ಇತಿಹಾಸ ಪರೀಕ್ಷೆಗೆ ಹೇಗೆ ತಯಾರಾಗುವುದು... ಇಲ್ಲಿದೆ ಸಿಂಪಲ್ ಟ್ರಿಕ್ಸ್

By Nishmitha B

ಭಾರತದಂತಹ ದೇಶದಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಮೊದಲ ಪ್ರಾಮುಖ್ಯತೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಈ ವೈಜ್ಞಾನಿಕ ಮನೋಧರ್ಮದಿಂದಾಗಿ ಮಕ್ಕಳು ಚಿಕ್ಕವರಿದ್ದಾಗಲೇ ವಿಜ್ಞಾನ ಹಾಗೂ ಅಂಕಗಣಿತ ವಿಷಯದ ಬಗ್ಗೆ ಒಲವು ತೋರಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ ಇತಿಹಾಸ ವಿಷಯವು ನಿರ್ಲಕ್ಷಕ್ಕೆ ಒಳಗಾಗುತ್ತದೆ. ಸಂಖ್ಯಾಶಾಸ್ತ್ರದ ಸಮಸ್ಯೆಯನ್ನ ಬಗೆಹರಿಸುವದರಲ್ಲಿ ಬ್ಯುಸಿ ಯಾಗಿರುವ ವಿದ್ಯಾರ್ಥಿಗಳು ಇತಿಹಾಸ ವಿಷಯಕ್ಕೆ ಗಮನ ಕೊಡಲು ಮರೆತು ಬಿಡುತ್ತಾರೆ

ಇತಿಹಾಸವೆಂದ್ರೆ ಅದು ಈ ಹಿಂದೆ ನಡೆದಂತಹ ಕತೆ. ಹಿಂದೆಲ್ಲಾ ಮಕ್ಕಳಿಗೆ ಕಥೆ ಕೇಳುವುದೆಂದ್ರೆ ಎಲ್ಲಿಲ್ಲದ ಆಸಕ್ತಿ. ಆದ್ರೆ ಇಂದಿನ ಮಕ್ಕಳು ಕಥೆ ಅಂದ್ರೆ ದೂರ ಓಡುತ್ತಾರೆ. ಅದಕ್ಕೆ ಇಂದಿನ ಲೈಫ್ ಸ್ಟೈಲ್ ಕಾರಣ ಎಂದು ಹೇಳಬಹುದು. ಹಾಗಾಗಿ ತಮ್ಮ ಚಿಕ್ಕವಯಸ್ಸಿನಿಂದಲೇ ಮಕ್ಕಳು ಇತಿಹಾಸ ಅಂದ್ರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಆದ್ರೆ ಎಕ್ಸಾಂ ನಲ್ಲಿ ಇತಿಹಾಸವೂ ಒಂದು ಪ್ರಮುಖ ಸಬ್‌ಜೆಕ್ಟ್ ಆಗಿರುತ್ತದೆ. ಬೋರ್ಡ್ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಮಾರ್ಕ್ ಸ್ಕೋರ್ ಮಾಡಬೇಕು ಅಂದ್ರೆ ಇಷ್ಟವಿಲ್ಲವಾದ್ರೂ ಇತಿಹಾಸ ಓದಲೇ ಬೇಕು. ಮಕ್ಕಳಿಗೆ ಇತಿಹಾಸ ಓದಿದ್ದು ಮನಸ್ಸಿನಲ್ಲಿ ಇರಬೇಕಾದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ

1 ದಿನಾಂಕ, ವ್ಯಕ್ತಿಗಳ ಹೆಸರುಗಳ ಬಗ್ಗೆ ಒಂದು ಪ್ಲಾಶ್ ಕಾರ್ಡ್ ರೆಡಿ ಮಾಡಿಕೊಳ್ಳಿ
 

1 ದಿನಾಂಕ, ವ್ಯಕ್ತಿಗಳ ಹೆಸರುಗಳ ಬಗ್ಗೆ ಒಂದು ಪ್ಲಾಶ್ ಕಾರ್ಡ್ ರೆಡಿ ಮಾಡಿಕೊಳ್ಳಿ

ಇತಿಹಾಸ ಪುಸ್ತಕದಲ್ಲಿರುವ ವ್ಯಕ್ತಿಗಳ ಹೆಸರು, ದಿನಾಂಕವನ್ನ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಅಷ್ಟೇ ಅಲ್ಲ ಮರೆತು ಹೋಯಿತು ಎಂದಾದ್ರೆ ಮತ್ತೆ ಮೊದಲಿನಿಂದ ಇಡೀ ಪುಸ್ತಕ ಓದಬೇಕು. ಹಾಗಾಗಿ ಇತಿಹಾಸ ಪುಸ್ತಕ ಓದುವಾಗ ಪ್ಲಾಶ್ ಕಾರ್ಡ್ ರೆಡಿಮಾಡಿಟ್ಟು ಕೊಳ್ಳಿ. ಇದರಲ್ಲಿ ವ್ಯಕ್ತಿಗಳ ಹೆಸರು, ಪ್ರಮುಖ ದಿನಾಂಕಗಳನ್ನ ನಮೂದಿಸಿ. ಬೇಕಾದ್ರೆ ಈ ಫ್ಲಾಶ್ ಕಾರ್ಡ್ ನ್ನು ಕಲರ್ ಫುಲ್ ಆಗಿ ಕೂಡಾ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಎಕ್ಸಾಂ ವೇಳೆ ಸುಲಭವಾಗಿ ಓದಿ ನೆನಪಿನಲ್ಲಿಟ್ಟುಕೊಳ್ಳಬಹುದು

2 ಗಟ್ಟಿಯಾಗಿ ಓದಿ

2 ಗಟ್ಟಿಯಾಗಿ ಓದಿ

ಇತಿಹಾಸ ವಿಷಯವು ಮನಸ್ಸಿನಲ್ಲಿ ಓದುದಕ್ಕಿಂತ ಗಟ್ಟಿಯಾಗಿ ಓದುವುದು ಉತ್ತಮ. ಯಾಕೆಂದ್ರೆ ನಾವು ಬಾಯಿಯಲ್ಲಿ ಗಟ್ಟಿಯಾಗಿ ಉಚ್ಛರಿಸಿದಾಗ ಆ ಪದಗಳು ನಮ್ಮ ಕಿವಿ ಮೇಲೆ ಬೀಳುವುದರಿಂದ ಬೇಗನೇ ನೆನಪಿನಲ್ಲಿ ಉಳಿಯುತ್ತದೆ. ಅಷ್ಟೇ ಅಲ್ಲ ಇತಿಹಾಸ ಓದುವಾಗ ಬೇಗನೆ ಬೋರ್ ಎನಿಸಿ ನಿದ್ರೆಗೆ ಜಾರಬಹುದು ವಿದ್ಯಾರ್ಥಿಗಳು. ಈ ಟೈಂನಲ್ಲಿ ಜೋರಾಗಿ ಉಚ್ಛರಿಸಿ ಓದುದರಿಂದ ನಿದ್ರೆ ನಿಮ್ಮನ್ನ ಆವರಿಸುವುದಿಲ್ಲ

3 ನಿಮ್ಮ ನೋಟ್ಸ್ ನೀವೇ ತಯಾರು ಮಾಡಿ

3 ನಿಮ್ಮ ನೋಟ್ಸ್ ನೀವೇ ತಯಾರು ಮಾಡಿ

ಟೀಚರ್ ಇಲ್ಲ ಟ್ಯೂಟಶನ್ ನಲ್ಲಿ ಕೊಟ್ಟಿರುವ ನೋಟ್ಸ್ ನೀವು ಓದುದಕ್ಕಿಂತ ಇಂತಹ ಸಬ್‌ಜೆಕ್ಟ್ ನಲ್ಲಿ ನಿಮ್ಮ ನೋಟ್ಸ್ ನೀವೇ ತಯಾರಿಸಿಕೊಳ್ಳುವುದು ಉತ್ತಮ. ನಿಮಗೆ ಪ್ರಾಮುಖ್ಯತೆ ಎಂದನಿಸುವ ಮಾಹಿತಿಯನ್ನ ಹೈಲೆಟ್ ಮಾಡಿಕೊಂಡು ನೋಟ್ಸ್ ಮಾಡಿಕೊಳ್ಳಿ. ಇದರಿಂದ ನೋಟ್ಸ್ ಮಾಡಿಕೊಳ್ಳುವಾಗಲೇ ಒಂದು ಬಾರಿ ನಿಮ್ಮ ರಿವಿಜನ್ ಆಗಿರುತ್ತದೆ

4 ಜ್ಞಾಪಕ ಶಾಸ್ತ್ರ ಬಳಸಿಕೊಳ್ಳಿ
 

4 ಜ್ಞಾಪಕ ಶಾಸ್ತ್ರ ಬಳಸಿಕೊಳ್ಳಿ

ಓದಿರುವ ಅಂಶವನ್ನ ನೆನಪಿನಲ್ಲಿಟ್ಟುಕೊಳ್ಳಲು ಜ್ಞಾಪಕ ಶಾಸ್ತ್ರ ಬೆಸ್ಟ್ ವಿಧಾನವಾಗಿದೆ. ಈ ವಸ್ತು ನಿಮಗೆ ಓದಿರುದನ್ನ ನೆನಪಿನಲ್ಲಿಟ್ಟುಕೊಳ್ಳಲು ಉಪಯೋಗಕ್ಕೆ ಬರಬಹುದು. ಇದರಿಂದ ನೀವು ಡಾಟಾಗಳನ್ನೆಲ್ಲಾ ನೆನಪಲ್ಲಿ ಉಳಿಯುವಂತೆ ಮಾಡಬಹುದು

5 ನಕ್ಷೆ ಬಳಕೆ ಮಾಡಿ

5 ನಕ್ಷೆ ಬಳಕೆ ಮಾಡಿ

ಇತಿಹಾಸದ ವಿಷಯಕ್ಕೆ ಸಂಬಂಧಪಟ್ಟಂತೆ ನಡೆದ ಘಟನೆ, ವಿದ್ಯಾಮಾನವನ್ನೆಲ್ಲಾ ಓದುವಾಗ ನಿಮಗೆ ಒಂದು ಬಾರಿ ಕಂಫ್ಯೂಸ್ ಆಗಬಹುದು. ಹಾಗಾಗಿ ನೀವು ಓದುವ ವಿಚಾರಕ್ಕೆ ಮ್ಯಾಪನ್ನ ರೆಫರ್ ಮಾಡಿ ಓದಿಕೊಳ್ಳಿ. ನೀವು ಓದುವ ಎಲ್ಲಾ ವಿಚಾರವನ್ನ ನಕ್ಷೆ ಜತೆ ಕನೆಕ್ಟ್ ಮಾಡಿ ಓದಿಕೊಳ್ಳಿ

6 ಹಳೆಯ ಪ್ರಶ್ನೆ ಪತ್ರಿಕೆ ಮೆಲುಕು

6 ಹಳೆಯ ಪ್ರಶ್ನೆ ಪತ್ರಿಕೆ ಮೆಲುಕು

ಕಳೆದ ವರ್ಷದ ಅಥವಾ ೨,೩ ವರ್ಷದ ಹಿಂದಿನ ಪ್ರಶ್ನಾಪತ್ರಿಕೆಯನ್ನ ಮೆಲುಕು ಹಾಕಿ, ಇದರಿಂದ ನಿಮಗೆ ಮುಂದಿನ ಪರೀಕ್ಷೆಗೆ ಯಾವೆಲ್ಲಾ ಪ್ರಶ್ನೆಗಳು ಬರಬಹುದು ಎಂಬ ಅಂದಾಜು ಸಿಗುವುದು. ಅಷ್ಟೇ ಅಲ್ಲ ಇದರಿಂದ ಪರೀಕ್ಷೆ ಹಾಲ್‌ನಲ್ಲಿ ನಿಮಗೆ ಗೊಂದಲವುಂಟಾಗುದರಿಂದ ತಪ್ಪಿಸಿಕೊಳ್ಳ ಬಹುದು.

7 ಅಭ್ಯಾಸ ಪರೀಕ್ಷೆ ಮಾಡಿಕೊಳ್ಳಿ

7 ಅಭ್ಯಾಸ ಪರೀಕ್ಷೆ ಮಾಡಿಕೊಳ್ಳಿ

ಇತಿಹಾಸ ಪರೀಕ್ಷೆ ವೇಳೆ ಹೆಚ್ಚಿನ ವಿದ್ಯಾರ್ಥಿಗಳ ಪ್ರಶ್ನಾಪತ್ರಿಕೆ ತುಂಬಾ ದೊಡ್ಡದಾಗಿತ್ತು ಎಂದು ಸಾಮಾನ್ಯವಾಗಿ ಆಪಾದನೆ ಮಾಡುತ್ತಾರೆ. ಆದ್ರೆ ನಿಜ ವಿಷ್ಯ ಏನೆಂದ್ರೆ ವಿದ್ಯಾರ್ಥಿಗಳಿಗೆ ಹೇಗೆ ಉತ್ತರಿಸಬೇಕು, ಎಷ್ಟು ಪ್ರಮಾಣದಲ್ಲಿ ಉತ್ತರಿಸಬೇಕು ಎಂಬುವುದು ತಿಳಿದುಕೊಂಡಿರುವುದಿಲ್ಲ. ಒಂದೇ ಪ್ರಶ್ನೆಯನ್ನ ಉದ್ದಕ್ಕೆ ಬರೆಯುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಮುಖ್ಯವಾಗಿ ಸಮಯವನ್ನ ಹೇಗೆ ಹೊಂದಾಣಿಕೆ ಮಾಡಿಕೊಂಡು ಪರೀಕ್ಷೆ ಬರೆಯಬೇಕು ಎಂಬುವುದು ತಿಳಿದುಕೊಂಡಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗೊ ಮುನ್ನ ಮನೆಯಲ್ಲೇ ಎರಡು ಮೂರು ಬಾರಿ ಇಂತಹ ಪರೀಕ್ಷೆಗೆ ಉತ್ತರ ಬರೆಯುವ ಅಭ್ಯಾಸ ಮಾಡಿಕೊಳ್ಳಿ

8 ಬರೆಯುತ್ತಾ ಹೋಗುವುದು

8 ಬರೆಯುತ್ತಾ ಹೋಗುವುದು

ಹೆಚ್ಚಿನ ವಿದ್ಯಾರ್ಥಿಗಳು ಇತಿಹಾಸ ವಿಷಯವೆಂದ್ರೆ ಬರೆಯುತ್ತಾ ಹೋಗುವುದು ಎಂದು ಅಂದುಕೊಂಡಿದ್ದಾರೆ. ಅದಕ್ಕಾಗಿ ವಿದ್ಯಾರ್ಥಿಗಳು ಇತಿಹಾಸ ಪರೀಕ್ಷೆಯಲ್ಲಿ ಉತ್ತರವನ್ನ ತಮಗೆ ತೋಚಿದ ರೀತಿಯಲ್ಲಿ ಬರೆಯುತ್ತಾ ಹೋಗುತ್ತಾರೆ. ಆದ್ರೆ ಇದು ತಪ್ಪು. ಶಿಕ್ಷಕರು ಇತಿಹಾಸ ಉತ್ತರ ಪತ್ರಿಕೆಯಲ್ಲಿ ಪ್ರಮುಖ ಅಂಶಗಳನ್ನ ಮಾತ್ರ ಚೆಕ್ ಮಾಡುತ್ತಾರೆ. ನೀವು ಪ್ರಮುಖ ಅಂಶವನ್ನ ಬಿಟ್ಟು ಮತ್ತೆಲ್ಲಾ ಬರೆಯುತ್ತಾ ಹೋದರೆ ಅಂಕ ಸ್ಕೋರ್ ಮಾಡುವಲ್ಲಿ ವಿಫಲರಾಗುತ್ತೀರಿ

9 ಹೆಚ್ಚು ಅಂಕದ ಪ್ರಶ್ನೆಗಳಿಗೆ ಹಳೆಯ ಪಶ್ನೆ ಪತ್ರಿಕೆ ರೆಫರ್ ಮಾಡಿ

9 ಹೆಚ್ಚು ಅಂಕದ ಪ್ರಶ್ನೆಗಳಿಗೆ ಹಳೆಯ ಪಶ್ನೆ ಪತ್ರಿಕೆ ರೆಫರ್ ಮಾಡಿ

ಇತಿಹಾಸ ಸಬ್‌ಜೆಕ್ಟ್ ಗೆ ಸಂಬಂಧಪಟ್ಟ ಪರೀಕ್ಷೆಯಲ್ಲಿ ಈ ಲಾಜಿಕ್ ನೀವು ನೋಡಬಹುದು. ಅತೀ ಹೆಚ್ಚಿನ ಅಂಕದ ಪ್ರಶ್ನೆಗಳು ಪ್ರತಿವರ್ಷದ ಪ್ರಶ್ನೆಪತ್ರಿಕೆಯಲ್ಲಿ ರಿಪೀಟ್ ಆಗಿರುತ್ತದೆ. ಹಾಗಾಗಿ ಹಳೆಯ ಪ್ರಶ್ನಾಪತ್ರಿಕೆ ಮೆಲುಕು ಹಾಕುವಾಗ ಹೆಚ್ಚು ಅಂಕದ ಪ್ರಶ್ನೆಯನ್ನ ಗಮನವಿಟ್ಟು ಅಭ್ಯಾಸ ಮಾಡಿ

10 ಗೆಸ್ ಮಾಡಿ

10 ಗೆಸ್ ಮಾಡಿ

ಈ ಪರೀಕ್ಷೆಗಳಲ್ಲಿ ನೆಗಟೀವ್ ಅಂಕವಿರುವುದಿಲ್ಲ. ಹಾಗಾಗಿ ನೀವು ಎಕ್ಸಾಂ ವೇಳೆ ಒಂದು ಅಂಕದ ಪ್ರಶ್ನೆ ಇಲ್ಲ ಬಿಟ್ಟಿರುವ ಪದ ತುಂಬಿಸಿ ಮುಂದಾದ ವಿಭಾಗಗಳಲ್ಲಿ ಗೆಸ್ಸಿಂಗ್ ಮಾಡಿ ಬರೆಯಬಹುದು. ನಿಮ್ಮ ಉತ್ತರ ತಪ್ಪಾದ್ರೆ ಅಂಕ ಕಳೆದುಕೊಳ್ಳಬಹುದು ಒಂದು ವೇಳೆ ನೀವು ಗೆಸ್ ಮಾಡಿದ್ದು ಸರಿಯಾಗಿದ್ರೆ ನಿಮಗೆ ಅಂಕ ಸಿಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
Thus to stop such students from developing a fear of history ahead of their board exams, here is a list of tips that they can follow to make sure that they retain what they learn while enjoying the process of reading this subject
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more