ಎಂಬಿಎ ಶಿಕ್ಷಣ ದಿನೇ ದಿನೇ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಆರ್ಟ್ಸ್, ಕಾಮರ್ಸ್, ಸೈನ್ಸ್ ಎನ್ನದೇ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಎಂಬಿಎ ಕಡೆ ವಾಲುತ್ತಿದ್ದಾರೆ. ಇನ್ನು ಬಿಸಿನೆಸ್ ಕಾಲೇಜುಗಳು ಕೂಡ ಪೈಪೋಟಿ ಮೇಲೆ ಹೆಚ್ಚುತ್ತಿವೆ. ಹೀಗಿರುವಾಗ ಉತ್ತಮ ಎಂಬಿಎ ಕಾಲೇಜನ್ನು ಆಯ್ಕೆ ಮಾಡುವುದು ಸೂಕ್ತ.
ಆರ್ಮಿ ಸ್ಕೂಲ್ ನೇಮಕಾತಿ: ಪ್ರವೇಶ ಪತ್ರ ಪ್ರಕಟ
ಬೆಂಗಳೂರಿನಲ್ಲಿ ಎಂಬಿಎ ಕಾಲೇಜುಗಳ ಸಂಖ್ಯೆ ಹೆಚ್ಚಿದ್ದು, ಅದರಲ್ಲಿ ಯಾವುದು ಉತ್ತಮ ಎಂದು ತಿಳಿಯುವುದೇ ಕಷ್ಟ, ಇನ್ನು ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕೆಂದರೆ ಹರಸಾಹಸವೇ ಮಾಡಬೇಕು.
ದೇಶದ ಟಾಪ್ 10 ಫ್ಯಾಷನ್ ಟೆಕ್ನಾಲಜಿ ಕಾಲೇಜುಗಳು
ಕ್ಯಾಟ್ ಪ್ರವೇಶ ಪರೀಕ್ಷೆ ಸೇರಿದಂತೆ ಇನ್ನು ಹಲವು ಪರೀಕ್ಷೆಗಳು ಎಂಬಿಎ ಸೀಟು ಪಡೆಯಲು ಸಹಕಾರಿಯಾಗಿವೆ. ಕೆಲವೊಂದು ಕಾಲೇಜುಗಳು ತಮ್ಮದೇ ಆದ ಪ್ರತ್ಯೇಕ ಪರೀಕ್ಷೆಯನ್ನು ಸಹ ಆಯೋಜಜಿಸಲಿವೆ.
2017 ಸಮೀಕ್ಷೆ: ಭಾರತದ ಟಾಪ್ 10 ಕಾನೂನು ಕಾಲೇಜುಗಳು
ಬೆಂಗಳೂರಿನಲ್ಲಿ ಎಂಬಿಎ ಶಿಕ್ಷಣ ಪಡೆಯಬೇಕು ಎನ್ನುವ ಹಂಬಲವಿರುವವರಿಗೆ ಇಲ್ಲಿದೆ ಬೆಂಗಳೂರಿನ ಟಾಪ್ ಟೆನ್ ಎಂಬಿಎ ಕಾಲೇಜುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಐಐಎಂಬಿ
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು, ಐಐಎಂಬಿ ಎಂದೇ ಕರೆಯಲ್ಪಡುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು, ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ರಾಜ್ಯದ ನಂಬರ್ ಒನ್ ಎಂಬಿಎ ಶಿಕ್ಷಣ ಸಂಸ್ಥೆಯಾಗಿದೆ. ಬನ್ನೇರುಘಟ್ಟದಲ್ಲಿರುವ ಈ ಸಂಸ್ಥೆಯು ಮ್ಯಾನೇಜ್ಮೆಂಟ್ ವಿಷಯದಲ್ಲಿ ಪಿಜಿಪಿಇಎಂ, ಪಿಜಿಪಿ-ಪಿಪಿಎಂ, ಪಿಜಿಪಿಎಂ ಮತ್ತು ಇಪಿಜಿಪಿ ಸ್ನಾತಕೋತ್ತರ ಪದವಿಗಳನ್ನು ನೀಡುತ್ತದೆ.

ಕ್ಸೈಮ್
ಕ್ಸೈಮ್ ಎಂದೇ ಖ್ಯಾತಿ ಹೊಂದಿರುವ ಈ ಸಂಸ್ಥೆಯು ಮ್ಯಾನೇಜ್ಮೆಂಟ್ ನ ಹಲವು ವಿಷಯಗಳನ್ನು ಕಲಿಸುತ್ತದೆ. ಈ ಸಂಸ್ಥೆಗೆ ಎಕ್ಸ್ಎಟಿ ಪರೀಕ್ಷೆ ಮೂಲಕ ಪ್ರವೇಶಾತಿ ನೀಡಲಾಗುವುದು. ಎಕ್ಸಿಕ್ಯುಟಿವ್ ಪಿಜಿಡಿಎಂ ಮತ್ತು ಪಿಜಿಡಿಎಂ, ಪಿಜಿಡಿಐಬಿ, ಪಿಜಿಡಿಎಚ್ಆರ್ಎಂ ಪಿಜಿಡಿಎಂಎಂ ಕೋರ್ಸುಗಳು ಇಲ್ಲಿ ಲಭ್ಯವಿದೆ.

ಕ್ರೈಸ್ಟ್ ಯೂನಿವರ್ಸಿಟಿ
ಬೆಂಗಳೂರಿನ ಹೊಸುರು ರಸ್ತೆಯ ಭವಾನಿ ನಗರದಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಬಿಎ ಶಿಕ್ಷಣ ನೀಡುವ ಅತ್ಯುತ್ತಮ ಕಾಲೇಜುಗಳ ಪಟ್ಟದಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ಎನ್ಎಂಐಎಂಎಸ್
ಮುಂಬೈ ವಿಶ್ವವಿದ್ಯಾಲಯ ಅಂಗಸಂಸ್ಥೆಯಾಗಿರುವ ನರ್ಸಿ ಮಾಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಹೈಯರ್ ಸ್ಟಡೀಸ್ (ಎನ್ಎಂಐಎಂಎಸ್) ಕೋರಮಂಗಲದಲ್ಲಿದ್ದು, ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ನೀಡುತ್ತಿದೆ.

ಮ್ಯಾನೇಜ್ಮೆಂಟ್ ಸ್ಟಡೀಸ್ ಐಐಎಸ್ಸಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ)ನ ಮ್ಯಾನೇಜ್ಮೆಂಟ್ ವಿಭಾಗವು ಕೂಡ ಎಂಬಿಎ ಪದವಿ ನೀಡುವಲ್ಲಿ ಮುಂಚೂಣಿಯಲ್ಲಿದೆ.

ಅಲಯನ್ಸ್ ಸ್ಕೂಲ್
ಚಂದ್ರಾಪುರದ ಅಲಯನ್ಸ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ನೀಡುತ್ತಿದ್ದು, ಬೆಂಗಳೂರಿನ ಟಾಪ್ ಬಿ ಸ್ಕೂಲ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ವೆಲಿಂಗ್ ಕರ್ ಇನ್ಸ್ಟಿಟ್ಯೂಟ್
ಕೋರಮಂಗಲದಲ್ಲಿರುವ ಪ್ರಿ.ಎಲ್.ಎನ್ ವೆಲಿಂಗ್ ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಡೆವೆಲಪ್ಮೆಂಟ್ ಸಂಸ್ಥೆಯು ಪಾರ್ಟ್ ಟೈಂ ಮತ್ತು ಫುಲ್ ಟೈಂ ಎಂಬಿಎ ನೀಡುತ್ತಿದ್ದು, ಅತ್ಯುತ್ತಮ ಕಾಲೇಜುಗಳಲ್ಲಿ ಒಂದೆನಿಸಿದೆ.

ಇಂಡಸ್ ಅಕಾಡೆಮಿ
ಲಕ್ಷೀಪುರದ ಇಂಡಸ್ ಬಿಸಿನೆಸ್ ಅಕಾಡೆಮಿ ಸಂಸ್ಥೆ ಕೂಡ ಉತ್ತಮ ಎಂಬಿಎ ಶಿಕ್ಷಣ ನೀಡುವ ಸಂಸ್ಥೆಯಾಗಿದ್ದು, ಐಎಸಿಬಿಇ ಮಾನ್ಯತೆ ಪಡೆದಿದೆ.

ಐಎಫ್ಐಎಂ
ಇನ್ಸ್ಟಿಟ್ಯೂಟ್ ಆಫ್ ಫೈನಾನ್ಸ್ ಅಂಡ್ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿದ್ದು, ಪಿಜಿಡಿಎಂ, ಪಿಜಿಡಿಎಂ ಫೈನಾನ್ಸ್, ಇಂಟರ್ನ್ಯಾಷನಲ್ ಬಿಸಿನೆಸ್, ಬಿಸಿನೆಸ್ ಅನಾಲಿಟಿಕ್ಸ್, ವರ್ಕಿಂಗ್ ಪ್ರೊಫೆಷನಲ್ ಕೋರ್ಸ್ ಗಳನ್ನು ಹೊಂದಿದೆ.

ಐಟಿಎಂ
ಬನ್ನೇರುಘಟ್ಟ ರಸ್ತೆಯಲ್ಲಿರುವ ಐಟಿಎಂ ಬಿಸಿನೆಸ್ ಸ್ಕೂಲ್ ಕೂಡ ಬೆಂಗಳೂರಿನ ಟಾಪ್ ಟೆನ್ ಕಾಲೇಜುಗಳ ಪಟ್ಟಿಯಲ್ಲಿ ಸೇರಿದ್ದು, ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ನೀಡತ್ತದೆ.