ಎಷ್ಟೇ ಓದಿದ್ರೂ ಪರೀಕ್ಷೆಗೆ ಬರೆಯುವಾಗ ಮಾತ್ರ ನೆನಪಿಗೆ ಬರೋದಿಲ್ವಾ?

By Rajatha

ಹೆಚ್ಚಿನ ಮಕ್ಕಳು ಪರೀಕ್ಷೆ ಬಂತೆಂದರೆ ರಾತ್ರಿ ಹಗಲು ಕೂತು ಓದುತ್ತಾರೆ. ಪರೀಕ್ಷೆಗೆ ಬೇಕಾದ ಎಲ್ಲಾ ತಯಾರಿ ನಡೆಸಿರುತ್ತಾರೆ. ಆದರೆ ಪರೀಕ್ಷೆಗೆ ಬರೆಯುವಾಗ ಮಾತ್ರ ಓದಿದ್ದು ಯಾವುದೂ ನೆನಪು ಇರೋದಿಲ್ಲ. ಇದು ಬಹಳಷ್ಟು ವಿದ್ಯಾರ್ಥಿಗಳಲ್ಲಿ ಕಂಡುಬರುವಂತಹ ಸಮಸ್ಯೆಯಾಗಿದೆ. ಎಷ್ಟೇ ಕಷ್ಟಪಟ್ಟು ಓದಿದದರೂ ಪರೀಕ್ಷೆ ಹಾಲ್‌ನಲ್ಲಿ ನೆನಪೇ ಬರುವುದಿಲ್ಲ. ನೀವೂ ಕೂಡಾ ಅಂತಹ ಸಮಸ್ಯೆಯನ್ನು ಎದುರಿಸಿರಬಹುದು ಅಲ್ಲವೇ?

ಓದಿದ್ದೆಲ್ಲವೂ ಸರಿಯಾಗಿ ನೆನಪಿರಬೇಕಾದರೆ ಏನು ಮಾಡಬೇಕು? ಯಾವ ರೀತಿ ಓದಬೇಕು ಎನ್ನುವುದು ನಿಮಗೆ ಗೊತ್ತಾ? ಅದಕ್ಕೆ ಇಲ್ಲಿದೆ ಕೆಲವು ಟಿಪ್ಸ್ ...

1. ಓದಿದ್ದನ್ನು ದೃಶ್ಯೀಕರಣಗೊಳಿಸಿ

ನೀವು ಏನನ್ನು ಓದುತ್ತೀರೋ ಅದನ್ನು ಚಿತ್ರಗಳ ಮೂಲಕ ಮನನಮಾಡಿ. ದೃಶ್ಯಗಳ ಮೂಲಕ ನೀವು ತಲೆಯಲ್ಲಿಟ್ಟುಕೊಂಡರೆ ಓದಿದ್ದು ಬೇಗನೇ ನೆನಪಿನಲ್ಲಿರುತ್ತದೆ. ಮಕ್ಕಳಿಗೆ ಪಾಠವನ್ನು ಕೇವಲ ಓದಿ ಹೇಳುವುದಕ್ಕಿಂತಲೂ ಚಿತ್ರಗಳ ಮೂಲಕ, ವಿಡಿಯೋ ಮೂಲಕ ತೋರಿಸಿದರೆ ಹೆಚ್ಚಾಗಿ ನೆನಪಿನಲ್ಲಿರುತ್ತದೆ.

2.ನೆನಪಿನಲ್ಲಿಡುವ ತಂತ್ರ

ಯಾವುದೇ ಒಂದು ವಿಷ್ಯದ ಬಗ್ಗೆ ಅಧ್ಯಯನ ಮಾಡುವಾಗ ಅದರ ಬಗ್ಗೆ ಮೌಲ್ಯಮಾಪನ ಮಾಡುವುದು, ವಿಮರ್ಶಿಸುವುದು, ಸಂಯೋಜಿಸುವುದು ಹಾಗೂ ವಿಶ್ಲೇಷಿಸುವುದು ಮುಖ್ಯ. ಹೀಗೆ ಮಾಡಿದರೆ ನೀವು ಆ ವಿಷ್ಯವನ್ನು ಚೆನ್ನಾಗಿ ನಿಮ್ಮ ಮಸ್ಥಿಷ್ಕದಲ್ಲಿ ಉಳಿಸಲು ಸಾಧ್ಯ.

3. 30% ಓದಿ, 70% ಬಾಯಿಪಾಠ ಮಾಡಿ

ಹೆಚ್ಚಿನ ಮಕ್ಕಳು ವಿಷ್ಯಗಳನ್ನು ಬಾಯಿಪಾಠ ಮಾಡುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಮಗ್ಗಿಗಳನ್ನು ಬಾಯಿಪಾಠ ಮಾಡಿಸುವುದು ನಿಮಗೆ ಗೊತ್ತೇ ಇರಬಹುದು. ಇದು ಸದಾ ನೆನಪಿನಲ್ಲಿರುತ್ತದೆ. ಹಾಗಾಗಿ ೩೦% ಓದಿ ಹೆಚ್ಚಿನದನ್ನು ಬಾಯಿಪಾಠ ಮಾಡಿ. ಬಾಯಿಪಾಠ ಮಾಡಿದ್ದನ್ನು ಬೇರೆಯವರಿಗೆ ಒಪ್ಪಿಸಿ ಆಗ ನೀವು ಓದಿದ್ದು ನೆನಪಿನಲ್ಲಿರುತ್ತದೆ.

 

 

4. ತ್ವರಿತ ಪರೀಕ್ಷೆ

ಕೆಲವೊಮ್ಮೆ ಕೆಲವು ವಿಷ್ಯಗಳು ನಮಗೆ ಸಂದರ್ಭಕ್ಕೆ ಅನುಗುಣವಾಗಿ ನೆನಪಾಗುತ್ತದೆ. ನೀವು ಎಲ್ಲಿ ಕೂತು ಆ ವಿಷ್ಯವನ್ನು ಓದಿದ್ದೀರಿ ಎನ್ನುವುದನ್ನು ನೆನಪು ಮಾಡಿ ಆಗ ನೀವು ಓದಿರುವುದು ಬೇಗನೆ ನೆನಪಿಗೆ ಬರುತ್ತದೆ. ಹೊರಗಡೆ ಎಲ್ಲಾದರೂ ಹೋಗುವಾಗ ಯಾವುದಾದರೂ ಒಂದು ವಿಷ್ಯದ ಬಗ್ಗೆ ಮನನ ಮಾಡಿ, ನಿಮಗೆ ನೆನಪಿಗೆ ಬಂದಿದ್ದನ್ನು ಮೊಬೈಲ್‌ನಲ್ಲಿ ಬರೆದಿಟ್ಟುಕೊಳ್ಳಿ, ಮನೆಗೆ ಹೋಗಿ ಪುಸ್ತಕ ತೆಗೆದು ನೋಡಿ ನೀವು ಯಾವ ಅಂಶವನ್ನು ಬಿಟ್ಟಿದ್ದೀರಿ ಎನ್ನುವುದು ತಿಳಿಯುತ್ತದೆ.

 

 

5. ಓದಿರುವುದರ ಬಗ್ಗೆ ಸಹಪಾಠಿಗಳಲ್ಲಿ ಚರ್ಚೆ ನಡೆಸಿ

ಯಾವುದೇ ಒಂದು ವಿಷ್ಯವನ್ನು ಅಧ್ಯಯನ ಮಾಡುವಾಗ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿಮ್ಮ ಸಹಪಾಠಿಗಳಲ್ಲಿ ಚರ್ಚಿಸಿ. ಇದರಿಂದ ನೀವು ಕಲಿತದ್ದು ಮಮನವಾದಂತಾಗುತ್ತದೆ. ಜೊತೆಗೆ ನಿಮ್ಮ ಸಹಪಾಠಿಗೆ ತಿಳಿದಿರುವಂತಹ ಕೆಲವು ವಿಷ್ಯಗಳು ನಿಮಗೆ ತಿಳಿಯುತ್ತದೆ.

 

 

6. ಓದಿನ ನಡುವೆ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ

ಓದಿನ ನಡುವೆ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬೇಕಾದುದು ಮುಖ್ಯ. ಇಡೀ ದಿನ ಓದುತ್ತಿದ್ದರೆ ತಲೆನೋವು ಪ್ರಾರಂಭವಾಗಬಹುದು. ಹಾಗಾಗಿ ಓದಿನ ಮಧ್ಯೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ನಂತರ ಮತ್ತೆ ಓದು ಪ್ರಾರಂಭಿಸಿದರೆ ನಿಮ್ಮ ಮೈಂಡ್ ಫ್ರೆಶ್ ಆಗಿರುತ್ತದೆ. ಜೊತೆಗೆ ನಿಮಗೆ ಸ್ವಲ್ಪ ಉಲ್ಲಾಸ ಅನಿಸುವುದು.

7. ರಿವಿಶನ್ ಬರೆದಿಟ್ಟುಕೊಳ್ಳಿ

ನೀವು ಓದುತ್ತಾ ಹೋದಂತೆ ಅದರಲ್ಲಿನ ಮುಖ್ಯಾಂಶಗಳನ್ನು ಒಂದು ಬುಕ್‌ನಲ್ಲಿ ಬರೆದಿಟ್ಟುಕೊಳ್ಳಿ. ಇದರಿಂದ ಯಾವ ವಿಷ್ಯವನ್ನು ನೀವು ಅಧ್ಯಯನ ಮಾಡಿದ್ದೀರಿ. ಅದರಲ್ಲಿ ಯಾವೆಲ್ಲಾ ಇಂಪಾಟೆಂಟ್ ವಿಷ್ಯಗಳಿದ್ದವು ಎಲ್ಲವೂ ನೆನಪಿಗೆ ಬರುತ್ತದೆ.

8. ಓದುವ ಸಮಯದಲ್ಲಿ ರಿವಿಶನ್‌ಗೂ ಸಮಯನೀಡಿ

14 ಗಂಟೆ ಓದುವ ಪ್ಲ್ಯಾನ್‌ನಲ್ಲಿದ್ದರೆ 13 ಗಂಟೆ ಓದಿ. ಯಾಕೆಂದರೆ ಒಂದು ಗಂಟೆಯನ್ನು ನಿಮ್ಮ ರಿವಿಶನ್‌ಗಾಗಿ ಮೀಸಲಿಡಿ. ನೀವು ದಿನವಿಡಿ ಓದಿದ್ದನ್ನು ರಿವಿಶನ್ ಮಾಡುವುದರಿಂದ ಓದಿದ್ದು ಸರಿಯಾಗಿ ನೆನಪಿನಲ್ಲಿರುತ್ತದೆ.

9. ಸಾಮಾಜಿಕ ಜಾಲತಾಣದಿಂದ ದೂರವಿರಿ

ಬೆಳಗ್ಗಿನಿಂದ ಒಂದೇ ಸಮನೆ ಓದುತ್ತಿದ್ದರೆ ದೇಹಕ್ಕೆ ಆಯಾಸ ಅನಿಸಬಹುದು. ಅದಕ್ಕಾಗಿ ಸ್ವಲ್ಪ ನಿದ್ದೆ ಮಾಡಿ. ಬ್ರೇಕ್‌ನಲ್ಲಿ ಸಾಮಾಜಿಕ ಜಾಲತಾಣದಿಂದ ದೂರವಿರಿ. ಸಾಮಾಜಿಕ ಜಾಲತಾಣದಿಂದ ಮನಸ್ಸು ಬೇರೆಡೆ ಸೆಳೆಯುವ ಸಾಧ್ಯತೆ ಇರುತ್ತದೆ. ಅದರ ಬದಲು ಅರ್ಧಗಂಟೆ ನಿದ್ದೆ ಮಾಡಿ.

For Quick Alerts
ALLOW NOTIFICATIONS  
For Daily Alerts

  English summary
  Many Students didn't remember what they studied for exam. They work hard for exam but if they dint remember anything in exam hall then what is the use of reading. Here is some tips for how to remember what they studied
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more