ಸಂದರ್ಶನದಲ್ಲಿ ಕೇಳಲಾಗಿರುವ 5 ಕಾಮನ್ ಪ್ರಶ್ನೆಗಳು!

ನೀವು ಉದ್ಯೋಗಕಾಂಕ್ಷಿಯಾಗಿದ್ದೀರಾ...? ಸದ್ಯದಲ್ಲೇ ಸಂದರ್ಶನದಲ್ಲಿ ಭಾಗವಹಿಸಲಿದ್ದೀರಾ...? ಹಾಗಿದ್ರೆ ನೀವು ಸಂದರ್ಶನಕ್ಕೆ ಹೇಗೆ ತಯಾರಾಗಬೇಕು ಎಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ಸಂದರ್ಶನದಲ್ಲಿ ಕೇಳುವ 5 ಕಾಮನ್ ಪ್ರಶ್ನೆಗಳ ಲಿಸ್ಟ್ ಇಲ್ಲಿ ನೀಡಲಾಗಿದೆ ಅಷ್ಟೇ ಅಲ್ಲ ಆ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ಕೂಡಾ ನಿಮಗೆ ಇಲ್ಲಿ ಸಲಹೆ ನೀಡಲಾಗಿದೆ.

ಸಂದರ್ಶನದಲ್ಲಿ ಕೇಳಲಾಗಿರುವ 5 ಕಾಮನ್ ಪ್ರಶ್ನೆಗಳು!

 

ಫ್ರೆಶರ್ಸ್ ಈ ರೀತಿ ರೆಸ್ಯೂಮ್ ತಯಾರು ಮಾಡಿಕೊಂಡ್ರೆ ಕೆಲಸ ಗ್ಯಾರಂಟಿ!

ನಿಮ್ಮ ಬಗ್ಗೆ ಏನಾದ್ರೂ ಹೇಳಿ:

ಇದು ಸಂದರ್ಶನದಲ್ಲಿ ಕೇಳುವ ಮೊದಲ ಪ್ರಶ್ನೆ. ಹಾಗಾಗಿ ಈ ಪ್ರಶ್ನೆಗೆ ನೀವು ಮೊದಲೇ ತಯಾರಾಗಿರಬೇಕು. ಈ ಪ್ರಶ್ನೆ ನಿಮ್ಮನ್ನೇ ಸಂಬಂಧಿಸಿರುವುದರಿಂದ ಇದಕ್ಕೆ ನೀವೇ ಉತ್ತರ ಕೊಡಬೇಕು ವಿನ್ಹಾ ಬೇರೆ ಸೊರ್ಸ್ ನಿಂದ ಸಿಗುವುದಿಲ್ಲ. ಹಾಗಾಗಿ ನಿಮ್ಮ ಬಗ್ಗೆ ಚೆನ್ನಾಗಿ ತಿಳಿಸಿ. ನಿಮ್ಮ ಬಗ್ಗೆ ವಿವರಿಸುವಾಗ ಅದು ಮಾಹಿತಿ ತುಂಬಾ ಹೆಚ್ಚಿರಬಾರದು ಹಾಗೆಯೇ ತುಂಬಾ ಚಿಕ್ಕದಾಗಿಯೂ ಇರಬಾರದು.

ಈ ಜಾಬ್ ನಿಮಗೆ ಯಾಕೆ ಬೇಕು:

ಈ ಪ್ರಶ್ನೆ ಕೇಳಿದಾದ ಇದಕ್ಕೆ ಉತ್ತರಿಸುವಾಗ ಹುದ್ದೆ ಬಗ್ಗೆ ನಿಮಗೆ ಇರುವ ಇಂಟ್ರೆಸ್ಟ್ ನೀವು ತೋರಿಸಲು ಮರೆಯದಿರಿ. ಇದು ನಿಮ್ಮ ಇಂಟ್ರೆಸ್ಟ್ ತೋರಿಸಲು ಸಿಕ್ಕಿರುವ ಬೆಸ್ಟ್ ಅವಕಾಶ ಎಂದು ತಿಳಿದುಕೊಳ್ಳಿ. ಸಂದರ್ಶನ ಹೋಗುವ ಮೊದಲು ಆ ಸಂಸ್ಥೆಯ ಬಗ್ಗೆ ತಿಳಿದುಕೊಂಡು ಹೋಗಿ ಇದರಿಂದ ಈ ಪ್ರಶ್ನೆ ಕೇಳಿದಾಗ ಅದಕ್ಕೆ ನೀವು ಸರಿಯಾದ ಕಾರಣ ನೀಡಿ ಉತ್ತರಿಸಬಹುದು.

ನಿಮ್ಮ ಬಗ್ಗೆ ಏನಾದ್ರು ಹೇಳಿ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಇಂಪ್ರೇಸಿವ್ ಆಗಿ ಉತ್ತರಿಸುವುದು ಹೇಗೆ?

ನಿಮ್ಮ ಸ್ಟ್ರೆಂಥ್ ಹಾಗೂ ವೀಕ್‌ನೆಸ್ ಯಾವುದು?

ಸಂದರ್ಶನದಲ್ಲಿ ಈ ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಈ ಪ್ರಶ್ನೆಗೆ ನೀವು ಉತ್ತರಿಸುವ ಪರಿಯಿಂದ ಅವರು ತಿಳಿದುಕೊಳ್ಳುತ್ತಾರೆ ನಿಮಗೆ ಈ ಹುದ್ದೆ ಮಾಡಲು ಸಾಧ್ಯವಾ ಎಂದು. ಹಾಗಾಗಿ ಈ ಪ್ರಶ್ನೆಗೆ ಬೆಸ್ಟ್ ಆಗಿ ಉತ್ತರಿಸಿ. ನಿಮ್ಮ ಉತ್ತರವನ್ನ ಅವರು ಹುದ್ದೆಗೆ ಬೇಕಾಗಿರುವ ಅರ್ಹತೆ ಜತೆ ಟ್ಯಾಲಿ ಮಾಡಿ ನೋಡುತ್ತಾರೆ.

 

ನಿಮ್ಮನ್ನ ನಾವು ಯಾಕೆ ಆಯ್ಕೆ ಮಾಡಿಕೊಳ್ಳಬೇಕು:

ನೀವು ಯಾವ ಟೈಪ್ ಉದ್ಯೋಗಸ್ಥ...ಇಲ್ಲಿರುವ ಯಾವ ಕೆಟಗರಿಯಲ್ಲಿ ನೀವಿದ್ದೀರಾ ಚೆಕ್ ಮಾಡಿಕೊಳ್ಳಿ?

ಈ ಪ್ರಶ್ನೆ ಕೂಡಾ ನಿಮ್ಮ ಬಗ್ಗೆಯದ್ದೇ ಆಗಿರುತ್ತದೆ. ಈ ಪ್ರಶ್ನೆಯನ್ನ ಸಂದರ್ಶನಕಾರರು ಕೇಳಿದಾಗ, ಅವರಿಗೆ ನಿಮ್ಮ ಈ ಹಿಂದಿನ ಕೆಲಸ ಅನುಭವ, ಹಳೆಯ ಕಂಪನಿಯಲ್ಲಿ ನೀವು ಮಾಡಿರುವ ಕೆರಿಯರ್ ಸಾಧನೆ ಹಾಗೂ ನಿಮ್ಮಲ್ಲಿನ ಐಡಿಯಾಗಳ ಬಗ್ಗೆ ಸಂದರ್ಶನಕಾರರ ಜತೆ ಶೇರ್ ಮಾಡಿಕೊಳ್ಳಿ. ಟೀಮ್ ಬಿಲ್ಡಿಂಗ್, ಕಮ್ಯುನಿಕೇಶನ್, ಇಂಟರ್ ಪರ್ಸನಲ್ ಸೇರಿದಂತೆ ಹಲವಾರು ವಿಷಯದ ಕುರಿತು ನಿಮ್ಮ ಐಡಿಯಾಗಳನ್ನ ಶೇರ್ ಮಾಡಿಕೊಳ್ಳಿ

ಈ ಕಂಪನಿಗೆ ನೀವು ಹೇಗೆ ಸಹಾಯ ಮಾಡಬಹುದು:

ಜಾಬ್ ಗೆ ಅರ್ಜಿ ಸಲ್ಲಿಸುವ ಮುನ್ನ ಅ ಕಂಪನಿಯ ಟಾರ್ಗೆಟ್, ವಿಷನ್ ಬಗ್ಗೆ ಮೊದಲೇ ತಿಳಿದುಕೊಂಡು ಹೋಗುವುದು ಉತ್ತಮ. ಇದೊಂದು ತುಂಬಾ ಪ್ರಮುಖವಾದ ಪ್ರಶ್ನೆಯಾಗಿದೆ. ಪ್ರತಿಯೊಬ್ಬ ಸಂದರ್ಶನಕಾರನು ಅಭ್ಯರ್ಥಿಯಿಂದ ಈ ಪ್ರಶ್ನೆಗೆ ಉತ್ತರ ಕೇಳ ಬಯಸುತ್ತಾನೆ. ಹಾಗಾಗಿ ನೀವು ಕಂಪನಿ ಅಭಿವೃದ್ದಿಗೆ ಬೇಕಾಗಿರುವ ನಿಮ್ಮಲ್ಲಿನ ಸ್ಕಿಲ್ ಬಗ್ಗೆ ವಿವರಿಸಿ.

ನಿಮ್ಮನ್ನ ನೀವು ಡೆವಲಪ್ ಮಾಡಿಕೊಂಡು ಪ್ರಮೋಶನ್ ಪಡೆಯುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

English summary
Are you a job seeker and have decided to ace the upcoming job interview? Then, you have to prepare responses for some common interview questions which are typically asked in every interview. Many job seekers stumble at some particular time during an interview while facing these questions. Here are the top common interview questions with the best explanation.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X