Tips To Improve Spoken English : ಇಂಗ್ಲೀಷ್ ಚೆನ್ನಾಗಿ ಮಾತನಾಡಬೇಕೇ? ಇಲ್ಲಿದೆ ಸರಳ ಸೂತ್ರ

ಇಂಗ್ಲಿಷ್ ಭಾಷೆ ಅಂದ್ರೆ ಸಾಕು ಅದು ನಮಗೆ ಕಷ್ಟವಾದ ಭಾಷೆ, ಅದನ್ನು ನಾವು ಕಲಿಯಲು ತುಂಬಾ ಸಮಯ ಬೇಕು ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರು ಮಾತ್ರ ಇಂಗ್ಲಿಷ್ ಅನ್ನು ಸುಲಭವಾಗಿ ಕಲಿಯುತ್ತಾರೆ ಎನ್ನುವ ತಪ್ಪು ಕಲ್ಪನೆಗಳಿವೆ. ಆದರೆ ಒಂದು ಸತ್ಯವನ್ನು ನೀವು ತಿಳಿಯಲೇಬೇಕು ಅದೇನೆಂದರೆ ಕಲಿಯುವ ಮತ್ತು ತಿಳಿಯುವ ಉತ್ಸಾಹ ಮತ್ತು ಹಂಬಲ ನಿಮ್ಮಲ್ಲಿದ್ದಲ್ಲಿ ಎಲ್ಲವೂ ಸುಲಭ.

ನೀವು ಇಂಗ್ಲೀಷ್ ನಲ್ಲಿ ಸುಲಭವಾಗಿ ಮಾತನಾಡಬೇಕೇ? ಈ ಸರಳ ಸಲಹೆಗಳನ್ನು ಪಾಲಿಸಿ

ಇಂಗ್ಲೀಷ್ ಭಾಷೆ ಜಾಗತಿಕವಾಗಿ ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅನೇಕರು ಲಿಖಿತ ರೂಪದಲ್ಲಿ ಇಂಗ್ಲಿಷ್ ಭಾಷೆಯನ್ನು ಬಲ್ಲವರಾದರೂ ಕೂಡ ಇಂಗ್ಲೀಷ್ ಭಾಷೆಯನ್ನು ಮಾತನಾಡುವ ರೀತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇಂಗ್ಲಿಷ್ ಮಾತನಾಡುವಾಗ ನೀವು ವ್ಯಾಕರಣದ ಮೇಲೆ ಪಾಂಡಿತ್ಯವನ್ನು ಹೊಂದಿರುವುದು ಮಾತ್ರವಲ್ಲದೆ ಉಚ್ಚಾರಣೆಯ ಜ್ಞಾನವನ್ನೂ ಹೊಂದಿರಬೇಕು. ಹಾಗಾಗಿ ನಾವಿಲ್ಲಿ ಇಂಗ್ಲೀಷ್ ಅನ್ನು ಸುಲಭ ಮತ್ತು ಸರಳವಾಗಿ ಕಲಿಯುವುದು ಮತ್ತು ನಿಮ್ಮ ಇಂಗ್ಲೀಷ್ ಅನ್ನು ಅಭಿವೃದ್ಧಿಪಡಿಸುವುದು ಹೇಗೆ ಎನ್ನುವ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

1. ನಿಮ್ಮ ದೈನಂದಿನ ಸಂಭಾಷಣೆಗಳಲ್ಲಿ ಇಂಗ್ಲಿಷ್ ಬಳಸಿ :

1. ನಿಮ್ಮ ದೈನಂದಿನ ಸಂಭಾಷಣೆಗಳಲ್ಲಿ ಇಂಗ್ಲಿಷ್ ಬಳಸಿ :

ಅನುಭವಕ್ಕಿಂತ ಉತ್ತಮ ಗುರುವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಮ್ಮ ದಿನನಿತ್ಯದ ಸಂಭಾಷಣೆಗಳಲ್ಲಿ ಇಂಗ್ಲಿಷ್ ಅನ್ನು ಬಳಸುವುದರಿಂದ ಅದು ಅಭ್ಯಾಸವಾಗುತ್ತಾ ಹೋಗುವುದು ಮಾತ್ರವಲ್ಲದೆ ಒಬ್ಬರಿಗೊಬ್ಬರು ಸಂಭಾಷಣೆಯ ಸ್ವಾಭಾವಿಕತೆಗೆ ಒಗ್ಗಿಕೊಳ್ಳಬಹುದು. ಇದರಿಂದ ನೀವು ಮಾತನಾಡುವ ಇಂಗ್ಲೀಷ್ ಅಭಿವೃದ್ಧಿ ಜೊತೆಗೆ ಇನ್ನಷ್ಟು ಕಲಿಕೆಗೆ ಸಹಾಯವಾಗಲಿದೆ.

2. ಇಂಗ್ಲೀಷ್ ಪುಸ್ತಕಗಳನ್ನು ಹೆಚ್ಚು ಓದಿ :

2. ಇಂಗ್ಲೀಷ್ ಪುಸ್ತಕಗಳನ್ನು ಹೆಚ್ಚು ಓದಿ :

ನೀವು ಮಾತನಾಡುವ ಇಂಗ್ಲಿಷ್ ಅನ್ನು ಸುಧಾರಿಸಲು ಓದುವಿಕೆ ಅತ್ಯುತ್ತಮ ಮಾರ್ಗವಾಗಿದೆ ಏಕೆಂದರೆ ಅದು ನಿಮಗೆ ಹೊಸ ಪದಗಳನ್ನು ಪರಿಚಯಿಸುತ್ತದೆ ಮತ್ತು ಅವುಗಳನ್ನು ವಾಕ್ಯದಲ್ಲಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತದೆ. ಇದಲ್ಲದೆ ನೀವು ನಿಮ್ಮ ಪುಸ್ತಕಗಳನ್ನು ಹಿಡಿದು ಜೋರಾಗಿ ಓದಿದರೆ ಅದು ನಿಮ್ಮ ಉಚ್ಚಾರಣೆ ಮತ್ತು ಭಾಷೆ ಬಳಕೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ನೀವು ಮಾತನಾಡುವ ಇಂಗ್ಲಿಷ್ ಕೇಳಲು ಹೆಚ್ಚು ಸುಂದರವಾಗಿರುತ್ತದೆ.

3. ಉತ್ತಮ ಕೇಳುಗರಾಗಿರಿ :
 

3. ಉತ್ತಮ ಕೇಳುಗರಾಗಿರಿ :

ಸಾಮಾನ್ಯವಾಗಿ ನಾವು ಉತ್ತಮ ಕೇಳುಗರಾದಲ್ಲಿ ಉತ್ತಮ ಕಲಿಕೆಯ ಆಸಕ್ತಿಯನ್ನು ಹೊಂದಿರುತ್ತೇವೆ ಎಂಬ ಮಾತಿದೆ. ಹಾಗಾಗಿ ನಮ್ಮ ಕಲಿಕೆಯ ಆಸಕ್ತಿಗೆ ಪೂರಕವಾಗಿ ಯಾರಾದರೂ ಇಂಗ್ಲಿಷ್ ಮಾತನಾಡುತ್ತಿದ್ದರೆ ಅದನ್ನು ಕೇಳಿಸಿಕೊಳ್ಳುವ ಮೂಲಕ ನಿಮ್ಮ ಇಂಗ್ಲೀಷ್ ಅನ್ನು ಸುಧಾರಿಸಿಕೊಳ್ಳುವುದು ಉತ್ತಮ.
ಇದರಿಂದ ಇಂಗ್ಲಿಷ್ ಉಚ್ಚಾರಣೆ, ನುಡಿಗಟ್ಟುಗಳು ಮತ್ತು ಭಾಷಾವೈಶಿಷ್ಟ್ಯಗಳ ಬಳಕೆ ಮತ್ತು ಸರಿಯಾದ ವ್ಯಾಕರಣದ ಬಗ್ಗೆ ನಿಮಗೆ ಬಹಳಷ್ಟು ಅನುಭವವಾಗುತ್ತದೆ. ಹಾಗಾಗಿ ಮೊದಲು ಉತ್ತಮ ಕೇಳುಗರಾಗಿ ಆಗ ಇಂಗ್ಲೀಷ್ ನಿಮಗೆ ಆಪ್ತ ಭಾಷೆ ಎನಿಸುತ್ತದೆ.

4. ನಿಮ್ಮ ವಿರಾಮ ಚಟುವಟಿಕೆಗಳಲ್ಲಿ ಇಂಗ್ಲಿಷ್ ಅನ್ನು ಅಳವಡಿಸಿಕೊಳ್ಳಿ :

4. ನಿಮ್ಮ ವಿರಾಮ ಚಟುವಟಿಕೆಗಳಲ್ಲಿ ಇಂಗ್ಲಿಷ್ ಅನ್ನು ಅಳವಡಿಸಿಕೊಳ್ಳಿ :

ಕಲಿಕೆಯು ಒಂದು ಆಸಕ್ತಿಗೆ ದಾರಿಮಾಡಿಕೊಡಬೇಕೆಂದರೆ ಕಲಿಕೆಯು ವಿನೋದಮಯವಾಗಿರಬೇಕು ಹಾಗಾಗಿ ಚಲನಚಿತ್ರಗಳನ್ನು ನೋಡುವುದು, ಕೇಳುವುದು ಅಥವಾ ಹಾಡುಗಳನ್ನು ಹಾಡುವುದು ಮುಂತಾದ ನಿಮ್ಮ ವಿರಾಮ ಚಟುವಟಿಕೆಗಳಲ್ಲಿ ನೀವು ಇಂಗ್ಲಿಷ್ ಅನ್ನು ಬಳಸಿಕೊಳ್ಳಬೇಕು. ಆಗ ಇಂಗ್ಲೀಷ್ ಭಾಷೆ ಕಲಿಕೆಯು ಒಂದು ಮನೋರಂಜನೆಯ ರೀತಿಯಲ್ಲಿ ನಿಮಗೆ ಇನ್ನಷ್ಟು ಕಲಿಕೆಯಲು ಅವಕಾಶ ಮಾಡಿಕೊಡುತ್ತದೆ. ಈ ರೀತಿಯಾಗಿ ನೀವು ನಿಮ್ಮ ಇಂಗ್ಲೀಷ್ ಭಾಷೆ ಅಭಿವೃದ್ಧಿಪಡಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
If you want to improve your English, here is the tips in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X