2017 ಸಮೀಕ್ಷೆ: ಭಾರತದ ಟಾಪ್ 10 ಕಾನೂನು ಕಾಲೇಜುಗಳು

Posted By:

ಕಾನೂನು ಪದವಿ ಮುಗಿಸಿ ವಕೀಲಿ ವೃತ್ತಿಯನ್ನು ಸ್ವೀಕರಿಸಬೇಕೆಂಬ ಕನಸನ್ನು ಹೊತ್ತಿರುವವರಿಗೆ ಇಲ್ಲಿದೆ ಭಾರತದ ಅತ್ಯುತ್ತಮ ಕಾನೂನು ಕಾಲೇಜಿನ ಮಾಹಿತಿ.

2017 ರಲ್ಲಿ ಔಟ್ ಲುಕ್ ಇಂಡಿಯಾ ದೇಶಾದ್ಯಂತ ಸರ್ವೆ ನಡೆಸಿ ಕಾನೂನು ಕಾಲೇಜುಗಳ ಮಾಹಿತಿಯನ್ನು ಕಲೆಹಾಕಿ ಈ ರ್ಯಾಂಕಿಂಗ್ ನೀಡಿದೆ.

ಐದು ವಿಭಾಗಗಳಲ್ಲಿ ಒಟ್ಟು ಒಂದು ಸಾವಿರ ಅಂಕಗಳಿಗೆ ಸಮೀಕ್ಷೆ ನಡೆಸಲಾಗಿದೆ. ಕಾಲೇಜುಗಳ ಕ್ಯಾಂಪಸ್, ಪ್ರವೇಶಾತಿ, ಪ್ಲೇಸ್ಮೆಂಟ್ ಮತ್ತು ಪರ್ಸನಾಲಿಟಿ ಡೆವೆಲಪ್ಮೆಂಟ್ ಕುರಿತಾದ ವಿವರಗಳನ್ನು ಆಧಾರದ ಮೇಲೆ ರ್ಯಾಂಕಿಂಗ್ ನೀಡಲಾಗಿದೆ...

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು)

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ದೇಶದ ಟಾಪ್ ಒನ್ ಕಾನೂನು ಕಾಲೇಜು ಸ್ಥಾನ ಪಡೆದಿದೆ. ಔಟ್ ಲುಕ್ ಸಮೀಕ್ಷೆಯಲ್ಲಿ ಸಾವಿರ ಅಂಕಗಳಿಗೆ ಎನ್ಎಲ್ಎಸ್ಐಯು ಒಟ್ಟು 917 ಅಂಕಗಳನ್ನು ಗಳಿಸಿದೆ.

ದಿ ವೆಸ್ಟ್ ಬೆಂಗಾಲ್ ನ್ಯಾಷನಲ್ ಯೂನಿವರ್ಸಿಟಿ

ಕೊಲ್ಕತ್ತದ ದಿ ವೆಸ್ಟ್ ಬೆಂಗಾಲ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಜೂರಿಡಿಷಿಯಲ್ ಸೈನ್ಸಸ್ ಕಾಲೇಜು 869 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ.

ನ್ಯಾಷನಲ್ ಲಾ ಯೂನಿವರ್ಸಿಟಿ

ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿರುವ ಗುಜರಾತ್ ನ್ಯಾಷನಲ್ ಲಾ ಯೂನಿವರ್ಸಿಟಿ 832 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಐಎಲ್ಎಸ್ ಲಾ ಕಾಲೇಜ್

92 ವರ್ಷ ಇತಿಹಾಸ ಹೊಂದಿರುವ ಪುಣೆಯ ಐಎಲ್ಎಸ್ ಲಾ ಕಾಲೇಜು 827 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಭಾರತಿ ವಿದ್ಯಾಪೀಠ ಡೀಮ್ಡ್ ಯೂನಿವರ್ಸಿಟಿ

ಪುಣೆಯ ಮತ್ತೊಂದು ಪ್ರತಿಷ್ಟಿತ ಕಾಲೇಜಾದ ಭಾರತಿ ವಿದ್ಯಾಪೀಠ ಡೀಮ್ಡ್ ಯೂನಿವರ್ಸಿಟಿ ನ್ಯೂ ಲಾ ಕಾಲೇಜು 795 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಫ್ಯಾಕಲ್ಟಿ ಆಫ್ ಲಾ

ದೆಹಲಿಯ ಫ್ಯಾಕಲ್ಟಿ ಆಫ್ ಲಾ ಕಾಲೇಜು 729 ಅಂಕಗಳನ್ನು ಪಡೆದು ಆರನೇ ಸ್ಥಾನದಲ್ಲಿದೆ.

ಹಿದಾಯತುಲ್ಲಾ ನ್ಯಾಷನಲ್ ಲಾ ಯೂನಿವರ್ಸಿಟಿ

ರಾಯ್ಪುರದ ಹಿದಾಯತುಲ್ಲಾ ನ್ಯಾಷನಲ್ ಲಾ ಯೂನಿವರ್ಸಿಟಿ ಒಟ್ಟು 729 ಅಂಕಗಳನ್ನು ಪಡೆದು ಏಳನೇ ಸ್ಥಾನದಲ್ಲಿದೆ.

ಫ್ಯಾಕಲ್ಟಿ ಆಫ್ ಲಾ

ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಲಾ ಕಾಲೇಜು 726 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಸಿಂಬಿಯಾಸಿಸ್

ಪುಣೆಯ ಪ್ರತಿಷ್ಟಿತ ಸಿಂಬಿಯಾಸಿಸ್ ಕಾಲೇಜು 723 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ಪಿಜಿ ಕಾಲೇಜ್ ಆಫ್ ಲಾ

ಹೈದರಾಬಾದಿನ ಒಸ್ಮಾನಿಯಾ ಯೂನಿವರ್ಸಿಟಿ ಒಟ್ಟು 721 ಅಂಕದೊಂದಿಗೆ ಹತ್ತನೇ ಸ್ಥಾನದಲ್ಲಿದೆ.

English summary
Choosing law as a career is a personally thriving decision that explores your intellectual and logical side. The profession is financially rewarding besides making you eligible for high profile designations like judges, paralegals, secretaries, lawyers, law consultants etc in Corporate as well as Government Departments. However, just a degree in law cannot fulfill your dreams.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia