ಸುಂದರ ಸರಳ ರೆಸ್ಯೂಮ್ ಬರೆಯುವುದು ಹೇಗೆ?

ಶಿಕ್ಷಣ ಮುಗಿಸಿದ ತಕ್ಷಣ ಉದ್ಯೋಗ ಬೇಟೆ ಶುರುವಾಗುತ್ತದೆ. ನೀವು ಬಯಸಿದ ಉದ್ಯೋಗವನ್ನು ಪಡೆಯಬೇಕೆಂದರೆ ಅದಕ್ಕೆ ಕೊಂಚ ತಯಾರಿ ಕೂಡ ಅಗತ್ಯ.

ಉದ್ಯೋಗ ಪಡೆಯುವುದರಲ್ಲಿ ಮೊದಲ ಹಾಗು ಪ್ರಮುಖ ಪಾತ್ರ ವಹಿಸುವುದು, ನಿಮ್ಮ ವಿವರಗಳನ್ನೊಳಗೊಂಡ ರೆಸ್ಯೂಮ್. ಇಂದು ನೀವು ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕಬೇಕಾದ್ರೆ ಈ ರೆಸ್ಯೂಮ್ ನಿಮಗೆ ಅತ್ಯಗತ್ಯ.

ರೆಸ್ಯೂಮ್ ಬರೆಯುವುದು

 

ರೆಸ್ಯೂಮ್ ಎಂದರೆ

ರೆಸ್ಯೂಮ್ ಎಂದರೆ ಅಭ್ಯರ್ಥಿಯು ಉದ್ಯೋಗ ಗಿಟ್ಟಿಸಲು ತಮ್ಮ ವಿವರ ಮತ್ತು ಅರ್ಹತೆಗಳನ್ನು ಒಂದು ನಮೂನೆಯಲ್ಲಿ ಬರೆಯುವುದು. ನಿಮ್ಮ ಹೆಸರು, ಜನ್ಮ ದಿನಾಂಕ, ಸಂಪರ್ಕಿಸಬೇಕಾದ ವಿಳಾಸ, ಶೈಕ್ಷಣಿಕ ವಿವರ, ಹವ್ಯಾಸ, ಸಾಧನೆ ಇವಿಷ್ಟು ಸಾಮಾನ್ಯವಾಗಿ ರೆಸ್ಯೂಮ್ ಗಳಲ್ಲಿ ಕಂಡು ಬರುವಂತಹದ್ದು.

ಮೇಲೆ ತಿಳಿಸಿದ ವಿವರಗಳನ್ನು ಕ್ರಮಬದ್ಧವಾಗಿ ಅರ್ಥಪೂರ್ಣವಾಗಿ ಬರೆಯುವುದೇ ಸುಂದರ ರೆಸ್ಯೂಮ್ ನ ಹಿಂದಿರುವ ಗುಟ್ಟು. ಸರಳವಾಗಿರುವ ರೆಸ್ಯೂಮ್ ಗಳು ಹೆಚ್ಚು ಗಮನ ಸೆಳೆಯುತ್ತವೆ.

ನಿಮ್ಮ ರೆಸ್ಯೂಮ್ ಸಿದ್ಧಪಡಿಸುವುದಕ್ಕೂ ಮುನ್ನ ಕೆಲವು ರೆಸ್ಯೂಮ್ ಗಳನ್ನೂ ಅಭ್ಯಸಿಸುವುದು ಉತ್ತಮ. ಇಂಟರ್ನೆಟ್ ನಲ್ಲಿ ಈಗ ಹೆಚ್ಚು ಚಾಲ್ತಿಯಲ್ಲಿರುವ ರೆಸ್ಯೂಮ್ ಮಾದರಿಗಳ ಕಡೆ ಒಮ್ಮೆ ಗಮನ ಹರಿಸಿ.

ಸುದೀರ್ಘ ಮಾಹಿತಿ ಬೇಡ

ರೆಸ್ಯೂಂನಲ್ಲಿ ಎಲ್ಲವನ್ನೂ ಹೇಳಬೇಕೆಂದು ನಾವು ಬಯಸುವುದು ಸಹಜ. ಆದರೆ ಸಂದರ್ಶಕನು ನಮ್ಮ ರೆಸ್ಯೂಂನ್ನು ಓದಲು ಕೇವಲ 30 ಸೆಕೆಂಡ್‌ಗಳನ್ನು ಮಾತ್ರ ವ್ಯಯಿಸುತ್ತಾನೆ. ಆದ್ದರಿಂದ ಅತ್ಯಂತ ಮಹತ್ವದ ಮಾಹಿತಿಯನ್ನು (ರೆಸ್ಯೂಂನಲ್ಲಿ ) ಹೈಲೈಟ್‌ ಮಾಡುವುದೂ ಅಷ್ಟೇ ಮುಖ್ಯ.

ಹುದ್ದೆಗೆ ಪ್ರಸಕ್ತವೆನಿಸುವ ಮಾಹಿತಿಯನ್ನಷ್ಟೇ ರೆಸ್ಯೂಂ ಒಳಗೊಂಡಿರಬೇಕು. ಸಂದರ್ಶನ ವೇಳೆ ನಿಮ್ಮ ಕಠಿಣ ಪರಿಶ್ರಮದ ಬಗ್ಗೆ ವಿವರಿಸಬಹುದಾಗಿದೆ. ನಿಮ್ಮ ರೆಸ್ಯೂಂ 1ರಿಂದ 2 ಪುಟ ಇದ್ದರೆ ಸಾಕು. ಪ್ಯಾರಗ್ರಾಫ್‌ಗಳಲ್ಲಿ ವಿವರಿಸುವ ಬದಲು ಬುಲೆಟ್‌ಗಳನ್ನು ಬಳಸುವುದು ಉತ್ತಮ.

ನಿಮ್ಮಿಂದ ಏನೆಲ್ಲಾ ಮಾಡಲು ಸಾಧ್ಯ ಅನ್ನೋದು ಅವರಿಗೆ ನಿಮ್ಮ ರೆಸ್ಯೂಮ್ ನೋಡಿ ತಿಳಿಯುವಂತಿರಬೇಕು. ಆದುದರಿಂದ ಬೇಡವಾದ ಹವ್ಯಾಸಗಳು, ಸ್ಕಿಲ್‌, ಸಾಧನೆಗಳ ಬಗ್ಗೆ ಮಾಹಿತಿ ನೀಡಬೇಡಿ.

ನೀವು ಯಾವುದಕ್ಕೆ ಒತ್ತು ನೀಡಬಲ್ಲಿರಿ ಎಂದು ಸಂದರ್ಶಕ ತಿಳಿಯುವುದಕ್ಕಾಗಿ, ವಸ್ತುನಿಷ್ಠವಾದ (ಆಬ್ಜೆಕ್ಟಿವ್ಸ್‌ ) ಹೇಳಿಕೆ ಬರೆಯುವುದು ಮುಖ್ಯ.

 

ನೀವು ಅರ್ಜಿ ಹಾಕುತ್ತಿರುವ ಹುದ್ದೆಗೆ (ಜಾಬ್‌ ಪೊಸಿಷನ್‌) ಸಂಬಂಧಪಟ್ಟ ಅರ್ಥವತ್ತಾದ ಶಬ್ದ (ಕೀವರ್ಡ್‌)ಗಳನ್ನು ಬಳಸದೇ ಹೋದಲ್ಲಿ ಅದು ನಿಮಗೆ ಫಲ ತಾರದು. ಆದ್ದರಿಂದ ಸೂಕ್ತವಾದ ಮಹತ್ವದ ಪದಗಳನ್ನು ಬಳಸುವುದು ಅವಶ್ಯಕ. ಜಾಬ್‌ ಲಿಸ್ಟಿಂಗ್‌ನಲ್ಲಿರುವಂತಹ ಕೀವರ್ಡ್‌ಗಳು ನಿಮ್ಮ ರೆಸ್ಯೂಮ್‌ನಲ್ಲಿಯೂ ಇರಬೇಕು. ಅಂತಹ ಪದಗಳ ಕೊರತೆಯಿದ್ದಲ್ಲಿ, ರೆಸ್ಯೂಮ್‌ ಗಮನ ಸೆಳೆಯುವುದಿಲ್ಲ.

ವಿಶೇಷವಾಗಿ ಫ್ರೆಷರ್ಸ್‌ಗಳು ಅತ್ಯಂತ ಸಾಮಾನ್ಯವಾಗಿ ಮಾಡುವ ತಪ್ಪುಗಳೆಂದರೆ ಸ್ಪೆಲ್ಲಿಂಗ್‌ ಮಿಸ್ಟೇಕ್ಸ್‌ ಮತ್ತು ಗ್ರಾಮರ್‌ ದೋಷಗಳು. ನಿಮ್ಮ ರೆಸ್ಯೂಮ್‌ಅನ್ನು ಸಂಪೂರ್ಣವಾಗಿ ತಯಾರಿಸಿದ ಬಳಿಕ ಸ್ಪೆಲ್‌ ಚೆಕ್‌ ಮಾಡುವುದು (ಬಳಸಿದ ಶಬ್ದಗಳ ಸ್ಪೆಲ್ಲಿಂಗ್‌ ಸರಿಯಾಗಿದೆಯೇ ಎಂದು ಪರಿಶೀಲಿಸುವುದು) ಯಾವಾಗಲೂ ಒಳ್ಳೆಯದು.

ಅನೇಕರಿಗೆ ಅದರಲ್ಲೂ, ಹೊಸಬರಿಗೆ (ಫ್ರೆಷರ್ಸ್‌ಗೆ) ಅಬ್ಜೆಕ್ಟೀವ್ಸ್‌ ಬರೆಯುವುದು ಎಂದರೆ ಏನು ಎಂಬುದೇ ಅರ್ಥವಾಗಿರುವುದಿಲ್ಲ. ಆದ್ದರಿಂದ ಅವಕಾಶಗಳು ಕೈತಪ್ಪುವುದುಂಟು. ಆಬ್ಜೆಕ್ಟಿವ್‌ ಎನ್ನುವುದು ಸ್ಪಷ್ಟವಾಗಿರಬೇಕು. ಉದ್ಯೋಗಾವಕಾಶದ ಗುರಿಗೆ ಒತ್ತು ನೀಡುವಂತಿರಬೇಕು. ಚಿಕ್ಕದಾಗಿರಬೇಕು. ಅಪೇಕ್ಷಿತ ಉದ್ಯೋಗದ ಕೆಲಸದ ರೀತಿಯ ಮೇಲೆ ನಿಮಗಿರುವ ಆಸಕ್ತಿಗೆ ಪ್ರಾಶಸ್ತ್ಯ ನೀಡುವಂತಿರಬೇಕು.

ರೆಸ್ಯೂಮ್ ಕ್ರಮ

ನಿಮ್ಮ ಹೆಸರು ಸ್ವಲ್ಪ ದೊಡ್ಡ ಫಾಂಟ್‌ನಲ್ಲಿರಲಿ. ಉಳಿದೆಲ್ಲ ಅಕ್ಷರಗಳಿಗೆ ಒಂದೇ ಗಾತ್ರದ ಫಾಂಟ್‌ ಬಳಕೆ ಮಾಡಿ. ರೆಸ್ಯೂಂನಲ್ಲಿ ವಿಭಿನ್ನ ಗಾತ್ರದ ಅಕ್ಷರಗಳನ್ನು ಬಳಸುವ ಬದಲು ಬೋಲ್ಡ್‌, ಇಟಾಲಿಕ್‌, ಆಲ್‌ ಕ್ಯಾಫ್ಸ್‌ ಇತ್ಯಾದಿ ಫೀಚರ್‌ಗಳನ್ನು ಬಳಕೆ ಮಾಡಿ.

ದಿನಾಂಕ ಮತ್ತು ಸ್ಥಳ ಮಾಹಿತಿ ಬಲಬದಿಗೆ ಇರಲಿ . ಈ ರೀತಿ ಮಾಡುವುದರಿಂದ ಕಂಪನಿಯ ಹೆಸರು, ಜಾಬ್‌ ಟೈಟಲ್‌, ಸ್ಥಳ, ದಿನಾಂಕ ಇತ್ಯಾದಿ ಮಾಹಿತಿಗಳನ್ನು ಬಲ ಬದಿಯಲ್ಲಿ ಜೋಡಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮಾಹಿತಿಯಿಂದ ದಿನಾಂಕ, ಸ್ಥಳ ಇತ್ಯಾದಿಗಳನ್ನು ಪ್ರತ್ಯೇಕಿಸಿದಂತೆ ಆಗುತ್ತದೆ.

ಹೆಡ್‌ಲೈನ್‌, ಸಬ್‌ಹೆಡ್‌ಲೈನ್‌ ಅಥವಾ ಇನ್ಯಾವುದೋ ಅಕ್ಷರವನ್ನು ಸೆಂಟರ್‌ ಅಲೈನ್‌ಮೆಂಟ್‌ ಮಾಡಬೇಡಿ. ಹೆಡ್‌ಲೈನ್‌ ಅಥವಾ ಸಬ್‌ಹೆಡ್‌ಲೈನ್‌ ಎಡಬದಿಯಲ್ಲೇ ಇರಲಿ. ಯಾಕೆಂದರೆ, ಪ್ರತಿಸಾಲುಗಳನ್ನು ಓದಿದ ನಂತರ ನಮ್ಮ ಕಣ್ಣು ನೈಸರ್ಗಿಕವಾಗಿ ಪುಟದ ಎಡ ಬದಿಗೆ ಬರುತ್ತದೆ. ಹೀಗಾಗಿ ಹೆಡ್‌ಲೈನ್‌, ಸಬ್‌ಹೆಡ್‌ಲೈನ್‌ ಇತ್ಯಾದಿಗಳು ಎಡ ಮಾರ್ಜಿನ್‌ನಿಂದಲೇ ಆರಂಭವಾಗಲಿ.

ನಿಮ್ಮ ರೆಸ್ಯೂಂ ಅನ್ನು ಒಮ್ಮೆ ಸಿದ್ಧಪಡಿಸಿದ ಮೇಲೆ, ಮುಗಿಯಿತೆಂದು ಭಾವಿಸಬೇಡಿ. ಮುಂದೆ ಪ್ರತಿ ಸಲವೂ, ಯಾವುದೇ ಬೇರೆ ಹುದ್ದೆಗೆ, ಅರ್ಜಿ ಸಲ್ಲಿಸುವ ಮೊದಲು ಅದನ್ನು ಅಪ್‌ಡೇಟ್‌ ಮಾಡಿ. ಏಕೆಂದರೆ ಕೆಲವೊಂದು ಪ್ರಮುಖ ವಿವರಗಳನ್ನು ಸೇರಿಸಲು ಮರೆತಿರುವ ಸಾಧ್ಯತೆಯಿದೆ.

ನಿಮ್ಮ ಕೌಶಲದ ಕ್ಷೇತ್ರ, ಮಹತ್ವದ ಹೆಚ್ಚುವರಿ ಅಂಶ, ಸಂಪರ್ಕ (ದೂರವಾಣಿ) ಸಂಖ್ಯೆ, ವಿಳಾಸದಲ್ಲಿನ ವಿವರ, ಸದ್ಯದ ವಾಸಸ್ಥಳ ಇತ್ಯಾದಿಗಳನ್ನು ಅಪ್‌ಡೆಟ್‌ ಮಾಡುತ್ತಿರಿ. ಸಾಧ್ಯವಾದಷ್ಟು ಹೊಸ ಬಗೆಯ ರೆಸ್ಯೂಮ್ ಮಾದರಿಗಳನ್ನು ಅಭ್ಯಸಿಸಿ.

For Quick Alerts
ALLOW NOTIFICATIONS  
For Daily Alerts

English summary
a resume is one of the most important parts of a job application. Your resume is how you tell the story of your professional history to potential employers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more