ದೇಶದ ಟಾಪ್ 10 ಮೆಡಿಕಲ್ ಕಾಲೇಜುಗಳು

Posted By:

ದೇಶದ ಪ್ರಸಿದ್ಧ ವೃತ್ತಿಪರ ಹುದ್ದೆ ಎಂದ್ರೆ ಡಾಕ್ಟರ್ ಹುದ್ದೆ. ಮೆಡಿಕಲ್ ಸೈನ್ಸ್ ತುಂಬಾ ಬೆಲೆಬಾಳುವ ಹಾಗೂ ಗೌರವಯುತವಾದ ಕೋರ್ಸ್ ಕೂಡಾ ಆಗಿದೆ. ಈ ಕೋರ್ಸ್ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಿಲ್ಲ. ನೀವು ಕೂಡಾ ಮೆಡಿಕಲ್ ಕಲಿಬೇಕಾದ್ರೆ ನಿಮ್ಮ ಅಂಕ ಚೆನ್ನಾಗಿರಬೇಕು. ನೀವು ಜ್ಞಾನವಂತರಾಗಿರಬೇಕು.

ಈಗಂತೂ ಬೋರ್ಡ್ ಎಕ್ಸಾಂ ಮುಗಿದ ತಕ್ಷಣ ಮೆಡಿಕಲ್ ಸೀಟ್‌ಗಾಗಿ ಓದಲು ಹೆಣಗಾಡಬೇಕಾಗುತ್ತದೆ. ಪ್ರತಿಷ್ಟಿತ ಕಾಲೇಜುಗಳಲ್ಲಿ ಮೆರಿಟ್ ಸೀಟು ಪಡೆಯಲು ವಿದ್ಯಾರ್ಥಿಗಳು ಬಹಳಷ್ಟು ಶ್ರಮವಹಿಸಬೇಕಾಗಿದೆ.ಅಷ್ಟೇ ಅಲ್ಲ ಈಗಂತೂ ಎಲ್ಲದರಲ್ಲೂ ಕಾಂಪಿಟೇಶನ್ ಇದೆ. ಇನ್ನೂ ಈ ಸೀಟಿನ ವಿಷಯ ಹೊರತು ಪಡಿಸಿಲ್ಲ.

ಬನ್ನಿ ಮೆಡಿಕಲ್ ಓದಬೇಕು ಎಂದು ಅಂದುಕೊಂಡಿದ್ದೀರಾ. ಹಾಗಿದ್ರೆ ಯಾವ ಕಾಲೇಜು ಬೆಸ್ಟ್ ಎಂಬ ಮಾಹಿತಿ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ. ದೇಶದ ಟಾಪ್ 10 ಮೆಡಿಕಲ್ ಕಾಲೇಜುಗಳ ಲಿಸ್ಟ್ ಇಲ್ಲಿದೆ.

1 ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ನವದೆಹಲಿ:

1956 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದೆ. ಈ ಸಂಸ್ಥೆ ಮಿನಿಸ್ಟರಿ ಆಫ್ ಹೆಲ್ತ್ ಆಂಡ್ ಫ್ಯಾಮಿಲಿ ವೆಲ್ಫೇರ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ದಿ ಮೆಡಿಕಲ್ ಟೋಕ್ಸಿಕೊಲಾಜಿ ಲ್ಯಾಬ್ ಮತ್ತು ದಿ ಡಿಎನ್‌ಎ ಪ್ರೊಫೈಲಿಂಗ್ ಲ್ಯಾಬ್ 1990ರಲ್ಲಿ ಸ್ಥಾಪನೆಯಾಗಿದೆ. ಇದು ಜಗತ್ತಿನ ಬೆಸ್ಟ್ ಕಾಲೇಜುಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆ ಕೂಡಾ ಪಡೆದಿದೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಬೇಕಾದ ಉತ್ತಮ ಫೆಸಿಲಿಟಿ ಕೂಡಾ ಇದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

2 ಕ್ರಿಸ್ಟಿಯಾನ್ ಮೆಡಿಕಲ್ ಕಾಲೇಜು. ವೆಲ್ಲೂರ್:

ತಮಿಳುನಾಡಿನ ವೆಲ್ಲೂರ್ ಎಂಬಲ್ಲಿ ಈ ಶಿಕ್ಷಣ ಸಂಸ್ಥೆಯಿದೆ. ಮೈನಾರಿಟಿ ಕ್ರಿಶ್ಚಿಯನ್ಸ್ ಸಂಸ್ಥೆಯು ಈ ಕಾಲೇಜನ್ನ ನಡೆಸುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕ್ವಾಲಿಟಿ ಟ್ರೈನಿಂಗ್ ಹಾಗೂ ರಿಸರ್ಚ್ ಫೆಸಿಲಿಟಿ ನೀಡಲಾಗುತ್ತದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

3 ಆರ್ಮ್ ಡ್ ಫೋರ್ಸಸ್ ಮೆಡಿಕಲ್ ಕಾಲೇಜು ಪುಣೆ

1948 ರಲ್ಲಿ ನಡೆದ ಎರಡನೇ ವಿಶ್ವ ಯುದ್ಧದ ಬಳಿಕ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ. ಡಾಕ್ಟರ್ಸ್ ಸೋಲ್ಜರ್ಸ್ ಅವರನ್ನು ದೇಶಕ್ಕೆ ನೀಡುವ ಉದ್ದೇಶ ಈ ಸಂಸ್ಥೆ ಹೊಂದಿದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

4 ಮೌಲಾನ ಅಜಾದ್ ಮೆಡಿಕಲ್ ಕಾಲೇಜು , ನವದೆಹಲಿ:

ಈ ಕಾಲೇಜಿಗೆ ನಾಲ್ಕು ವಿಭಾಗಗಳಿವೆ. ಲೋಕ್ ನಾಯಕ್ ಆಸ್ಪತ್ರೆ, ಜಿ ಬಿ ಪೇಂಟ್ ಇನ್ಸಿಟ್ಯುಟ್ ಆಫ್ ಪೋಸ್ಟ್ ಗ್ರಾಜ್ಯುಯೆಟ್ ಮೆಡಿಕಲ್ ಎಜ್ಯುಕೇಶನ್ ಆಂಡ್ ರಿಸರ್ಚ್, ಮೌಲಾನ ಆಜಾದ್ ಇನ್ಸಿಟ್ಯುಟ್ ಆಫ್ ಡೆಂಟಲ್ ಸೈನ್ಸ್ ಮತ್ತು ಗುರು ನಾನಕ್ ಐ ಸೆಂಟರ್. ಪ್ರತಿಯೊಂದು ವಿಭಾಗವು ತನ್ನದೇ ಆದ ಹಾದಿಯಲ್ಲಿ ಖ್ಯಾತಿ
ಪಡೆದಿದೆ.

ಪ್ರತಿದಿನ ಇಲ್ಲಿ 7000 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಈ ಹಾಸ್ಪಿಟಲ್ ಕಲಿಯಲು ಇರುವ ಉತ್ತಮ ಸ್ಥಳವಾಗಿದೆ. 290 ಪದವಿ ವಿದ್ಯಾರ್ಥಿಗಳು ಮತ್ತು 245 ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಇಲ್ಲಿ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಾ ಕಲಿಯಬಹುದಾಗಿದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

ಗ್ರೇಂಟ್ ಮೆಡಿಕಲ್ ಕಾಲೇಜ್ ಆಂಡ್ ಸರ್.ಜೆ ಜೆ ಗ್ರೂಪ್ ಆಫ್ ಹಾಸ್ಪಿಟಲ್, ಮುಂಬಯಿ:

1845ರಲ್ಲಿ ಈ ಕಾಲೇಜು ಸ್ಥಾಪಿತವಾಗಿದೆ. ವೈಯಕ್ತಿಕವಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಕ್ವಾಲಿಟಿ ಶಿಕ್ಷಣ ನೀಡಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ಸಂಸ್ಥೆ ಉತ್ತಮ ಕೆಲಸಗಳನ್ನ ಮಾಡುತ್ತಾ ಬಂದು ಇದೀಗ ಫೇಮಸ್ ಕಾಲೇಜುಗಳಲ್ಲಿ ಒಂದಾಗಿದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

6 ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು, ನವದೆಹಲಿ:

ದಶಕಗಳ ಹಿಂದೆ ಈ ಖಾಲೇಜು ಸ್ಥಾಪಿತವಾಗಿದೆ. 1916ರಲ್ಲಿ ಈ ಕಾಲೇಜು ನಿರ್ಮಾಣಗೊಂಡಿದೆ. ಅಂದಿನಿಂದ ಇಂದಿನವರೆಗೂ ಈ ಕಾಲೇಜು ಉತ್ತಮ ಡಾಕ್ಟರ್ ಗಳನ್ನ ಸಮಾಜಕ್ಕೆ ನೀಡುತ್ತಿದೆ.

80 ಬೆಡ್‌ ನಿಂದ ಈ ಕಾಲೇಜು ಸ್ಥಾಪಿತವಾಗಿದೆ. ಇದೀಗ 1200 ಕ್ಕು ಅಧಿಕ ಬೆಡ್ ಗಳು ಇಲ್ಲಿವೆ. ದೇಶದ ಟಾಪ್ ಆಸ್ಪತ್ರೆಗಳಲ್ಲಿ ಇದು ಕೂಡಾ ಒಂದಾಗಿದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

7 ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ, ಲಖ್ನೋ:

ದಶಕಗಳ ಹಿಂದಿನಿಂದ ಇಂದಿನ ವರೆಗೂ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಇದು ಕೂಡಾ ಒಂದು. ಮೆಡಿಕಲ್ ಟೆಕ್ನಾಲಾಜಿಗೆ ಸಂಬಂಧಪಟ್ಟಂತೆ ಈ ಕಾಲೇಜು ಯಾವಾಗಲೂ ಅಪ್‌ಡೇಟ್ ಆಗಿರುತ್ತದೆ. ಇಲ್ಲಿನ ಕಾರ್ಡಿಯಾಲಜಿ ಡಿಪಾರ್ಟ್ ಮೆಂಟ್ ಗ್ಲೋಬಲ್ ಲೆವಲ್ ನಲ್ಲಿದೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

8 ಕಸ್ತೂರ್ ಬಾ ಮೆಡಿಕಲ್ ಕಾಲೇಜು, ಮಣಿಪಾಲ್:

ಮೆಡಿಕಲ್ ಶಿಕ್ಷಣ ಪಡೆಯಲು ಈ ಕಾಲೇಜು ಬೆಸ್ಟ್ ಕಾಲೇಜಾಗಿದೆ. ಈ ಕಾಲೇಜು ದೇಶದಲ್ಲೇ ಬೆಸ್ಟ್ ಕಾಲೇಜು ಆಗಿದ್ದು, ಬೇರೆ ಬೇರೆ ಕಡೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಶಿಕ್ಷಣಾಭ್ಯಸ ಪಡೆಯುತ್ತಾರೆ

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

9 ಯೂನಿವರ್ಸಿಟಿ ಕಾಲೇಜು ಆಫ್ ಮೆಡಿಕಲ್ ಸೈನ್ಸ್, ಯೂನಿವರ್ಸಿಟಿ ಆಫ್ ದೆಹಲಿ, ನವದೆಹಲಿ:

ಈ ಕಾಲೇಜು ಸೆಲೆಕ್ಟೀವ್ ವಿದ್ಯಾರ್ಥಿಗಳನ್ನ ಮಾತ್ರ ಆಯ್ಕೆ ಮಾಡುತ್ತದೆ. ಆ ಕಾರಣಕ್ಕಾಗಿ ಈ ಕಾಲೇಜು ಇದೀಗ ಟಾಪ್ ಮೆಡಿಕಲ್ ಕಾಲೇಜುಗಳಲ್ಲಿ ಒಂದಾಗಿದೆ. ಈ ಕಾಲೇಜು ಸ್ಪೇಶಲ್ ಸಬ್‌ಜೆಕ್ಟ್ ಗಳ ಕೋರ್ಸ್ ಕೂಡಾ ನೀಡುತ್ತದೆ

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

10 ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ಇನ್ಸಿಟ್ಯುಟ್, ಬೆಂಗಳೂರು

ಈ ಸಂಸ್ಥೆಯಲ್ಲಿ 2500ಕ್ಕೂ ಅಧಿಕ ಬೆಡ್ ಗಳಿವೆ . ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಯುವಾಗ ಉತ್ತಮ ಅನುಭವವಾಗುತ್ತದೆ. ಅಷ್ಟೇ ಅಲ್ಲದೇ ಬೃಹತ್ ಲೈಬ್ರರಿ ಫೆಸಿಲಿಟಿ ಕೂಡಾ ಇಲ್ಲಿದೆ. ಪ್ರತಿ ತಿಂಗಳು ಇಲ್ಲಿ 120 ಜರ್ನಲ್ಸ್ ತರಿಸುತ್ತಾರೆ.

ಕಾಲೇಜು ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

English summary
One of the most prestigious professions of the country, medical science is something that has been an exclusive privilege for the creamy layer of the society. This is one profession that does not accept academically poor students even if better students are not available

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia