ಮನೆಯಲ್ಲಿ ಕುಳಿತು ಕೆಲಸ ಮಾಡುವುದಾದ್ರೆ ಇವೆಲ್ಲಾ ಬೆಸ್ಟ್ ಜಾಬ್ ಗಳು... ಕೈ ತುಂಬಾ ಸಂಪಾದನೆ ಕೂಡಾ!

By Kavya

ಸಾಮಾನ್ಯವಾಗಿ ಎಲ್ಲರ ಕೆಲಸ ಹೇಗಿರುತ್ತೆ ಅಂದ್ರೆ ಬೆಳಗ್ಗೆ ಎದ್ದು, ಆಫೀಸ್‌ಗೆ ಹೋಗಿ ಇಡೀ ದಿನ ಸಿಸ್ಟಮ್ ಮುಂದೆ ಕುಳಿತು ಟಕಾ ಟಕಾ ಎಂದು ಕಂಪ್ಯೂಟರ್ ಕುಟ್ಟುತ್ತಾ ಸಂಜೆ ಆದ್ರೆ ಮನೆಗೆ ಹಿಂತಿರುಗುದು. ತಿಂಗಳ ಕೊನೆಯಲ್ಲಿ ತಾವು ಮಾಡಿದ ಕೆಲಸಕ್ಕೆ ಸಂಬಳ ಪಡೆಯುವುದು. ಆದ್ರೆ ಇದೀಗ ಹಾಗಿಲ್ಲ, ಉದ್ಯೋಗ ಕ್ಷೇತ್ರದಲ್ಲೂ ಹಲವಾರು ಬದಲಾವಣೆಗಳನ್ನ ನೀವು ಕಾಣಬಹುದು.

ಮನೆಯಲ್ಲಿ ಕುಳಿತು ಕೆಲಸ ಮಾಡುವುದಾದ್ರೆ ಇವೆಲ್ಲಾ ಬೆಸ್ಟ್ ಜಾಬ್ ಗಳು... ಕೈ ತುಂಬಾ ಸಂಪಾದನೆ ಕೂಡಾ!

 

ಇದೀಗ ಮನೆಯಲ್ಲೇ ಕುಳಿತು ಕೆಲಸ ಮಾಡಿ ಕೈ ತುಂಬಾ ಸಂಪಾದಿಸಬಹುದು. ಈ ಹುದ್ದೆ ತುಂಬಾ ಅನುಕೂಲಕರವಾಗಿದ್ದು, ಈಗಷ್ಟೇ ಮದುವೆಯಾದವರು, ಇಲ್ಲ ತಾಯಿಯಾದವರು ಅಷ್ಟೇ ಯಾಕೆ ಆರೋಗ್ಯ ಸರಿಯಿಲ್ಲದವರು ಟ್ರಾವೆಲ್ ಮಾಡಲು ಸಾಧ್ಯವಾಗದೇ ಇರುವುದರಿಂದ ಅವರು ಕೂಡಾ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಅಷ್ಟೇ ಯಾಕೆ ನಿವೃತ್ತಿ ಜೀವನ ಅನುಭವಿಸುವವರು ಟೈಂ ಪಾಸ್ ಮಾಡಲು ಈ ರೀತಿಯಾಗಿ ದುಡಿಯಬಹುದು.

ಕಾರ್ಪೋರೇಟಿವ್ ವರ್ಲ್ಡ್‌ನಲ್ಲಿ ಹೇಗೆ ಇದ್ರೆ ಬೆಸ್ಟ್.... ಸಕ್ಸಸ್ ಸ್ಟೆಪ್ ಹತ್ತಬೇಕಾದ್ರೆ ಇದನ್ನೆಲ್ಲಾ ಅವಾಯ್ಡ್ ಮಾಡಿ!

ಇದೀಗ ಮನೆಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಹೆಚ್ಚಿನ ಸ್ಕೋಪ್ ಕೂಡಾ ಇದೆ. ಅದೆಷ್ಟೋ ಉದ್ಯೋಗವಕಾಶಗಳು ಕೂಡಾ ಇದೆ. ಮನೆಯಲ್ಲಿ ಕುಳಿತು ಕೆಲಸ ಆಯ್ಕೆಯನ್ನ ಯಾರು ಕೈಗೆತ್ತಿಕೊಳ್ಳುತ್ತಾರೋ ಅವರು ಕೈ ತುಂಬಾ ಸಂಪಾದಿಸಬಹುದು. ಮನೆಯಲ್ಲಿ ಕುಳಿತು ಮಾಡುವಂತಹ ಕೆಲಸಗಳ ಲಿಸ್ಟ್ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ. ಮುಂದಕ್ಕೆ ಓದಿ

ಕಾಪಿ ರೈಟರ್ ಹಾಗೂ ಪ್ರೂಫ್ ರೀಡರ್:

ನೀವು ಮನೆಯಲ್ಲಿ ಕುಳಿತು ಕೆಲಸ ಮಾಡುವುದೆಂದ್ರೆ ಇದು ಬೆಸ್ಟ್ ಆಯ್ಕೆ ಎಂದು ಹೇಳಬಹುದು. ಹೆಚ್ಚಿನ ಜನರು ಏನು ತಿಳಿದುಕೊಂಡಿದ್ದಾರೆ ಎಂದ್ರೆ ಕಾಪಿ ರೈಟರ್ ಹಾಗೂ ಪ್ರೂಫ್ ರೀಡರ್ ತುಂಬಾ ಸುಲಭ ಕೆಲಸವೆಂದು. ಆದ್ರೆ ಇದು ಸತ್ಯಕ್ಕೆ ದೂರವಾದ ಮಾತು.

ಕಾಪಿ ರೈಟರ್ ಅವರ ಮುಖ್ಯ ಕೆಲಸವೇನೆಂದ್ರೆ, ಪ್ರೊಡಕ್ಟ್ ನ್ನ ಪ್ರಮೋಟ್ ಮಾಡುವುದು ಹಾಗೂ ಪ್ರೂಫ್ ರೀಡರ್ ಅಂದ್ರೆ ಇತರರ ಕೆಲಸದ ಬಗ್ಗೆ ರಿವ್ಯೂ ನೀಡುವುದು ಹಾಗೂ ಏನಾದ್ರೂ ತಪ್ಪುಗಳು ಕಂಡು ಬಂದಲ್ಲಿ ಸರಿ ಪಡಿಸುವುದು. ಕಂಟೆಂಟ್ ಡೆವಲಪ್ ಮೆಂಟ್ ಪ್ರೊಸ್, ಜೆನ್ನಿ ಕಾಟೋನ್ ಹಾಘೂ ಈಸ್ಸೇ ಶಾರ್ಕ್ ಸೇರಿದಂತೆ ಹಲವಾರು ಕಂಪನಿಗಳು ಫ್ರೆಶರ್ಸ್ ಗೆ ಬೆಸ್ಟ್ ಅವಕಾಶ ನೀಡುತ್ತದೆ.

 

ಬೆಂಗಳೂರಿನಲ್ಲಿದ್ರೆ ಏನೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿ ಕೈ ತುಂಬಾ ದುಡ್ಡು ಪಡೆಯಬಹುದು ಗೊತ್ತಾ?

ಗ್ರಾಫಿಕ್ ಡಿಸೈನರ್:

ನೀವು ಗ್ರಾಫಿಕ್ ಡಿಸೈನರ್ ಆಗಿ ದುಡಿಯಬೇಕು ಎಂದಿದ್ದರೆ, ನಿಮ್ಮಲ್ಲಿ ಅಗತ್ಯವಾಗಿ ಮಲ್ಟಿಡಿಮೆಂಶನಲ್ ಸ್ಕಿಲ್ ಇರಬೇಕು. ಟೈಪೋಗ್ರಾಫಿ ಹಾಗೂ ಫೋಟೋಗ್ರಾಫಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಅದೆಷ್ಟೋ ಪ್ರೊಡಕ್ಷನ್ ಹೌಸ್ ಗಳು ಮನೆಯಿಂದ ಕೆಲಸ ಮಾಡುವ ಆಪ್ಷನ್ ನೀಡುತ್ತವೆ. ವೆಬ್‌ಸೈಟ್ ಡಿಸೈನರ್ ಆಗಿ ಇಲ್ಲ ಡೆಸ್ಕ್‌ಟಾಪ್ ಪಬ್ಲಿಶಿಂಗ್ ಡಿಸೈನರ್ ಆಗಿ ನೀವು ಕೆಲಸ ವನ್ನ ಆಯ್ಕೆ ಮಾಡಿಕೊಳ್ಳಬಹುದು.

ಪ್ರೊಡಕ್ಟ್ ವಿಮರ್ಶಕ:

ಇದೀಗ ಇ-ಕಾಮರ್ಸ್ ಹೆಚ್ಚು ಜನಪ್ರಿಯವಾಗಿದೆ. ಒಬ್ಬ ವ್ಯಕ್ತಿ ಏನಾದ್ರೂ ಐಟಂ ಖರೀದಿಸಬೇಕು ಎಂದಿದ್ದಾಗ ಅವನಿಗೆ ಆ ಪ್ರೊಡಕ್ಟ್ ಬಗ್ಗೆ ಏನೂ ತಿಳಿದಿರುವುದಿಲ್ಲ. ಕೆಲವು ಪ್ರೊಡಕ್ಟ್ ನೋಡಲು ಕೂಡಾ ಸಾಧ್ಯವಿರುವುದಿಲ್ಲ. ಇಂತಹ ಟೈಂನಲ್ಲಿ ರಿವ್ಯೂ ಮೊರೆ ಹೋಗುತ್ತಾರೆ. ರಿವ್ಯೂ ನೋಡಿ ಆ ಪ್ರೊಡಕ್ಟ್ ಖರೀದಿಸುವುದು ಅಥವಾ ಬೇಡವೋ ಎಂದು ಯೋಚಿಸುತ್ತಾರೆ. ರಿವ್ಯೂ ಪ್ರತಿಯೊಂದು ಪ್ರೊಡಕ್ಟ್ ಮಾರಾಟ ವಿಚಾರದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಎಕ್ಸ್‌ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಹಾಗಾಗಿ ಕಂಪನಿಗಳು ಪ್ರೊಡಕ್ಟ್ ರಿವ್ಯೂವರ್ ಎಂಬ ಪೋಸ್ಟ್ ಕೂಡಾ ಕ್ರಿಯೇಟ್ ಮಾಡಿ ಅದಕ್ಕೆ ನೇಮಕ ಕೂಡಾ ಮಾಡುತ್ತದೆ. ಇವರು ಆ ಕಂಪನಿಯ ಪ್ರೊಡಕ್ಟ್ ಬಗ್ಗೆ ರಿವ್ಯೂ ಸೈಟ್‌ಗಳಲ್ಲಿ ರಿವ್ಯೂ ಬರೆದು ಹಾಕುತ್ತಾರೆ. ಇತ್ತೀಚಿಗಿನ ಮಾರ್ಡನ್ ಜಗತ್ತಿನಲ್ಲಿ ಇದೊಂದು ಫೈನೆಸ್ಟ್ ಮಾರ್ಕೆಟಿಂಗ್ ಸ್ಟಾಟಜಿಯಾಗಿದೆ.

ವೆಬ್‌ಸೈಟ್ ಟೆಸ್ಟರ್:

ಯಾರಿಗೆ ಚೆನ್ನಾಗಿ ಮಾತನಾಡುವ ಕಲೆ ಹಾಗೂ ಇತರರಿಗೆ ಕಲಿಸಿಕೊಡುವ ಕಲೆ ಇದೆಯೋ ಅವರಿಗೆ ಇದು ಬೆಸ್ಟ್ ಜಾಬ್. ಈ ಜಾಬ್ ನಿಂದ ಕೈ ತುಂಬಾ ಸಂಪಾದಿಸಬಹುದು ಕೂಡಾ. ಇದಕ್ಕೆ ಬ್ರೌವಸರ್ ಅಪ್‌ಡೇಟ್ ಆಗಿರುವ ಸಿಂಪಲ್ ಕಂಪ್ಯೂಟರ್ ಇದ್ರೆ ಸಾಕು. ಜತೆಗೆ ಮೈಕ್ರೋಫೋನ್ ಹಾಗೂ ಡೀಸೆಂಟ್ ಬ್ರಾಡ್‌ ಬ್ಯಾಂಡ್ ಕನೆಕ್ಷನ್ ಕೂಡಾ ಬೇಕು. ವೆಬ್‌ಸೈಟ್ ಟೆಸ್ಟ್ ಮಾಡುವುದು ಹಾಗೂ ಜತೆಗೆ ಇದರ ಬಳಕೆ, ಕ್ಲಾರಿಟಿ ನ್ಯಾವಿಗೇಶನ್ ಹಾಗೂ ಇನ್ನಿತ್ತರ ಫ್ಯಾಕ್ಟರ್ಸ್ ಗಳ ಬಗ್ಗೆ ಮೌಲ್ಯಮಾಪನ ಮಾಡುವುದು ಈ ಫೀಲ್ಡ್ ನ ಮುಖ್ಯ ಕೆಲಸ.

ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!

For Quick Alerts
ALLOW NOTIFICATIONS  
For Daily Alerts

English summary
The typical norms of a working adult are that they go to an office in the morning, work hard the entire day and return back in the evening. For all that they do during the month, at the end of it, they are given monetary compensation. However, things are in for a change these days. Now there are a number of ways in which one can make money sitting at home
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more