ಉತ್ತಮ ಭವಿಷ್ಯ ರೂಪಿಸುವ ಟಾಪ್ 6 ಉದ್ಯೋಗಗಳು

By Kavya

ಉತ್ತಮ ಉದ್ಯೋಗ ಪಡೆದು, ಸುಂದರ ಭವಿ‍ಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೀರಾ..? ಯಾವ ಕೋರ್ಸ್ ಮಾಡಿದರೆ ಉತ್ತಮ ಅವಕಾಶಗಳು ಸಿಗುತ್ತವೆ ಎನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ, ಭವಿಷ್ಯದ ಬಗ್ಗೆ ಕನಸನ್ನು ಹೊತ್ತವರಿಗಾಗಿಯೇ ಇಂದಿನ ಟ್ರೆಂಡಿ ಕೋರ್ಸ್ ಮತ್ತು ಉದ್ಯೋಗದ ಮಾಹಿತಿ ನಿಮಗಾಗಿ ಈ ಲೇಖನದಲ್ಲಿದೆ.

 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸುಲಭವಾಗಿ ಉದ್ಯೋಗ ಪಡೆಯುವುದು ಸುಲಭವಲ್ಲ. ಆದರೆ ಕೆಲವೊಂದು ಕೋರ್ಸ್ ಗಳು ಮತ್ತು ಕ್ಷೇತ್ರಗಳು ಸಾಕಷ್ಟು ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿವೆ.

ಉದ್ಯೋಗಾವಕಾಶ

ಉದ್ಯೋಗಾವಕಾಶ

ನಿಮ್ಮ ಸಾಮರ್ಥ್ಯಕ್ಕೆ ಮತ್ತು ವಿದ್ಯೆಗೆ ಅನುಗುಣವಾಗಿ ನೀವು ಭವಿ‍ಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ.

ಡೇಟಾ ಸೈಂಟಿಸ್ಟ್
 

ಡೇಟಾ ಸೈಂಟಿಸ್ಟ್

ಇಂದು ಡೇಟಾ ಸೈನ್ಸ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಡೇಟಾ ಸೈಂಟಿಸ್ಟ್ ಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚುತ್ತಿದೆ. ಇಂದು ಎಲ್ಲಾ ವ್ಯವಹಾರಗಳು ಇಂಟರ್ನೆಟ್ ಮೂಲಕ ಸಾಗುತ್ತಿರುವುದರಿಂದ ಡೇಟಾ ಸೈಂಟಿಸ್ಟ್ಗಳ ಅವಶ್ಯಕತೆಯು ಹೆಚ್ಚುತ್ತಿದೆ. ಡೇಟಾ ಸೈನ್ಸ್ ಕೋರ್ಸ್ ಕಲಿತವರನ್ನು ದೊಡ್ಡ ದೊಡ್ಡ ಕಂಪನಿಗಳು ಕೈಬೀಸಿ ಕರೆಯುತ್ತಿವೆ.

ಡೇಟಾ ಸೈನ್ಸ್ ಎಂದರೇನು?
ಡೇಟಾ ಸೈನ್ಸ್ ಎಂದರೆ ಕಂಪ್ಯೂಟರ್ ನಲ್ಲಿ ಡಿಜಿಟಲ್ ರೂಪದಲ್ಲಿ ಸಂಗ್ರಹವಾದ ಮಾಹಿತಿಯನ್ನು ನಿರ್ವಹಿಸುವ ಒಂದು ಕಾರ್ಯ. ಸಂಗ್ರಹವಾಗಿರುವ ಮಾಹಿತಿಗಳ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಇಲ್ಲಿ ಮಾಡಬೇಕಾಗುತ್ತದೆ. ಕಂಪ್ಯೂಟರ್ ಭಾಷೆ ಬಳಸಿ ಅಲ್ಗಾರಿಥಂ, ಪ್ರೋಗ್ರಾಂಗಳ ಮೂಲಕ ಮಾಹಿತಿಗಳನ್ನು ನಿರ್ವಹಿಸಲಾಗುತ್ತದೆ.
ಉದಾಹರಣೆಗೆ: ಗೂಗಲ್ ನಲ್ಲಿ ನೀವು ಯಾವುದಾದರು ಒಂದು ವಿಷಯದ ಬಗ್ಗೆ ಹುಡುಕಲು ಪ್ರಯತ್ನಿಸುತ್ತೀರಿ, ಕ್ಷಣಾರ್ಧದಲ್ಲಿ ಆ ವಿಚಾರಕ್ಕೆ ಸಂಬಂಧಿಸಿದ ಅಥವಾ ಅದೇ ವಿಷಯಗಳ ಅನೇಕ ವಿಚಾರಗಳು ನಿಮ್ಮ ಮುಂದೆ ಘೋಚರಿಸುತ್ತವೆ. ಇದೆಲ್ಲ ಹೇಗಾಯಿತು? ಈ ಮಾಹಿತಿಗಳು ಎಲ್ಲಿಂದ ಬಂದವು ಎಂದು ತಿಳಿಯುವುದೇ ಡಾಟಾ ಸೈನ್ಸ್.ಡೇಟಾ ಸೈನ್ಸ್ ಕೋರ್ಸ್ ಗೆ ಬೇಕಾದ ಅರ್ಹತೆ
ಡೇಟಾ ಸೈನ್ಸ್ ಕೋರ್ಸ್ ಕಲಿಯಲು ಕಂಪ್ಯೂಟರ್ ಬಗ್ಗೆ ಸ್ವಲ್ಪ ಜ್ಞಾನ ಮತ್ತು ಇಂಗ್ಲಿಷ್ ಭಾಷೆಯ ಪರಿಚಯವಿದ್ದರೆ ಸಾಕು. ನೀವು ಉತ್ತಮ ಡೇಟಾ ಸೈಂಟಿಸ್ಟ್ ಆಗಬೇಂಕೆಂದರೆ ಕಂಪ್ಯೂಟರ್ ಸಂಬಂಧಿತ ಭಾಷೆಗಳ (ಕಂಪ್ಯೂಟರ್ ಲ್ಯಾಂಗ್ವೇಜ್) ಅರಿವಿರಬೇಕು.ಡಾಟಾ ಸೈನ್ಸ್ ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತದೆ?
ಇಂದು ಜಗತ್ತಿನ ಬಹುತೇಕ ವ್ಯವಹಾರಗಳು ಇಂಟರ್ನೆಟ್ ಮೂಲಕ ನಡೆಯುತ್ತಿವೆ. ಬ್ಯಾಂಕಿಂಗ್, ಮೆಡಿಕಲ್, ಕ್ರೀಡೆ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಸೇವೆಗಳು, ಸಾರಿಗೆ ಇಲಾಖೆ, ಇ-ಕಾಮರ್ಸ್ ಮತ್ತು ಇಂಟರ್ನೆಟ್ ಬಳಸುವ ಎಲ್ಲಾ ಕ್ಷೇತ್ರಗಳು ಇದಕ್ಕೆ ಒಳಪಡುತ್ತವೆ. ಈ ಎಲ್ಲಾ ಉದ್ಯಮಗಳಿಗೂ ಆ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ, ಆಗುತ್ತಿವೆ ಎಂಬುದನ್ನು ಅರಿಯಲು ಮಾಹಿತಿಗಳಿಗಾಗಿ ಹುಡುಕುತ್ತಾರೆ. ಇದಕ್ಕೆಲ್ಲ ಪರಿಹಾರ ಡೇಟಾ ಸೈನ್ಸ್ ನಲ್ಲಿದೆ.
ಡೇಟಾ ಸೈನ್ಸ್ ಕಲಿತವರಿಗಾಗಿ ಇಂದು ಸಾಕಷ್ಟು ಉದ್ಯೋಗಾವಕಾಶಗಳಿವೆ. ಪ್ರತಿ ಕಂಪನಿಗಳು ಡೇಟಾ ಸೈಂಟಿಸ್ಟ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಆರಂಭ ಹಂತದಲ್ಲೆ ಉತ್ತಮ ಸಂಬಳವೂ ಸಿಗುತ್ತದೆ. ಕಡೆಮೆ ಎಂದರು ತಿಂಗಳಿಗೆ ಐವತ್ತರಿಂದ ಅರವತ್ತು ಸಾವಿರ ರೂಗಳನ್ನು ಡೇಟಾ ಸೈಂಟಿಸ್ಟ್ ಗಳು ಗಳಿಸುತ್ತಾರೆ.
ಸೋಷಿಯಲ್ ಮೀಡಿಯಾ ಮ್ಯಾನೇಜರ್‌

ಸೋಷಿಯಲ್ ಮೀಡಿಯಾ ಮ್ಯಾನೇಜರ್‌

ಇಂದು ಸೋಶಿಯಲ್ ಮೀಡಿಯಾ ಜನರನ್ನು ಸುಲಭವಾಗಿ ತಲುಪುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವು ಜನ ಜೀವನದ ಒಂದು ಭಾಗವೇ ಆಗಿದೆ. ಇಂದಿನ ಬಹುತೇಕ ಜನರು ಅತಿ ಹೆಚ್ಚು ಸಮಯವನ್ನು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿರುವುದನ್ನು ಅರಿತ ದೊಡ್ಡ ದೊಡ್ಡ ಉದ್ಯಮಗಳು ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ತಮ್ಮತ್ತ ಆಕರ್ಷಿಸುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡಲು ಸೋಷಿಯಲ್ ಮೀಡಿಯಾ ಮ್ಯಾನೇಜರ್‌ ಗಳ ಅವಶ್ಯಕತೆ ಹೆಚ್ಚಾಗುತ್ತಿದೆ.

ಗೂಗಲ್‌, ಯಾಹೂ, ಬಿಂಗ್‌ ಇತ್ಯಾದಿಗಳನ್ನು ಅವಲಂಬಿಸಿ ಆಪ್ಟಿಮೈಸ್‌ ಮಾಡುವ ಎಸ್‌ಇಒ ಒಂದು ಕಲೆ ಮತ್ತು ವಿಜ್ಞಾನ ಎರಡನ್ನೂ ಒಳಗೊಂಡ ಉದ್ಯೋಗವಾಗಿದೆ. ಅಂದರೆ ಕೋಡ್‌, ಇನ್‌ಫಾರ್ಮೇಶನ್‌ ಆರ್ಕಿಟೆಕ್ಚರ್‌ ಮತ್ತು ಯೂಸರ್‌ ಎಕ್ಸ್‌ಪೀರಿಯನ್ಸ್‌ ಮೊದಲಾದ ವಿಜ್ಞಾನ ಮತ್ತು ತಂತ್ರಜ್ಞಾನ ಆಧರಿತ ಮಾಹಿತಿ ಜೊತೆಗೆ ಉದ್ಯಮವೊಂದನ್ನು ಬೆಳೆಸುವುದು, ಗ್ರಾಹಕರ ನಡವಳಿಕೆಯನ್ನು ಗುರುತಿಸಿ ಮೌಲ್ಯಮಾಪನ ಮಾಡುವುದು ಇದರ ಪ್ರಮುಖ ಅಂಶವಾಗಿದೆ.

ಈ ಎಲ್ಲಾ ಕಾರಣಗಳಿಂದ ಸೋಷಿಯಲ್ ಮೀಡಿಯಾ ಮ್ಯಾನೇಜರ್‌ಗಳಿಗೆ ಅಪಾರ ಅವಕಾಶ ಒದಗಿ ಬಂದಿದೆ. ಆರಂಭಿಕ ಹಂತದಲ್ಲಿ ಭಾರತದಂತಹ ದೇಶಗಳಳ್ಲಿ ವಾರ್ಷಿಕ 1.8 ಲಕ್ಷದಿಂದ 4 ಲಕ್ಷ ರೂ. ವೇತನ ಪಡೆಯಬಹುದಾಗಿದ್ದು, ಮಹಿಳೆಯರಿಗೊಂತು ಈ ಕ್ಷೇತ್ರ ವರದಾನವಾಗಿದ್ದು, ಅಲ್ಪ ಶ್ರಮದಲ್ಲಿ ಹೆಚ್ಚು ಆದಾಯ ತರುವ ಉದ್ಯಮವಾಗಿದೆ.

 

ಫಂಡ್ ರೈಸರ್

ಫಂಡ್ ರೈಸರ್

ಶಿಕ್ಷಣ, ವೈದ್ಯಕೀಯ, ಎನ್ ಜಿ ಒ, ಉದ್ಯಮ,. ಹೀಗೆ ಯಾವುದೇ ಕ್ಷೇತ್ರವಾಗಲಿ ಅಲ್ಲಿ ಆದಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ತಮ್ಮ ಸಂಸ್ಥೆ ಬೆಳೆಯಲು ಎಲ್ಲಾ ಉದ್ಯಮಿಗಳು ಬಯಸುತ್ತಾರೆ. ಅದಕ್ಕಾಗಿ ಉದ್ಯಮಕ್ಕೆ ಹೆಚ್ಚು ಆದಾಯ ತಂದುಕೊಡಬಲ್ಲ ಮೂಲಗಳನ್ನು ಹುಡುಕಿ ಅದರಿಂದ ಲಾಭ ಮಾಡಿಕೊಳ್ಳಲು ಫಂಡ್ ರೈಸರ್ಗಳ ಅವಶ್ಯಕತೆ ಇದೆ.

ಫಂಡ್ ರೈಸರ್ ಕೆಲಸಕ್ಕೆ ಮುಖ್ಯವಾಗಿ ಬೇಕಾಗಿರುವುದು ಸಂವಹನ ಕಲೆ. ನೀವು ಯಾವುದೇ ಪದವಿ ಗಳಿಸಿದರು ಉತ್ತಮ ಮಾತುಗಾರರಾಗಿದ್ದರೆ, ಹಲವು ಭಾಷೆಗಳ ಮೇಲೆ ಹಿಡಿತವಿದ್ದರೆ. ನಿಮಗೆ ಈ ಕೆಲಸ ಸುಲಭ.

ಹೆಚ್ಚು ಕಮ್ಮಿ ಪಿಆರ್ ಕೆಲಸದಂತಿದ್ದರೂ, ಇದೂ ಸ್ವಲ್ಪ ವಿಭಿನ್ನ ಕೆಲಸ. ಒಂದು ಸಂಸ್ಥೆಯ ಉದ್ದೇಶ, ಹಿನ್ನೆಲೆ, ವ್ಯಾಪ್ತಿ ಎಲ್ಲವನ್ನು ತಿಳಿದುಕೊಂಡು ಅದಕ್ಕೆ ಬೇಕಾದ ಮಾರುಕಟ್ಟೆ ಕಲ್ಪಿಸಿ ಸಂಸ್ಥೆಗೆ ಆದಾಯ ಬರುವಂತೆ ಮಾಡುವುದೇ ಫಂಡ್ ರೈಸರ್ ಗಳ ಮುಖ್ಯ ಉದ್ದೇಶ. ಇಲ್ಲಿ ಮುಖ್ಯವಾಗಿ ಮಾತುಗಾರಿಕೆ ಹೆಚ್ಚಿನ ಪಾತ್ರವಹಿಸುತ್ತದೆ. ಗ್ರಾಹಕರನ್ನು, ಹೂಡಿಕೆದಾರರನ್ನು, ಉದ್ಯಮಿಗಳನ್ನು ಸೆಳೆಯಲು ನೀವು ಕಲಿತರೆ ಫಂಡ್ ರೈಸರ್ ಆಗಿ ಕೆಲಸ ಗಿಟ್ಟಿಸಬಹುದು.ಫಂಡ್ ರೈಸರ್ ಗಳಿಗೆ ಅವಕಾಶಗಳು ಹೆಚ್ಚಿದ್ದು, ಆರಂಭದಲ್ಲಿಯೇ ಉತ್ತಮ ಸಂಬಳ ಕೂಡ ನಿರೀಕ್ಷೆ ಮಾಡಬಹುದು.
ಸಾಫ್ಟ್‌ವೇರ್ ಇಂಜಿನಿಯರ್

ಸಾಫ್ಟ್‌ವೇರ್ ಇಂಜಿನಿಯರ್

ಡಿಜಿಟಲ್ ಕ್ಷೇತ್ರ ಬೆಳೆದಂತೆಲ್ಲ ಸಾಫ್ಟ್‌ವೇರ್ ಇಂಜಿನಿಯರ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂದು ಎಲ್ಲಾ ಕ್ಷೇತ್ರಗಳಿಗೂ ಸಾಫ್ಟ್‌ವೇರ್ ಇಂಜಿನಿಯರ್ ಗಳ ಅವಶ್ಯಕತೆ ಇದೆ. ಕಂಪ್ಯೂಟರ್ ಸೈನ್ಸ್ ಹಿನ್ನೆಲೆಯ ಇಂಜಿನಿಯರಿಂಗ್ ಅಭ್ಯರ್ಥಿಗಳು, ಪದವೀಧರರು, ಕಂಪ್ಯೂಟರ್ ಕೋಡಿಂಗ್ ಮತ್ತು ಲ್ಯಾಂಗ್ವೇಜ ಬಗ್ಗೆ ತಿಳಿದುಕೊಂಡರೆ ಉತ್ತಮ ಸಾಫ್ಟ್‌ವೇರ್ ಇಂಜಿನಿಯರ್ ಗಳಾಗಬಹುದು.

ದೇಶ ವಿದೇಶಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಗಳಿಗೆ ಬೇಡಿಕೆ ಹೆಚ್ಚಿದ್ದು, ಆರಂಭದಲ್ಲಿಯೇ ಲಕ್ಷಾಂತರ ರೂಗಳ ಸಂಬಳವೂ ಸಿಗುತ್ತದೆ.
ಮಾರ್ಕೆಟ್ ರೀಸರ್ಚ್ ಅನಾಲಿಸ್ಟ್

ಮಾರ್ಕೆಟ್ ರೀಸರ್ಚ್ ಅನಾಲಿಸ್ಟ್

ಯಾವುದೇ ಉದ್ಯಮವಿರಲಿ ಅದು ಯಾವ ಸ್ಥಿತಿಯಲ್ಲಿದೆ, ಅದರ ಪ್ರತಿಸ್ಪರ್ದಿಗಳಾರು ಎಂಬುದನ್ನು ಅರಿಯುವುದು ಬಹಳ ಮುಖ್ಯ. ಅದಕ್ಕಾಗಿ ಮಾರ್ಕೆಂಟಿಂಗ್ ಟೀಮ್ ಮುಖ್ಯವಾಗುತ್ತದೆ.

ಇಂದು ಮಾರ್ಕೆಂಟಿಂಗ್ ಗೆ ಹೆಚ್ಚಿನ ಅವಕಾಶವಿದ್ದು, ಮಾರ್ಕೆಟ್ ರೀಸರ್ಚ್ ಅನಾಲಿಸ್ಟ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.ಸಂಸ್ಥೆಯ ಮಾರುಕಟ್ಟೆ ವಿಸ್ತರಿಸಲು ವಿಶೇಷ ಯೋಜನೆಗಳನ್ನ ಸಿದ್ದಪಡಿಸುವ ಕ್ರಿಯಾತ್ಮಕ ಮಾರ್ಕೆಟ್ ರಿಸರ್ಚ್ ಅನಾಲಿಸ್ಟ್ ಗಳಿಗೆ ಈ ಕ್ಷೇತ್ರ ಉತ್ತಮವಾಗಿದೆ. ಆರಂಭದಲ್ಲಿಯೇ ಉತ್ತಮ ಸಂಬಳವನ್ನು ನಿರೀಕ್ಷಿಸಬಹುದು.
ಫೈನಾನ್ಸ್ ಪ್ಲಾನರ್

ಫೈನಾನ್ಸ್ ಪ್ಲಾನರ್

ಕಾಮರ್ಸ್ ಶಿಕ್ಷಣ ಪಡೆದು ಒಂದಷ್ಟು ಆರ್ಥಿಕ ವ್ಯವಸ್ಥೆ ಬಗ್ಗೆ ಜ್ಞಾನವಿದ್ದರೆ ನೀವು ಉತ್ತಮ ಫೈನಾನ್ಷಿಯಲ್ ಪ್ಲಾನರ್ ಆಗಬಹುದು.

ಒಂದು ಸಂಸ್ಥೆಗೆ ಬೇಕಾದ ಆರ್ಥಿಕ ವ್ಯವಸ್ಥೆ ಮತ್ತು ನಿರ್ವಹಣೆ ಮಾಡಲು ಫೈನಾನ್ಸ್ ಪ್ಲಾನರ್ ಗಳ ಅಗತ್ಯ ಇದೆ.ದೊಡ್ಡ ದೊಡ್ಡ ಉದ್ಯಮಗಳು ಅರ್ಥಿಕ ವ್ಯವಹಾರವನ್ನು ನಿರ್ವಹಿಸಲು ಫೈನಾನ್ಸ್ ಹೆಡ್ ಗಳನ್ನು ಮತ್ತು ನಿರ್ವಾಹಕರನ್ನು ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುತ್ತವೆ. ಹಾಗಾಗಿ ಫೈನಾನ್ಸ್ ಪ್ಲಾನರ್ ಗಳ ಬೇಡಿಕೆ ಹೆಚ್ಚಾಗಿಯೇ ಇದೆ.

For Quick Alerts
ALLOW NOTIFICATIONS  
For Daily Alerts

English summary
These days, career changing is becoming just as common as job hopping, and depending on what field you’re interested in transitioning into, you may be able to make the jump without too much blood, sweat, and tears.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X