ಟಾಪ್ 10 ಇಂಟರ್ ವ್ಯೂ ಪ್ರಶ್ನೆಗಳು ಮತ್ತು ಅದರ ಉತ್ತರಗಳು

By Kavya

ಈಗಿನ ಕಾಂಪಿಟೇಟಿವ್ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಒಂದು ಕೆಲಸ ಗಿಟ್ಟಿಸಿಕೊಳ್ಳೋಕೆ ಒದ್ದಾಡಬೇಕಿದೆ. ಒಂದು ಕೆಲಸಕ್ಕೆ ಅದೆಷ್ಟೋ ಜನ ಅಪ್ಲಿಕೇಷನ್ ಹಾಕಿರುತ್ತಾರೆ.ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಕೆಲಸ ಪಡೆದುಕೊಳ್ಳೋದು ಅಂದ್ರೆ ಅದೊಂದು ಜೀವಮಾನದ ಸಾಧನೆಯೇನೋ ಅನ್ನಿಸುವಂತಾಗಿದೆ. ಇಂಟರ್‌ವ್ಯೂನಲ್ಲಿ ಗೆಲ್ಲಬೇಕು ಅಂದ್ರೆ ಅದಕ್ಕೊಂದಿಷ್ಟು ತಯಾರಿ ಮತ್ತು ಇಂಟರ್ ವ್ಯೂ ಬಗೆಗೆ ಸ್ವಲ್ಪ ಮಾಹಿತಿ ತಿಳಿದುಕೊಂಡಿರುವುದು ಒಳಿತು. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನಾವು ಇಲ್ಲೊಂದಿಷ್ಟು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ.

 

ಇಂಟರ್‌ವ್ಯೂನಲ್ಲಿ ಕೇಳುವ ಪ್ರಶ್ನೆ ನೀವು ಎಂತಹ ಕೆಲಸಕ್ಕೆ ಅಪ್ಲಿಕೇಷನ್ ಹಾಕಿದ್ದೀರಿ ಅನ್ನೋದನ್ನು ಆಧರಿಸುತ್ತದೆ. ಅಷ್ಟೇ ಅಲ್ಲ ನೀವು ಕೆಲಸ ಮಾಡಬೇಕಿರುವ ಸ್ಥಳವೂ ಕೂಡ ಮಹತ್ವ ಪಡೆದುಕೊಳ್ಳುತ್ತದೆ. ಇದೆಲ್ಲವನ್ನು ಪರಿಗಣಿಸಿಕೊಂಡು ಹೇಳುವುದಾದರೆ ಕೆಲವು ಸಾಮಾನ್ಯ ಪ್ರಶ್ನೆಗಳನ್ನು ನಿಮ್ಮನ್ನು ಟೆಸ್ಟ್ ಮಾಡುವ ಇಂಟರ್‌ವ್ಯೂವರ್ ಕೇಳಿಯೇ ಕೇಳುತ್ತಾರೆ.ಅದಕ್ಕೆ ಸಂಬಂಧಿಸಿದಂತೆ ನೀವು ಚಾಣಾಕ್ಷರಾಗಿ ಉತ್ತರಿಸಬೇಕಾಗುತ್ತದೆ. ನೀವು ಕೆಲಸ ಹುಡುಕುತ್ತಿರುವವರಾಗಿದ್ದು, ಸದ್ಯದಲ್ಲೇ ಇಂಟರ್‌ವ್ಯೂಗೆ ಹೋಗುತ್ತಿದ್ದೀರಾದ್ರೆ ಈ ಲೇಖನವನ್ನೊಮ್ಮೆ ಓದಿ ಹೋಗಿ..
ನಿಮ್ಮ ಬಗ್ಗೆ ತಿಳಿಸಿಕೊಡಿ..

ಟಾಪ್ 10 ಇಂಟರ್ ವ್ಯೂ ಪ್ರಶ್ನೆಗಳು ಮತ್ತು ಅದರ ಉತ್ತರಗಳು

ಇದು ಪ್ರತಿಯೊಬ್ಬರಿಗೂ ಸಂದರ್ಶನದಲ್ಲಿ ಕೇಳುವ ಮೊದಲ ಪ್ರಶ್ನೆಯಾಗಿರುತ್ತದೆ. ಇದರಲ್ಲಿ ಸಂದರ್ಶಕರಿಗೆ ನೀವು ಹೇಳಬೇಕಿರುವುದು ನಿಮ್ಮಿಂದ ಅವರ ಕಂಪೆನಿಗೆ ಹೇಗೆ ಲಾಭ ತಂದುಕೊಡುತ್ತೀರಿ ಅನ್ನುವುದನ್ನ. ಮತ್ತು ಬೇರೆಯವರಿಗಿಂತ ನೀವು ಹೇಗೆ ವಿಭಿನ್ನವಾಗಿ ಕೆಲಸ ಮಾಡಲು ಶಕ್ತರಾಗಿದ್ದೀರಿ ಅನ್ನುವುದನ್ನು. ಅದು ಬಿಟ್ಟು ನಿಮ್ಮ ಜೀವನದ ಕಥಾಸಾರಾಂಶವನ್ನು ದಯವಿಟ್ಟು ಹೇಳಲು ಹೋಗಬೇಡಿ. ಸಂದರ್ಶಕರು ಯಾವುದೇ ಕಾರಣಕ್ಕೂ ನಿಮ್ಮ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಲ್ಲಿ ಇರುವುದಿಲ್ಲ. ಅಷ್ಟೇ ಅಲ್ಲ ನಿಮ್ಮ ಹೆಸರು, ಎಲ್ಲಿಂದ ಬಂದಿದ್ದೀರಿ ಇಂತವುಗಳನ್ನೆಲ್ಲ ಈ ಪ್ರಶ್ನೆಗೆ ಹೇಳುವ ಅಗತ್ಯವಿಲ್ಲ. ಅದೆಲ್ಲವನ್ನು ನೀವು ನಿಮ್ಮ ರೆಸ್ಯೂಮ್ ನಲ್ಲಿ ಬರೆದಿರುವುದರಿಂದ ಮತ್ತ್ಯಾಕೆ ಅದನ್ನೇ ಸಂದರ್ಶಕರಿಗೆ ಹೇಳುತ್ತೀರಿ..

ನಿಮ್ಮನ್ನ ಯಾಕೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು

ನಿಮ್ಮನ್ನ ಯಾಕೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು

ನೀವು ಯಾಕೆ ನೀವು ಅಪ್ಲೈ ಮಾಡಿದ ಕೆಲಸಕ್ಕೆ ಉತ್ತಮ ಆಯ್ಕೆ ಅನ್ನುವುದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿ ಸಂದರ್ಶಕರು ಕೇಳುವ ಪ್ರಶ್ನೆ. ಇಲ್ಲಿ ನೀವು ನಿಮ್ಮ ಇದುವರೆಗಿನ ಸಾಧನೆಯನ್ನು ಹೇಳುವುದು ಉತ್ತಮ. ಆದರೆ ಅದರಲ್ಲಿ ನಿಮ್ಮ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ಹೊಂದುವಂತಹ ಉತ್ತರಗಳಿರಲಿ.ಉದಾಹರಣೆಗೆ ಸಾಫ್ಟವೇರ್ ಇಂಜಿನಿಯರ್ ಕೆಲಸದ ಸಂದರ್ಶನದಲ್ಲಿ ನ್ಯಾಷನಲ್ ಲೆವೆಲ್ ಕಬ್ಬಡ್ಡಿ ಆಟದ ಸರ್ಟಿಫಿಕೇಟ್ ಇದೆ ಅಂತ ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಈ

ಪ್ರಶ್ನೆಗೆ ಉತ್ತರಿಸುವಾಗ ಎಚ್ಚರವಿರಲಿ.

ಪ್ರಶ್ನೆಗೆ ಉತ್ತರಿಸುವಾಗ ಎಚ್ಚರವಿರಲಿ.

ಸದ್ಯ ನೀವು ಮಾಡುತ್ತಿರುವ ಕೆಲಸದಲ್ಲಿ ಏನು ಮಾಡುತ್ತಿದ್ದೀರಿ
ಇದು ನಿಮ್ಮನ್ನ ಅಳೆದು ತೂಗಲು ಕೇಳುವ ಪ್ರಶ್ನೆ ಎಂದೇ ಹೇಳಬೇಕು. ಈ ಪ್ರಶ್ನೆಯಿಂದ ಸಂದರ್ಶಕರು ನೀವು ನಿಮ್ಮ ಕೆಲಸದಲ್ಲಿ ಎಷ್ಟು ಉತ್ತಮರಾಗಿದ್ದೀರಿ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಹಾಗಾಗಿ ನೀವು ಸದ್ಯ ತೆಗೆದುಕೊಂಡಿರುವ ಕೆಲಸದ ಜವಾಬ್ದಾರಿಯನ್ನು ಆದಷ್ಟು ಚಿಕ್ಕದಾಗಿ ಮತ್ತು ಚೊಕ್ಕದಾಗಿ ತಿಳಿಸಿಕೊಡಿ. ನಿಮ್ಮ ಜಾಗದಲ್ಲಿ ಎಲ್ಲರೂ ತೆಗೆದುಕೊಳ್ಳಬಹುದಾದ ಸಾಮಾನ್ಯ ಜವಾಬ್ದಾರಿಗಳನ್ನು ವಿವರಿಸದೇ ಸಂದರ್ಶಕರಿಗೆ ವಿಭಿನ್ನ ಅನ್ನಿಸುವಂತಹ
ಜವಾಬ್ದಾರಿಯ ಬಗ್ಗೆ ಹೇಳಿ

ನಿಮ್ಮ ಹಳೆಯ ಕೆಲಸವನ್ನು ಬಿಟ್ಟು ಬರಲು ಕಾರಣವೇನು
 

ನಿಮ್ಮ ಹಳೆಯ ಕೆಲಸವನ್ನು ಬಿಟ್ಟು ಬರಲು ಕಾರಣವೇನು

ಈ ಪಶ್ನೆಗೆ ಉತ್ತರಿಸುವಾಗ ನಿಮ್ಮ ಹಳೆಯ ಕೆಲಸನ್ನು ನೀವು ಯಾಕೆ ಇಷ್ಟ ಪಡುತ್ತಿರಲಿಲ್ಲ ಅಂತ ಹೇಳಬೇಡಿ. ಅದಕ್ಕೆ ನಿಮ್ಮ ಹಳೆಯ ಕಂಪೆನಿಯ ಬಾಸ್ ಜೊತೆ ನಿಮ್ಮದು ಏನಾದ್ರು ಕಿರಿಕ್ ಇದ್ದಿದ್ದರೆ ಅದನ್ನು ತಿಳಿಸಲು ಹೋಗಬೇಡಿ. ಅದರ ಬದಲಾಗಿ ನೀವು ಸತ್ಯವಾದ ಮತ್ತು ಉತ್ತಮ ಅನ್ನಿಸುವಂತಹ ಕಾರಣವನ್ನು ಇಲ್ಲಿ ಸಂದರ್ಶಕರಿಗೆ ನೀಡಬೇಕಾಗುತ್ತದೆ. ಆ ಕೆಲಸದಲ್ಲಿ ನಿಮ್ಮಲ್ಲಿನ ಕೆಲಸ ಹೆಚ್ಚು ಮೆಚ್ಚುಗೆಯಾಗುತ್ತಿದೆ ಆ ಕಾರಣದಿಂದ ಇಲ್ಲಿಗೆ ಬಂದೆ ಅನ್ನುವಂತಹ ಚಾಣಾಕ್ಷ ಉತ್ತರಗಳು ಹೆಚ್ಚು ಉತ್ತಮ ಅನ್ನಿಸಿಕೊಳ್ಳುತ್ತದೆ.

ನಿಮ್ಮಲ್ಲಿರುವ ಉತ್ತಮವಾದ ಸಾಮರ್ಥ್ಯ ಯಾವುದು

ನಿಮ್ಮಲ್ಲಿರುವ ಉತ್ತಮವಾದ ಸಾಮರ್ಥ್ಯ ಯಾವುದು

ಈ ಪ್ರಶ್ನೆಗೆ ಉತ್ತರಿಸುವಾಗ ನಿಮ್ಮ ಯಾವುದೋ ಸಾಮರ್ಥ್ಯವನ್ನು ಹೇಳಿಬಿಡಬೇಡಿ. ನಿಮ್ಮ ಉದಾಹರಣೆ ಸಹಿತ ವಿವರಿಸಲು ಸಾಧ್ಯವಿರುವ ಯಾವುದಾದರೂ ನಿಮ್ಮ ಉತ್ತಮ ಸಾಮರ್ಥ್ಯವನ್ನು ಹೇಳಿಕೊಳ್ಳುವುದು ಒಳಿತು.ಸಾಫ್ಟ್ ಸ್ತಿಲ್ ಗಳ ಬಗ್ಗೆ ತಿಳಿಸುವ ಅಗತ್ಯವಿಲ್ಲ. ಅದರ ಬದಲಾಗಿ ನೀವು ಹೆಚ್ಚು ಸಮರ್ಥರೆನಿಸುವ ಕೆಲಸದ ಬಗ್ಗೆ ಹೊಗಳಿಕೊಳ್ಳಿ. ಹೀಗೆ ಹೇಳಿಕೊಳ್ಳುವಾಗ ಅದು ನಿಮ್ಮ ಕಣ್ಣುಗಳಲ್ಲೂ ಪ್ರಜ್ವಲಿಸುವಂತಿರಬೇಕು.

ನೀವು ಯಾವುದರಲ್ಲಿ ಅಸಮರ್ಥರಾಗಿದ್ದೀರಿ

ನೀವು ಯಾವುದರಲ್ಲಿ ಅಸಮರ್ಥರಾಗಿದ್ದೀರಿ

ಇದು ಸಂದರ್ಶನದಲ್ಲಿ ಬರುವ ಅತ್ಯಂತ ಕಷ್ಟಕರವಾಗಿರುವ ಪ್ರಶ್ನೆ. ಕಬ್ಬಿಣದ ಕಡಲೆ ಅಂತಲೇ ಹೇಳಬಹುದು. ಯಾವುದು ಹೇಳಿದರೂ ಕಷ್ಟ. ಹೇಳದೇ ಇದ್ದರೂ ಕಷ್ಟ ಅನ್ನುವಂತಹ ಪ್ರಶ್ನೆ. ಹಾಗಾಗಿ ಈ ಪ್ರಶ್ನೆಗೆ ಉತ್ತರಿಸುವಾಗ ನಿಮ್ಮ ಅಪ್ಲೈ ಮಾಡಿದ ಕೆಲಸಕ್ಕೆ ಸಂಬಂಧವಿರದ ವಿಚಾರದಲ್ಲಿ ನೀವು ವೀಕ್ ಇದ್ದೀರಿ ಎಂಬಂತೆ ತೋರ್ಪಡಿಸಿಕೊಳ್ಳಬೇಕಿದೆ. ಆದರೆ ಸಂದರ್ಶಕರನ್ನು ಮೂರ್ಖರು ಅಂತ ಭಾವಿಸಬೇಡಿ. ಅವರು ನಿಮ್ಮ ತಪ್ಪುಗಳನ್ನು ಕ್ಷಣಮಾತ್ರದಲ್ಲೇ ಕಂಡುಹಿಡಿಯಬಲ್ಲರು. ಹಾಗಾಗಿ ಆದಷ್ಟು ಪ್ರಾಮಾಣಿಕ ಉತ್ತರವನ್ನು ನೀಡಿ. ಹೇಗೆ ನೀವು ಈ ಪ್ರಶ್ನೆಯಲ್ಲಿ ಅವರ ಮನಸ್ಸನ್ನ ಗೆಲ್ಲುತ್ತೀರಿ ಅನ್ನುವುದು ತುಂಬಾ ಮಹತ್ವ. ಆದ್ರೆ ವೀಕ್ ನೆಸ್ ಯಾವುದೂ ಇಲ್ಲ ಅಂತ ಹೇಳಬೇಡಿ.

ನಿಮಗೆ ಈ ಕೆಲಸ ಯಾಕೆ ಬೇಕು

ನಿಮಗೆ ಈ ಕೆಲಸ ಯಾಕೆ ಬೇಕು

ಇದು ನಿಮ್ಮ ಕೋರ್ಟ್ ಗೆ ತಾನಾಗೇ ಬಂದು ಬೀಳುವ ಬಾಲ್ ನಂತ ಪ್ರಶ್ನೆ. ನೀವು ಈ ಪ್ರಶ್ನೆಗೆ ಉತ್ತರಿಸಲು ಸಮರ್ಪಕರಾಗಿದ್ದರೆ ನಿಮ್ಮ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗಾಗಿ ಈ ಪ್ರಶ್ನೆಗೆ ಉತ್ತರಿಸಲು ನೀವು ಸರಿಯಾಗಿ ತಯಾರಿ ಮಾಡಿಕೊಂಡಿರಬೇಕು. ನೀವು ಹೋಗಿರುವ ಕಂಪೆನಿ ನಿಮಗೆ ಯಾಕೆ ಇಷ್ಟವಾಗಿದೆ ಅನ್ನುವುದನ್ನ ತಿಳಿಸಿ. ಯಾವುದೇ ಕಾರಣಕ್ಕೆ ನಿಮ್ಮ ಕಂಪೆನಿಯಲ್ಲಿ ಕೆಲಸ ಖಾಲಿ ಇದ್ಯಲ್ಲ ಅದಕ್ಕೆ ಬೇಕು ಅನ್ನುವುದು ಅಥ್ವಾ ನಿಮ್ಮ ಕುಟುಂಬ ನಿರ್ವಹಣೆಗೆ ಹಣ ಸಹಾಯವಾಗುತ್ತೆ ಹಾಗಾಗಿ ಈ ಕೆಲಸ ಬೇಕು ಅನ್ನುವುದು, ಇಂತಹ ಉತ್ತರಗಳನ್ನು ನೀಡಬೇಡಿ. ಹೆಚ್ಚಿನ ಸಂದರ್ಬದಲ್ಲಿ ಸಂದರ್ಶಕರು ನಿಮ್ಮ ವ್ಯವಹಾರಿಕ ಮತ್ತು ಕೌಟುಂಬಿಕ ಜೀವನ ನಿರ್ವಹಣೆಯ ಬಗ್ಗೆ ಆಸಕ್ತರಾಗಿರುವುದಿಲ್ಲ.

ಇನ್ನು 5 ವರ್ಷದಲ್ಲಿ ನಮ್ಮ ಕಂಪೆನಿಯ ಯಾವ ಹುದ್ದೆಯಲ್ಲಿರಲು ನೀವು ಬಯಸುತ್ತೀರಿ.

ಇನ್ನು 5 ವರ್ಷದಲ್ಲಿ ನಮ್ಮ ಕಂಪೆನಿಯ ಯಾವ ಹುದ್ದೆಯಲ್ಲಿರಲು ನೀವು ಬಯಸುತ್ತೀರಿ.

ಈ ಪ್ರಶ್ನೆಯ ಮುಖ್ಯ ಉದ್ದೇಶವೇನೆಂದರೆ ನಿಮ್ಮ ಕೆಲಸದಲ್ಲಿ ನಿಮಗೆ ಎಷ್ಟು ಕಮಿಂಟ್ ಮೆಂಟ್ ಇದೆ ಅನ್ನುವುದನ್ನು ತಿಳಿದುಕೊಳ್ಳುವುದು..ಹಾಗಾಗಿ ನೀವು ನಿಮ್ಮ ಕೆಲಸದಲ್ಲಿ ಮಾಡಬೇಕಿರುವ ಜವಾಬ್ದಾರಿಯ ಪ್ರಮಾಣದ ಬಗ್ಗೆ ಹೆಚ್ಚು ತಿಳಿದುಕೊಂಡಿರುವಂತೆ ವರ್ತಿಸಿ. ಮುಂದಿನ 5 ವರ್ಷದಲ್ಲಿ ಕಂಪೆನಿಗಾಗಿ ನೀವು ಏನೆಲ್ಲಾ ಮಾಡಬಲ್ಲಿರಿ ಅನ್ನುವುದು ಈ ಪ್ರಶ್ನೆಯ ಉದ್ದೇಶವಾಗಿರುತ್ತದೆ ಅನ್ನುವುದು ನೆನಪಿರಲಿ

ನಿಮ್ಮ ಮ್ಯಾನೇಜ್ ಮೆಂಟ್ ಸ್ಟೈಲ್ ಹೇಗಿದೆ

ನಿಮ್ಮ ಮ್ಯಾನೇಜ್ ಮೆಂಟ್ ಸ್ಟೈಲ್ ಹೇಗಿದೆ

ಮ್ಯಾನೇಜ್ ಮೆಂಟ್ ಹುದ್ದೆಗೆ ಸಂದರ್ಶನಕ್ಕೆ ಹೋಗಿರುವವರಿಗೆ ಕೇಳುವ ಸಾಮಾನ್ಯವಾದ ಪ್ರಶ್ನೆ ಇದು. ಈ ಪ್ರಶ್ನೆಗೆ ಉತ್ತರಿಸುವಾಗ ನೀವು ಸಾಮಾನ್ಯರಂತೆ ಉತ್ತರಿಸದೇ ಬದಲಾಗಿ ನಿಮ್ಮಿಂದ ಆ ಕಂಪೆನಿ ಬಯಸುವ ವಿಭಿನ್ನ ಮ್ಯಾನೇಜ್ ಮೆಂಟ್ ಸ್ಟೈಲ್ ಇದೆ ನಿಮ್ಮಲ್ಲಿ ಅನ್ನುವುದನ್ನ ಸಂದರ್ಶಕರಿಗೆ ಮನದಟ್ಟು ಮಾಡಬೇಕಿರುತ್ತೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ ಅನ್ನುವುದು ಸಂದರ್ಶಕರಿಗೆ ತಿಳಿಸಬೇಕು.

ನಮ್ಮಿಂದ ತಿಳಿದುಕೊಳ್ಳ ಬಯಸುವ ಯಾವುದಾದ್ರೂ ಪ್ರಶ್ನೆಗಳಿದ್ಯಾ ನಿಮ್ಮಲ್ಲಿ

ನಮ್ಮಿಂದ ತಿಳಿದುಕೊಳ್ಳ ಬಯಸುವ ಯಾವುದಾದ್ರೂ ಪ್ರಶ್ನೆಗಳಿದ್ಯಾ ನಿಮ್ಮಲ್ಲಿ

ಇದು ಇಂಟರ್ ವ್ಯೂ ನಲ್ಲಿ ಕೇಳುವ ತುಂಬಾ ಸುಲಭದ ಮತ್ತು ಆರಾಮಾಗಿ ಉತ್ತರಿಸಬಹುದಾದ ಪ್ರಶ್ನೆಗಳಲ್ಲೊಂದು. ಒಂದು ಹಂತಕ್ಕೆ ನಿಮ್ಮ ಇಂಟರ್ ವ್ಯೂ ಇಲ್ಲಿಗೆ ಮುಗಿಯುತ್ತಾ ಬರುತ್ತಿದೆ ಅಂತ ತಿಳಿಸುವ ಪ್ರಶ್ನೆ ಎಂದೇ ಹೇಳಬಹುದು. ಯಾವುದೇ ಕಾರಣಕ್ಕೂ ಋಣಾತ್ಮಕ ಉತ್ತರಗಳನ್ನು ಈ ಪ್ರಶ್ನೆಗೆ ನೀಡಬೇಡಿ..ಬದಲಾಗಿ ನಿಮ್ಮ ಇಂಟರ್ ವ್ಯೂ ಕೇಳದೆ ಇರುವ ಮತ್ತು ನೀವು ಹೋಗಿರುವ ಕಂಪೆನಿಯ ಬಗ್ಗೆ ನಿಮಗೆ ತಿಳಿದುಕೊಳ್ಳಲೇಬೇಕಿರುವ ಯಾವುದಾದ್ರೂ ಪ್ರಶ್ನೆಗಳು ಉಳಿದಿದ್ದಲ್ಲಿ ಅದನ್ನು ಕೇಳಿ ತಿಳಿದುಕೊಳ್ಳಿ. ಉದಾಹರಣೆಗೆ ನಿಮಗೆ ಯಾವ ರೀತಿಯ ಟ್ರೈನಿಂಗ್ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಅಥ್ವಾ ಇಂಟರ್ ವ್ಯೂ ನ ಮುಂದಿನ ಹಂತಗಳೇನು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಪ್ರಶ್ನೆಗೆ ನೀವು ಉತ್ತಮ ಉತ್ತರ ನೀಡಿದಲ್ಲಿ ಖಂಡಿತವಾಗಿಯೂ ಸಂದರ್ಶನದ ಕೋಣೆಯಿಂದ ಧನಾತ್ಮಕವಾಗಿ ಹೊರಬರಲು ಸಾಧ್ಯವಿದೆ.

ಈ ಪ್ರಶ್ನೆಗಳಿಗೆ ಉತ್ತರಿಸಲು ನೀವು ರೆಡಿಯಾಗಿದ್ದರೆ ಖಂಡಿತ ಕೆಲಸ ಸಿಗುವುದು ಪಕ್ಕಾ. ಎನಿ ವೇ ಕೆಲಸಕ್ಕೆ ಅರ್ಜಿ ಹಾಕಿರುವವರಿಗೆ ಆಲ್ ದಿ ವೆರಿ ಬೆಸ್ಟ್..ಈ ಲೇಖನ ನಿಮ್ಮ ಸಹಾಯಕ್ಕಿರಲಿ..

 

For Quick Alerts
ALLOW NOTIFICATIONS  
For Daily Alerts

English summary
With more and more people applying for one position, the competition in the job market is increasing with each passing day. Hence the need for getting the job becomes all the way more prominent for each of the candidates. However, if we look at it from an outsider's perspective, we will see that there are only a few common questions that are asked in a myriad of ways in order to test you and gain more insight about your perspective on life. By knowing how to answer these questions you are in fact securing your way to an illustrious career ahead.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X