Happy Women's Day 2021: ಮಹಿಳೆಯರು ಈ ಉದ್ಯೋಗಳಲ್ಲಿ ಕೈ ತುಂಬಾ ಹಣ ಸಂಪಾದಿಸಬಹುದು

ಉದ್ಯೋಗ ಅಂತ ಬಂದಾಗ ಮಹಿಳೆಗೆ ಕಡಿಮೆ ಪ್ರಾಶಸ್ತ್ಯ ನೀಡುತ್ತಿದ್ದ ಕಾಲದಲ್ಲಿ ಸಾಮಾನ್ಯವಾಗಿ ಕ್ಲರ್ಕ್ ಮತ್ತು ಶಿಕ್ಷಕಿ ಹುದ್ದೆಯಲ್ಲಿ ಮಹಿಳೆಯರು ಹೆಚ್ಚಾಗಿ ಇರುತ್ತಿದ್ದರು. ಆದರೆ ಇಂದು ಅನೇಕ ಕ್ಷೇತ್ರದಲ್ಲಿ ಮಹಿಳೆಯು ದುಡಿಮೆಯನ್ನು ಮಾಡುತ್ತಿದ್ದಾಳೆ. ಅವಳೂ ಕೂಡ ಉತ್ತಮ ಆದಾಯ ಪಡೆದು ಸಂಸಾರವನ್ನು ನಿಭಾಯಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾಳೆ.

ಮಹಿಳೆಯರಿಗೆ ಹಣ ಸಂಪಾದನೆಗಾಗಿ ಈ ಟಾಪ್‌ 5 ಉದ್ಯೋಗಗಳು ಸೂಕ್ತ

ಈಗಿನ ದಿನಗಳಲ್ಲಿ ಮಹಿಳೆ ಯಾವೆಲ್ಲಾ ಕ್ಷೇತ್ರದಲ್ಲಿ ಉದ್ಯೋಗ ಮಾಡಿದರೆ ಕೈತುಂಬಾ ಸಂಪಾದಿಸಬಹುದು ಎಂಬ ಹಲವರ ಪ್ರಶ್ನೆಗಳಿಗೆ ನಾವಿಂದು ಉತ್ತರಿಸುತ್ತಿದ್ದೇವೆ. ಮಹಿಳೆ ಈ ೫ ಪ್ರಮುಖ ಉದ್ಯೋಗಳಲ್ಲಿ ತೊಡಗಿಕೊಂಡರೆ ಸಾಕು ಅತೀ ಹೆಚ್ಚು ವೇತನವನ್ನು ಪಡೆಯಬಹುದು. ಆ ಹುದ್ದೆಗಳು ಯಾವುವು ಅಂತೀರಾ ? ಮುಂದೆ ಓದಿ.

1. ಪಬ್ಲಿಕ್ ರಿಲೇಶನ್ಸ್ /ಸೇಲ್ಸ್ / ಮಾರ್ಕೆಟಿಂಗ್:

1. ಪಬ್ಲಿಕ್ ರಿಲೇಶನ್ಸ್ /ಸೇಲ್ಸ್ / ಮಾರ್ಕೆಟಿಂಗ್:

ಮಹಿಳೆಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಅಧಿಕವಾಗಿದೆ. ಒಂದು ಉತ್ಪನ್ನವನ್ನು ಮಾರ್ಕೆಟಿಂಗ್ ಮಾಡುವುದು, ಮಾರಾಟ ಮಾಡುವುದು ಮತ್ತು ಜನರೊಂದಿಗೆ ಸಂವಹನ ಮಾಡುವ ಮೂಲಕ ಉತ್ತಮ ರಿಲೇಶನ್ಸ್ ಅನ್ನು ಕಾಪಾಡಿಕೊಳ್ಳುವ ಕೆಲಸಗಳನ್ನು ಮಾಡುವುದು ಮಹಿಳೆಗೆ ಸೂಕ್ತವಾದ ಕೆಲಸಗಳು. ಏಕೆಂದರೆ ಮಹಿಳೆಯರು ಏಕಕಾಲದಲ್ಲಿ ಎರಡು ಮೂರು ಕೆಲಸಗಳನ್ನು ನಿಷ್ಠೆಯಿಂದ ಮಾಡುವ ಸಾಮರ್ಥ್ಯ ಮಹಿಳೆಯರಿಗೆ ಮಾತ್ರ ಇರುತ್ತದೆ. ಹಾಗಾಗಿ ಈ ಕ್ಷೇತ್ರಗಳಲ್ಲಿ ಮಹಿಳೆಯರು ಉದ್ಯೋಗ ಮಾಡಿದ್ದಲ್ಲಿ ಕೈತುಂಬಾ ಹಣ ಸಂಪಾದಿಸಬಹುದು ಮತ್ತು ಉದ್ಯೋಗದಲ್ಲಿ ಉನ್ನತ ಸ್ನಾನಕ್ಕೆ ಏರಬಹುದು.

 

2. ಹೆಚ್‌ ಆರ್‌ ಮ್ಯಾನೇಜರ್ :

2. ಹೆಚ್‌ ಆರ್‌ ಮ್ಯಾನೇಜರ್ :

ಮಹಿಳೆಯರು ಹೆಚ್ಚು ಕೌಶಲ್ಯಗಳನ್ನು ಹೊಂದಿರುತ್ತಾರೆ ಹಾಗಾಗಿ ಅನೇಕ ಸಂಸ್ಥೆಗಳು ಮಹಿಳೆಯರನ್ನು ಹೆಚ್‌ಆರ್‌ ಮ್ಯಾನೇಜರ್ ಆಗಿ ನೇಮಕ ಮಾಡಲು ಬಯಸುತ್ತಾರೆ. ನೀವು ಹೆಚ್‌ಆರ್‌ ಮ್ಯಾನೇಜರ್ ಆಗಬೇಕೆಂದರೆ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಅಥವಾ ಇಂಡಸ್ಟ್ರಿಯಲ್ ರಿಲೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಹೆಚ್‌ ಆರ್ ಆಗಿ ನೇಮಕ ಆದ ಪ್ರಾರಂಭದಲ್ಲಿಯೇ ವರ್ಷಕ್ಕೆ 7 ರಿಂದ 10 ಲಕ್ಷದ ವರೆಗೂ ವೇತನವನ್ನು ಪಡೆಯಬಹುದು.

3. ಅಕೌಂಟ್ಸ್ ಮತ್ತು ಫಿನಾನ್ಸ್ :

3. ಅಕೌಂಟ್ಸ್ ಮತ್ತು ಫಿನಾನ್ಸ್ :

ಪ್ರತಿಯೊಂದು ಸಂಸ್ಥೆಯು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅಲ್ಲಿನ ಹಣಕಾಸು ನಿರ್ವಹಣೆಗೆ ಚಾರ್ಟೆಡ್ ಅಕೌಂಟೆಂಟ್‌ಗಳ ಅಗತ್ಯವಿದ್ದೇ ಇರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಚಾರ್ಟೆಡ್ ಅಕೌಂಟೆಂಟ್‌ಗಳಿಗೆ ಭಾರೀ ಬೇಡಿಕೆ ಇದ್ದು ಉತ್ತಮ ವೇತನವನ್ನೂ ಕೂಡ ಪಡೆಯಬಹುದು. ಚಾರ್ಟೆಡ್ ಅಕೌಂಟೆಂಟ್‌ ಆಗಿ ನೇಮಕ ಆದ ಪ್ರಾರಂಭ ವರ್ಷದಲ್ಲಿಯೇ 6 ರಿಂದ 8 ಲಕ್ಷ ವರೆಗೂ ಹಣ ಸಂಪಾದಿಸಬಹುದು.

4. ಏರ್ ಹೋಸ್ಟೆಸ್

4. ಏರ್ ಹೋಸ್ಟೆಸ್

ಏರ್‌ ಹೋಸ್ಟೆಸ್‌ ಇದು ಮಹಿಳೆಯರಿಗೆ ಸೂಕ್ತವಾದ ಉದ್ಯೋಗ ಎಂದೇ ಹೇಳಬಹುದು. ಯಾರಿಗೆ ಬೇರೆ ಬೇರೆ ದೇಶಗಳಿಗೆ ಹೋಗಬೇಕೆಂಬ ಆಸೆ ಇರುತ್ತದೆ ಮತ್ತು ಹೊಸಬರೊಂದಿಗೆ ಸಂವಹನ ಮಾಡುವ / ಪರಿಚಯಿಸಿಕೊಳ್ಳುವ ಆಸಕ್ತಿ ಇರುತ್ತದೆಯೋ ಅಂತಹ ಮಹಿಳೆಯರು ಏರ್‌ ಹೋಸ್ಟೆಸ್ ಉದ್ಯೋಗಕ್ಕೆ ಸೇರಲು ಸೂಕ್ತ. ಏರ್‌ ಹೋಸ್ಟೆಸ್ ಆದ ಪ್ರಾರಂಭದಲ್ಲೇ ದೇಶೀಯ ಏರ್‌ಲೈನ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ತಿಂಗಳಿಗೆ 25,000/ - ರಿಂದ 40,000/- ರೂ ವೇತನವು ಸಿಗುತ್ತದೆ. ಇನ್ನು ವಿದೇಶಿ ಏರ್‌ಲೈನ್ಸ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಆರಂಭದಲ್ಲೇ ತಿಂಗಳಿಗೆ 50,000/ - ರಿಂದ 80,000/-ರೂ ವೇತನವು ಸಿಗುತ್ತದೆ. ನಂತರ 2 ರಿಂದ 3 ವರ್ಷಗಳ ಅನುಭವ ಹೊಂದಿದ ಏರ್‌ ಹೋಸ್ಟೆಸ್‌ ಗಳು ಉತ್ತಮ ಆದಾಯವನ್ನು ಪಡೆಯಬಹುದು.

5. ಬ್ಯಾಂಕಿಂಗ್ ಮತ್ತು ಇನ್ಷುರೆನ್ಸ್

5. ಬ್ಯಾಂಕಿಂಗ್ ಮತ್ತು ಇನ್ಷುರೆನ್ಸ್

ಇನ್ಷುರೆನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ವಿಫುಲವಾಗಿದ್ದು, ಮಹಿಳೆಯರು ಉದ್ಯೋಗ ಪಡೆಯಲು ಈ ಕ್ಷೇತ್ರ ಹೆಚ್ಚು ಸೂಕ್ತವಾಗಿದೆ. ಯಾರು ಉತ್ತಮ ಸಂವಹನ ಕೌಶಲ್ಯ ಹೊಂದಿರುತ್ತೀರಿ ಮತ್ತು ಯಾರಿಗೆ ಹೆಚ್ಚು ಸಾಮಾನ್ಯ ಜ್ಞಾನವಿದೆಯೋ ಅಂತಹ ಅಭ್ಯರ್ಥಿಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸಲು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉದ್ಯೋಗವನ್ನು ಪಡೆಯಬಹುದು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕ್ಲರ್ಕ್ ಆಯ್ಕೆ ನೇಮಕ ಆದ ಅಭ್ಯರ್ಥಿಗಳಿಗೆ ಪ್ರಾರಂಭದಲ್ಲಿ ತಿಂಗಳಿಗೆ 12,000/- ರಿಂದ 15,000/-ರೂ ವೇತನವು ಸಿಗುತ್ತದೆ. ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/ - ರಿಂದ 20,000/-ರೂ ವೇತನವು ಸಿಗುವುದು. ಖಾಸಗಿ ವಲಯ ಮತ್ತು ಇನ್ನಿತರೆ ಬ್ಯಾಂಕ್‌ಗಳಲ್ಲಿ ಉದ್ಯೋಗ ಮಾಡುವ ಮತ್ತು ಎಂಬಿಎ, ಸಿಎಫ್‌ಎ,ಐಸಿಡಬ್ಲ್ಯೂಎ ಮತ್ತು ಸಿಎ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/-ರೂ ವೇತನವು ಸಿಗುತ್ತದೆ.

ಸಾರ್ವಜನಿಕ ವಲಯಗಳಾದ ಇನ್ಷುರೆನ್ಸ್ ಕಂಪೆನಿಗಳಲ್ಲಿ ಕೂಡ ಸರ್ಕಾರ ವೇತನದ ನಿಯಮಾನುಸಾರ ವೇತನವನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಹುದ್ದೆಗಳ ಸ್ಥಾನಗಳಿಗೆ ತಕ್ಕಂತೆ ವೇತನವನ್ನು ಪಡೆಯಬಹುದು. ಇನ್ನೂ ಖಾಸಗಿ ಇನ್ಷುರೆನ್ಸ್ ಕಂಪೆನಿಗಳಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್‌ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಮ್ಯಾನೇಜ್ಮೆಂಟ್ ಪದವಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಆರಂಭದಲ್ಲಿ ತಿಂಗಳಿಗೆ 15,000/- ರಿಂದ 25,000/-ರೂ ವೇತನವು ಸಿಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Here we are giving information about best paying jobs for women in india.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X