ಮ್ಯಾನೇಜರ್ ಆಗಿ ಬಡ್ತಿ ಸಿಕ್ಕಿತಾ... ಹಾಗಿದ್ರೆ ಇನ್ಮುಂದೆ ನಿಮ್ಮ ವರ್ತನೆ ಹೀಗಿರಲಿ!

ಮ್ಯಾನೇಜರ್ ಪ್ರಮೋಶನ್ ಸಿಕ್ಕ ಕೂಡಲೇ ನೀವೇನು ಫುಲ್ ಖುಷಿಯಾಗಿರುತ್ತೀರಾ. ಆದ್ರೆ ಪ್ರತೀ ದಿನದ ಟಾಸ್ಕ್ ಬಗ್ಗೆ ಯೋಚಿಸುವಾಗ ನಿಮ್ಮೊಳಗೆ ಏನೋ ಟೆನ್ಶನ್ ಆವರಿಸಿಕೊಂಡಿರುತ್ತದೆ.

ಅಭಿನಂದನೆಗಳು... ನೀವು ಇದೀಗ ಮ್ಯಾನೇಜರ್ ಆಗಿ ಪ್ರಮೋಶನ್ ಪಡೆದಿದ್ದೀರಾ. ಎಂದಾಗ ನಿಮಗೆ ಎಷ್ಟು ಖುಷಿಯಾಗುತ್ತೆ ಹೇಳಿ. ಪ್ರಮೋಶನ್ ಆದಾಗ ನೀವು ಯಶಸ್ಸಿನ ಏಣಿಯಲ್ಲಿ ಒಂದು ಹೆಜ್ಜೆ ಮೇಲಕ್ಕೆ ಹೋಗಿರುತ್ತೀರಿ. ಆದ್ರೆ ಈ ವೇಳೆ ಬರೀ ಪೋಸ್ಟ್ ಮಾತ್ರ ಹೆಚ್ಚಿರುವುದಲ್ಲ, ಬದಲಿಗೆ ನಿಮ್ಮ ಮೇಲಿನ ಜವಬ್ದಾರಿ ಕೂಡಾ ಹೆಚ್ಚುತ್ತದೆ.

ಮ್ಯಾನೇಜರ್ ಆಗಿ ಬಡ್ತಿ ಸಿಕ್ಕಿತಾ... ಹಾಗಿದ್ರೆ ಇನ್ಮುಂದೆ ನಿಮ್ಮ ವರ್ತನೆ ಹೀಗಿರಲಿ!

ಮ್ಯಾನೇಜರ್ ಪ್ರಮೋಶನ್ ಸಿಕ್ಕ ಕೂಡಲೇ ನೀವೇನು ಫುಲ್ ಖುಷಿಯಾಗಿರುತ್ತೀರಾ. ಆದ್ರೆ ಪ್ರತೀ ದಿನದ ಟಾಸ್ಕ್ ಬಗ್ಗೆ ಯೋಚಿಸುವಾಗ ನಿಮ್ಮೊಳಗೆ ಏನೋ ಟೆನ್ಶನ್ ಆವರಿಸಿಕೊಂಡಿರುತ್ತದೆ. ಲೀಡರ್ ಶಿಪ್ ಸ್ಥಾನನ್ನ ಹೇಗೆ ಸುಲಭವಾಗಿ ನಿಭಾಯಿಸುವುದು ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ

ನೀವು ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದರೆ, ಯಾವ ವಿಚಾರವನ್ನ ನೀವು ಗಮನದಲ್ಲಿಟ್ಟು ಕೊಳ್ಳಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಪ್ರೊಫೆಶನಲ್ ಆಗಿ ವರ್ತಿಸಿ:

ನೀವು ಈಗಾಗಲೇ ಇತರ ಸಹದ್ಯೋಗಿಗಳ ಜತೆ ಉತ್ತಮ ರಿಲೇಶನ್‌ಶಿಪ್ ಕಾಯ್ದಿರಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ನೀವು ಇದೀಗ ಮ್ಯಾನೇಜರ್ ಎಂಬುವುದು ನೆನಪಿಟ್ಟುಕೊಂಡಿರಿ. ಸಹದ್ಯೋಗಿಗಳು ತಪ್ಪು ಮಾಡಿದಾಗ ಅದನ್ನ ಕಡೆಗಣಿಸದೇ ಅವರಿಗೆ ತಿದ್ದಿ ಹೇಳುವುದು ನಿಮ್ಮ ಕರ್ತವ್ಯ. ಸಹದ್ಯೋಗಿಗಳ ಜತೆ ಗೌರವಯುತವಾಗಿ ಹಾಗೂ ಪ್ರೊಫೆಶನಲ್ ಆಗಿ ವರ್ತಿಸಿ.

ಆಕ್ಟೀವ್ ಆಗಿರಿ:

ನಿಮ್ಮ ಜ್ಯೂನಿಯರ್ಸ್ ಹೇಗೆ ಕೆಲಸ ಮಾಡುತ್ತಿದ್ದಾರೆ, ಆಫೀಸ್ ಕೆಲಸ ಹೇಗೆ ನಡೆಯುತ್ತಿದೆ ಎಂದು ಆಗಾಗ ಚೆಕ್ ಮಾಡುತ್ತಾ ಇರುವುದು ಬೆಸ್ಟ್. ಎಲ್ಲಾ ಟೈಂನಲ್ಲೂ ಆಕ್ಟೀವ್ ಆಗಿರಿ. ನಿಮ್ಮ ಜ್ಯೂನಿಯರ್ಸ್ ಏನು ಹೇಳುತ್ತಾರೆ ಎಂದು ನೀವು ಆಲಿಸಿ. ಅದಕ್ಕಾಗಿ ಪ್ರತಿ ದೊನ ಒಂದು ಮೀಟಿಂಗ್ ಕೂಡಾ ಆಯೋಜಿಸಿ

ಜವಬ್ದಾರಿ ವಹಿಸಿಕೊಳ್ಳಿ:

ನೀವು ಪ್ರಮೋಶನ್ ಪಡೆದ ಕೂಡಲೇ ಈ ಕ್ವಾಲಿಟಿ ನೀವು ಮೈಗೂಡಿಸಿಕೊಳ್ಳಲೇ ಬೇಕು. ಪ್ರಮೋಶನ್ ಹಾಗೂ ಜವಬ್ದಾರಿ ಎರಡೂ ಒಂದೇ ರೀತಿ ಸಮನಾದುದು. ಒಂದು ವೇಳೆ ನಿಮ್ಮ ಸಹದ್ಯೋಗಿ ಏನಾದ್ರೂ ತಪ್ಪು ಮಾಡಿದಾಗ, ಅವರನ್ನ ತಿದ್ದಿ, ಅವರಿಗೆ ಸರಿಯಾಗಿ ಗೈಡ್ ಮಾಡಿ ಹಾಗೂ ಮಾಡಿದ ತಪ್ಪನ್ನ ಸರಿಪಡಿಸುವುದು ನಿಮ್ಮ ಜವಬ್ದಾರಿಯಾಗಿರುತ್ತದೆ

ಧನಾತ್ಮಕ ವಾತಾವರಣ ನಿರ್ಮಿಸಿ:

ನಿಮ್ಮ ಟೀಂ ನ ಪ್ರತಿಯೊಬ್ಬರ ಜತೆ ನೀವು ಕಮ್ಯುನಿಕೇಟ್ ಮಾಡುವುದು ಉತ್ತಮ. ನಿಮ್ಮ ಸಹದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲಸ ಮಾಡಲು ಧನಾತ್ಮಕ ವಾತಾವರಣ ನಿರ್ಮಿಸಿ. ಎಲ್ಲಾ ಸಹದ್ಯೋಗಿಗಳ ಜತೆ ಸ್ನೇಹದಿಂದ ವರ್ತಿಸಿ.

For Quick Alerts
ALLOW NOTIFICATIONS  
For Daily Alerts

English summary
congratulations... Now that you have been promoted to be a manager, we completely understand that it is one step forward in climbing the success ladder and no doubt, now you are a person who will have more responsibilities
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X