ಗ್ರೇಟ್ ಸ್ಟೂಡೆಂಟ್ ಆಗಬೇಕಾ... ಈ ಟಿಪ್ಸ್ ಫಾಲೋ ಮಾಡಿ !

ಗ್ರೇಟ್ ಸ್ಟೂಡೆಂಟ್ ಎನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಯಾಕೆಂದ್ರೆ ನಿಮ್ಮ ಹಾಗೆ ತುಂಬಾ ವಿದ್ಯಾರ್ಥಿಗಳು ಹೀಗೆನೆ ಅಂದುಕೊಂಡಿರುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಸ್ಪರ್ಧೆ ಜಾಸ್ತಿನೇ ಇರುತ್ತದೆ. ಅತೀ ಹೆಚ್ಚು ಅಂಕ ಸ್ಕೋರ್ ಮಾಡುವವರು ಗ್ರೇಟ್ ಸ್ಟೂಡೆಂಟ್ ಎನಿಸಿಕೊಳ್ಳುವರು

ನಿಮಗೂ ಗ್ರೇಟ್ ಸ್ಟೂಡೆಂಟ್ ಎನಿಸಿಕೊಳ್ಳಬೇಕೆಂದು ಹಂಬಲವಿದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ

ಗ್ರೇಟ್ ಸ್ಟೂಡೆಂಟ್ ಆಗಬೇಕಾ... ಈ ಟಿಪ್ಸ್ ಫಾಲೋ ಮಾಡಿ !

 

ಕ್ಸಾಸ್ ನಲ್ಲಿ ಗಮನಕೊಟ್ಟು ಪಾಠ ಕೇಳಿ:

ಹೆಚ್ಚಿನ ವಿದ್ಯಾರ್ಥಿಗಳಿಗೆ ಟೀಚರ್ ಹೇಳಿ ಕೊಡುವ ಪಾಠ ಅರ್ಥವಾಗುವುದಿಲ್ಲ ಇಲ್ಲಿಷ್ಟವಾಗುದಿಲ್ಲ. ಈ ಟೈಂನಲ್ಲಿ ಅವರು ಮನೆಗೆ ಬಂದು ಸೆಲ್ಫ್ ಸ್ಟಡಿ ಮಾಡಿಕೊಳ್ಳುತ್ತಾರೆ. ಆದ್ರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಕ್ಲಾಸ್ ಬಂಕ್ ಮಾಡದೇ ಕ್ಲಾಸ್‌ಗೆ ಹಾಜರಾಗಿ. ಅರ್ಥವಾಗದಿದ್ದರೂ ಮತ್ತೆ ಮತ್ತೆ ಕೇಳಿ ಅರ್ಥ ಮಾಡಿಕೊಳ್ಳಿ. ಇದರಿಂದ ನೀವು ಬೆಸ್ಟ್ ವಿದ್ಯಾರ್ಥಿ ಎಂದು ಎನಿಸಿಕೊಳ್ಳುತ್ತೀರಿ

ಗ್ರೇಟ್ ಸ್ಟೂಡೆಂಟ್ ಆಗಬೇಕಾ... ಈ ಟಿಪ್ಸ್ ಫಾಲೋ ಮಾಡಿ !

ಓದಲು ತಡಮಾಡಬೇಡಿ:

ಕ್ಲಾಸ್‌ನಲ್ಲಿ ಕಲಿಸಿದ ಪಾಠ ನಿಮಗೆ ಪೂರ್ತಿಯಾಗಿ ಅರ್ಥವಾಗಿದ್ದರೆ ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳದೇ ಆರಾಮವಾಗಿ ಇರಬೇಡಿ. ಬದಲಿಗೆ ಮನೆಗೆ ಬಂದ ಕೂಡಲೇ ಮತ್ತೊಮ್ಮೆ ಓದಿ ನಿಮ್ಮದೇ ರೀತಿಯಲ್ಲಿ ಪಾಯಿಂಟ್‌ ಮಾಡಿ ಸ್ಟಡಿ ಮಾಡಿ. ಇದರಿಂದ ನಿಮಗೆ ನೆಕ್ಸ್ಟ್ ದಿನ ಮಾಡುವ ಕ್ಲಾಸ್‌ಗೆ ಸುಲಭವಾಗುವುದು ಅಷ್ಟೇ ಅಲ್ಲ ಎಕ್ಸಾಂ ಟೈಂನಲ್ಲೂ ನಿಮ್ಮದು ಬೇಗನೇ ರಿವಿಜನ್ ಆಗಿರುತ್ತದೆ

ಚೆನ್ನಾಗಿ ತಯಾರು ಮಾಡಿಕೊಳ್ಳಿ:

ಹೆಚ್ಚಿನ ವಿದ್ಯಾರ್ಥಿಗಳು ಮಾಡುವ ಕಾಮನ್ ತಪ್ಪಿದು. ಕ್ಲಾಸ್‌ನಲ್ಲಿ ಅರ್ಥವಾಯಿತು ಎಂದು ಮತ್ತೆ ಆ ಚಾಪ್ಟರ್ ನೋಡಲು ಹೋಗುವುದೇ ಇಲ್ಲ. ನೇರವಾಗಿ ಪರೀಕ್ಷೆ ಟೈಂಗೆ ಒಂದು ಬಾರಿ ಓದುತ್ತಾರೆ. ಆದ್ರೆ ಇದರಿಂದ ವಿದ್ಯಾರ್ಥಿಗಳು ಬೇಗನೆ ಹೆಚ್ಚು ಅಂಕ ಕಳೆದುಕೊಳ್ಳುತ್ತಾರೆ. ಸರಿಯಾದ ತಯಾರಿ ಮಾಡದೇ ಇರುವುದರಿಂದ ಪರೀಕ್ಷೆಯಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಿ ಹೆಚ್ಚು ಹೆಚ್ಚು ಅಂಕ ಕಳೆದುಕೊಳ್ಳುತ್ತಾರೆ

ಗ್ರೇಟ್ ಸ್ಟೂಡೆಂಟ್ ಆಗಬೇಕಾ... ಈ ಟಿಪ್ಸ್ ಫಾಲೋ ಮಾಡಿ !

 

ಕ್ಲಾಸ್ ಮಿಸ್ ಆಯಿತು ಎಂದು ಸುಮ್ಮನೆ ಕೂರಬೇಡಿ

ಅನಾರೋಗ್ಯದ ಕಾರಣ ಇಲ್ಲ ಬೇರೆ ಏನಾದ್ರೂ ಸಿಲ್ಲಿ ಕಾರಣದಿಂದ ಒಂದು ವೇಳೆ ನೀವು ತರಗತಿಗೆ ಹಾಜರಾಗದೇ ಇದ್ದರೆ ಕ್ಲಾಸ್ ಮಿಸ್ ಆಯಿತು ಎಂದು ಸುಮ್ಮನೆ ಕೂರಬೇಡಿ. ಬದಲಿಗೆ ಫ್ರೀ ಟೈನಲ್ಲಿ ಟೀಚರ್‌ ಅವರನ್ನ ಭೇಟಿಯಾಗಿ ಮತ್ತೆ ಆ ವಿಷಯದ ಬಗ್ಗೆ ಕೇಳಿ ತಿಳಿದುಕೊಳ್ಳಿ. ಇದರಿಂದ ಶಿಕ್ಷಕರಿಗೂ ನಿಮ್ಮ ಮೇಲೆ ಗೌರವ ಹೆಚ್ಚುವುದು. ನಿಮಗೂ ಕ್ಲಾಸ್‌ ಮತ್ತೆ ಸಿಕ್ಕಂತಾಗವುದುಉ

ಇತರರ ಸಹಾಯ ಪಡೆಯಲು ಹಿಂದೆ ಮುಂದೆ ನೋಡಬೇಡಿ

ಯಾವುದಾದ್ರು ಒಂದು ಸಬ್‌ಜೆಕ್ಟ್ ನಿಮಗಿಂತ ನಿಮ್ಮ ಕ್ಲಾಸ್‌ಮೇಟ್ ಗೆ ಹೆಚ್ಚು ಅರ್ಥವಾಗಿರಬಹುದು. ಇಲ್ಲ ಆ ವಿಷಯದಲ್ಲಿ ನಿಮ್ಮ ಇತರ ಸಹಪಾಠಿ ಕಲಿಯುದರಲ್ಲಿ ಮುಂದಿರಬಹುದು. ಇಂತಹ ಟೈಂನಲ್ಲಿ ಅವರ ಸಹಾಯ ಪಡೆದು ಅವರಿಂದ ಆ ವಿಷಯದ ಬಗ್ಗೆ ಮತ್ತೊಮ್ಮೆ ಕೇಳಿ ತಿಳಿದುಕೊಳ್ಳಿ. ಇದರಿಂದ ನಿಮಗೆ ಕಲಿಯಲು ಮತ್ತಷ್ಟು ಸುಲಭವಾಗುವುದು. ಅದು ಬಿಟ್ಟು ಅವರ ಜತೆ ಸಹಾಯ ಕೇಳಲು ಹಿಂದೆ ಮುಂದೆ ನೋಡಬೇಡಿ.

ನಿರಾಶರಾಗಬೇಡಿ:

ಗ್ರೇಟ್ ಸ್ಟುಡೆಂಟ್ ಎಂದು ಎನಿಸಿಕೊಳ್ಳಬೇಕೆಂದು ಕೆಲವು ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಮಾಡುತ್ತಾರೆ. ಹಗಲು ರಾತ್ರಿ ಎನ್ನದೇ ಹಾರ್ಡ್ ಸ್ಟಡಿ ಮಾಡುತ್ತಾರೆ. ಆದರೆ ನಿರೀಕ್ಷಿತ ಫಲಿತಾಂಶ ಬರದೇ ಇದ್ದಾಗ ನಿರಾಶೆಗೊಳ್ಳುತ್ತಾರೆ. ಇದರಿಂದ ಅವರು ಮುಂದಿನ ಹೋಪ್ಸ್ ಕಳೆದುಕೊಳ್ಳುತ್ತಾರೆ. ಹಾಗಾಗಿ ನೀವು ಏನು ಮಾಡಬೇಕು ಅಂದ್ರೆ ಒಮ್ಮೆ ನಿಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ ಎಂದಾದ್ರೆ ಪ್ರಯತ್ನವನ್ನ ಅಲ್ಲಿಗೆ ಬಿಡಬೇಡಿ. ಮತ್ತಷ್ಟು ಹಾರ್ಡ್ ವರ್ಕ್ ಮಾಡಿ. ನಿಮ್ಮ ಗುರಿ ಮುಟ್ಟುವವರೆಗೂ ಸಾಧನೆ ಮಾಡಿ

For Quick Alerts
ALLOW NOTIFICATIONS  
For Daily Alerts

  English summary
  Doing your job exceptionally well is what will set you apart from your competitors and set you ahead in a race. This is a very important lesson in the journey of life. Like all other life lessons, this trick works well if it is started early on in life. That is why it is important for an individual to study well and become a great student
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more