ಟೂರಿಸಂ ಬೆಸ್ಟ್ ಜಾಬ್... ಹೇಗೆ ಗೊತ್ತಾ?

By Kavya

ಇತ್ತೀಚಿಗಿನ ದಿನಗಳಲ್ಲಿ ಟೂರಿಸಂ ಬಹು ಬೇಡಿಕೆ ಇರುವ ವೃತ್ತಿಯಾಗುತ್ತಿದೆ. ಟೂರಿಸಂ ಉದ್ಯಮವು ಗ್ರಾಹಕರ ತೃಪ್ತಿ, ಸೇಫ್ಟಿ, ಸಂತೋಷ ದ ಮೇಲೆ ಹೆಚ್ಚಿನ ಫೋಕಸ್ ಮಾಡುತ್ತದೆ. ಈ ಕ್ಷೇತ್ರದಲ್ಲೂ ಇದೀಗ ಸ್ಪರ್ಧಾತ್ಮಕ ಬೆಳವಣಿಗೆ ನೋಡಬಹುದು.

ಯಾವಾಗ ವಿಶ್ವ ಟೂರಿಸಂ ಡೇ ಆಚರಿಸಲಾಗುತ್ತದೆ?

ಸೆಪ್ಟೆಂಬರ್ 27 ರಂದು ವಿಶ್ವ ಟೂರಿಸಂ ಡೇಯನ್ನ ಆಚರಿಸಲಾಗುತ್ತದೆ.

ಟೂರಿಸಂಗೆ ಅರ್ಹತೆ:

ಟೂರಿಸಂ ಇಂಡಸ್ಟ್ರಿಯ ಭಾಗವಾಗಬೇಕೆಂದು ಯಾರು ಬಯಸುತ್ತಿರೋ ನೀವು ಮೊದದಲಿಗೆ ಪ್ರತಿದಿನ ಹೊಸತೇನಾದ್ರೂ ಕಲಿಯುವ ಹಂಬಲ ನಿಮ್ಮಲ್ಲಿ ಇರಬೇಕು. ಲೇಟೆಸ್ಟ್ ಟ್ರೆಂಡ್ ಗೆ ಅಪ್‌ಡೇಟ್ ಆಗಿರಬೇಕು. ಇದೊಂದು ಗ್ಲಾಮರಸ್ ಇಂಡಸ್ಟ್ರಿಯಾಗಿದ್ದು, ಇಲ್ಲಿ ನಿಮ್ಮ ಹಾರ್ಡ್ ವರ್ಕ್ ಮುಖ್ಯವಾಗಿರುತ್ತದೆ.

ಟೂರಿಸಂ ನಲ್ಲಿ ಯಾರಿಗೆ ಇಂಟ್ರಸ್ಟ್ ಇದೆಯೋ ಅವರು ಡಿಪ್ಲೋಮಾ, ಪದವಿ, ಇಲ್ಲ ಸ್ನಾತಕೋತ್ತರ ಪದವಿಯಲ್ಲಿ ಆಪ್ಷನ್ ಸಬ್‌ಜೆಕ್ಟ್ ಆಗಿ ಆಯ್ಕೆ ಮಾಡಬಹುದು.

ಆದ್ರೆ ಹೆಚ್ಚಿನವರು 12ನೇ ತರಗತಿ ಬಳಿಕ ಪದವಿ ವೇಳೆಯೇ ಟೂರಿಸಂ ಕೋರ್ಸ್ ಮಾಡುತ್ತಾರೆ.

ನೀವು ಟೂರಿಸಂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂದಿದ್ರೆ ಪದವಿ ಬಳಿಕ ಪ್ರವೇಶ ಪರೀಕ್ಷೆ ಬರೆದು ಅವಕಾಶ ಪಡೆದುಕೊಳ್ಳಬೇಕಾಗಿದೆ.

ಇನ್ನು ಈ ಸಬ್‌ಜೆಕ್ಟ್ ನಲ್ಲಿ ಡಿಸ್ಟೇಂಸ್ ಶಿಕ್ಷಣ ಕೂಡಾ ಲಭ್ಯವಿದೆ. ಅದಕ್ಕಾಗಿ ಅನೇಕ ಶಿಕ್ಷಣ ಸಂಸ್ಥೆಗಳು ದೂರ ಶಿಕ್ಷಣದ ಮೂಲಕ ಟೂರಿಸಂ ಸ್ಟಡಿಗೆ ಎಲ್ಲಾ ಸೌಲಭ್ಯ ದೊರಕಿಸಿವೆ.

ಟೂರಿಸಂ  ಬೆಸ್ಟ್ ಜಾಬ್ !

ಟೂರಿಸಂಗೆ ಸಂಬಂಧಪಟ್ಟ ಕೋರ್ಸ್ ಗಳು ಇವು:

  • ಯು.ಜಿ. ಕೋರ್ಸಸ್ ಟ್ರಾವೆಲ್ ಆಂಡ್ ಟೂರಿಸಂ ಮ್ಯಾನೇಜ್‌ಮೆಂಟ್
  • ಬ್ಯಾಚುಲರ್ ಆಫ್ ಟೂರಿಸಂ ಸ್ಟಡೀಸ್
  • ಪಿಜಿ ಕೋರ್ಸಸ್ ಟ್ರಾವೆಲ್ ಆಂಡ್ ಟೂರಿಸಂ ಮ್ಯಾನೇಜ್‌ಮೆಂಟ್
  • ಮಾಸ್ಟರ್ ಆಫ್ ಟೂರಿಸಂ ಅಡ್ಮಿನಿಸ್ಟ್ರೇಶನ್
  • ಮಾಸ್ಟರ್ ಇನ್ ಟ್ರಾವೆಲ್ ಅಡ್ಮಿನಿಸ್ಟ್ರೇಶನ್
  • ಎಂಎ ಇನ್ ಟೂರಿಸಂ ಮ್ಯಾನೇಜ್‌ಮೆಂಟ್
  • ಡಿಪ್ಲೋಮಾ ಕೋರ್ಸಸ್ ಟ್ರಾವೆಲ್ ಆಂಡ್ ಟೂರಿಸಂ ಮ್ಯಾನೇಜ್‌ಮೆಂಟ್
  • ಪಿಜಿ ಡಿಪ್ಲೋಮಾ ಇನ್ ಟ್ರಾವೆಲ್ ಆಂಡ್ ಟೂರಿಸಂ
  • ಡಿಪ್ಲೋಮಾ ಇನ್ ಟೂರಿಸಂ ಆಂಡ್ ಹೋಟೆಲ್ ಮ್ಯಾನೇಜ್‌ಮೆಂಟ್
  • ಡಿಪ್ಲೋಮಾ ಇನ್ ಏರ್‌ಲೈನ್, ಟ್ರಾವೆಲ್ ಆಂಡ್ ಟೂರಿಸಂ
  • ಯಾವೆಲ್ಲಾ ಟಾಪಿಕ್ ಕವರ್ ಆಗುತ್ತೆ
  • ಎಕೋನಾಮಿಕ್ಸ್ ಆಫ್ ಟೂರಿಸಂ
  • ಇಂಟರ್ ನ್ಯಾಷನಲ್ ಟೂರಿಸಂ
  • ರಿಲೇಶನ್ ಶಿಪ್ ಮಾರ್ಕೆಟಿಂಗ್
  • ಟೂರ್ ಆಪರೇಶನ್ಸ್ ಮ್ಯಾನೇಜ್ ಮೆಂಟ್
  • ಟೂರಿಸಂ ಪ್ರಿನ್ಸಿಪಲ್ಸ್ ಆಂಡ್ ಪ್ರಾಕ್ಟೀಸಸ್
  • ಟ್ರಾವೆಲ್ ಏಜೆನ್ಸಿ ಮ್ಯಾನೇಜ್‌ಮೆಂಟ್
  • ಟ್ರಾವೆಲ್ ಆಂಡ್ ಟೂರಿಸಂ ಇಂಡಸ್ಟ್ರಿ

ವೇತನ:

ಟೂರಿಸಂ ಹುದ್ದೆಯು ತುಂಬಾ ಲಾಭದಾಯವಾಗಿದೆ. ಇಲ್ಲಿನ ವೇತನ ಬಗ್ಗೆ ಹೇಳುವುದೆಂದ್ರೆ ಆಕರ್ಷಕ ವೇತನ ಇಲ್ಲಿದೆ. ಅನುಭವ ಹಾಗೂ ವಿದ್ಯಾರ್ಹತೆ ಆಧಾರದ ಮೇಲೆ ಇಲ್ಲಿ ವೇತನ ನಿಗದಿ ಮಾಡಿರುತ್ತಾರೆ

ಟೂರಿಸಂನಲ್ಲಿ ಕೆರಿಯರ್:

ಟೂರಿಸಂನಲ್ಲಿ ಕೆರಿಯರ್ ಆಯ್ಕೆ ತುಂಬಾ ಇದೆ. ಪಬ್ಲಿಕ್ ಹಾಗೂ ಪ್ಲೈವೆಟ್ ಸೆಕ್ಟರ್ ಗಳಲ್ಲಿ ನೀವು ಟೂರಿಸಂ ಕೆರಿಯರ್ ರೂಪಿಸಿಕೊಳ್ಳಬಹುದು. ಯಾವೆಲ್ಲಾ ಕೆರಿಯರ್ ಆಯ್ಕೆ ಇವೆ ಅನ್ನೋ ಲಿಸ್ಟ್ ಇಲ್ಲಿದೆ ನೋಡಿ.

ಟೂರಿಸಂ ವಿಭಾಗ:

ಟೂರಿಸಂ ವಿಭಾಗದಲ್ಲಿ ಕೌಂಟರ್ ಸ್ಟಾಫ್, ಸೇಲ್ಸ್ ಆಂಡ್ ಮಾರ್ಕೆಟಿಂಗ್ ಸ್ಟಾಫ್, ಟೂರ್ ಪ್ಲ್ಯಾನರ್ ಹಾಗೂ ಟೂರ್ ಗೈಡ್ಸ್ ಹುದ್ದೆಗಳಿರುತ್ತದೆ. ಟೂರಿಸಂ ಡಿಪಾರ್ಟ್ ಮೆಂಟ್ ನಲ್ಲಿ ಇಂರ್ಫೋಮೇಶನ್ ಅಸಿಸ್ಟೆಂಟ್ ಹುದ್ದೆಯೂ ಇರುತ್ತದೆ. ಆದ್ರೆ ಇದಕ್ಕೆಲ್ಲಾ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಏರ್‌ಲೈನ್: ವಿಮಾನದಲ್ಲಿಯೂ ಈ ಕೋರ್ಸ್ ಮಾಡಿದವರಿಗೆ ಅವಕಾಶವಿರುತ್ತದೆ. ಫ್ಲೈಟ್ ಸ್ಟಾಫ್ ಹುದ್ದೆ ಇದಾಗಿರುತ್ತದೆ.

ಹೋಟೆಲ್ಸ್: ಹೋಟೆಲ್ ಇಂಡಸ್ಟ್ರಿಯು ಸೇವಾ ಇಂಡಸ್ಟ್ರಿಯಾಗಿದೆ. ಆಹಾರ ಹಾಗೂ ವಸತಿ ಸೇವೆಯ ಆಧಾರದ ಮೇಲೆ ಇವರು ಕೆಲಸ ಮಾಡುತ್ತಾರೆ. ಫ್ರಂಟ್ ಆಫೀಸ್, ಹೌಸ್ ಕೀಪಿಂಗ್, ಫುಡ್, ಅಕೌಂಟಿಂಗ್, ಇಂಜಿನಿಯರಿಂಗ್, ಪಬ್ಲಿಕ್ ರಿಲೇಶನ್, ಸೆಕ್ಯುರಿಟಿ ಸೇರಿದಂತೆ ಇನ್ನಿತ್ತರ ವಿಭಾಗದ ಜತೆ ಇವರು ಕೆಲಸ ಮಾಡುತ್ತಾರೆ.

ಟೂರ್ ಆಪರೇಟರ್ಸ್:

ಸಂಸ್ಥೆಗಳಿಗೆ ಟೂರ್ ಆಯೋಜಿಸಲು ಇವರು ಸಹಾಯ ಮಾಡುತ್ತಾರೆ. ಹಲವಾರು ಪ್ರವಾಸಿ ತಾಣಗಳ ಬಗ್ಗೆ ಇವರು ಮಾಹಿತಿ ನೀಡುತ್ತಾರೆ ಅಷ್ಟೇ ಅಲ್ಲ ಪ್ರಯಾಣ ಹಾಗೂ ವಸತಿ ಬಗ್ಗೆ ಇವರು ನೋಡಿಕೊಳ್ಳುತ್ತಾರೆ

ಟ್ರಾವೆಲ್ ಏಜೆಂಟ್:

ಇದೊಂದು ಬೆಸ್ಟ್ ಉದ್ಯಮವಾಗಿದೆ. ಇಲ್ಲಿ ಜನರ ಬೇಡಿಕೆ ಅನುಸಾರವಾಗಿ ಕೆಲಸ ಮಾಡಬೇಕಾಗುತ್ತದೆ. ಟ್ರಾವೆಲ್ ಅರೇಂಜ್ ಮೆಂಟ್ ಎಲ್ಲಾ ಇವರು ನೋಡಿಕೊಳ್ಳುತ್ತಾರೆ. ಹಲವಾರು ರೆಸಾರ್ಟ್ ಗಳು, ಟ್ರಾವೆಲ್ ಗ್ರೂಪ್ ಗಳು ತಮ್ಮ ಉದ್ಯಮದ ಪ್ರಚಾರಕ್ಕೆ ಟ್ರಾವೆಲ್ ಏಜೆಂಟ್‌ ಅವರ ಸಹಾಯ ಪಡೆಯುತ್ತಾರೆ

ಯಾವೆಲ್ಲಾ ಶಿಕ್ಷಣ ಸಂಸ್ಥೆಗಳು ಟೂರಿಸಂ ಬಗ್ಗೆ ಬೆಸ್ಟ್ ಶಿಕ್ಷಣ ನೀಡುತ್ತವೆ:

  • ಹಿಮಚಲ ಪ್ರದೇಶ ವಿಶ್ವವಿದ್ಯಾನಿಲಯ - ಶಿಮ್ಲಾ
  • ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ
  • ಅಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯ
  • ಪಂಜಾಬ್ ವಿಶ್ವವಿದ್ಯಾನಿಲಯ
  • ಕೇರಳ ಇನ್ಸ್ ಟ್ ಟ್ಯೂಟ್ ಆಫ್ ಟೂರಿಸಂ ಆಂಡ್ ಟ್ರಾವೆಲ್ ಸ್ಟಡೀಸ್ - ತಿರುವಂಡ್ರಮ್
  • ನ್ಯಾಷನಲ್ ಇನ್ಸ್ ಟ್ ಟ್ಯೂಟ್ ಆಫ್ ಟೂರಿಸಂ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ - ಹೈದರಾಬಾದ್
  • ಡಿಬ್ರುಘರ್ಹ್ ವಿಶ್ವವಿದ್ಯಾಲಯ, Mgmt ಸ್ಟಡೀಸ್ ಕೇಂದ್ರ- ಅಸ್ಸಾಂ
  • ಇನ್ಸ್ ಟ್ ಟ್ಯೂಟ್ ಆಫ್ Mgmt ಸೈನ್ಸ್ - ಲಕ್ನೋ
  • ಇನ್ಸ್ ಟ್ ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ - ಗಾಜಿಯಾಬಾದ್
  • ರೀಜಿನಲ್ ಕಾಲೇಜು ಆಫ್ ಮ್ಯಾನೇಜ್‌ ಮೆಂಟ್ - ಭುವನೇಶ್ವರ್ , ಒಡಿಶಾ
For Quick Alerts
ALLOW NOTIFICATIONS  
For Daily Alerts

English summary
Tourism is yet another demanding field and has seen exponential growth in recent years. It is a dynamic and competitive industry that requires the ability to adapt constantly to customers' changing needs and desires, as the customer's satisfaction, safety, and enjoyment are the focus of tourism businesses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X