ನಿಮಗೆ ವೃತ್ತಿ ಜೀವನದ ಜೊತೆಗೆ ಅಧ್ಯಯನ ಮಾಡುವುದು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ಈ ಸಲಹೆಗಳನ್ನು ಪಾಲಿಸಿ

ಕಲಿಕೆ ಎನ್ನುವುದು ನಿಂತ ನೀರಲ್ಲ ಅದು ಸದಾ ಹರಿಯುವ ನದಿಯಂತೆ. ಹಾಗೆ ವಿದ್ಯೆ ಎಂಬುದು ಎಂದಿಗೂ ಮುಗಿದ ಅಧ್ಯಾಯವಲ್ಲ. ಅದೊಂದು ನಿರಂತರ ಕಲಿಕೆ. ಶಿಕ್ಷಣ ಜೀವನವನ್ನು ನೀಡುತ್ತೆ. ಶಿಕ್ಷಣವು ಉದ್ಯೋಗವನ್ನು ನೀಡತ್ತೆ. ಶಿಕ್ಷಣ ಜ್ಞಾನವನ್ನು ನೀಡುತ್ತೆ ಹೀಗೆ ಶಿಕ್ಷಣದ ಕೊಡುಗೆ ಅಪಾರ.

ಅನೇಕರು ತತ್ಸಮಾನ ವಿದ್ಯಾರ್ಹತೆಯನ್ನು ಪಡೆದು ಉದ್ಯೋಗವನ್ನು ಅರಸುವ ಪರಿಸ್ಥಿತಿ. ಇನ್ನೂ ಕೆಲವರು ಪದವಿ ಪಡೆದು ಉನ್ನತ ವ್ಯಾಸಂಗಕ್ಕಾಗಿ ದೇಶ ವಿದೇಶದಲ್ಲಿ ಉನ್ನತ ಕಾಲೇಜುಗಳಲ್ಲಿ ಅಧ್ಯಯನ ಮಾಡಲು ಪ್ರಯತ್ನದಲ್ಲಿ ತೊಡಗಿರುತ್ತಾರೆ. ಆದರೆ ಇನ್ನಷ್ಟು ಕೆಲವು ಮಂದಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಉದ್ಯೋಗವನ್ನು ಅರಸುತ್ತಾರೆ . ತನ್ನ ಕಾಲ ಮೇಲೆ ನಿಂತು ತಮ್ಮ ದುಡ್ಡಿನಲ್ಲೆ ಅಧ್ಯಯನ ಕೈಗೊಳ್ಳುವ ಬಗೆಗೆ ಚಿಂತಿಸುತ್ತಾರೆ. ಹೀಗೆ ಅನೇಕರು ಪ್ರತಿನಿತ್ಯ ಆಫೀಸ್ ಕೆಲಸ ಜೊತೆ ಜೊತೆಗೆ ಅಧ್ಯಯನ ಮಾಡುವುದನ್ನು ನಾವು ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಗಮನಿಸುತ್ತಿರುತ್ತೇವೆ.

 

ಉದ್ಯೋಗದ ಜೊತೆ ಜೊತೆಗೆ ನಿಮ್ಮ ಅಧ್ಯಯನದ ಕನಸನ್ನು ಈಡೇರಿಸಿಕೊಳ್ಳುವುದು ಹೇಗೆ? ಎನ್ನುವುದಕ್ಕೆ ಹಲವರ ಉತ್ತರವೆಂದರೆ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟ ಎಂದು. ಆದರೆ ನೀವು ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಕರಿಯರ್ ಇಂಡಿಯಾ ನಿಮಗೊಂದಿಷ್ಟು ಸಲಹೆಗಳನ್ನು ನೀಡುತ್ತಿದೆ. ಅದನ್ನು ಪಾಲಿಸಿ ನಿಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ನಿಮ್ಮ ಅಧ್ಯಯನವನ್ನು ಉತ್ತಮ ರೀತಿಯಲ್ಲಿ ನಡೆಸಿ ಕನಸನ್ನು ನನಸು ಮಾಡಿ.

ವೃತ್ತಿ ಜೀವನದ ಜೊತೆಗೆ ಅಧ್ಯಯನ ಮಾಡೋದು ಹೇಗೆ? ಇಲ್ಲಿದೆ ಸಲಹೆ

ನಿಗದಿತ ಸಮಯದಲ್ಲೇ ಆಫೀಸ್ ಕೆಲಸ ಮುಗಿಸಿ:

ನಿಗದಿತ ಸಮಯದಲ್ಲೇ ಆಫೀಸ್ ಕೆಲಸ ಮುಗಿಸಿ:

ಆಫೀಸ್ ಎಂದ ಮೇಲೆ ಪ್ರತಿನಿತ್ಯ ಕೆಲಸದ ಹೊರೆ ಇದ್ದೇ ಇರುತ್ತದೆ. ಹಾಗಂತ ದಿನವಿಡೀ ಕೆಲಸದಲ್ಲೇ ಮುಳುಗಿ ಸಮಯದ ಜೊತೆ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಪ್ರತಿನಿತ್ಯ ಕಚೇರಿಯ ಸಮಯದೊಳಗೆ ನಿಮ್ಮ ಕೆಲಸವನ್ನು ಮುಗಿಸಿಕೊಳ್ಳಿ. ಇದರಿಂದ ನಿಮ್ಮ ಕೆಲಸವು ಅಚ್ಚುಕಟ್ಟಾಗಿ ಮಾಡಬಹುದು ಜೊತೆಗೆ ಸಮಯವನ್ನು ಉಳಿತಾಯ ಮಾಡಬಹುದು.

ನಿಮ್ಮ ಅಧ್ಯಯನಕ್ಕೆ ಸಹಾಯಕವಾಗುವ ಉದ್ಯೋಗ ಮಾಡಿ:

ನಿಮ್ಮ ಅಧ್ಯಯನಕ್ಕೆ ಸಹಾಯಕವಾಗುವ ಉದ್ಯೋಗ ಮಾಡಿ:

ನೀವು ಉದ್ಯೋಗದ ಜೊತೆ ಜೊತೆಗೆ ಅಧ್ಯಯನ ಮಾಡಬೇಕೆನ್ನುವ ಕನಸು ಹೊಂದಿದ್ದಲ್ಲಿ, ಅಧ್ಯಯನಕ್ಕೆ ಸಹಾಯವಾಗುವ ಉದ್ಯೋಗವನ್ನು ಮಾಡಿ. ಅಂದರೆ ಯಾವುದೇ ಉದ್ಯೋಗ ಮಾಡಿದರು ಅದು ನಿಮ್ಮ ಸಮಯ ಉಳಿತಾಯ ಜೊತೆಗೆ ಕಡಿಮೆ ಹೊರೆಯನ್ನು ಹೊಂದಿರಬೇಕು. ಇದರಿಂದ ನಿಮಗೆ ಮಾನಸಿಕ ಮತ್ತು ಆರ್ಥಿಕವಾಗಿಯೂ ಸಹಾಯವಾಗುತ್ತದೆ. ಜೊತೆ ಜೊತೆಗೆ ಅಧ್ಯಯನ ಕೂಡ ಮಾಡಿದಂತಾಗುವುದು.

ಮಾನಸಿಕವಾಗಿ ಒತ್ತಡಕ್ಕೊಳಗಾಗುವ ಉದ್ಯೋಗ ಮಾಡಬೇಡಿ:
 

ಮಾನಸಿಕವಾಗಿ ಒತ್ತಡಕ್ಕೊಳಗಾಗುವ ಉದ್ಯೋಗ ಮಾಡಬೇಡಿ:

ಪ್ರತಿನಿತ್ಯ ಆಫೀಸ್‌ನಲ್ಲಿ ಕೆಲಸದ ಹೊರೆ,ಒತ್ತಡ ಮತ್ತು ಬಾಸ್‌ ಕಿರಿಕಿರಿ ಹೀಗೆಲ್ಲಾ ಸಮಸ್ಯೆಗಳಿರುವ ವಾತಾವರಣದಲ್ಲಿ ಕೆಲಸ ಮಾಡಬೇಡಿ. ಇದರಿಂದ ನಿಮ್ಮ ಒತ್ತಡವನ್ನು ನಿಯಂತ್ರಿಸಲು ಬಹಳ ಸಮಯ ಬೇಕಾದೀತು. ಹೀಗಿದ್ದಲ್ಲಿ ಆಫೀಸ್‌ ಮುಗಿಸಿ ಮನೆಗೆ ಬಂದು ಅಧ್ಯಯನ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮಾನಸಿಕವಾಗಿ ಹಿಂಸೆಗೊಳಗಾಗುವ ಉದ್ಯೋಗಗಳಿಂದ ದೂರವಿರಿ ಮತ್ತು ಅಧ್ಯಯನಕ್ಕೆ ಸಹಾಯವಾಗುವ ಉದ್ಯೋಗ ಮಾಡಿ.

ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ವಹಿಸಿ:

ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ವಹಿಸಿ:

ಉದ್ಯೋಗ ಮತ್ತು ಅಧ್ಯಯನ ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಿಮ್ಮ ಆರೋಗ್ಯ ಕೂಡ ಅಷ್ಟೇ ಮುಖ್ಯ. ಪ್ರತಿನಿತ್ಯ ನಿಯಮಿತ ಆಹಾರ ಸೇವನೆ, ವ್ಯಾಯಾಮ ಮತ್ತು ನಿದ್ದೆಯನ್ನು ಸರಿಯಾಗಿ ಮಾಡಿದಾಗ ಮಾತ್ರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ನೀವು ಆರೋಗ್ಯದಿಂದಿದ್ದಲ್ಲಿ ಮಾತ್ರ ನಿಮ್ಮ ದೈನಂದಿನ ಕೆಲಸ, ಆಫೀಸ್ ಕೆಲಸ ಮತ್ತು ಅಧ್ಯಯನವನ್ನು ಕೈಗೊಳ್ಳಲು ಸಾಧ್ಯ.

ಟೈಂ ಮ್ಯಾನೇಜ್ಮೆಂಟ್ ಮಾಡಿ:

ಟೈಂ ಮ್ಯಾನೇಜ್ಮೆಂಟ್ ಮಾಡಿ:

ಆಫೀಸ್ ಕೆಲಸ ಇಂತಿಷ್ಟು ಅವಧಿ ಎಂದು ಹೇಗೆ ನಿರ್ಧರಿತವಾಗಿರುತ್ತದೆಯೋ ಅದೇ ರೀತಿಯಾಗಿ ನೀವು ನಿಮ್ಮ ದೈನಂದಿನ ಕೆಲಸಗಳಿಗಾಗಿ ಟೈಂಟೇಬಲ್ ಹಾಕಿಕೊಳ್ಳಿ. ಬೆಳಗ್ಗೆ ಎದ್ದಾಗಿನಿಂದ ಎಲ್ಲಾ ಕೆಲಸಗಳನ್ನು ಇಂತಿಷ್ಟೇ ಸಮಯದೊಳಗೆ ಮುಗಿಸಲು ಪ್ಲಾನ್ ಮಾಡಿ ಇದರಿಂದ ನಿಮಗೆ ಅಧ್ಯಯನ ಮಾಡಲು ಹೆಚ್ಚು ಸಮಯ ಸಿಗಬಹುದು.

ಗ್ಯಾಜೆಟ್ಸ್ ಬಳಕೆ ನಿಯಂತ್ರಿಸಿ:

ಗ್ಯಾಜೆಟ್ಸ್ ಬಳಕೆ ನಿಯಂತ್ರಿಸಿ:

ನಿಮ್ಮ ಕನಸು ದೊಡ್ಡದಾಗಿದ್ದಲ್ಲಿ, ನಿಮ್ಮ ಗುರಿ ಅಧ್ಯಯನದೆಡೆಗೆ ಇದ್ದಲ್ಲಿ ನೀವು ಗ್ಯಾಜೆಟ್ಸ್ ಬಳಕೆಯನ್ನು ನಿಯಂತ್ರಿಸುವ ಅಗತ್ಯತೆ ಹೆಚ್ಚಿದೆ. ಕೆಲಸದ ನಡುವೆ ಸಮಯ ಸಿಕ್ಕಾಗ ಮೊಬೈಲ್ ಮತ್ತು ಟ್ಯಾಬ್‌ಗಳನ್ನು ಬಳಸಿ ನಿಮ್ಮ ಸಮಯ ಹಾಳು ಮಾಡಿಕೊಳ್ಳುವ ಬದಲು ಅಧ್ಯಯನವನ್ನು ಮಾಡಿ ಇದರಿಂದ ಸಮಯ ವ್ಯಯ ಮಾಡುವುದನ್ನು ತಪ್ಪಿಸಬಹುದು.

ಅಧ್ಯಯನಕ್ಕೆ ನಿಗದಿತ ಸ್ಥಳ ಆಯ್ಕೆ ಮಾಡಿ:

ಅಧ್ಯಯನಕ್ಕೆ ನಿಗದಿತ ಸ್ಥಳ ಆಯ್ಕೆ ಮಾಡಿ:

ಆಫೀಸ್ ಕೆಲಸ ಮತ್ತು ಮನೆ ಕೆಲಸ ಅಂತೆಲ್ಲಾ ದಿನವಿಡೀ ಕಾಲ ಕಳೆದಿರುತ್ತೀರಿ. ಆದರೆ ಅಧ್ಯಯನದ ವಿಷಯಕ್ಕೆ ಬಂದಾಗ ಇಲ್ಲಿ ಸಮಯವೂ ಮುಖ್ಯ ಹಾಗೆ ಅಧ್ಯಯನ ಮಾಡುವ ಸ್ಥಳವೂ ಮುಖ್ಯ. ಹಾಗಾಗಿ ದಿನನಿತ್ಯ ಎಲ್ಲಾ ಕೆಲಸಗಳೂ ಮುಗಿದ ಬಳಿಕ ನೀವು ಅಧ್ಯಯನ ಮಾಡುತ್ತಿದ್ದಲ್ಲಿ ಅದಕ್ಕೆ ಸೂಕ್ತವಾದ ಸಮಯವನ್ನು ಆಯ್ಕೆ ಮಾಡಿ. ಅಲ್ಲಿ ಮನಸ್ಸಿಗೆ ಹಿತ ನೀಡುವ ವಸ್ತುಗಳನ್ನಿಡಿ. ಇದರಿಂದ ನಿಮಗೆ ಓದಲು ಹೆಚ್ಚು ಉತ್ತೇಜನ ನೀಡಿದಂತಾಗುವುದು.

For Quick Alerts
ALLOW NOTIFICATIONS  
For Daily Alerts

English summary
Here we sharing the tips to balance work life, study and personal life. Check it out.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X