ಲಾಯರ್ ಆಗಬೇಕೆಂದು ಅಂದುಕೊಂಡಿದ್ದೀರಾ... ದೇಶದ ಟಾಪ್ 10 ಕಾನೂನು ಕಾಲೇಜುಗಳು

ಕಾನೂನು ಪದವಿ ಪಡೆಯಬೇಕು ಎಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ದೇಶದ ಟಾಪ್ ಕಾನೂನು ಕಾಲೇಜುಗಳ ಲಿಸ್ಟ್

By Kavya

ಅನೇಕ ವಿದ್ಯಾರ್ಥಿಗಳಿಗೆ ಪದವಿಯನ್ನು ಯಾವ ವಿಷಯದಲ್ಲಿ ಮಾಡಬೇಕು ಎನ್ನುವ ಚಿಂತೆ ಒಂದೆಡೆಯಾದರೆ, ಇನ್ನೂ ಕೆಲವರಿಗೆ ಕಾನೂನು ಪದವಿ ಮಾಡಬೇಕು, ತಾನೂ ಕರೀ ಕೋಟು ಧರಿಸಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂಬ ಹಂಬಲ. ಮತ್ಯಾಕೆ ತಡ ನಮ್ ದೇಶದಲ್ಲಿ ಯಾವೆಲ್ಲಾ ಉತ್ತಮ ಕಾಲೇಜುಗಳಿಗೆ ಎಂದು ತಿಳಿಯೋಣ. ನಾವಿಲ್ಲಿ ದೇಶದ ಹತ್ತು ಪ್ರಮುಖ ಕಾಲೇಜುಗಳ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ.

ದೇಶದ ಟಾಪ್ 10 ಕಾನೂನು ಕಾಲೇಜುಗಳು !

Rank# 1 ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ:

ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನದಲ್ಲಿದೆ. ಈ ಕಾನೂನು ಕಾಲೇಜು ಬೆಂಗಳೂರಿನಲ್ಲಿದೆ. ಇದು ಭಾರತದ 19 ರಾಷ್ಟ್ರೀಯ ಕಾನೂನು ಕಾಲೇಜುಗಳಲ್ಲಿ ಒಂದಾಗಿದೆ. ಈ ಕಾಲೇಜಿನ ಸ್ಕೋರ್ 75.79.

Rank# 2 ನ್ಯಾಷನಲ್ ಲಾ ಯೂನಿವರ್ಸಿಟಿ:

ಕಾನೂನು ಮತ್ತು ನೈತಿಕ ಮೌಲ್ಯಗಳನ್ನ ಉತ್ತೇಜಿಸುವುದು ದೆಹಲಿ ವಿಶ್ವವಿದ್ಯಾನಿಲಯದ ಪ್ರಾಥಮಿಕ ಗುರಿಯಾಗಿದೆ. ನ್ಯಾಷನಲ್ ಲಾ ಯೂನಿವರ್ಸಿಟಿ ಸ್ಕೋರ್ 74.58

Rank# 3 ನಲ್ಸಾರ್ ಯೂನಿವರ್ಸಿಟಿ ಆಫ್ ಲಾ:

ಹೈದರಾಬಾದ್‌ನಲ್ಲಿ ಈ ಶಿಕ್ಷಣ ಸಂಸ್ಥೆಯಿದೆ. ಎ ಗ್ರೇಡ್ ಕಾಲೇಜು ಇದು. ಈ ಕಾಲೇಜಿನ ಸ್ಕೋರ್ 70.95

Rank# 4 ಇಂಡಿಯನ್ ಇನ್ಸಿಟ್ಯುಟ್ ಆಫ್ ಟೆಕ್ನಾಲಾಜಿ ಕರಾಂಗ್ ಪುರ್:

ಪಶ್ಚಿಮ ಬಂಗಾಳದ ಐಐಟಿ ಕರಾಂಗ್ ಪುರ್ ನಾಲ್ಕನೇ ಸ್ಥಾನದಲ್ಲಿದ್ದು, ಇದರ ಸ್ಕೋರ್ 67.07. ಈ ಶಿಕ್ಷಣ ಸಂಸ್ಥೆ ಕಾನೂನು ಪದವಿ ಶಿಕ್ಷಣವನ್ನ ನೀಡುತ್ತದೆ

Rank# 5 ನ್ಯಾಷನಲ್ ಲಾ ಯೂನಿವರ್ಸಿಟಿ ಜೋಧ್ ಪುರ್:

ಈ ಶಿಕ್ಷಣ ಸಂಸ್ಥೆ ದೇಶದಲ್ಲಿ ಇರುವ ಫೇಮಸ್ ಕಾನೂನು ಕಾಲೇಜುಗಳಲ್ಲಿ ಒಂದಾಗಿದೆ. ಇದು ರಾಜಸ್ತಾನದ ಜೋಧ್ ಪುರ್ ಎಂಬಲ್ಲಿ ಇದೆ. ಈ ಶಿಕ್ಷಣ ಸಂಸ್ಥೆ 5ನೇ ಸ್ಥಾನದಲ್ಲಿದ್ದು, ಇದರ ಸ್ಕೋರ್ 63.50

Rank# 6 ಜಮಿಯಾ ಮಿಲ್ಲಿಯಾ ಇಸ್ಲಾಮಿಯಾ:

ನವದೆಹಲಿಯಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದೆ. ಎಲ್.ಎಲ್.ಎಂ ವೀಕೆಂಡ್ ಪ್ರೋಗ್ರಾಂ ಗೆ ಈ ಕಾಲೇಜು ಫೇಮಸ್ ಆಗಿದೆ. 6 ನೇ ಸ್ಥಾನದಲ್ಲಿ ಇರುವ ಈ ಕಾಲೇಜು, 59.91 ಸ್ಕೋರ್ ಪಡೆದಿದೆ.

Rank# 7 ದಿ ವೆಸ್ಟ್ ಬೆಂಗಾಲ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಜುರಿಡಿಕಲ್ ಸೈನ್ಸ್:

ಕೊಲ್ಕತ್ತಾದಲ್ಲಿ ಈ ಶಿಕ್ಷಣ ಸಂಸ್ಥೆ ಇದೆ. 7 ನೇ ಸ್ಥಾನದಲ್ಲಿ ಇರುವ ಈ ಕಾಲೇಜಿನ ಸ್ಕೋರ್ 59.17.

Rank# 8 ರಾಮ್ ಮನೋಹರ್ ಲೋಹಿಯಾ ನ್ಯಾಷನಲ್ ಲಾ ಯೂನಿವರ್ಸಿಟಿ:

ಈ ಶಿಕ್ಷಣ ಸಂಸ್ಥೆ ಲಖ್ನೋದಲ್ಲಿ ಇದೆ. 2005ರಂದು ಈ ಶಿಕ್ಷಣ ಸಂಸ್ಥೆಯನ್ನ ಸ್ಥಾಪಿಸಲಾಗಿದ್ದು ಇದರ ಸ್ಕೋರ್ 54.82

Rank# 9 ಸಿಂಬೋಸಿಸ್ ಲಾ ಸ್ಕೂಲ್:

ಪುಣೆಯಲ್ಲಿ ಸಿಂಬೋಸಿಸ್ ಲಾ ಸ್ಕೂಲ್ ಇದೆ. ಸಿಂಬೋಸಿಸ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಒಂದು ಭಾಗವಾಗಿರುವ ಈ ಶಿಕ್ಷಣ ಸಂಸ್ಥೆಯ ಸ್ಕೋರ್ 54.25

Rank# 10 ಡಾ. ಬಿ.ಆರ್ ಅಂಬೇಡ್ಕರ್ ಕಾಲೇಜು ಆಫ್ ಲಾ:

ಆಂಧ್ರದ ವಿಶಾಖ ಪಟ್ಟಣ ಎಂಬಲ್ಲಿ ಈ ಕಾಲೇಜು ಇದೆ. 10ನೇ ಸ್ಥಾನದಲ್ಲಿ ಇರುವ ಈ ಕಾಲೇಜಿನ ಸ್ಕೋರ್ 50.93

More News  

For Quick Alerts
ALLOW NOTIFICATIONS  
For Daily Alerts

English summary
Here we are giving details of top 10 law colleges in india. read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+