ಕಾಲೇಜಿಗೆ ಎಂಟ್ರಿ ಕೊಟ್ಟಿದ್ದೀರಾ? ಹಾಗಿದ್ರೆ ನಿಮಗೆ ಈ ತರದ ಸಮಸ್ಯೆಗಳು ಎದುರಾಗಿದೆಯಾ? ಹಾಗಾದರೆ ಇಲ್ಲಿದೆ ಸಲಹೆ

ಕಾಲೇಜು ಮೆಟ್ಟಿಲು ಹತ್ತುವುದು ಅಂದರೆ ವಿದ್ಯಾರ್ಥಿಗಳಲ್ಲಿ ಅದೇನೋ ಸಂತಸ ಇನ್ನು ನಮ್ಮನ್ನು ಕೇಳುವವರು ಯಾರೂ ಇಲ್ಲ ನಮಗೆ ಸ್ವತಂತ್ರ ರೆಕ್ಕೆ ಬಂದಿದೆ ಎನ್ನುವ ಭಾವನೆ. ಇನ್ನು ತರಗತಿಗಳು ಪ್ರಾರಂಭವಾಗಿ ಕೆಲವು ದಿನಗಳು ಕಳೆದಿವೆ ಆದರೆ ಮನಸ್ಸಿಗೆ ಸಂತಸ ಕೊಡುವ ಹಲವು ವಿಚಾರಗಳ ನಡುವೆಯೂ ವಿದ್ಯಾರ್ಥಿಗಳು ಕೆಲವು ಸವಾಲುಗಳನ್ನು ಎದುರಿಸುವ ಪ್ರಸಂಗ ಎದುರಾಗುತ್ತವೆ.ಅದಕ್ಕೆ ಶಾಲಾ ಜೀವನ ಮತ್ತು ಕಾಲೇಜು ಜೀವನದಲ್ಲಿನ ವ್ಯತ್ಯಾಸಗಳೇ ಕಾರಣ.

 ಕಾಲೇಜು ದಿನಗಳಿಗೆ ಎಂಟ್ರಿಯಾದಾಗ ಈ ಸವಾಲುಗಳು ಎದುರಾಗುವುದು ಸಾಮಾನ್ಯ ಅದಕ್ಕೆ ಇಲ್ಲಿದೆ ನಮ್ಮ ಸಲಹೆ

 

ಕಾಲೇಜು ಮೆಟ್ಟಿಲು ಹತ್ತಿದ ನಂತರ ಎದುರಾಗುವ ಸಾಮಾನ್ಯ ಸಮಸ್ಯೆಗಳಿವೆ. ಅದರಲ್ಲಿ ಕೆಲವು ಸವಾಲುಗಳು ಸೌಮ್ಯವಾಗಿದ್ದರೂ ಮತ್ತೆ ಕೆಲವು ಸಮಸ್ಯೆಗಳು ಹೆಚ್ಚು ಆಳವಾಗಿ ನಮ್ಮನ್ನು ಕಸಿವಿಸಿಗೊಳಿಸುತ್ತವೆ ಅದರಿಂದ ವಿದ್ಯಾರ್ಥಿಗಳು ಪ್ರಾರಂಭದಲ್ಲೇ ವಿಚಲಿತಗೊಳ್ಳುತ್ತಾರೆ. ಹಾಗಿದ್ರೆ ಯಾವೆಲ್ಲಾ ಸವಾಲುಗಳು ಎದುರಾಗುತ್ತವೆ ಎನ್ನುವುದನ್ನು ನೀವೂ ಲೇಖನ ಓದಿ ತಿಳಿದರೆ ಅದರ ಬಗೆಗೆ ಮುನ್ನೆಚ್ಚರಿಕೆಯನ್ನು ವಹಿಸಬಹುದು.

ಸಮಯ ನಿರ್ವಹಣೆ:

ಕಾಲೇಜು ದಿನಗಳಲ್ಲಿ ಯಶಸ್ಸಿನ ಗುಟ್ಟು ಅಂದರೆ ಅದು ಸಮಯ ನಿರ್ವಹಣೆ. ನಿಮ್ಮ ಜೀವನದುದ್ದಕ್ಕೂ, ಶಿಶುವಿಹಾರದಿಂದ ಪ್ರೌ ಢ ಶಾಲೆಯವರೆಗಿನ ಜೀವನ ನಿಗದಿತ ಶಾಲಾ ದಿನಗಳು ಮತ್ತು ಸಮಯ ಪಾಲನೆಯೊಂದಿಗೆ ರಚನೆಯಾಗಿವೆ.ಶಾಲಾ ದಿನಗಳಲ್ಲಿ ನಿಗದಿತ ಸಮಯದ ಪಾಲನೆ ತಿಳಿದಿರುವುದೇ ಆದರೆ ಇದ್ದಕ್ಕಿದ್ದಂತೆ ಕಾಲೇಜು ಜೀವನಕ್ಕೆ ಪ್ರವೇಶಿಸಿದಾಗ ಹೆಚ್ಚು ಗೊಂದಲಗಳು ಎದುರಾಗುತ್ತವೆ. ಅನೇಕ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳಿಗೆ ಹೊಂದಿಕೊಳ್ಳಲು ತಮ್ಮ ಸಮಯವನ್ನು ಹೇಗೆ ನಿರ್ವಹಿಸುವುದು ಎನ್ನುವುದು ಪ್ರಶ್ನೆಯಾಗಿರುತ್ತದೆ. ಇದನ್ನು ಸಮತೋಲನಗೊಳಿಸುವ ಏಕೈಕ ರಹಸ್ಯವೆಂದರೆ ಅತ್ಯುತ್ತಮ ಸಮಯ ನಿರ್ವಹಣಾ ಕೌಶಲ್ಯಗಳನ್ನು ಹೊಂದಿರುವುದು. ಇದರ ಬಗೆಗೆ ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರೊಡನೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುವುದು ಒಳಿತು.

ಆರ್ಥಿಕ ಸವಾಲುಗಳು:

ಆರ್ಥಿಕ ಸಮಸ್ಯೆಗಳು ಅನೇಕ ವಿದ್ಯಾರ್ಥಿಗಳಲ್ಲಿ ಎದುರಾಗುವುದನ್ನು ನಾವು ನೋಡಿರುತ್ತೇವೆ. ಎಲ್ಲರೂ ಶ್ರೀಮಂತರಾಗಿರುವುದಿಲ್ಲ ಅನೇಕ ವಿದ್ಯಾರ್ಥಿಗಳು ಹಣಕಾಸಿನ ಸವಾಲುಗಳನ್ನು ಎದುರಿಸುಬೇಕಾಗುತ್ತದೆ. ಕಾಲೇಜು ಜೀವನವು ಅತ್ಯಂತ ದುಬಾರಿಯಾಗಿದೆ. ಬೋಧನಾ ವೆಚ್ಚವು ಹೆಚ್ಚಿನ ದರದಲ್ಲಿ ಏರುತ್ತಿದೆ. ವಸತಿ, ಊಟ, ಪಠ್ಯಪುಸ್ತಕಗಳು ಮತ್ತು ಸಾರಿಗೆಯ ವೆಚ್ಚವನ್ನು ಸೇರಿಸಿ ನಿಜವಾಗಿಯೂ ಸಾಕಷ್ಟು ಹಣ ಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳ ಜೊತೆಗೆ, ನೀವು ಇನ್ನೂ ಉತ್ತಮವಾಗಿ ಕಾಣಬೇಕು, ನಿಮ್ಮ ಸ್ನೇಹಿತರೊಂದಿಗೆ ಹೊರಗೆ ಹೋಗಬೇಕು ಇಂತಹ ಅನೇಕ ಅಗತ್ಯತೆ ಮತ್ತು ಆಸೆಗಳಿಗೆ ಹಣದ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳಿಗೆ ತಾತ್ಕಾಲಿಕವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಅದ್ಹೇಗೆ ಎಂದರೆ ವಿದ್ಯಾರ್ಥಿಗಳು ಬೋಧನಾ ಶುಲ್ಕವನ್ನು ಪಾವತಿಸಲು ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸಾರಿಗೆ ವೆಚ್ಚವನ್ನು ಕಡಿತಗೊಳಿಸಲು ಕ್ಯಾಂಪಸ್‌ನಲ್ಲಿ ಅಥವಾ ಹತ್ತಿರದಲ್ಲಿ ವಸತಿಗಾಗಿ ನೋಡಿ. ಹಣಕಾಸಿನ ಹೊರೆ ಸರಾಗವಾಗಿಸಲು ನೀವು ಅರೆಕಾಲಿಕ ಉದ್ಯೋಗವನ್ನು ಸಹ ಮಾಡಬಹುದು.

 

ಶೈಕ್ಷಣಿಕ ಸವಾಲುಗಳು:

ಶೈಕ್ಷಣಿಕ ಸವಾಲುಗಳನ್ನು ಸಾಮಾನ್ಯವಾಗಿ ವಿದ್ಯಾರ್ಥಿಗಳು ನಿರೀಕ್ಷಿಸುತ್ತಾರೆ. ಅವರು ನಿರೀಕ್ಷಿಸದ ಸಂಗತಿಯೆಂದರೆ, ಅವರಿಗೆ ಎದುರಾಗುವ ಕೆಲಸದ ಹೊರೆಯ ಪ್ರಮಾಣ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಹಂತದಲ್ಲಿ ಅಧ್ಯಯನಕ್ಕೆ ಸಂಬಂಧಪಟ್ಟ ಪ್ರತಿಯೊಂದು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಿರುತ್ತದೆ. ವಿದ್ಯಾರ್ಥಿಗಳಿಗೆ ಇನ್ನೊಬ್ಬರ ಸಹಾಯ ಅಗತ್ಯ ಹಾಗೆ ಶೈಕ್ಷಣಿಕ ಅಂಕಗಳನ್ನು ಹೆಚ್ಚಿಸಲು ಮತ್ತು ಸಮಯವನ್ನು ಉಳಿಸಲು ಆನ್‌ಲೈನ್ ಸೇವೆಯಿಂದ ಸಹಾಯ ಪಡೆಯಬಹುದು.

ವೈಯಕ್ತಿಕ ಜವಾಬ್ದಾರಿಗಳು ಹೆಚ್ಚು:

ಕಾಲೇಜಿಗೆ ಹೆಜ್ಜೆ ಇಟ್ಟ ನಂತರ ಒಬ್ಬ ವ್ಯಕ್ತಿಯನ್ನು ವಯಸ್ಕರಂತೆ ಪರಿಗಣಿಸಲಾಗುತ್ತದೆ. ಇದರರ್ಥ ಅವರು ತೆಗೆದುಕೊಳ್ಳುವ ಕ್ರಮಗಳು ಮತ್ತು ನಿರ್ಧಾರಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ವೈಯಕ್ತಿಕ ಜವಾಬ್ದಾರಿ ಎಂದರೆ ತಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದಕ್ಕೆ ಅವರು ಅಕಾಲಿಕ ಜವಾಬ್ದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಚಿಕ್ಕವರಿದ್ದಾಗ, ನಮ್ಮ ವೈಫಲ್ಯಗಳ ಆಪಾದನೆಯನ್ನು ನಮ್ಮ ಪೋಷಕರು ಮತ್ತು ಶಿಕ್ಷಕರ ಮೇಲೆ ಹಾಕಿ ಬಿಡುತ್ತಿದ್ದೆವು ಆದರೆ ಈಗ ಹಾಗೆ ಆಗುವುದಿಲ್ಲ. ನಿಮ್ಮ ಎಲ್ಲಾ ಯಶಸ್ಸುಗಳು ಮತ್ತು ವೈಫಲ್ಯಗಳಿಗೆ ನೀವೇ ಕಾರಣರಾಗಿರುತ್ತೀರಿ.

ಸೆಮಿಸ್ಟರ್‌ನ ಕೋರ್ಸ್‌ಗಳಿಗೆ ಮೊದಲೇ ನೋಂದಾಯಿಸಿಕೊಳ್ಳಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ತರಗತಿಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು. ಸಮಯಕ್ಕೆ ಸರಿಯಾಗಿ ನಿಮ್ಮ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಬೇಕು. ಈ ಎಲ್ಲಾ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ವಿದ್ಯಾರ್ಥಿಯಾಗಿ ನಿಮ್ಮ ವೇಳಾಪಟ್ಟಿಯನ್ನು ಪ್ರಾರಂಭದಲ್ಲಿ ಯೋಜಿಸಿಕೊಳ್ಳುವುದು ಉತ್ತಮ.

ಸಾಮಾಜಿಕ ಸಮಸ್ಯೆಗಳು:

ಕಾಲೇಜು ಜೀವನವು ತರಗತಿಗೆ ಮಾತ್ರ ಸೀಮಿತವಾಗಿಲ್ಲ. ಅನುಭವದ ಒಂದು ದೊಡ್ಡ ಭಾಗವೇ ಆಗಿದೆ. ನೀವು ಕಾಲೇಜಿಗೆ ಪ್ರವೇಶಿಸಿದಾಗ ನಿಮ್ಮ ಜೀವನದ ಹೊಸ ಅಧ್ಯಾಯವನ್ನು ನೀವು ಪ್ರಾರಂಭಿಸುತ್ತೀರಿ. ನಿಮ್ಮ ಜೀವನದಲ್ಲಿ ನೀವು ಎಂದಿಗೂ ಭೇಟಿಯಾಗದ ರೂಮ್‌ಮೇಟ್ ಅನ್ನು ನೀವು ಪಡೆಯುತ್ತೀರಿ. ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ. ಆದರೆ ಈ ನಡುವೆ ನಿಮ್ಮ ಅಧ್ಯಯನದಲ್ಲಿ ಏರುಪೇರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಕಾಲೇಜು ಆವರಣಗಳಲ್ಲಿ ಕೆಟ್ಟ ಚಟಗಳನ್ನು ಉಳ್ಳ ವಿದ್ಯಾರ್ಥಿಗಳು ನಿಮ್ಮ ಸ್ನೇಹಿತರಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಈ ಬಗೆಗೆ ನೀವು ಹೆಚ್ಚು ಕಾಳಜಿ ವಹಿಸಬೇಕಿರುತ್ತದೆ. ಇದರಿಂದ ನಿಮ್ಮ ಭವಿಷ್ಯಕ್ಕೆ ಸಮಸ್ಯೆಯಾಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ನಿಮ್ಮದೆ ಆದ ಇತಿಮಿತಿಗಳನ್ನು ಹಾಕಿಕೊಳ್ಳುವುದು ಒಳಿತು.

ಒತ್ತಡ ನಿರ್ವಹಣೆ:

ಶೈಕ್ಷಣಿಕ ಅಧ್ಯಯನ, ಹೊಸ ಸ್ನೇಹಿತರ ಒಡನಾಟ ಇತರೆ ಜವಾಬ್ದಾರಿಯ ಸವಾಲುಗಳೊಂದಿಗೆ ಹೊಂದಿಕೊಳ್ಳುವುದು ಇವು ನಿಮ್ಮಲ್ಲಿ ಒತ್ತಡವನ್ನುಂಟು ಮಾಡಬಹುದು. ಇದರಿಂದ ಶೈಕ್ಷಣಿಕ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಒತ್ತಡವು ವಿದ್ಯಾರ್ಥಿಯ ಜೀವನದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಅದನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳು ಮಾರ್ಗಗಳನ್ನು ಕಂಡುಕೊಳ್ಳಬೇಕಿರುತ್ತದೆ. ವ್ಯಾಯಾಮ, ಪ್ರೇರಣೆ, ಸ್ನೇಹಿತರೊಂದಿಗೆ ಅಥವಾ ಸಲಹೆಗಾರರೊಂದಿಗೆ ಈ ಬಗೆಗೆ ಚರ್ಚೆ ಮಾಡುವುದು ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತದೆ.

For Quick Alerts
ALLOW NOTIFICATIONS  
For Daily Alerts

English summary
When you enter a college, you begin a new chapter of your life. Here we talking about the top challenges faced by most college students. Check it out.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X