UGC Scholarship : 3000 ಸಿಂಗಲ್ ಚೈಲ್ಡ್ ವಿದ್ಯಾರ್ಥಿನಿಯರಿಗೆ 36,200/-ರೂ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ ಮತ್ತು ಈ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿಯನ್ನು ಸಹ ಆಹ್ವಾನಿಸಲಾಗಿದೆ.

3000 ಸಿಂಗಲ್ ಚೈಲ್ಡ್ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಮಾನ್ಯತೆ ಪಡೆದ ಭಾರತೀಯ ಕಾಲೇಜುಗಳು ಅಥವಾ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆಯುತ್ತಿರುವ 3000 ಏಕೈಕ ಹೆಣ್ಣು ಮಕ್ಕಳಿಗೆ ವರ್ಷಕ್ಕೆ ರೂ. 36,200/-ರೂ ಯುಜಿಸಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಯುಜಿಸಿ ಹೇಳುವಂತೆ ಈ ವಿದ್ಯಾರ್ಥಿವೇತನವನ್ನು ಮಹಿಳೆಯರ ಶಿಕ್ಷಣಕ್ಕಾಗಿ ಬಳಸಬೇಕು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಶಿಕ್ಷಣವು ಅವರ ಜೀವನದ ಮೇಲೆ ನಿಯಂತ್ರಣವನ್ನು ಹೊಂದಲು ಸಿದ್ಧಪಡಿಸುತ್ತದೆ. ಆದ್ದರಿಂದ ಯುಜಿಸಿಯು ಕುಟಂಬದಲ್ಲಿ ಜನಿಸಿರುವಏಕೈಕ ಹೆಣ್ಣು ಮಗುವಿಗೆ ಸ್ನಾತಕೋತ್ತರ ಇಂದಿರಾಗಾಂಧಿ ವಿದ್ಯಾರ್ಥಿವೇತನವನ್ನು ಪರಿಚಯಿಸಿದೆ.

ಈ ಯೋಜನೆಯಡಿ ಸುಮಾರು 3000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಆಯ್ಕೆಯಾದವರಿಗೆ ವರ್ಷಕ್ಕೆ 36,200 ರೂ.ಗಳನ್ನು ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ. ಇದು ಸ್ನಾತಕೋತ್ತರ ಕೋರ್ಸ್‌ನ ಪೂರ್ಣ ಅವಧಿಯಾಗಿದೆ. ಆಯ್ದ ವಿದ್ಯಾರ್ಥಿಗಳಿಗೆ ಕೋರ್ಸ್‌ಗೆ ಸೇರಿದ ದಿನಾಂಕದಿಂದ ವಿಶ್ವವಿದ್ಯಾಲಯ, ಸಂಸ್ಥೆ ಅಥವಾ ಕಾಲೇಜಿನಿಂದ ಪ್ರಮಾಣೀಕರಿಸಿದಂತೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆಯ್ಕೆಯಾದ ನಂತರ ಪ್ರಶಸ್ತಿ ಪಡೆದವರಿಗೆ ವಾರ್ಷಿಕ ಆಧಾರದ ಮೇಲೆ ವಿದ್ಯಾರ್ಥಿವೇತನ ಮೊತ್ತವನ್ನು ಡಿಬಿಟಿ ಮೋಡ್‌ನಲ್ಲಿ ಪಾವತಿಸಲಾಗುತ್ತದೆ.

ಯುಜಿಸಿ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?:

* ಸ್ನಾತಕೋತ್ತರ ಪದವಿಯ ಮೊದಲ ವರ್ಷದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
* ಮೊದಲ ವರ್ಷದ ಪ್ರವೇಶದ ಸಮಯದಲ್ಲಿ 30 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
* ಯಾವುದೇ ನಿಗದಿತ ವಿಶ್ವವಿದ್ಯಾಲಯ ಅಥವಾ ಸ್ನಾತಕೋತ್ತರ ಕಾಲೇಜಿನಲ್ಲಿ ನಿಯಮಿತ, ಪೂರ್ಣಕಾಲಿಕ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿರುವ ಏಕೈಕ ಹೆಣ್ಣು ಮಗುವಿಗೆ ಈ ಯೋಜನೆ ಅನ್ವಯಿಸುತ್ತದೆ.
* ಸಹೋದರ ಹೊಂದಿರುವ ಬಾಲಕಿಯರಿಗೆ ಯುಜಿಸಿ ವಿದ್ಯಾರ್ಥಿವೇತನವನ್ನು ನೀಡಲಾಗುವುದಿಲ್ಲ. ಆದಾಗ್ಯೂ ಅವಳಿ ಹೆಣ್ಣು ಮಕ್ಕಳು ಅಥವಾ ಸಹೋದರ ಪುತ್ರಿಯರಾದ ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
* ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅನುಮತಿಸಲಾಗುವುದಿಲ್ಲ.

ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? :

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೊದಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:

* ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು 30 ನವೆಂಬರ್ 2021 ರ ಮೊದಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
* ಅಭ್ಯರ್ಥಿಯು ಓದುತ್ತಿರುವ ಸಂಸ್ಥೆಯು ಆನ್‌ಲೈನ್ ಅರ್ಜಿಯನ್ನು ಪರಿಶೀಲಿಸಬೇಕಾಗುತ್ತದೆ.
* ಬ್ರೋಷರ್‌ನಲ್ಲಿ ನೀಡಿರುವ ಫಾರ್ಮ್ಯಾಟ್‌ನ ಪ್ರಕಾರ ಸಿಂಗಲ್ ಗರ್ಲ್ ಚೈಲ್ಡ್ ಗೆ ಸಂಬಂಧಿಸಿದ ಅಫಿಡವಿಟ್‌ಗಳನ್ನು ಅಪ್‌ಲೋಡ್ ಮಾಡಬೇಕು.
* ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ನವೀಕರಣದ ಸ್ವೀಕೃತಿಯು ಮುಂದಿನ ವರ್ಷದ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ನವೀಕರಿಸಲಾಗುತ್ತದೆ.
* ಮುಂದಿನ ವರ್ಷ ಅಥವಾ ಸೆಮಿಸ್ಟರ್‌ಗೆ ಹೋಗಲು ವಿಫಲರಾದವರಿಗೆ ವಿದ್ಯಾರ್ಥಿವೇತನ ಸಿಗುವುದಿಲ್ಲ.

ಯುಜಿಸಿ ವಿದ್ಯಾರ್ಥಿವೇತನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
The University Grants Commission (UGC) has announced scholarship worth Rs 36,200 per annum offered to 3,000 single girl children who are pursuing their postgraduate degrees in recognised Indian colleges or institutes. Here is How to apply. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X