತಿ ಹೀಗಿರಲಿ :

ಸಂದರ್ಶನಕ್ಕೆ ಹಾಜರಾಗುವುದು ಎಷ್ಟು ಮುಖ್ಯವೋ ಅಲ್ಲಿ ನಿಮ್ಮ ಉಪಸ್ಥಿತಿಯ ರೀತಿಯೂ ಅಷ್ಟೇ ಮುಖ್ಯವಾಗಿರುತ್ತದೆ. ಸಂದರ್ಶಕರೆದುರು ಕುಳಿತಾಗ ನೇರವಾಗಿ ಕುಳಿತುಕೊಳ್ಳಿ. ಉತ್ತಮ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವುದು ನೀವು ಉತ್ಸುಕರಾಗಿದ್ದೀರಿ ಮತ್ತು ಗಮನಹರಿಸುತ್ತಿರುವಿರಿ ಎಂದು ಸೂಚಿಸುತ್ತದೆ.

4. ಸಂದರ್ಶಕರೊಂದಿಗೆ ಕಣ್ಣಿನ ಸಂಪರ್ಕ ಮಾಡಿ :

ಸಂದರ್ಶಕರೆದುರು ಕುಳಿತಾಗ ನೇರ ಕಣ್ಣಿನ ಸಂಪರ್ಕವನ್ನು ಮಾಡುವುದು ನಿಮ್ಮ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಇದು ಸೂಚ್ಯವಾಗಿ ನಿಮ್ಮನ್ನು ವಿಶ್ವಾಸಾರ್ಹರನ್ನಾಗಿ ಮಾಡುತ್ತದೆ ಮತ್ತು ನೀವು ನಿಮ್ಮೊಂದಿಗೆ ಆರಾಮದಾಯಕವಾಗಿದ್ದೀರಿ ಮತ್ತು ನೀವು ಏನು ಮಾತನಾಡುತ್ತಿದ್ದೀರಿ ಎಂದು ತಿಳಿಯುತ್ತಿದೆ ಎಂದು ಸೂಚಿಸುತ್ತದೆ. ನಿರೀಕ್ಷಿತ ಉದ್ಯೋಗಿಯಲ್ಲಿ ಎರಡೂ ಹೆಚ್ಚು ಅಪೇಕ್ಷಣೀಯ ಲಕ್ಷಣಗಳಾಗಿವೆ.

5. ಮೊದಲು ನಿಮ್ಮನ್ನು ನೀವು ನಂಬಿ :

ಎಲ್ಲಾ ಕೆಲಸಗಳಿಗೂ ಮೊದಲು ನಿಮ್ಮನ್ನು ನೀವು ನಂಬುವುದು ಮುಖ್ಯವಾಗಿರುತ್ತದೆ. ನಿಮ್ಮನ್ನು ನೀವು ನಂಬುವುದು ಮತ್ತು ಆತ್ಮವಿಶ್ವಾಸದಿಂದಿರುವುದು ನಿಮ್ಮ ಯಶಸ್ಸಿನ ಕೀಲಿಯಾಗಿದೆ.
ಆದ್ದರಿಂದ ಸಂದರ್ಶನಕ್ಕೆ ಹೋಗುವಾಗ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಸ್ವಯಂ ಪ್ರೇರಣೆ ಇಟ್ಟುಕೊಳ್ಳಿ.

6. ಬ್ಯಾಂಕ್‌ ನೇಮಕಾತಿ ಕುರಿತು ಸಂಶೋಧನೆ ಮಾಡಿ :

ನೀವು ಸಂದರ್ಶನಕ್ಕೆ ಹಾಜರಾಗುತ್ತಿರುವ ಬ್ಯಾಂಕ್ ಮತ್ತು ಉದ್ಯೋಗ ಪ್ರೊಫೈಲ್‌ಗಳ ಸಂಪೂರ್ಣ ಹಿನ್ನೆಲೆ ಕುರಿತು ಸಂಶೋಧನೆ ಮಾಡಿ. ಸಂದರ್ಶಕರು ಕೇಳುವ ಎಲ್ಲಾ ಪ್ರಶ್ನೆಗಳಲ್ಲಿ ಎರಡರಿಂದ ಮೂರು ಕಂಪನಿ ಮತ್ತು
ನೀವು ಅರ್ಜಿ ಸಲ್ಲಿಸುತ್ತಿರುವ ಉದ್ಯೋಗ ಪ್ರೊಫೈಲ್‌ಗೆ ಸಂಬಂಧಿಸಿರುತ್ತವೆ. ಸಂದರ್ಶನಕ್ಕೆ ಹಾಜರಾಗುವ ಮೊದಲು ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಿ.

7. ಸಂದರ್ಶಕರೊಂದಿಗೆ ಉತ್ತಮ ಸಂವಹನ :

ಸಂದರ್ಶನಕ್ಕೆ ದೃಢವಾದ ಹ್ಯಾಂಡ್‌ಶೇಕ್‌ನೊಂದಿಗೆ ಪ್ರವೇಶಿಸಿದ ನಂತರ ನಮಸ್ಕರಿಸಿ ಮತ್ತು ನಿಮಗೆ ಆಸನವನ್ನು ತೆಗೆದುಕೊಳ್ಳಲು ನಿಮ್ಮನ್ನು ಅವರು ಕೇಳುವವರೆಗೂ ಕುಳಿತುಕೊಳ್ಳಬೇಡಿ.
ನೀವು ಸಂದರ್ಶಕರೊಂದಿಗೆ ಸಣ್ಣ ಮಾತುಕತೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ.

8. ಸಂವಾದಕನಿಗೆ ಧನ್ಯವಾದಗಳನ್ನು ತಿಳಿಸಿ :

ಸಂದರ್ಶನದಲ್ಲಿ ಕೊನೆಯದು ಆದರೆ ಕನಿಷ್ಠವಲ್ಲ; ನಿಮಗೆ ಅವರ/ಅವಳ/ಅವರ ಸಮಯ ನೀಡಿದ ಸಂದರ್ಶಕರಿಗೆ ಧನ್ಯವಾದ ಹೇಳದೆ ಕೊಠಡಿಯಿಂದ ಹೊರಹೋಗಬೇಡಿ.

ನೀವು ಇಲ್ಲಿಗೆ ಬರಲು ತಯಾರಿ ನಡೆಸಿದ್ದೀರಿ ಮತ್ತು ಶ್ರಮವಸಿದ್ದೀರಿ. ಹಾಗಾಗಿ ಆತ್ಮವಿಶ್ವಾಸದಿಂದ ನೀವು ಮುಂದೆ ನಡೆಯಿರಿ.

For Quick Alerts
ALLOW NOTIFICATIONS  
For Daily Alerts

English summary
Here is tips for the applicants to face sbi and ibps interviews.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X