ಎಕ್ಸಾಮ್ ಭಯವೇ ಹಾಗಾದರೆ ಈ ಹತ್ತು ಸೂತ್ರಗಳನ್ನು ಪಾಲಿಸಿ

By Kavya

ಮಾರ್ಚ್ ನಲ್ಲಿ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೊರೋನಾ ಸಮಸ್ಯೆಯಿಂದ ಮುಂದೂಡಲಾಗಿತ್ತು. ಆದರೆ ಜೂನ್ 25 ರಿಂದ ಜುಲೈ 4ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಭಯವನ್ನು ಹೊಂದಿದ್ದೀರಾ ? ಹಾಗಿದ್ರೆ ಒಮ್ಮೆ ಈ ಲೇಖನ ಓದಿ.

 

ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಹಿತೈಷಿಗಳಿಂದ ಒತ್ತಡ ಶುರುವಾಗಿಬಿಡುತ್ತದೆ. ಒತ್ತಡ ಹೆಚ್ಚಾದಂತೆ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುವುದರ ಜೊತೆಗೆ ಪರೀಕ್ಷೆ ಎಂದರೆ ಹೆದರುತ್ತಾರೆ. ಪ್ರತಿ ಸಮಸ್ಯೆಗೂ ಪರಿಹಾರವೊಂದು ಇದ್ದೆ ಇರುತ್ತದೆ ಅದೇ ರೀತಿ ಪರೀಕ್ಷೆಯ ದಿನಗಳಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಸಧೃಡರಾಗಲು ಕೆಲವೊಂದು ಸಿದ್ಧ ಸೂತ್ರಗಳು ಇಲ್ಲಿವೆ.

ನಿಮ್ಮ ಮನಸ್ಸನ್ನು ಪರೀಕ್ಷೆ ಕಡೆಗೆ ಕೇಂದ್ರೀಕರಿಸಿ

ಯಾವುದೇ ಪರೀಕ್ಷೆಗಳನ್ನು ತೆಗೆದುಕೊಂಡರು ಮಾನಸಿಕ ಸಿದ್ಧತೆ ಬಹಳ ಮುಖ್ಯ, ನೀವು ಒಮ್ಮೆ ಮಾನಸಿಕವಾಗಿ ಪರೀಕ್ಷೆಗಳನ್ನು ಎದುರಿಸಲು ಸಿದ್ಧವಾದರೆ ಎಂತಹ ಪರೀಕ್ಷೆಯನ್ನಾದರೂ ಸುಲಭವಾಗಿ ಜಯಿಸಬಲ್ಲಿರಿ.

1. ನಿಮ್ಮದೇ ಆದ ಒಂದು ದಿನಚರಿ ರೂಪಿಸಿಕೊಳ್ಳಿ:

1. ನಿಮ್ಮದೇ ಆದ ಒಂದು ದಿನಚರಿ ರೂಪಿಸಿಕೊಳ್ಳಿ:

ವಿದ್ಯಾರ್ಥಿಗಳು ಓದಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟು ಬೇರೆ ಕೆಲಸಗಳಿಗೆ ಕಡಿಮೆ ಸಮಯ ನೀಡಿ. ಅಲ್ಲದೆ ಯಾವ ಯಾವ ಸಮಯದಲ್ಲಿ ಏನು ಕೆಲಸ ಮಾಡಬೇಕು ಅನ್ನುವುದನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ಮಾನಸಿಕವಾಗಿ ಸಿದ್ಧರಾಗಿ. ಇನ್ನು ಓದಿನ ವಿಚಾರವಾಗಿ ನಿಮ್ಮದೇ ಆದ ವೇಳಾಪಟ್ಟಿಯನ್ನು ಸಿದ್ದಗೊಳಿಸಿ ಅದರಂತೆ ಪ್ರತಿ ನಿತ್ಯ ಓದಲು ಅಭ್ಯಾಸ ಮಾಡಿ. ಇದರಿಂದ ಪರೀಕ್ಷೆ ವೇಳೆಗೆ ನೀವು ಸಿಲ್ಲಬಸ್ ಪೂರ್ಣ ಮುಗಿಸಿ ಅದನ್ನು ರಿವೈಸ್ ಮಾಡಲು ಅನುಕೂಲವಾಗುತ್ತದೆ.

2. ಆರೋಗ್ಯ

2. ಆರೋಗ್ಯ

ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ಮೊದಲು ಆರೋಗ್ಯದ ಕಡೆ ಗಮನ ನೀಡಬೇಕು. ಪರೀಕ್ಷೆ ಸಮಯದಲ್ಲಿ ನಿಯಮಿತ ಆಹಾರ ಸೇವನೆ ಒಳ್ಳೆಯದು. ವಿದ್ಯಾರ್ಥಿಗಳು ಓದಿನ ನಡುವೆ ಊಟದ ಬಗ್ಗೆ ನಿರ್ಲಕ್ಷ್ಯತೇ ವಹಿಸುವುದು ಸಾಮಾನ್ಯ, ಹೆಚ್ಚು ಆಹಾರ ಸೇವಿಸಿದರೆ ನಿದ್ದೆ ಮಾಡಿ ಬಿಡುತ್ತೇವೆ ಅನ್ನೋ ಭಯದಿಂದ ಅನೇಕರು ಹೀಗೆ ಮಾಡುತ್ತಾರೆ. ಆದರೆ ಅದರಿಂದ ತೊಂದರೆಯೇ ಜಾಸ್ತಿ ಹಾಗಾಗಿ ಊಟದ ವಿಚಾರದಲ್ಲಿ ನಿಯಮಿತ ಆಹಾರ ಪದ್ಧತಿ ಅನುಸರಿಸಿ. ಅದರಲ್ಲೂ ಬೆಳಗಿನ ಉಪಹಾರ ಮಾತ್ರ ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಬೆಳಗಿನ ಸಮಯದಲ್ಲಿ ನೀವು ಹೆಚ್ಚು ಸೇವಿಸಿದಷ್ಟು ನಿಮ್ಮ ನೆನಪಿನ ಶಕ್ತಿ ಹೆಚ್ಚುತ್ತದೆ.

3. ರಾತ್ರಿ ವೇಳೆ ಹೆಚ್ಚು ನಿದ್ದೆಗೆಡಬೇಡಿ
 

3. ರಾತ್ರಿ ವೇಳೆ ಹೆಚ್ಚು ನಿದ್ದೆಗೆಡಬೇಡಿ

ಪರೀಕ್ಷೆ ವೇಳೆಯಲ್ಲಿ ಅನೇಕ ವಿದ್ಯಾರ್ಥಿಗಳು ರಾತ್ರಿಯ ವೇಳೆಯಲ್ಲೇ ಹೆಚ್ಚು ಓದುವ ಪ್ರಯತ್ನ ಮಾಡುತ್ತಾರೆ. ರಾತ್ರಿಯಲ್ಲಿ ನಿದ್ರೆ ತಡೆಯಲು ಕಾಫಿ ಕುಡಿಯುವುದನ್ನೇ ಚಟವನ್ನಾಗಿಸಿಕೊಳ್ಳುತ್ತಾರೆ. ಅತಿಯಾದ ಕಾಫಿ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲೂ ರಾತ್ರಿಯವೇಳೆಯಲ್ಲಿ ನೀವು ಹೆಚ್ಚು ಕಾಫಿ ಕುಡಿಯುವುದರಿಂದ ನಿಮ್ಮ ಮಿದುಳು ಸರಿಯಾಗಿ ಕಾರ್ಯ ನಿರ್ವಹಿಸದೆ ದೇಹಕ್ಕೆ ಆಯಾಸವಾಗುತ್ತದೆ. ಇದರಿಂದ ಮರುದಿನ ನೀವು ಚಟುವಟಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪರೀಕ್ಷಾ ಸಮಯದಲ್ಲಿ ಹೆಚ್ಚು ನಿದ್ದೆಗೆಡುವುದು ಸೂಕ್ತವಲ್ಲ.

4. ಸ್ನೇಹಿತರ ಜೊತೆ ಸೇರಿ ಓದಿ

4. ಸ್ನೇಹಿತರ ಜೊತೆ ಸೇರಿ ಓದಿ

ಗ್ರೂಪ್ ಸ್ಟಡಿ ಅಥವಾ ಕಂಬೈನ್ಡ್ ಸ್ಟಡಿ ನಿಮಗೆ ಹೆಚ್ಚು ಸಹಾಯಕಾರಿ.ನಿಮಗೆ ಸೂಕ್ತವಾದ ಗೆಳೆಯರನ್ನು ಆಯ್ಕೆ ಮಾಡಿ ಅವರೊಂದಿಗೆ ಚರ್ಚಿಸಿ ಓದುವುದರಿಂದ ನೀವು ಓದಿದ್ದನ್ನು ಹೆಚ್ಚು ಗ್ರಹಿಸುತ್ತೀರಿ. ಅಲ್ಲದೆ ಅನೇಕ ಗೊಂದಲಗಳಿಗೆ ಪರಿಹಾರವನ್ನು ಪಡೆಯುತ್ತೀರಿ. ಆದರೆ ಇಲ್ಲೂ ಒಂದು ತೊಂದರೆ ಇದೇ ಅದೇನೆಂದರೆ ನಿಮ್ಮ ಆಯ್ಕೆ ಇಬ್ಬರನ್ನು ಮೀರದಿರಲಿ ಮತ್ತು ನೀವು ಆಯ್ದುಕೊಳ್ಳುವ ವ್ಯಕ್ತಿ ನಿಮಗಿಂತ ಹೆಚ್ಚಿನ ಅಥವಾ ನಿಮ್ಮ ಸರಿಸಮಾನವಾಗಿ ಓದುವವರಾಗಿರಬೇಕು. ಸಾಧ್ಯವಾದಷ್ಟು ಒಬ್ಬರ ಜೊತೆ ಮಾತ್ರ ಓದುವ ಪ್ರಯತ್ನ ಮಾಡಿ.

5. ಸದಾ ಚಟುವಟಿಕೆಯಿಂದಿರಿ

5. ಸದಾ ಚಟುವಟಿಕೆಯಿಂದಿರಿ

ನೀವು ಎಷ್ಟು ಚುರುಕಾಗಿರುತ್ತಿರೋ ಅಷ್ಟೇ ಬುದ್ದಿವಂತರಾಗಿರುತ್ತೀರಿ. ಆದಷ್ಟು ಹುಮ್ಮಸಿನಿಂದ ಕೆಲಸ ಮಾಡುವುದನ್ನು ಕಲಿಯಿರಿ ಆಗ ನಿಮಗೆ ಕೆಲಸದ ಬಗ್ಗೆ ಆಸಕ್ತಿ ಮೂಡುತ್ತದೆ ಇದರಿಂದ ನೀವು ಎಷ್ಟು ಓದಿದರೂ ನಿಮಗೆ ದಣಿವಾಗುವುದಿಲ್ಲ. ಕೆಲವರು ಯಾವಾಗಲು ಏನನ್ನೋ ಕಳೆದುಕೊಂಡಿರುವಂತಿರುತ್ತಾರೆ ಆ ರೀತಿ ಇರುವುದರಿಂದ ಆಲಸ್ಯ ಬರುವುದೇ ಹೊರತು ಹುಮ್ಮಸ್ಸು ಬರುವುದಿಲ್ಲ. ಅಷ್ಟೇ ಅಲ್ಲ ನೀವು ಸಪ್ಪೆಯಾಗಿದ್ದರೆ ನಿಮ್ಮ ಜೊತೆ ಓದಲು ಬರುವ ಸ್ನೇಹಿತರಿಗೂ ಬೋರ್ ಆಗಬಹುದು. ಆಗ ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಓದಲು ನಿರಾಕರಿಸುವ ಸಾಧ್ಯತೆಯೇ ಹೆಚ್ಚು. ನೀವು ಎಷ್ಟು ಚಟುವಟಿಕೆಯಿಂದಿರುತ್ತೀರೋ ನಿಮ್ಮ ಜೊತೆ ಸೇರಲು ಇತರರು ಬಯಸುತ್ತಾರೆ ಇದು ನಿಮ್ಮ ಭವಿಷ್ಯಕ್ಕೂ ಒಳ್ಳೆಯದು.

6. ಸ್ವಲ್ಪ ವಿಶ್ರಾಂತಿಯು ಇರಲಿ

6. ಸ್ವಲ್ಪ ವಿಶ್ರಾಂತಿಯು ಇರಲಿ

ಸುದೀರ್ಘ ಓದಿನ ನಂತರ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ. ಇದರಿಂದ ನೀವು ರಿಫ್ರೆಶ್ ಆಗುವುದರ ಜೊತೆಗೆ ಬೇರೆ ಕೆಲಸಗಳ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮಿದುಳು ಕೂಡ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ.

7. ಓದಬೇಕು ಮತ್ತು ಓದುತ್ತಲೇ ಇರಬೇಕು

7. ಓದಬೇಕು ಮತ್ತು ಓದುತ್ತಲೇ ಇರಬೇಕು

ನೀವು ನಿಮ್ಮ ಓದನ್ನು ದಿನದಿಂದ ದಿನಕ್ಕೆ ವಿಸ್ತರಿಸುತ್ತಿರಬೇಕು. ನಿಮ್ಮ ಸಿಲ್ಲಬಸ್ ಸಂಪೂರ್ಣ ಮುಗಿಯುವವರೆಗೂ ನೀವು ಬೇರೆ ವಿಚಾರಗಳ ಕಡೆಗೆ ಹೊರಳಬಾರದು. ನಿಮ್ಮ ಓದಿನ ವಿಚಾರದಲ್ಲಿ ನಿಮ್ಮ ದೌರ್ಬಲ್ಯಗಳೇನು ಎಂಬುದನ್ನು ಅರಿತು ಅದನ್ನು ಸರಿಪಡಿಸಿಕೂಳ್ಳುವುದರ ಕಡೆಗೆ ನಿಮ್ಮ ಗಮನವಿರಲಿ. ನಿಮಗೆ ಯಾವುದು ಹೆಚ್ಚು ಅರ್ಥವಾಗುವುದಿಲ್ಲವೋ ಅದನ್ನು ಇತರರನ್ನು ಕೇಳಿ ತಿಳಿದುಕೊಳ್ಳಿ. ನಿಮ್ಮ ಪರೀಕ್ಷೆಯ ಕಡೆಯ ಕ್ಷಣದವರೆಗೂ ನಿಮ್ಮ ಧ್ಯಾನ ನಿಮ್ಮ ಓದಿನ ವಿಚಾರದ ಕಡೆಯೇ ಇರಲಿ.

8. ಸದಾ ಒಳ್ಳೆಯದನ್ನೇ ಯೋಚಿಸಿ

8. ಸದಾ ಒಳ್ಳೆಯದನ್ನೇ ಯೋಚಿಸಿ

ನೀವು ಯಾವಾಗಲೂ ಧನಾತ್ಮಕವಾಗಿಯೇ ಯೋಚಿಸಲು ಪ್ರಯತ್ನಿಸಬೇಕು. ನಿಮ್ಮನ್ನು ಭಯ ಪಡಿಸುವಂತ ಸಂದರ್ಭಗಳ ಬಗ್ಗೆ ನೀವು ಹೆಚ್ಚು ಯೋಚಿಸಬಾರದು ಇದರಿಂದ ನೀವು ಮಾನಸಿಕವಾಗಿ ಕುಗ್ಗುತ್ತಿರ. ಅದರ ಬದಲು ಯಾವ ಸಂದರ್ಭ ಬಂದರು ಅದನ್ನು ಎದುರಿಸಬಲ್ಲೆ ಎನ್ನುವುದನ್ನು ಕಲಿತರೆ ನೀವು ಏನನ್ನಾದರೂ ಜಯಿಸಬಹುದು. ಅದೇ ರೀತಿ ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳು ಬರುತ್ತದೆ ಎಂದು ಯೋಚಿಸುತ್ತ ಕುಳಿತರೆ ನಿಮ್ಮ ಸಮಯ ಹಾಳು. ಅದರ ಬದಲು ಯಾವ ಪ್ರಶ್ನೆ ಕೊಟ್ಟರು ಉತ್ತರಿಸಬಲ್ಲೆ ಎಂದು ಯೋಚಿಸಿದರೆ ನೀವು ಗೆದ್ದಂತೆ.

9. ಪೂರ್ವ ತಯಾರಿ

9. ಪೂರ್ವ ತಯಾರಿ

ನಿಮ್ಮ ಸಿಲ್ಲಬಸ್ ಪ್ರಕಾರ ಎಲ್ಲ ಓದಿದ ನಂತರ ಹಿಂದಿಯ ಪ್ರಶ್ನೆಪತ್ರಿಕೆಗಳ ಕಡೆಗೆ ಗಮನ ಹರಿಸಿ. ಸಾಧ್ಯವಾದಷ್ಟು ಹಳೇ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಲು ಪ್ರಯತ್ನಿಸಿ. ನೀವು ಯಾವುದನ್ನು ಕಡೆಗಣಿಸಿರುವಿರಿ ಎಂದು ಪಟ್ಟಿಮಾಡಿ ಅದರ ಕಡೆ ಹೆಚ್ಚು ಗಮನ ನೀಡಿ.

ಅಷ್ಟೇ ಅಲ್ಲದೆ ಯಾವ ಪ್ರಶ್ನೆಗಳನ್ನು ಹೆಚ್ಚು ಬಾರಿ ಕೇಳಿದ್ದಾರೆ, ಯಾವುದನ್ನು ಕೇಳಿಲ್ಲ ಎಂಬುದನ್ನು ತಿಳಿದು ಆ ಪ್ರಶ್ನೆಯ ಮಹತ್ವವೇನು ಎನ್ನುವುದನ್ನು ನಿಮ್ಮ ಸ್ನೇಹಿತರು ಮತ್ತು ಶಿಕ್ಷಕರೊಡನೆ ಚರ್ಚಿಸಿ.

10. ಪರೀಕ್ಷೆಯ ಹಿಂದಿನ ದಿನ ಮತ್ತು ಹೊರಡುವ ಮುನ್ನ

10. ಪರೀಕ್ಷೆಯ ಹಿಂದಿನ ದಿನ ಮತ್ತು ಹೊರಡುವ ಮುನ್ನ

ನಿಮ್ಮ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ ತಿಳಿದು ಹಿಂದಿನ ದಿನವೇ ಒಮ್ಮೆ ಭೇಟಿ ನೀಡಿ. ಇದರಿಂದ ನೀವು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಬಹುದಾ ಎನ್ನುವುದು ನಿಮಗೆ ತಿಳಿಯುತ್ತದೆ. ನಿಮ್ಮ ಕೊಠಡಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಿ ಎಕ್ಸಾಮ್ ವೇಳೆಯಲ್ಲಿ ಗೊಂದಲಕ್ಕೊಳಗಾಗುವುದು ತಪ್ಪುತ್ತದೆ. ಪರೀಕ್ಷೆಗೆ ಹೊರಡುವ ಮುನ್ನ ಪರೀಕ್ಷೆಗೆ ಅವಶ್ಯವಿರುವ ಸಾಮಗ್ರಿಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿ, ಪ್ರವೇಶ ಪತ್ರ, ಪೆನ್ನು, ಪೆನ್ಸಿಲ್.. ಇತ್ಯಾದಿಗಳ ಬಗ್ಗೆ ನಿಗಾ ಇರಲಿ.

ಪರೀಕ್ಷೆ ಆರಂಭಕ್ಕೂ ಮುನ್ನ ದೀರ್ಘ ಉಸಿರು ತೆಗೆದುಕೊಂಡು ನಿಮ್ಮ ಮನಸ್ಸನ್ನು ಪರೀಕ್ಷೆ ಕಡೆಗೆ ಕೇಂದ್ರೀಕರಿಸಿ.
ಈ ಹತ್ತು ನಿಯಮಗಳನ್ನು ನೀವು ಗಮನದಲಿಟ್ಟುಕೊಂಡರೆ ಯಶಸ್ಸು ಖಂಡಿತ ನಿಮ್ಮ ಪಾಲಿಗಿರುತ್ತದೆ. ಅಲ್ಲದೆ ಒತ್ತಡದ ನಡುವೆಯೂ ನೀವು ಆರಾಮಾಗಿ ಪರೀಕ್ಷೆ ಮುಗಿಸುವಲ್ಲೇ ಸಫಲರಾಗುತ್ತಿರ. ಆಲ್ ದ ಬೆಸ್ಟ್!

For Quick Alerts
ALLOW NOTIFICATIONS  
For Daily Alerts

English summary
tips to overcome exam fear. once you follow these tips definitely you will succeed.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X