ಪಾರ್ಟ್ ಟೈಂ / ಫುಲ್ ಟೈಂ ಜಾಬ್ ಪಡೆಯಲು ಇಲ್ಲಿದೆ ಟಾಪ್ ಆನ್‌ಲೈನ್ ಕೋರ್ಸ್‌ಗಳ ಮಾಹಿತಿ

ಕರಿಯರ್ ಇಂಡಿಯಾ ನಿಮಗಾಗಿ ಪಾರ್ಟ್ ಟೈಂ / ಫುಲ್ ಟೈಂ ಜಾಬ್ ಪಡೆಯೋಕೆ ಕೆಲವು ಟಾಪ್‌ ಆನ್‌ಲೈನ್ ಕೋರ್ಸ್‌ಗಳ ಮಾಹಿತಿಯನ್ನು ನೀಡುತ್ತಿದೆ. ಸಾಮಾನ್ಯವಾಗಿ ಆನ್‌ಲೈನ್ ಕೋರ್ಸ್‌ಗಳ ಕಲಿಕೆ ಸರಳ ಮತ್ತು ಸುಲಭ ಹಾಗೆ ಸಮಯ ಉಳಿತಾಯ ಮಾಡುವ ವಿಚಾರದಲ್ಲೂ ಕೂಡ ಆನ್‌ಲೈನ್ ಕಲಿಕೆ ಪೂರಕವಾಗಿದೆ. ಹೀಗೆ ಆನ್‌ಲೈನ್‌ನಲ್ಲಿ ಕೋರ್ಸ್‌ಗಳನ್ನು ಮಾಡಿ ಉದ್ಯೋಗ ಪಡೆದ ಉದಾಹರಣೆಗಳು ಸಾಕಷ್ಟಿವೆ.

 
 ಉದ್ಯೋಗ ಸಿಗಲು ಇರುವ ಸುಲಭ ಆನ್‌ಲೈನ್ ಕೋರ್ಸ್‌ಗಳು

ಹಾಗಾಗಿ ನಾವಿಂದು ಯಾವೆಲ್ಲಾ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿ ಉದ್ಯೋಗವನ್ನು ಪಡೆಯಬಹುದು ಎಂದು ತಿಳಿಸುತ್ತಿದ್ದೇವೆ. ನೀವು ಇರುವ ಸ್ಥಳದಿಂದಲೇ ಈ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಲು ಅರ್ಹರು ಮತ್ತು ಈ ಕೋರ್ಸ್‌ಗಳನ್ನು ಉಚಿತವಾಗಿಯೂ ಕೂಡ ಮಾಡಬಹುದು. ಹಾಗಿದ್ರೆ ಯಾವೆಲ್ಲಾ ಕೋರ್ಸ್‌ಗಳನ್ನು ಮಾಡಬಹುದು ಅಂತೀರಾ! ಮುಂದೆ ಓದಿ.

ಗ್ರಾಫಿಕ್ ಡಿಸೈನಿಂಗ್:

ಗ್ರಾಫಿಕ್ ಡಿಸೈನಿಂಗ್:

ಗ್ರಾಫಿಕ್ ಡಿಸೈನಿಂಗ್ ಒಂದು ಕ್ರಿಯಾಶೀಲ ಕಲಿಕೆ ಇಲ್ಲಿ ನಿಮ್ಮ ಕ್ರಿಯೇಟಿವಿಟಿ ಅಗತ್ಯ. ಈ ಕೋರ್ಸ್‌ನಲ್ಲಿ ವೆಬ್‌ಸೈಟ್‌ಗಳಿಗೆ ಕಂಟೆಂಟ್/ ಆಪ್, ಲೋಗೋ ಡಿಸೈನಿಂಗ್, ಇಮೇಜ್ ಎಡಿಟಿಂಗ್ ಹೀಗೆ ಹಲವಾರು ವಿಷಯಗಳನ್ನು ಕಲಿಯುತ್ತೀರಿ.

ಇಂದಿನ ದಿನಗಳಲ್ಲಿ ಮೊಬೈಲ್ ಆಪ್, ಸೋಶಿಯಲ್ ಮೀಡಿಯಾ ಮತ್ತು ಇ-ಕಾಮರ್ಸ್‌ ಸೈಟ್‌ಗಳ ಬಳಕೆ ಹೆಚ್ಚಿರುವುದರಿಂದ ಈ ಗ್ರಾಫಿಕ್ ಡಿಸೈನಿಂಗ್ ಕಲಿಕೆ ತುಂಬಾನೆ ಪ್ರಯೋಜನವಾಗಲಿದೆ .

ನೀವು ಈ ಕೋರ್ಸ್‌ ಮಾಡಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಬಹುದು ಅಥವಾ ಫುಲ್ ಟೈಂ ಜಾಬ್ ಕೂಡ ಪಡೆಯಬಹುದು. ಜೊತೆಗೆ ಕೈ ತುಂಬಾ ಸಂಪಾದನೆಯನ್ನು ಕೂಡ ಮಾಡಬಹುದು.

 ಎಸ್‌ಇಓ ಕೋರ್ಸ್‌:
 

ಎಸ್‌ಇಓ ಕೋರ್ಸ್‌:

ಎಸ್‌ಇಓ ಅಂದರೆ ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಎಂದರ್ಥ. ಅಂದರೆ ವೆಬ್‌ಸೈಟ್‌ಗಳಲ್ಲಿ ನಾವು ಕೇಳುವ ಪ್ರಶ್ನೆಗಳಿಗೆ ಸರಿಯಾದ ರಿಸಲ್ಟ್ ನೀಡುವ ತಂತ್ರಾಂಶದಲ್ಲಿ ಈ ಎಸ್‌ಇಓ ಕೆಲಸ ನಿರ್ವಹಿಸುತ್ತದೆ. ಅನೇಕ ಕಂಪೆನಿಗಳು ಎಸ್‌ಇಓ ಎಕ್ಸ್‌ಪರ್ಟ್‌ಗಳನ್ನು ನೇಮಕ ಮಾಡಿಕೊಂಡಿರುತ್ತಾರೆ ಕಾರಣ ಕಂಪೆನಿಯ ಸಂಬಂಧಿತ ಮಾಹಿತಿಯನ್ನು ಅಪ್‌ಡೇಟ್ ಮಾಡಲು. ಹಾಗಾಗಿ ಎಸ್‌ಇಓ ಗಳಿಗೆ ಭಾರೀ ಬೇಡಿಕೆ ಇದ್ದು ನೀವು ಈ ಕೋರ್ಸ್‌ ಅನ್ನು ಮಾಡಬಹುದು. ಆದರೆ ಈ ಕೋರ್ಸ್‌ ಅನ್ನು ಟೆಕ್ನಿಕಲ್ ಸ್ಕಿಲ್ಸ್ ಹೊಂದಿರುವವರು ಮಾಡಿದರೆ ಒಳಿತು.

ಎಸ್‌ಇಓ ಕೋರ್ಸ್‌ ಮಾಡಿದ ಅಭ್ಯರ್ಥಿಗಳು ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು ಅಥವಾ ಫ್ರೀಲ್ಯಾನ್ಸರ್ ಆಗಿ ಕೂಡ ಮಾಡಬಹುದು. ಇನ್ನು ತಮ್ಮದೇ ಸ್ವಂತ ವೆಬ್‌ಸೈಟ್ ಮಾಡಿಕೊಂಡು ಅಲ್ಲಿ ಕೂಡ ನಿಮ್ಮ ಸರ್ವೀಸ್ ಬಗೆಗೆ ಪ್ರಮೋಟ್ ಮಾಡಿಕೊಳ್ಳಬಹುದು. ಈ ಕೋರ್ಸ್‌ ಮಾಡುವುದು ಅಷ್ಟು ಸುಲಭದ ಮಾತಲ್ಲ ಏಕೆಂದರೆ ಎಸ್‌ಇಓ ಟ್ರೈನಿಂಗ್‌ನಲ್ಲಿ ಇ ಬುಕ್ , ಪಿಡಿಎಫ್‌ ಫೈಲ್ಸ್ ,ಟ್ಯೂಟೋರಿಯಲ್ಸ್, ವೀಡಿಯೋ ಟ್ಯುಟೋರಿಯಲ್ಸ್‌ಗಳ ಬಗೆಗೆ ಹೆಚ್ಚಿನ ಕಲಿಕೆ ಇರುತ್ತದೆ. ಹಾಗಾಗಿ ಯಾರು ಈ ಬಗೆಗೆ ಹೆಚ್ಚು ಜ್ಞಾನವನ್ನು ಹೊಂದಿರುತ್ತಾರೋ ಅವರಿಗೆ ಈ ಕಲಿಕೆ ಸುಲಭವಾಗುವುದು.

ಬ್ಲಾಗಿಂಗ್ ಕೋರ್ಸ್‌:

ಬ್ಲಾಗಿಂಗ್ ಕೋರ್ಸ್‌:

ಬ್ಲಾಗಿಂಗ್‌ ಕೋರ್ಸ್‌ಗಳನ್ನು ಹೇಳಿ ಕೊಡಲು ಅನೇಕ ಕೋಚಿಂಗ್‌ಗಳಿವೆ. ಆದರೆ ಅನೇಕರು ಶುಲ್ಕವನ್ನು ಕೇಳುತ್ತಾರೆ ಅದರೆ ಯಾವುದೇ ಶುಲ್ಕವಿಲ್ಲದೆ ಕೂಡ ನೀವು ಬ್ಲಾಗಿಂಗ್ ಕೋರ್ಸ್‌ ಅನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಎಲ್ಲಿಂದ ಬೇಕಾದರೂ ಮಾಡಬಹುದು.

ಕೋರ್ಸ್‌ ಮಾಡಿದ ಬಲಿಕ ಫ್ರಿಲ್ಯಾನ್ಸರ್ ಆಗಿ ಕೂಡ ಕೆಲಸ ಮಾಡಬಹುದು ಅಥವಾ ನೀವು ನಿಮ್ಮದೇ ಒಂದು ಬ್ಲಾಗ್ ಕ್ರಿಯೇಟ್ ಮಾಡಿ ಅಲ್ಲಿ ನೀವು ಮಾರಾಟ ಮಾಡಬಹುದು.

ಲಾಂಗ್ವೇಜ್ ರಿಲೇಟೆಡ್ ಕೋರ್ಸ್‌:

ಲಾಂಗ್ವೇಜ್ ರಿಲೇಟೆಡ್ ಕೋರ್ಸ್‌:

ನಿಮಗೆ ಹಲವಾರು ಭಾಷೆಗಳು ಬರೆಯೋದಕ್ಕೆ ಅಥವಾ ಮಾತಾಡೋದಕ್ಕೆ ಬರತ್ತೆ ಅಂತಾದ್ರೆ ಖಂಡಿತವಾಗಿಯೂ ಉತ್ತಮ ಕೆಲಸಗಳನ್ನು ಪಡೆಯಬಹುದು. ಆನ್‌ಲೈನ್‌ ನಲ್ಲಿ ವಿವಿಧ ಬಾಷೆಗಳನ್ನು ಕಲಿಸಲು ಕೋಚಿಂಗ್‌ ವೆಬ್‌ಸೈಟ್‌ಗಳಿವೆ. ಕೆಲವರು ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ವೆಬ್‌ಸೈಟ್‌ಗಳಲ್ಲಿ ಶುಲ್ಕವಿಲ್ಲದೆ ಕೂಡ ಕೋಚಿಂಗ್‌ ಅನ್ನು ಪಡೆಯಬಹುದು.

ಬೇರೆ ಭಾಷೆಗಳನ್ನು ಕಲಿತಾಗ ನೀವು ಪ್ರವಾಸ ಹೋದಾಗ ಸಂವಹನ ಮಾಡಲು ಸಹಾಯವಾಗುತ್ತದೆ. ನೀವು ಈ ಕೋರ್ಸ್‌ ಮಾಡಿದ ಬಳಿಕ ಕಂಪೆನಿಗಳಲ್ಲಿ ಟ್ರಾನ್ಸ್‌ಲೇಟರ್ ಆಗಿ ಕೂಡ ಕೆಲಸ ಪಡೆಯಬಹುದು. ಫ್ರೀಲ್ಯಾನ್ಸರ್ ಆಗಿ ಕೂಡ ಟ್ರಾನ್ಸ್‌ಲೇಷನ್‌ಗಳನ್ನು ಮಾಡಬಹುದು ಹಾಗೆ ಕಂಟೆಂಟ್ ಬರಹಗಾರರಾಗಿ ಕೂಡ ಕೆಲಸ ಮಾಡಬಹುದು. ಲಾಂಗ್ವೇಜ್ ಕಲಿಕೆ ನಿಮಗೆ ಪಾರ್ಟ್‌ ಟೈಂ ಮತ್ತು ಫುಲ್ ಟೈಂ ಜಾಬ್ ಕೂಡ ಒದಗಿಸುತ್ತದೆ.

 

 ಆಪ್ ಮೇಕಿಂಗ್ / ಡಿಸೈನಿಂಗ್ ಕೋರ್ಸ್ :

ಆಪ್ ಮೇಕಿಂಗ್ / ಡಿಸೈನಿಂಗ್ ಕೋರ್ಸ್ :

ಆಪ್‌ ಮೇಕಿಂಗ್ / ಡಿಸೈನಿಂಗ್ ಕೋರ್ಸ್‌ ಆನ್‌ಲೈನ್‌ ನಲ್ಲಿ ಲಭ್ಯವಿದೆ. ಈ ಕೋರ್ಸ್‌ ಅನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ ಆದರೆ ಯಾರಿಗೆ ಈ ಬಗೆಗೆ ಹೆಚ್ಚು ಜ್ಞಾನವಿದೆಯೋ ಹಾಗೆ ಕ್ರಿಯೇಟಿವ್ ಆಲೋಚನೆಗಳಿವೆಯೋ ಅಂತವರು ಖಂಡಿತವಾಗಿಯೂ ಈ ಕೋರ್ಸ್‌ ಮಾಡಬಹುದು.

ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚು ಹಾಗೆ ತಂತ್ರಜ್ಞಾನದ ಬೆಳವಣಿಗೆ ಕೂಡ ಅತಿ ವೇಗವಾಗಿ ಚಲಿಸುತ್ತಿದೆ. ಹಾಗಾಗಿ ಯಾರಿಗೆ ಆಪ್‌ ಮೇಕಿಂಗ್‌ ಬಗೆಗೆ ಆಸಕ್ತಿ ಇದೆಯೋ ಅವರು ಈ ಕೋರ್ಸ್‌ ಮಾಡಿ ಪಾರ್ಟ್‌ ಟೈಂ ಅಥವಾ ಫುಲ್ ಟೈಂ ಜಾಬ್ ಪಡೆಯಬಹುದು.

 

ಡಿಜಿಟಲ್ ಮಾರ್ಕೆಟಿಂಗ್ (ಆನ್‌ಲೈನ್ ಕೋರ್ಸ್‌ಗಳು) ಕೋರ್ಸ್ :

ಡಿಜಿಟಲ್ ಮಾರ್ಕೆಟಿಂಗ್ (ಆನ್‌ಲೈನ್ ಕೋರ್ಸ್‌ಗಳು) ಕೋರ್ಸ್ :

ಡಿಜಿಟಲ್ ಕ್ಷೇತ್ರ ಹಣಗಳಿಕೆ ಹಾಗೂ ಬುದ್ದಿ ಬಳಸುವಿಕೆಗೆ ಪ್ಲಾಟ್‌ಫಾರ್ಮ್‌ ಅಂತಾನೆ ಹೇಳಬಹುದು. ಏಕೆಂದರೆ ಡಿಜಿಟಲ್‌ ಮಾರ್ಕೆಟಿಂಗ್ ಅಡಿಯಲ್ಲಿ ಎಸ್‌ಇಓ, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಅನಾಲಿಟಿಕ್ಸ್ ಹೀಗೆ ಮುಂತಾದ ವಿಚಾರಗಳನ್ನು ಕಲಿಯಬಹುದು. ಹಾಗಾಗಿ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯವನ್ನು ಕಲಿಯಬಹುದು.

ಅನೇಕ ಸಂಸ್ಥೆಗಳಲ್ಲಿ ಈ ಆನ್‌ಲೈನ್‌ ಕೋರ್ಸ್‌ಗಳು ಲಭ್ಯವಿವೆ. ನೀವು ಉಚಿತವಾಗಿಯೇ ಈ ಕೋರ್ಸ್‌ಗಳನ್ನು ಮಾಡಬಹುದು. ಆನ್‌ಲೈನ್‌ ಕಲಿಕೆಯ ಜೊತೆ ಜೊತೆಗೆ ಪ್ರಾಕ್ಟಿಕಲ್ ಅಧ್ಯಯನ ಕೂಡ ಸುಲಭವಾಗಿ ಮಾಡಬಹುದು.ಕೋರ್ಸ್‌ ಮಾಡಿದ ಬಳಿಕ ಪ್ರೊಫೆಷನಲ್ ಆಗಿ ಕೂಡ ಕೆಲಸ ಮಾಡಬಹುದು.

 

 

ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಕೋರ್ಸ್ :

ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಕೋರ್ಸ್ :

ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಕಲಿಕೆಯು ಡಿಜಿಟಲ್ ಮೀಡಿಯಾ ಮಾರ್ಕೆಟಿಂಗ್‌ ಕಲಿಕೆಯ ಅಡಿಯಲ್ಲಿ ಬರುತ್ತದೆ. ಇಲ್ಲಿ ನೀವು ಸೋಶಿಯಲ್ ಮೀಡಿಯಾಗಳನ್ನು ಯಾವ ಬಳಸಬಹುದು ಎನ್ನುವುದನ್ನು ತಿಳಿಯುತ್ತೀರಿ. ಸೋಶಿಯಲ್ ಮೀಡಿಯಾಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವುದು ಮತ್ತು ಬ್ಯುಸಿನೆಸ್ ಅನ್ನು ಪ್ರಸಾರ ಮಾಡುವುದು ಇದರಿಂದ ನಿಮ್ಮ ಬ್ರಾಂಡ್ ಅನ್ನು ಜನರಿಗೆ ಹೇಗೆ ಪರಿಚಯಿಸುವುದು ಎನ್ನುವುದನ್ನು ಕಲಿಯುತ್ತೀರಿ. ಯಾರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೋ ಅಂತವರು ಬಹು ಬೇಗ ಈ ವಿಚಾರಗಳನ್ನು ಕಲಿಯಬಹುದು. ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಕಲಿತ ಅಭ್ಯರ್ಥಿಗಳಿಗೆ ವಿಫುಲ ಉದ್ಯೋಗಾವಕಾಶಗಳಿವೆ.

 

ಪ್ರೊಗ್ರಾಮಿಂಗ್ ಕೋರ್ಸ್ :

ಪ್ರೊಗ್ರಾಮಿಂಗ್ ಕೋರ್ಸ್ :

ವೆಬ್‌ಸೈಟ್ ಸ್ಥಾಪಿಸುವಲ್ಲಿ ಪ್ರೋಗ್ರಾಮಿಂಗ್ ಒಂದು ಪ್ರಮುಖ ಭಾಗವಾಗಿದೆ. ಪ್ರೊಗ್ರಾಮಿಂಗ್‌ನಲ್ಲಿ ವಿವಿಧ ಭಾಷೆಗಳಿವೆ ಈ ಬಗೆಗೆ ನಿಮಗೆ ಆಸಕ್ತಿ ಇದ್ದಲ್ಲಿ ನೀವು ಆನ್‌ಲೈನ್‌ ಕೋರ್ಸ್‌ ಅನ್ನು ಮಾಡಬಹುದು. ಉಚಿತವಾಗಿ ಈ ಕೋರ್ಸ್‌ಗಳನ್ನು ನೀವು ಮಾಡಬಹುದು. ಈ ವಿಷಯಗಳಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಿದಲ್ಲಿ ಶುಲ್ಕವನ್ನು ನೀಡಿ ಉನ್ನತ ಅಧ್ಯಯನವನ್ನು ಕೂಡ ಮಾಡಬಹುದು.

ಈ ಕೋರ್ಸ್‌ ಮಾಡಿ ಪರಿಣಿತಿಯನ್ನು ಹೊಂದಿದ ನಂತರ ಸಾಫ್ಟ್‌ವೇರ್ ಡೆವಲಪ್ ಮಾಡಬಹುದು, ಸೈಟ್‌ಗಳನ್ನು ಡಿಸೈನ್ ಮಾಡಬಹುದು ಹೀಗೆ ಇತ್ಯಾದಿ ಕೆಲಸಗಳಲ್ಲಿ ತೊಡಗಿ ಅನುಭವ ಪಡೆದು ನಂತರ ಉತ್ತಮ ಉದ್ಯೋಗವನ್ನು ಪಡೆಯಬಹುದು.

 

ಎಂಎಸ್‌ ಆಫೀಸ್ ಕೋರ್ಸ್ :

ಎಂಎಸ್‌ ಆಫೀಸ್ ಕೋರ್ಸ್ :

ಎಂಎಸ್ ಆಫೀಸ್ ತರಬೇತಿಯು ಒಂದು ಬೇಸಿಕ್ ಕಲಿಕೆಯಾಗಿರುತ್ತದೆ. ಮಾಡಬಹುದು. ಆನ್‌ಲೈನ್‌ನಲ್ಲಿ ಉಚಿತವಾಗಿ ಈ ಕೋರ್ಸ್‌ ಅನ್ನು ಮಾಡಬಹುದು. ಇಲ್ಲಿ ಪ್ರೊಸೆಸಿಂಗ್, ಎಕ್ಸೆಲ್, ಆಕ್ಸೆಸ್, ಪವರ್ ಪಾಯಿಂಗ್ ಮತ್ತು ಇತ್ಯಾದಿ ವಿಷಯಗಳನ್ನು ನೀವು ಕಲಿಯುತ್ತೀರಿ.

ಈ ಕೋರ್ಸ್‌ ಮಾಡಿದ ಬಳಿಕ ನೀವು ಒಂದು ಉದ್ಯೋಗಕ್ಕೆ ಸೇರ ಬಹುದು ಅಥವಾ ಮನೆಯಲ್ಲೇ ಕುಳಿತು ಡಾಟಾ ಎಂಟ್ರಿ ಹೀಗೆ ಹಲವಾರು ಕೆಲಸಗಳನ್ನು ಮಾಡಬಹುದು.

 

ಕಂಟೆಂಟ್ ಬರಹಗಾರ ಕೋರ್ಸ್ :

ಕಂಟೆಂಟ್ ಬರಹಗಾರ ಕೋರ್ಸ್ :

ನೀವು ಬರವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಆನ್‌ಲೈನ್ ಕಂಟೆಂಟ್ ಬರಹಗಾರರಾಗಿ ಕೆಲಸ ಮಾಡಬಹುದು. ನೀವು ಕಂಟೆಂಟ್‌ ಬರಹಗಾರರಾಗಲು ಅನೇಕ ಆನ್‌ಲೈನ್ ಕೋರ್ಸ್‌ಗಳಿವೆ ಅಲ್ಲಿ ನಿಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಕೋರ್ಸ್‌ ಮುಗಿದ ಬಳಿಕೆ ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡಬಹುದು. ಅಥವಾ ಯಾರ ಮೇಲೂ ಅವಲಂಭಿತರಾಗದೇ ನಿಮ್ಮ ದೇ ಆದ ವೆಬ್‌ಸೈಟ್‌ ಕ್ರಿಯೇಟ್ ಮಾಡಿ ನಿಮ್ಮ ಬರಹಗಳನ್ನು ಹಾಕಬಹುದು ಅಥವಾ ಬರೆವಣಿಗೆಯ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಬಹುದು.

 

 

 

For Quick Alerts
ALLOW NOTIFICATIONS  
For Daily Alerts

English summary
Here we listing the top online courses to get part time / full time jobs in india. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X