ಕಾಲೇಜಿನ ಮೊದಲ ದಿನ... ಸೆಂಟರ್ ಆಫ್ ಅಟ್ರಾಕ್ಷನ್ ಆಗುವುದು ಹೇಗೆ ಗೊತ್ತಾ?

ಇನ್ನು ನಿಮ್ಮ ವಿಭಿನ್ನ ಸ್ಟೈಲ್ ನಿಂದ ಶಾಲೆಯಲ್ಲಿ ನೀವು ಎಲ್ಲರ ಗಮನ ಸೆಳೆದಿರಬಹುದು. ಆದ್ರೆ ಶಾಲೆಗೆ ಹೋಲಿಸಿದ್ರೆ ಕಾಲೇಜು ಲೈಫ್ ಕಂಪ್ಲೀಟ್ ವಿಭಿನ್ನ. ಇಲ್ಲಿ ನಿಮ್ಮ ಲೈಫ್ ಸ್ಟೈಲ್, ಫ್ರೆಂಡ್ ಸರ್ಕಲ್ ಎಲ್ಲವೂ ಹೊಸತಾಗಿರುತ್ತದೆ.

ಕಾಲೇಜು ಹೇಗಿರಬಹುದು, ಅಲ್ಲಿನ ವಾತಾವರಣ ಹೇಗಿರಬಹುದು, ಉಳಿದ ವಿದ್ಯಾರ್ಥಿಗಳು ಹೇಗಿರುತ್ತಾರೆ ಮುಂತಾದ ಪ್ರಶ್ನೆಗಳು ಕಾಲೆಜು ಮೆಟ್ಟಿಲು ಹತ್ತಲಿರುವ ವಿದ್ಯಾರ್ಥಿಗಳಿಗೆ ಕಾಡುತ್ತಿರುತ್ತದೆ. ಕಾಲೇಜು ಲೈಫ್ ಎಂಬುವುದು ಜೀವನದ ಪ್ರಮುಖ ಘಟ್ಟ ಇದ್ದಂತೆ. ಇನ್ನು ಕಾಲೇಜಿಗೆ ಮೊದಲ ದಿನ ಎಂಟ್ರಿ ನೀಡಿದಾಗ ಎಲ್ಲರ ಗಮನ ನಿಮ್ಮತ್ತ ಸೆಳೆಯುವಂತೆ ಮಾಡುವುದು ಹೇಗೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ.

ಕಾಲೇಜಿನ ಮೊದಲ ದಿನ... ಸೆಂಟರ್ ಆಫ್ ಅಟ್ರಾಕ್ಷನ್ ಆಗುವುದು ಹೇಗೆ ಗೊತ್ತಾ?

ಇನ್ನು ನಿಮ್ಮ ವಿಭಿನ್ನ ಸ್ಟೈಲ್ ನಿಂದ ಶಾಲೆಯಲ್ಲಿ ನೀವು ಎಲ್ಲರ ಗಮನ ಸೆಳೆದಿರಬಹುದು. ಆದ್ರೆ ಶಾಲೆಗೆ ಹೋಲಿಸಿದ್ರೆ ಕಾಲೇಜು ಲೈಫ್ ಕಂಪ್ಲೀಟ್ ವಿಭಿನ್ನ. ಇಲ್ಲಿ ನಿಮ್ಮ ಲೈಫ್ ಸ್ಟೈಲ್, ಫ್ರೆಂಡ್ ಸರ್ಕಲ್ ಎಲ್ಲವೂ ಹೊಸತಾಗಿರುತ್ತದೆ.

ಇವತ್ತು ನಾವು ನಿಮಗೆ ಏನು ಮಾಹಿತಿ ನೀಡುತ್ತಿದ್ದೇವೆ ಎಂದರೆ, ಮೊದಲ ದಿನ ಕಾಲೇಜಿನಲ್ಲಿ ಹೇಗೆ ಸ್ಮಾರ್ಟ್ ಆಗಿ ವರ್ತಿಸುವುದು ಎಂದು.

ನ್ಯಾಚುರಲ್ ಆಗಿರಿ:

ಟ್ರೆಂಡ್ ಗೆ ಗಮನ ಕೊಡಬೇಡಿ. ನ್ಯಾಚುರಲ್ ಆಗಿರಿ ಇದು ನಿಮ್ಮತ್ತ ಗಮನ ಸೆಳೆಯಲು ಬೆಸ್ಟ್ ವಿಧಾನ. ಅಷ್ಟೇ ಅಲ್ಲ ಮೊದಲ ದಿನ ತುಂಬಾ ಶಾಂತರಾಗಿರಿ. ಎಲ್ಲರ ಜತೆ ಮೃದುವಾಗಿ ಮಾತನಾಡಿ. ಮೊದಲ ದಿನವೇ ಏರು ಧ್ವನಿಯಲ್ಲಿ ಮಾತನಾಡುವುದು ಒಳಿತಲ್ಲ. ಈ ನಿಯಮ ಕಾಲೇಜು ಮೆಟ್ಟಿಲು ಹತ್ತುವ ಮುನ್ನ ತಿಳಿದುಕೊಂಡಿರಿ

ಕಾಂಫಿಡೆಂಟ್ ಆಗಿರಿ:

ಕಾಲೇಜಿನ ಮೊದಲ ದಿನ ಎಂದಾಗ ನರ್ವಸ್ ಆಗುವುದು ನಿಜಕ್ಕೂ ಸಾಮಾನ್ಯ. ಆದರೆ ಅದನ್ನ ಯಾವುದೇ ಕಾರಣಕ್ಕೂ ತೋರಿಸಿಕೊಳ್ಳಬೇಡಿ. ನಿಮ್ಮ ಸೀನಿಯರ್ ಇಲ್ಲ ನಿಮ್ಮ ಕ್ಲಾಸ್‌ಮೇಟ್ ಗೆ ನೀವು ನರ್ವಸ್ ಆಗಿದ್ದೀರಾ ಎಂದು ತಿಳಿದ್ರೆ ಅವರಿಗೆ ನಿಮ್ಮ ಮೇಲೆ ಬ್ಯಾಡ್ ಇಂಪ್ರೇಶನ್ ಮೂಡುತ್ತದೆ. ಅಷ್ಟೇ ಅಲ್ಲ ನೀವು ಯಂಗ್ ಸ್ಟರ್ ಗಳಾಗಿದ್ದು, ನೀವೇ ಹೀಗೆ ಭಯಪಟ್ಟುಕೊಂಡರೆ ನಿಮ್ಮ ಶಿಕ್ಷಕರು ಕೂಡಾ ಇದನ್ನ ಇಷ್ಟಪಡಲ್ಲ. ಹಾಗಾಗಿ ಈ ಪಾಯಿಂಟ್ ಗಮನದಲ್ಲಿಟ್ಟು ಕೊಳ್ಳಿ. ನೀವು ಮೊದಲ ದಿನ ಕಾಂಫಿಡೆಂಟ್ ಆಗಿದ್ದರೆ, ನೀವು ಆದಷ್ಟು ಬೇಗ ಕಾಲೇಜಿನಲ್ಲಿ ಫೇಮಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಗುಮೊಗದಿಂದಿರಿ:

ಇತರರನ್ನ ಸುಲಭವಾಗಿ ನಿಮ್ಮತ್ತ ಅಟ್ರಾಕ್ಟ್ ಮಾಡಬೇಕಂದ್ರೆ ಅದು ಬೆಸ್ಟ್ ವಿಧಾನ ನಿಮ್ಮ ನಗು. ನೀವು ನಗುವುದರಿಂದ ಇತರರು ನಿಮ್ಮ ಬಗ್ಗೆ ಏನು ತಿಳಿದುಕೊಳ್ಳುವರು ಎಂದು ನೀವು ಚಿಂತಿಸುವ ಅವಶ್ಯಕತೆ ಇಲ್ಲ. ನೀವು ಮೊದಲ ದಿನ ನರ್ವಸ್ ಆಗಿರಬಹುದು ಇಲ್ಲ ಕಾಂಫಿಡೆನ್ಸ್ ಕಳೆದುಕೊಂಡಿರಬಹುದು ಆದ್ರೆ ನೀವು ನಗುತಾ ಕಾಲೇಜಿಗೆ ಎಂಟ್ರಿ ನೀಡಿದ್ರೆ ನಿಮ್ಮ ಸ್ಟ್ರೆಸ್ ಅಥವಾ ನರ್ವಸ್ ಯಾರಿಗೂ ತಿಳಿಯುದಿಲ್ಲ. ಹಾಗಾಘಿ ಮುಖದಲ್ಲಿ ಯಾವಾಗಲೂ ನಗು ಇರಲಿ.

ತುಂಬಾ ಸ್ಮಾರ್ಟ್ ಆಗಿ ವರ್ತಿಸಬೇಡಿ:

ನೀವು ಶಾಲೆಯಲ್ಲಿ ಬ್ರಿಲಿಯೆಂಟ್ ವಿದ್ಯಾರ್ಥಿಯಾಗಿರಬಹುದು ಆದರೆ ಕಾಲೇಜಿನಲ್ಲೂ ಮೊದಲ ದಿನವೇ ಅದೇ ರೀತಿ ವರ್ತಿಸಿದ್ರೆ ಇದರಿಂದ ನೀವು ಸಮಸ್ಯೆಗೆ ಸಿಲುಕಬಹುದು. ಪ್ರಶ್ನೆ ಕೇಳಿದ್ರೆ ನೀವು ಥಟ್ಟನೆ ಉತ್ತರಿಸಿ, ಇಲ್ಲ ಕೈ ಮೇಲೆ ಮಾಡಿ ಉತ್ತರಿಸಿ, ಡೌಟ್ ಬಂದಾಗ ಅದನ್ನ ಕೇಳಿ ಪರಿಹರಿಸಿಕೊಳ್ಳಿ ಆದ್ರೆ ಯಾರಾದ್ರೂ ಮಾತನಾಡುತ್ತಾ ಇದ್ದಾಗ ನಡುವಿನಲ್ಲಿ ನೀವು ಮಾತನಾಡಿ ಓವರ್ ಸ್ಮಾರ್ಟ್ ಎನಿಸಿಕೊಳ್ಳಬೇಡಿ. ಇದರಿಂದ ನಿಮಗೆ ಶಿಸ್ತು ಏನೆಂಬುದು ಗೊತ್ತಿಲ್ಲ ಎಂದು ಮೊದಲ ದಿನವೇ ನಿಮ್ಮ ಮೇಲೆ ಅಭಿಪ್ರಾಯ ಮೂಡಬಹುದು

ಪ್ರಬುದ್ಧತೆಯಿಂದ ವರ್ತಿಸಿ:

ವಯಸ್ಸಿಗಿಂತ ಅಧಿಕವಾಗಿ ವರ್ತಿಸಿದ್ರೆ ಅದನ್ನ ಯಾರೂ ಕೂಡಾ ಇಷ್ಟಪಡಲ್ಲ. ಇನ್ನೂ ವಯಸ್ಸಿಗಿಂತ ಇನ್ನೂ ಮಕ್ಕಳಾಗೆ ಆಡಿದ್ರೂ ಕೂಡಾ ಅದನ್ನ ಯಾರೂ ಇಷ್ಟಪಡಲ್ಲ. ಹಾಗಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ಪ್ರಬುದ್ಧತೆಯಿಂದ ಎಲ್ಲರ ಜತೆ ವರ್ತಿಸಿ. ಇದರಿಂದ ಎಲ್ಲರ ಗಮನ ನಿಮ್ಮತ್ತ ಸೆಳೆಯುವುದು. ನೀವೇ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತೀರ.

For Quick Alerts
ALLOW NOTIFICATIONS  
For Daily Alerts

English summary
You must also be thinking about how the atmosphere, people, and ambiance will be like inside the college campus. this is very obvious as ypu are about to enter a new phase of life called the college life
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X