ವಿದೇಶದಲ್ಲಿ ಇಂಟರ್ನ್ ಶಿಪ್‌... ಪ್ರಯೋಜನಗಳು ಹಲವಾರು!

By Nishmitha B

ಇದೀಗ ಕಂಪನಿಗಳು ಉದ್ಯೋಗಿಗಳನ್ನ ಆಯ್ಕೆ ಮಾಡುವಾಗ ಬರೀ ಅಂಕಗಳನ್ನ ಮಾತ್ರ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕ್ಲಾಸ್‌ನಲ್ಲಿ ಎಷ್ಟು ಅಂಕಗಳಿಸಿದ್ದಾರೆ ಇಲ್ಲ ಎಷ್ಟು ಪುಸ್ತಕದ ಜ್ಞಾನವಿದೆ ಎಂಬುವುದು ಕೇಳುವುದಿಲ್ಲ ಬದಲಿಗೆ ನಿಜ ಜೀವನದಲ್ಲಿ ಅವರು ಕೆಲಸದ ವಿಷಯದಲ್ಲಿ ಪಡೆದಂದಹ ಅನುಭವವನ್ನು ಮಾತ್ರ ಕೇಳುತ್ತಾರೆ. ಹಾಗಾಗಿ ಅಭ್ಯರ್ಥಿಗಳ ಪ್ರಾಜೆಕ್ಟ್‌ ಇಲ್ಲ ಇಂಟರ್ನ್ ಶಿಪ್ ಬಗ್ಗೆ ಮಾತ್ರ ಅವರು ಕೇಳುತ್ತಾರೆ

ಇಂಟರ್ನ್ ಶಿಪ್ ಮಾಡುವುದರಿಂದ ವಿದ್ಯಾರ್ಥಿಗಳು ಬೆಲೆಬಾಳುವ ಉದ್ಯೋಗದ ಅನುಭವ ಪಡೆದಂತಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಭಾರತದಲ್ಲಿ ಇಂಟರ್ನ್ ಶಿಪ್ ಮಾಡುವುದಕ್ಕಿಂತ ಹೊರದೇಶದಲ್ಲಿ ಇದೀಗ ಇಂಟರ್ನ್ ಶಿಪ್ ಮಾಡುತ್ತಾರೆ. ಅಷ್ಟೇ ಅಲ್ಲ ಹೊರದೇಶದಲ್ಲಿ ಇಂಟರ್ನ್ ಶಿಪ್ ಮಾಡುವುದು ಸ್ವಲ್ಪ ಹೆಚ್ಚು ವೆಚ್ಚಮಯವಾಗಿದೆ. ಯಾಕೆಂದ್ರೆ ವಸತಿ, ಟ್ರೌವೆಲ್ ಚಾರ್ಜ್ ಎಲ್ಲಾ ವಿದ್ಯಾರ್ಥಿಗಳೇ ನೋಡಿಕೊಳ್ಳಬೇಕಾಗುತ್ತದೆ

 

ಇನ್ನು ಈ ಖರ್ಚು ವೆಚ್ಚವೆನ್ನೆಲ್ಲಾ ಪಕ್ಕಕ್ಕಿಟ್ಟು, ನೋಡುವುದಾದ್ರೆ ಹೊರದೇಶದಲ್ಲಿ ಇಂಟರ್ನ್ ಶಿಪ್ ಮಾಡುವುದು ಬೆಸ್ಟ್. ಯಾಕೆ ಬೆಸ್ಟ್ ಎಂದು 6 ಕಾರಣಗಳನ್ನು ಹೇಳುತ್ತೇವೆ ನೋಡಿ

ನಿಮ್ಮ ಎಜ್ಯುಕೇಶನ್ ಸರ್ಟಿಫಿಕೇಟ್ ಜತೆ ಸ್ಟಾರ್ ಸೇರುತ್ತೆ:

ನೀವು ಹೊರದೇಶದಲ್ಲಿ ಇಂಟರ್ನ್ ಶಿಪ್ ಮಾಡಿದ್ರೆ ನಿಮ್ಮ ರೆಸ್ಯೂಮ್ ಜತೆ ಸ್ಟಾರ್ ಸೇರಿಸಿ. ಇದರಿಂದ ನೀವು ಭಾರತದಲ್ಲಿ ಎಲ್ಲಿಯಾದ್ರೂ ಉದ್ಯೋಗಕ್ಕೆ ಟ್ರೈ ಮಾಡುವಾಗ ಈ ಸ್ಟಾರ್ ಗಳಿಂದ ನೀವು ಬೇಗನೇ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಅಷ್ಟೇ ಅಲ್ಲ ಕಾಲೇಜಿನಲ್ಲಿ ಅತೀ ಕಡಿಮೆ ಅಂಕ ಪಡೆದಿದ್ದರೆ, ಅಂತಹ ಸಂದರ್ಭದಲ್ಲಿ ಈ ಸ್ಟಾರ್ ಗಳು ನಿಮ್ಮನ್ನ ಪಾರು ಮಾಡುತ್ತದೆ

ಗ್ಲೋಬಲ್ ನೆಟ್‌ವರ್ಕ್ ನಿಮ್ಮದಾಗುವುದು:

ಹೊರದೇಶದಲ್ಲಿ ನೀವು ಇಂಟರ್ನ್ ಶಿಪ್ ಮಾಡಿದರೆ ನಿಮಗೆ ಇತರ ದೇಶಗಳ ಸ್ನೇಹಿತರ ಪರಿಚಯವಾಗುವುದು. ಅಷ್ಟೇ ಅಲ್ಲ ಇದರಿಂದ ನಿಮ್ಮ ಕೆರಿಯರ್ ಲೈಫ್ ಮತ್ತಷ್ಟು ಮೇಲಕ್ಕೆ ಹೋಗುತ್ತದೆ. ಅಷ್ಟೇ ಅಲ್ಲ ನಿಮಗೆ ಹೆಚ್ಚು ಹೆಚ್ಚು ಉದ್ಯೋಗವಕಾಶಗಳು ಲಭ್ಯವಾಗುವುದು

ಇಂಟರ್ಪರ್ಸನಲ್ ಸ್ಕಿಲ್ ಹೆಚ್ಚಾಗುವುದು:

ನೀವು ಯಾವುದೇ ದೇಶವನ್ನು ಬೇಕಾದ್ರು ಇಂಟರ್ನ್ ಶಿಪ್‌ಗೆ ಆಯ್ಕೆ ಮಾಡಬಹುದು. ಇದರಿಂದ ನಿಮ್ಮ ಇಂಟರ್ಪರ್ಸನಲ್ ಸ್ಕಿಲ್ ಹೆಚ್ಚಾಗುತ್ತದೆ. ವಿವಿಧ ದೇಶಗಳ ಜನರೊಂದಿಗೆ ನೀವು ಬೆರೆತು ಕೆಲಸ ಮಾಡುತ್ತೀರಿ. ಇದರಿಂದ ನೀವು ನಿಮ್ಮ ಒಳಗಿನಿಂದಲೇ ಸ್ಟ್ರಾಂಗ್ ಆಗುತ್ತೀರಾ

ಜಗತ್ತಿನಾದ್ಯಂತ ಟ್ರಾವೆಲ್ :

ನೀವು ಇಂಟರ್ನ್ ಶಿಪ್ ಮಾಡುವಾಗ ಬೇರೆ ಬೇರೆ ದೇಶಗಳನ್ನು ಸುತ್ತಾಡುವ ಅವಕಾಶ ನಿಮ್ಮದಾಗುತ್ತದೆ. ಅಲ್ಲಿನ ಸ್ನೇಹಿತರ ಜತೆ ನೀವು ವೀಕೆಂಡ್ ಗಳಲ್ಲಿ ತಿರುಗಾಡಬಹುದು. ಇನ್ನು ಇಂಟರ್ನ್ ಶಿಪ್ ಮಾಡುವಾಗ ನಿಮಗೆ ಟೀನೇಜ್ ಆಗಿರುವುದರಿಂದ ಹೊಸ ಹೊಸ ಜಾಗಗಳನ್ನ ನೋಡುವ ಹುಮ್ಮಸ್ಸು, ಹಾಗೂ ಎನರ್ಜಿ ನಿಮ್ಮಲ್ಲಿ ಇರುತ್ತದೆ

ಭಾಷಾಭಿವೃದ್ಧಿ:

ಬೇರೆ ಬೇರೆ ದೇಶದಲ್ಲಿ ಇಂಟರ್ನ್ ಶಿಪ್ ಮಾಡುವಾಗ ಅಲ್ಲೂ ನಿಮ್ಮ ಹಾಗೆ ಇನ್ಯಾವುದೋ ದೇಶದಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರ ಜತೆ ಮಾತನಾಡುತ್ತಾ ಮಾತನಾಡುತ್ತಾ ನಿಮ್ಮ ಭಾಷಾ ಕೌಶಲ್ಯವು ಕೂಡಾ ಅಭಿವೃದ್ಧಿ ಹೊಂದುತ್ತದೆ.

ವಿಶೇಷ ವ್ಯಕ್ತಿ ಎನಿಸಿಕೊಳ್ಳುತ್ತೀರಿ:

ಹೌದು ಬೇರೆ ದೇಶದಲ್ಲಿ ಇಂಟರ್ನ ಶಿಪ್ ಮಾಡಿ ಮರಳಿ ತಾಯಿನಾಡಿಗೆ ಬಂದು ಉದ್ಯೋಗ ಹುಡುಕಿದಾಗ ನಿಮ್ಮ ಇಂಟರ್ನ್ ಶಿಪ್ ಸರ್ಟಿಫಿಕೇಟ್ ನಿಮ್ಮನ್ನ ಎಲ್ಲರಿಂದ ಒಂದು ಕೈ ಮೇಲೆ ಅನ್ನೋ ಜಾಗಕ್ಕೆ ನಿಲ್ಲಿಸುತ್ತದೆ. ಎಷ್ಟೇ ಮಂದಿ ಇಂಟರ್ವ್ಯೂಗೆ ಬಂದ್ದದರೂ ನಿಮ್ಮ ಸರ್ಟಿಫಿಕೇಟ್‌ಗೆ ಮೊದಲ ಆದ್ಯತೆ ಸಿಗುವುದು

For Quick Alerts
ALLOW NOTIFICATIONS  
For Daily Alerts

  English summary
  The perspective of employers has changed in the recent times. Rather than bookish knowledge and top grades in academics, they're searching for a candidate who has some real-life work experience that cannot be taught in the classrooms
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more