ವ್ರತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್

Posted By: Vinaykumar

ಅನೇಕ ಕೋರ್ಸುಗಳು ಜನ ಸಾಮಾನ್ಯರ ಗಮನಕ್ಕೆ ಬಾರದೆ ಕೆಲವೇ ಕೆಲವು ಮಂದಿಯನ್ನು ಮಾತ್ರ ತಲುಪುತ್ತಿದೆ. ಅಂತಹ ಕೋರ್ಸುಗಳಲ್ಲಿ ಪ್ರವಾಸೋದ್ಯಮ ಶಿಕ್ಷಣ ಕೂಡ ಒಂದು. ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಾಕಷ್ಟು ಆದ್ಯತೆ ಇದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಿದ್ದು ಪ್ರವಾಸಹೋದ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವಿದ್ದು ಪ್ರವಾಸೋದ್ಯಮ ಇಲಾಖೆಯನ್ನು ಮತ್ತಷ್ಟು ಬಲ ಪಡಿಸಲು ಸರ್ಕಾರವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.ಶಿಕ್ಷಣದ ಮೂಲಕ ಪ್ರವಾಸೋದ್ಯಮ ಇಲಾಖೆಯನ್ನು ಅಭಿವೃದ್ಧಿ ಪಡಿಸುವ ಸರ್ಕಾರದ ನಿಲುವು ಅನೇಕ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಿದೆ.

ಉದ್ಯೋಗ ಸೃಷ್ಟಿಸುತ್ತಿರುವ ಪ್ರವಾಸೋದ್ಯಮ ಕೋರ್ಸ್


ಭಾರತದಂತಹ ವೈವಿಧ್ಯಮಯ ಮತ್ತು ಬೃಹತ್ ದೇಶದಲ್ಲಿ ಪ್ರವಾಸೋದ್ಯಮವು ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಇಲ್ಲಿನ ನೈಸರ್ಗಿಕ ಸಂಪತ್ತು, ಜೀವನ ಶೈಲಿಗೆ ಆಕರ್ಷಿತರಾಗಿ ಲಕ್ಷಾಂತರ ವಿದೇಶಿಗರು ಆಗಮಿಸುತ್ತಾರೆ ಅಲ್ಲದೆ ಸ್ವತಃ ಭಾರತೀಯರೇ ವಿವಿಧ ಪ್ರವಾಸಿ ತಾಣಗಳಿಗೆ ಬಹುಸಂಖ್ಯೆಯಲ್ಲಿ ಭೇಟಿ ನೀಡುವುದು ರೂಡಿಯಲ್ಲಿದೆ. ಹೀಗಿರುವಾಗ ಪ್ರವಾಸಿಗರಿಗಾಗಿ ಊಟ, ವಸತಿ, ಪ್ರವಾಸದ ಯೋಜನೆ, ಮಾರ್ಗದರ್ಶನ, ಪ್ರವಾಸಿ ತಾಣಗಳ ಪರಿಚಯ, ಮುನ್ನೆಚ್ಚರಿಕೆ ಕ್ರಮಗಳು, ಸಾರಿಗೆ ಸೇರಿದಂತೆ ಮೂಲ ಸೌಕರ್ಯದ ವ್ಯವಸ್ಥೆ ಕಲ್ಪಿಸಲು ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಅಲ್ಲದೆ ನಮ್ಮ ದೇಶದಿಂದ ಹೊರ ದೇಶಗಳಿಗೆ ಹೋಗುವ ಭಾರತೀಯ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ನೀಡಲು ವೃತ್ತಿಪರ ಪ್ರವಾಸೋದ್ಯಮಿಗಳ ಅವಶ್ಯಕೆ ಇದೆ. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲಿಚ್ಚಿಸುವವರಿಗಾಗಿಯೇ ಪ್ರವಾಸೋದ್ಯಮ ಕೋರ್ಸು ಕೈ ಬೀಸಿ ಕರೆಯುತ್ತಿದೆ.

ಪ್ರವಾಸೋದ್ಯಮ ಕೋರ್ಸ್ ವಿಶೇಷತೆ

ಪ್ರವಾಸೋದ್ಯಮ ಕೋರ್ಸು ಮೇಲೆ ತಿಳಿಸಿರುವ ಹಾಗೆ ಪ್ರವಾಸಿಗರಿಗೆ ಸಹಕಾರಿಯಾಗುವಂತೆ ವೃತ್ತಿಪರ ಪ್ರವಾಸೋದ್ಯಮಿಗಳನ್ನು ಸೃಷ್ಟಿಸುತ್ತದೆ. ಈ ಕೋರ್ಸು ಸಾಮಾನ್ಯವಾಗಿ ಸರ್ಟಿಫಿಕೇಷನ್, ಡಿಪ್ಲೊಮಾ, ಪಿ.ಜಿ.ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಲಭ್ಯವಿದೆ. ಪ್ರವಾಸೋದ್ಯಮದ ಅಂಶಗಳನ್ನು ಕಲಿಕಾರ್ಥಿಗೆ ಒದಗಿಸುವುದು ಹಾಗು ಅದಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ. ಪ್ರವಾಸಿ ತಾಣಗಳ ಬಗ್ಗೆ ಆಸಕ್ತಿ, ಉತ್ತಮ ಜ್ಞಾನವಿರುವ ಹಾಗೂ ಪ್ರವಾಸಿಗರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ, ಸಂವಹನ ಕಲೆಯುಳ್ಳವರಿಗೆ ಈ ಕೋರ್ಸ್ ಹೇಳಿ ಮಾಡಿಸಿದಂತಿದೆ.

ಉದ್ಯೋಗಾವಕಾಶಗಳು

1. ಈ ಕೋರ್ಸ್ ಪಾಸಾದ ಅಭ್ಯರ್ಥಿಗಳು ಪ್ರವಾಸೋದ್ಯಮದಲ್ಲಿರುವ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬಹುದು.
2. ಇದೆ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಬಹುದು.

3. ಸರ್ಕಾರಿ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಟ್ರಾಫಿಕ್ ಅಸ್ಸಿಸ್ಟನ್ಸ್, ಏರ್ ಹೋಸ್ಟೆಸ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಸ್ಟಾಫ್, ಕಸ್ಟಮರ್ ಸರ್ವಿಸ್ ಸ್ಟಾಫ್ ಆಗಬಹುದು. ಇದರ ಜೊತೆಗೆ ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್, ಅಸಿಸ್ಟೆಂಟ್ ಆಪರೇಷನ್ ಮ್ಯಾನೇಜರ್, ಕೌಂಟರ್ ಸೇಲ್ಸ್, ಎಕ್ಸೆಕೂಟಿವ್ , ಅಸೋಸಿಯೇಟ್ ಎಕ್ಸಿಕೂಟಿವ್, ಹಾಸ್ಪಿಟಾಲಿಟಿ ಕನ್ಸಲ್ಟೆಂಟ್, ಪ್ಲೇಸ್ಮೆಂಟ್ ಕೋ-ಆರ್ಡಿನೇಟರ್ ಆಗಬಹುದು.

4. ಪ್ರವಾಸೋದ್ಯಮ ಕೋರ್ಸ್ ಕಲಿತವರಿಗೆ ಸರ್ಕಾರಿ ಪ್ರವಾಸಿ ಮಾಹಿತಿ ಕೇಂದ್ರ, ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿರುವ ಹೋಟೆಲ್ಗಳು, ಏರ್ಲೈನ್ಸ್,ಸಾರಿಗೆ ಮತ್ತು ಸಾಗಾಣಿಕೆ ಸೇವೆಗಳು ಸೇರಿದಂತೆ ಅನೇಕ ಕಡೆ ಕಾರ್ಯನಿರ್ವಹಿಸಬಹುದು.ಖಾಸಗಿ ವಲಯದಲ್ಲಾದರೆ ಟ್ರಾವೆಲ್ ಏಜನ್ಸಿ, ಟ್ರಾವೆಲ್ ಅಂಡ್ ಟಿಕೆಟಿಂಗ್ ವೆಬ್ಸೈಟ್ ಆರಂಭಿಸಬಹುದು. ವೀಸಾ ಮತ್ತು ಟ್ರಾವೆಲ್ ಡಾಕ್ಯುಮೆಂಟ್ ಸರ್ವಿಸ್, ಹೋಟೆಲ್, ರೆಸಾರ್ಟ್, ಪ್ರವಾಸಿ ಮಾರ್ಗದರ್ಶನ ಕೇಂದ್ರ ಆರಂಭಿಸಬಹುದು.

ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಮುಖ್ಯವಾಗಿ ಹಲವಾರು ವಿಭಿನ್ನ ಮನೋಭಾವನೆ, ಆಸಕ್ತಿ, ಹಾಗೂ ಎಲ್ಲಾ ವರ್ಗದ ಪ್ರವಾಸಿಗರೊಂದಿಗೆ ವ್ಯವಹರಿಸಬೇಕಾಗುತ್ತದೆ. ಅತಿಥಿ ಸತ್ಕಾರ, ಪ್ರವಾಸ ನಿರ್ವಹಣೆ, ಸಾರಿಗೆ ನಿರ್ವಹಣೆ ಮುಂತಾದವುಗಳನ್ನು ಇಲ್ಲಿ ಅಭ್ಯಸಿಸಬೇಕಾಗುತ್ತದೆ.

ಪ್ರವಾಸೋದ್ಯಮ ಕೋರ್ಸಿನಲ್ಲಿ ಸಾಮಾನ್ಯವಾಗಿ ಬರುವ ವಿಷಯಗಳು.

ಕಮ್ಯುನಿಕೇಷನ್ ಸ್ಕಿಲ್ಸ್, ಫಂಡಮೆಂಟಲ್ ಆಫ್ ಟೂರಿಸಂ, ಅಕೌಂಟಿಂಗ್, ಕಲ್ಚರಲ್ ಹಿಸ್ಟರಿ ಅಂಡ್ ಹೆರಿಟೇಜ್ ಆಫ್ ಇಂಡಿಯಾ, ಟೂರಿಸಂ ಪಾಲಿಸಿ ಅಂಡ್ ಲಾ, ಟೂರಿಸಂ ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್, ಟ್ರಾವೆಲ್ ಏಜನ್ಸಿ ಟ್ರೈನಿಂಗ್ , ಟೂರ್ ಗೈಡಿಂಗ್ ಸ್ಕಿಲ್ಸ್, ಕಂಪ್ಯೂಟರ್ ಯುಟಿಲೈಸೇಷನ್ ಅಂಡ್ ಅಪ್ಲಿಕೇಶನ್, ಆಫೀಸ್ ಮ್ಯಾನೇಜ್ಮೆಂಟ್ ಅಂಡ್ ಫುನ್ಕ್ಷನ್ಸ್, ಪಬ್ಲಿಕ್ ರಿಲೇಷನ್ಸ್, ಟೂರ್ ಆಪೆರೇಷನ್ಸ್

ವೇತನ

ವೃತ್ತಿಯಲ್ಲಿ ಹೆಚ್ಚಿನ ಅನುಭವ, ನೈಪುಣ್ಯತೆ ಸಾಧಿಸುತ್ತಿದ್ದಂತೆ ಸಂಬಳ, ವೇತನ ಹೆಚ್ಚುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಈ ಕ್ಷೇತ್ರದಲ್ಲಿ ಆರಂಭದ ಹಂತದಲ್ಲೇ ಕನಿಷ್ಠ 25,000/- ದಿಂದ 30,000/- ಪಡೆಯಬಹುದು.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಕೋರ್ಸ್

ಕರ್ನಾಟಕದ ಕೆಲವೇ ಕೆಲವು ಕಾಲೇಜುಗಳಲ್ಲಿ ಪ್ರವಾಸೋದ್ಯಮದ ಪದವಿ, ಡಿಪ್ಲೊಮಾ ಮತ್ತು ಪಿ.ಜಿ ಡಿಪ್ಲೊಮಾ ಕೋರ್ಸು ಲಭ್ಯವಿದೆ.
ಬೆಂಗಳೂರು, ಬೆಳಗಾವಿ, ಮಂಗಳೂರು, ಹುಬ್ಬಳಿ, ಮಣಿಪಾಲ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಕೋರ್ಸು ಲಭ್ಯವಿದೆ.

English summary
Travel and Tourism one of the world's largest foreign exchange earner among industries, provides employment directly to millions of people worldwide

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia