ಕೈಯಲ್ಲಿ ಮ್ಯಾನೇಜ್‌ಮೆಂಟ್ ಡಿಗ್ರಿ ಸರ್ಟಿಫಿಕೇಟ್ ಇದೆಯಾ... ಈ ಕೆಲಸಕ್ಕೆಲ್ಲಾ ನೀವು ಟ್ರೈ ಮಾಡಬಹುದು!

Posted By:

ಬ್ಯುಸಿನೆಸ್, ಎಕನಾಮಿಕ್ಸ್, ಅಕೌಂಟಿಂಗ್, ಮಾರ್ಕೆಟಿಂಗ್ ಹಾಗೂ ಹಣಕಾಸು ಬಗ್ಗೆ ಇನ್ನೂ ಹೆಚ್ಚಿನ ಜ್ಞಾನ ನೀಡುವ ಕೋರ್ಸ್ ಎಂದ್ರೆ ಮ್ಯಾನೇಜ್‌ಮೆಂಟ್ ಡಿಗ್ರಿ. ಈ ವಿಶೇಷ ಸಬ್‌ಜೆಕ್ಟ್ ಇತ್ತೀಚೆಗಷ್ಟೇ ಸೇರ್ಪಡೆಯಾಗಿರುವುದು.

ಸರ್ಕಾರಿ ಹಾಗೂ ಖಾಸಾಗಿ ಕ್ಷೇತ್ರದಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪಡೆದವರಿಗೆ ತುಂಬಾ ಉದ್ಯೋಗವಕಾಶವಿದೆ. ಮ್ಯಾನೇಜ್‌ಮೆಂಟ್ ಪದವಿಯವರಿಗೆ ಯಾವೆಲ್ಲಾ ಹುದ್ದೆ ಅಲಂಕರಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಸೋಶಲ್ ಮೀಡಿಯಾ ಮ್ಯಾನೇಜರ್:

ಇದು ಇತ್ತೀಚೆಗೆ ಪರಿಚಿತವಾದ ಉದ್ಯೋಗವಾಗಿದೆ. ಇಲ್ಲಿ ನೀವು ಕಂಪನಿಯ ಉದ್ಯಮವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಮೋಟ್ ಮಾಡಬೇಕಾಗಿದೆ. ಸೋಶಲ್ ಮೀಡಿಯಾದ ಎಲ್ಲಾ ಸ್ಟಾಟಜಿ ಬಗ್ಗೆ ನೀವು ತಿಳಿದುಕೊಂಡಿರಬೇಕು. ಅಷ್ಟೇ ಅಲ್ಲ ಕಂಪನಿಯ ಮಾರ್ಕೆಟಿಂಗ್ ಹಾಗೂ ಕಮ್ಯುನಿಕೇಶನ್ ಕಡೆಯೂ ನೀವು ಗಮನ ಕೊಡಬೇಕು.

ಪ್ರೊಡಕ್ಷನ್ ಮ್ಯಾನೇಜರ್:

ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಆಸಕ್ತಿ ನಿಮಗೆ ಇದೆಯಾ ಹಾಗಿದ್ರೆ ನೀವು ಪ್ರೊಡಕ್ಷನ್ ಮ್ಯಾನೇಜರ್ ಹುದ್ದೆ ನಿಮಗೆ ಪರ್ಫೆಕ್ಟ್. ಇಲ್ಲಿ ನಿಮ್ಮ ಟ್ಯಾಲೆಂಟ್ ನೀವು ತೋರಿಸಬಹುದು. ಈ ಹುದ್ದೆಯಲ್ಲಿ ನೀವಿದ್ರೆ ಕಾರ್ಡಿನೇಶನ್ ನ ಜವಾಬ್ದಾರಿ ನಿಮ್ಮ ಮೇಲಿರುತ್ತೆ. ಫುಡ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಪ್ರೊಸೆಸಿಂಗ್ ಕಂಪನಿಗಳಲ್ಲಿ ತುಂಬಾ ಅವಕಾಶವಿರುತ್ತದೆ.

ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್:

ನಿಮಗೆ ಮ್ಯಾನೇಜ್‌ಮೆಂಟ್ ಸ್ಕಿಲ್ ಇದ್ರೆ, ಕಂಪನಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ನೀವು ಕ್ಷಣ ಮಾತ್ರದಲ್ಲಿ ಬಗೆಹರಿಸುವವರಾದರೆ ಈ ಪೋಸ್ಟ್ ನಿಮಗೆ ಬೆಸ್ಟ್. ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ತಮ್ಮನ್ನು ತಾವೇ ಪ್ರೇರೇಪಿಸಿಕೊಂಡು ಕೆಲಸ ಮಾಡಬೇಕಾಗಿದೆ

ಪ್ರೊಜೆಕ್ಟ್ ಮ್ಯಾನೇಜರ್:

ಈ ಹುದ್ದೆಗೆ ಯಾವುದೇ ಕೆಲಸದ ಮಿತಿ ಇಲ್ಲ. ಯಾವುದೇ ಸೆಕ್ಟರ್ ಆದ್ರೂ ಕೆಲಸ ಮಾಡಲು ಸಿದ್ಧರಿರಬೇಕು. ಇವರನ್ನು ಪ್ರೊಜೆಕ್ಟ್ ಆಫೀಸರ್ ಹಾಗೂ ಪ್ರೊಜೆಕ್ಟ್ ಕಾರ್ಡಿನೇಟರ್ ಎಂದು ಕೂಡಾ ಕರೆಯುತ್ತಾರೆ. ರಿಸೋರ್ಸ್ ಮ್ಯಾನೇಜ್‌ಮೆಂಟ್, ಮಾನಿಟಿರಿಂಗ್ ಹಾಗೂ ಇಂಪ್ಲೇಮೆಂಟಿಂಗ್ ಸೇರಿದಂತೆ ಹಲವಾರು ಜವಾಬ್ದಾರಿ ಇವರ ಮೇಲಿರುತ್ತದೆ

ರಿಸ್ಕ್ ಮ್ಯಾನೇಜರ್:

ಯಾರು ಸಮಸ್ಯೆಯನ್ನ ನಿಖರವಾಗಿ ಗುರುತಿಸಿ, ಮೌಲ್ಯಮಾಪನ ಮಾಡುತ್ತಾರೋ ಅವರು ಸಕ್ಸಸ್ ಫುಲ್ ರಿಸ್ಕ್ ಮ್ಯಾನೇಜರ್ ಎನಿಸಿಕೊಳ್ಳುತ್ತಾರೆ. ಕಂಪನಿಯ ಭದ್ರತೆ, ಗೌರವ, ಲಾಭ, ಸೇಫ್ಟಿ ಇದೆಲ್ಲಾವನ್ನ ನೋಡಿಕೊಳ್ಳುವ ಜವಾಬ್ದಾರಿ ಇವರದು. ಕಂಪನಿಯ ಎಲ್ಲಾ ಕಾನೂನು ಅವಶ್ಯಕತೆಗಳು ಮತ್ತು ಗುರಿಗಳನ್ನು ಅವರು ತಿಳಿದಿರಬೇಕಾಗುತ್ತದೆ. ಅಷ್ಟೇ ಅಲ್ಲ ಇವರು ತಮ್ಮ ಕ್ಲೈಂಟ್ ಗೆ ಕಂಪನಿಯ ರಿಸ್ಕ್ ವರದಿಯನ್ನ ಕೂಡಾ ಕೊಡಬೇಕಾಗುತ್ತದೆ

English summary
Almost all the companies put their best foot forward to find ways for revenue generation and movement of capital. They push every individual at their workplace to try their best to minimise the effect of terrible events such as financial crash, like the one that took place in 2008

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia