ದೇಶದ ಟಾಪ್ 10 ಫ್ಯಾಷನ್ ಟೆಕ್ನಾಲಜಿ ಕಾಲೇಜುಗಳು

Posted By:

ಉದ್ಯೋಗ ಸೃಷ್ಟಿಸುವ ಕೋರ್ಸ್ ಗಳಲ್ಲಿ ಫ್ಯಾಷನ್ ಟೆಕ್ನಾಲಜಿ ಕೂಡ ಒಂದು. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕೋರ್ಸ್ ಹೇಳಿ ಮಾಡಿಸಿದ್ದು. ದಿನದಿನದಿಂದ ದಿನಕ್ಕೆ ಬದಲಾಗುತ್ತಿರುವ ಟ್ರೆಂಡ್ ಗಳಲ್ಲಿ ಫ್ಯಾಷನ್ ಮತ್ತು ಟೆಕ್ಸ್ಟೈಲ್ ಉದ್ಯಮವು ಒಂದಾಗಿದ್ದು, ಈ ಕೋರ್ಸ್ ಗೆ ಬೇಡಿಕೆ ಮತ್ತು ಅವಕಾಶ ಎರಡು ಕೂಡ ಹೆಚ್ಚಿದೆ.

ಫ್ಯಾಷನ್ ಟೆಕ್ನಾಲಾಜಿಯಲ್ಲಿ ವಿವಿಧ ಕೋರ್ಸ್ಗಳಿವೆ. ಬಿ.ಡಿಸೈನ್: ಅಕ್ಸೆಸರಿ ಡಿಸೈನ್, ಫ್ಯಾಶನ್ ಕಮ್ಯುನಿಕೇಶನ್, ಫ್ಯಾಶನ್ ಡಿಸೈನ್, ನಿಟ್ವೇರ್ ಡಿಸೈನ್, ಲೆದರ್ ಡಿಸೈನ್, ಟೆಕ್ಸ್ಟೈಲ್ ಡಿಸೈನ್ ಕೋರ್ಸ್ ಗಳಿದ್ದು, ಹನ್ನೆರಡನೇ ತರಗತಿ ಪೂರೈಸಿದವರು ಈ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಪದವಿ, ಸ್ನಾತಕೋತ್ತರ ಪದವಿಗಳಿದ್ದು, ಆನ್ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ.

ಭಾರತದಲ್ಲಿ ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್ ಐ ಎಫ್ ಟಿ) ಈ ಕೋರ್ಸನ್ನು ನೀಡುತ್ತಿರುವ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಜವಳಿ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್ ಐ ಎಫ್ ಟಿ ಭಾರತದಾದ್ಯಂತ 17 ಕಾಲೇಜುಗಳನ್ನು ಹೊಂದಿದೆ.

ಇಲ್ಲಿದೆ ಭಾರತದ ಅತ್ಯುತ್ತಮ ಫ್ಯಾಷನ್ ಕಾಲೇಜಿನ ಮಾಹಿತಿ. 2017 ರಲ್ಲಿ ಔಟ್ ಲುಕ್ ಇಂಡಿಯಾ ದೇಶಾದ್ಯಂತ ಸರ್ವೆ ನಡೆಸಿ ಫ್ಯಾಷನ್ ಕಾಲೇಜುಗಳ ಮಾಹಿತಿಯನ್ನು ಕಲೆಹಾಕಿ ಈ ರ್ಯಾಂಕಿಂಗ್ ನೀಡಿದೆ.

ಐದು ವಿಭಾಗಗಳಲ್ಲಿ ಒಟ್ಟು ಒಂದು ಸಾವಿರ ಅಂಕಗಳಿಗೆ ಸಮೀಕ್ಷೆ ನಡೆಸಲಾಗಿದೆ. ಕಾಲೇಜುಗಳ ಕ್ಯಾಂಪಸ್, ಪ್ರವೇಶಾತಿ, ಪ್ಲೇಸ್ಮೆಂಟ್ ಮತ್ತು ಪರ್ಸನಾಲಿಟಿ ಡೆವೆಲಪ್ಮೆಂಟ್ ಕುರಿತಾದ ವಿವರಗಳನ್ನು ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗಿದೆ...

ಎನ್ ಐ ಎಫ್ ಟಿ ದೆಹಲಿ

ಎನ್ ಐ ಎಫ್ ಟಿ ದೆಹಲಿ ಮೊದಲ ಸ್ಥಾನ- 892 ಅಂಕಗಳು

ಎನ್ ಐ ಎಫ್ ಟಿ ನವಿ ಮುಂಬೈ

ಎನ್ ಐ ಎಫ್ ಟಿ ನವಿ ಮುಂಬೈ ಎರಡನೇ ಸ್ಥಾನ -883 ಅಂಕಗಳು

ಎನ್ ಐ ಎಫ್ ಟಿ ಬೆಂಗಳೂರು

ಎನ್ ಐ ಎಫ್ ಟಿ ಬೆಂಗಳೂರು ಮೂರನೇ ಸ್ಥಾನ -818 ಅಂಕಗಳು

ಪರ್ಲ್ ಅಕಾಡೆಮಿ ದೆಹಲಿ

ಪರ್ಲ್ ಅಕಾಡೆಮಿ ದೆಹಲಿ ನಾಲ್ಕನೇ ಸ್ಥಾನ -814 ಅಂಕಗಳು

ಎನ್ ಐ ಎಫ್ ಟಿ ಚೆನ್ನೈ

ಎನ್ ಐ ಎಫ್ ಟಿ ಚೆನ್ನೈ ಐದನೇ ಸ್ಥಾನ -790 ಅಂಕಗಳು

ಎನ್ ಐ ಎಫ್ ಟಿ ಪಾಟ್ನಾ

ಎನ್ ಐ ಎಫ್ ಟಿ ಪಾಟ್ನಾ ಆರನೇ ಸ್ಥಾನ -774 ಅಂಕಗಳು

ಎನ್ ಐ ಎಫ್ ಟಿ ಕೊಲ್ಕತ್ತಾ

ಎನ್ ಐ ಎಫ್ ಟಿ ಕೊಲ್ಕತ್ತಾ ಏಳನೇ ಸ್ಥಾನ -768 ಅಂಕಗಳು

ಎನ್ ಐ ಎಫ್ ಟಿ ಹೈದರಾಬಾದ್

ಎನ್ ಐ ಎಫ್ ಟಿ ಹೈದರಾಬಾದ್ ಎಂಟನೇ ಸ್ಥಾನ-737 ಅಂಕಗಳು

ಎನ್ ಐ ಎಫ್ ಟಿ ಮೊಹಾಲಿ

ಎನ್ ಐ ಎಫ್ ಟಿ ಮೊಹಾಲಿ ಒಂಬತ್ತನೇ ಸ್ಥಾನ -734 ಅಂಕಗಳು

ಎನ್ ಐ ಎಫ್ ಟಿ ತಿರುಪುರ್

ಎನ್ ಐ ಎಫ್ ಟಿ ತಿರುಪುರ್ ಹತ್ತನೇ ಸ್ಥಾನ -725 ಅಂಕಗಳು

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
Here’s a list of Top 10 Fashion Technology Colleges in India based on the Outlook India 2017 Surveys.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia