ನಿಮ್ಮ ರೆಸ್ಯೂಮ್ ನಲ್ಲಿ ಇವೆಲ್ಲಾ ಇದ್ರೆ ಜಾಬ್ ಸಿಗಲ್ಲ ಬಿಡಿ!

ಶಿಕ್ಷಣ ಮುಗಿಸಿದ ತಕ್ಷಣ ಉದ್ಯೋಗ ಬೇಟೆ ಶುರುವಾಗುತ್ತದೆ. ನೀವು ಬಯಸಿದ ಉದ್ಯೋಗವನ್ನು ಪಡೆಯಬೇಕೆಂದರೆ ಅದಕ್ಕೆ ಕೊಂಚ ತಯಾರಿ ಕೂಡ ಅಗತ್ಯ. ಉದ್ಯೋಗ ಪಡೆಯುವುದರಲ್ಲಿ ಮೊದಲ ಹಾಗು ಪ್ರಮುಖ ಪಾತ್ರ ವಹಿಸುವುದು, ನಿಮ್ಮ ವಿವರಗಳನ್ನೊಳಗೊಂಡ ರೆಸ್ಯೂಮ್. ಇಂದು ನೀವು ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕಬೇಕಾದ್ರೆ ಈ ರೆಸ್ಯೂಮ್ ನಿಮಗೆ ಅತ್ಯಗತ್ಯ.

ರೆಸ್ಯೂಮ್ ನಲ್ಲಿ ಇರಬಾರದ ಸಂಗತಿಗಳು!

 

ಅದಕ್ಕಾಗಿ ರೆಸ್ಯೂಮ್ ಕೂಡಾ ರಚಿಸುತ್ತೀರಿ. ಆದ್ರೆ ನಿಮಗೆ ಗೊತ್ತಾ ಕೇವಲ ನಿಮ್ಮ ರೆಸ್ಯೂಮ್ ನಿಂದ ನಿಮಗೆ ಬೇಗನೇ ಕೆಲಸ ಸಿಗಬಹುದು ಇಲ್ಲ ನೀವು ನಿಮ್ಮ ರೆಸ್ಯೂಮ್ ರಚನೆಯಿಂದ ಕೆಲಸ ಕಳೆದುಕೊಳ್ಳಬಹುದು ಕೂಡಾ.

ರೆಸ್ಯೂಮ್ ನಲ್ಲಿ ಏನೆಲ್ಲಾ ಇರಬಾರದು ಎನ್ನೋ ಮಾಹಿತಿ ಇಲ್ಲಿದೆ ಓದಿ:

ರೆಸ್ಯೂಮ್ ಎಂದು ಲೇಬಲ್ :

ಕೆಲವರು ರೆಸ್ಯೂಮ್ ತಯಾರಿಸುವಾಗ ಲೇಬಲ್ ಹಾಕುತ್ತಾರೆ. ಅಂದ್ರೆ ಹಾಳೆಯ ಮೇಲ್ಭಾಗದಲ್ಲಿ ರೆಸ್ಯೂಮ್ ಎಂದು ದೊಡ್ಡದಾಗಿ ಬರೆಯುತ್ತಾರೆ. ಆದ್ರೆ ಅದು ತಪ್ಪು, ಬದಲಿಗೆ ನೀವು ಆ ಜಾಗದಲ್ಲಿ ನಿಮ್ಮ ಹೆಸರನ್ನು ಬರೆಯಿರಿ. ಇದರಿಂದ ಹೆಚ್ ಆರ್ ನಿಮ್ಮ ಹೆಸರು ನೋಡಿ ಬೇಗನೇ ನಿಮ್ಮ ರೆಸ್ಯೂಮ್ ಆಯ್ಕೆ ಮಾಡಿಕೊಳ್ಳಬಹುದು ಹಾಗೆಯೇ ನಿಮ್ಮ ಹೆಸರು ಅವರಿಗೆ ನೆನಪು ಕೂಡಾ ಇರಬಹುದು.

ಹೈ ಸ್ಕೂಲ್ ಅಂಕಗಳು:

ನಿಜವಾಗಲೂ ಯಾರಿಗೂ ಕೂಡಾ ನೀವು ಹೈಸ್ಕೂಲ್, ೧೦ನೇ ತರಗತಿ ಹಾಗೂ ದ್ವಿತೀಯ ಪಿಯು ಅಲ್ಲಿ ಎಷ್ಟು ಅಂಕ ಸ್ಕೋರ್ ಮಾಡಿದ್ದೀರಿ ಎಂದು ಯಾರಿಗೆ ತಿಳಿಯುವ ಆಸಕ್ತಿ ಇರುವುದಿಲ್ಲ. ಆದ್ರೆ ನಿಮ್ಮ ಪದವಿ ಅಂಕವನ್ನ ಅವರು ಗಣನೆಗೆ ತೆಗೆದುಕೊಳ್ಳಬಹುದು. ಹಾಗಾಗಿ ನಿಮ್ಮ ರೆಸ್ಯೂಮ್ ನಲ್ಲಿ ಹೈಸ್ಕೂಲ್ ಅಂಕಗಳು ಬೇಡ.

ಅತಿಯಾದ ವೈಯಕ್ತಿಕ ಮಾಹಿತಿ:

ನೀವು ಉದ್ಯೋಗಕ್ಕೆ ರೆಸ್ಯೂಮ್ ರಚಿಸುವುದು ಬದಲಿಗೆ ಮದುವೆ ಪ್ರಪೋಸಲ್ ಗೆ ಅಲ್ಲ. ಹಾಗಾಗಿ ಅತಿಯಾದ ವೈಯಕ್ತಿಕ ಮಾಹಿತಿಯನ್ನ ನಿಮ್ಮ ರೆಸ್ಯೂಮ್ ನಲ್ಲಿ ತುರುಕ ಬೇಡಿ. ಯಾರಿಗೂ ನಿಮ್ಮ ಹೈಟ್, ತೂಕ, ಪಾಲಿಟಿಕಲ್ ಇಂಟ್ರೆಸ್ಟ್, ಧರ್ಮ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಜಸ್ಟ್ ನಿಮ್ಮ ಹೆಸರು, ಈ ಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ವಿಳಾಸ ಇವಿಷ್ಟು ಬರೆದ್ರೆ ಸಾಕು.

ಸಂಬಂಧವಿಲ್ಲ ಸಾಧನೆ:

ನೀವು ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಸ್ಪರ್ಧೆಯಲ್ಲಿ ಅವಾರ್ಡ್ ಪಡೆದುಕೊಂಡಿರುವುದು, ಭಾಷಣ ಸ್ಪರ್ಧೆಯಲ್ಲಿ ಪ್ರೈಜ್ ಪಡೆದಿರುವುದು, ಇಲ್ಲ ಕಾಲೇಜ್ ಟೈಂನಲ್ಲಿ ಬಾಸ್ಕೆಟ್ ಬಾಟಲ್ ಟೀಂನ ಕ್ಯಾಪ್ಟನ್ ಆಗಿದ್ದದು ಎಲ್ಲಾ ಬರೆಯುವ ಅವಶ್ಯಕತೆ ಇಲ್ಲ. ಯಾಕೆಂದ್ರೆ ನಿಮ್ಮ ರೆಸ್ಯೂಮ್ ಓದುವಾಗ ಇದೆಲ್ಲಾ ಇದ್ರೆ ಹೆಚ್ ಆರ್ ಅವರಿಗೆ ಸಮಸ್ಯೆ ಯಾಗಿ ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ.

ತಪ್ಪು ತಪ್ಪು ಗ್ರಾಮರ್ (ವ್ಯಾಕರಣ):

ಹೌದು ಕೆಲವು ವಿದ್ಯಾರ್ಥಿಗಳು ಸ್ಪೇಶಲ್ ಆಗಿ ರೆಸ್ಯೂಮ್ ರಚಿಸಲು ಮುಂದಾಗುತ್ತಾರೆ. ಈ ವೇಳೆ ಅವರು ಗ್ರಾಮರ್ ಕಡೆ ಗಮನ ಕೊಡುವುದಿಲ್ಲ. ತಪ್ಪು ತಪ್ಪು ಗ್ರಾಮರ್ ನಿಂದ ರೆಸ್ಯೂಮ್ ರಚಿಸುತ್ತಾರೆ. ಇದರಿಂದ ನಿಮ್ಮ ರೆಸ್ಯೂಮ್ ನೋಡಿಯೇ ನಿಮ್ಮನ್ನ ಅವರು ಸಂದರ್ಶನಕ್ಕೆ ಕರೆಯದೇ ಇರಬಹುದು. ಹಾಗಾಗಿ ಗ್ರಾಮರ್ ಕಡೆ ಗಮನ ಕೊಡಿ.

ಫ್ಯಾನ್ಸಿಯಾಗಿ ರಚಿಸಬೇಡಿ:

ಹೌದು ರೆಸ್ಯೂಮ್ ಸಿಂಪಲ್ ಆಂಡ್ ಈಜಿಯಾಗಿ ಇರಬೇಕು. ಓದಿದೊಡನೆ ಎಲ್ಲಾ ಅರ್ಥವಾಗುವಂತಿರಬೇಕು. ನಿಮ್ಮ ರೆಸ್ಯೂಮ್ ನಲ್ಲಿ ಫ್ಯಾನ್ಸಿಯಾಗಿ ಶಬ್ದಗಳ ಬಳಕೆ ಬೇಡ ಹಾಗೆಯೇ ಕೆಲವೊಂದು ಪದಗಳನ್ನ ಹೈಲೆಟ್ ಮಾಡಲು ಹೋಗಬೇಡಿ. ಕಲರ್ ಕೂಡಾ ಮಾಡಬೇಡಿ.

For Quick Alerts
ALLOW NOTIFICATIONS  
For Daily Alerts

  English summary
  Creating resume is more than just a preparation. It is an art. Even though you have the skill set required for a job, only if you could let the employer know it with a crisp presentation, will your name be shortlisted. here we are giving some tips for what we should ignore while preparing a resume
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more