UPSC CSE Prelims Exam 2022 : ಯುಪಿಎಸ್ಸಿ ನಾಗರಿಕ ಸೇವೆಗಳ ಪ್ರಿಲಿಮಿನರಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು ಇಲ್ಲಿವೆ

ಕೇಂದ್ರೀಯ ಲೋಕಸೇವಾ ಆಯೋಗವು ನಾಗರಿಕ ಸೇವೆ ಪರೀಕ್ಷೆಯ ಪ್ರಿಲಿಮಿನರಿ ಪರೀಕ್ಷೆಯನ್ನು ಅನ್ನು ಜೂನ್ 5,2022 ರಂದು ನಿಗದಿಪಡಿಸಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ನಾಳೆ ನಡೆಯುವ ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗುವವರಿಗೆ ಕೊನೆಯ ಕ್ಷಣದ ತಯಾರಿಗೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು

ನೀವು ಈಗಾಗಲೆ ಸಾಕಷ್ಟು ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದರೆ ನಿಮ್ಮ ನಿಖರತೆಯ ಬಗ್ಗೆ ನಿಮಗೆ ಸ್ಪಷ್ಟತೆಯಿರುತ್ತದೆ. ಆದ್ದರಿಂದ ಈಗ ಯಾವುದೇ ಹೊಸ ಆಲೋಚನೆಗಳಿಗೆ ಮುಂದಾಗಬೇಡಿ, ಇದರಿಂದ ನಿಮಗೆ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗುತ್ತದೆ. ನೀವು ಖಚಿತಪಡಿಸಿಕೊಂಡಿರುವ ವಿಷಯಗಳಿಗೆ ಸರಿಯಾಗಿ ಉತ್ತರಿಸಲು ಪ್ರಯತ್ನಿಸಿ.
ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು

ಸಮಯ ನಿರ್ವಹಣೆ :

ಪರೀಕ್ಷೆಗೆ ಸರಿಯಾದ ಸಮಯಕ್ಕೆ ಹಾಜರಾಗಿ ಇದರಿಂದ ಮನಸ್ಸು ಆರಾಮದಾಯಕವಾಗಿರುತ್ತದೆ. ನಿಗದಿತ ಅವಧಿಗಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವುದು ಒಳಿತು. ಅಭ್ಯರ್ಥಿಗಳು ಮೊದಲು ಪ್ರಶ್ನೆ ಮತ್ತು ಆಯ್ಕೆಗಳನ್ನು ಸರಿಯಾಗಿ ಓದಿ ನಂತರ ಅಲ್ಲಿ ನೀಡಲಾಗಿರುವ ಉತ್ತರಗಳನ್ನು ಗುರುತಿಸಿ. ಉತ್ತರ ಗೊತ್ತಿರದ ಪ್ರಶ್ನೆಗಾಗಿ ಸಮಯ ವ್ಯರ್ಥ ಮಾಡಬೇಡಿ, ಮೊದಲು ಉತ್ತರಿಸಲು ಸಾಧ್ಯವಾಗುವ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸುವ ಮೂಲಕ ಅಂತಿಮ ಕ್ಷಣದಲ್ಲಿ ಗಾಬರಿಯಾಗುವ ಸ್ಥಿತಿ ಎದುರಾಗುವುದಿಲ್ಲ.

ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು

ಆರಾಮದಾಯಕ ಬಟ್ಟೆಗಳನ್ನು ಧರಿಸಿ :

ಮೇ ತಿಂಗಳಿಗೆ ಹೋಲಿಸಿದರೆ ಹವಾಮಾನವು ಆರಾಮದಾಯಕವಾಗಿದ್ದರೂ ಸ್ವಲ್ಪ ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ. ಇದರಿಂದ ಪರೀಕ್ಷೆಗೆ ಸುಗಮವಾಗಿ ಹಾಜರಾಗಲು ನಿಮಗೆ ಸಹಾಯವಾಗುತ್ತದೆ. ಒಂದು ವೇಳೆ ಅಭ್ಯರ್ಥಿಯು ಯಾವುದೇ ಆಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆಗಳನ್ನು ಹೊಂದಿದ್ದಲ್ಲಿ ಅಂತವರಿಗೆ ಆರಾಮವಾಗಿರಲು ಆರಾಮದಾಯಕವಾದ ಬಟ್ಟೆಗಳು ಸರಿಹೊಂದುತ್ತವೆ. ನಿಮ್ಮ ದೈಹಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ.

ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು

ಮುಂಚಿತವಾಗಿ ನಿಮ್ಮ ಡೆಸ್ಕ್ ಅನ್ನು ಸ್ಯಾನಿಟೈಜ್ ಮಾಡಿ :

ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪರೀಕ್ಷೆಗೆ ಸ್ಯಾನಿಟೈಸರ್ ಅನ್ನು ಒಯ್ಯಲು ಅವಕಾಶ ಮಾಡಿಕೊಟ್ಟಿರುವುದರಿಂದ ಸೋಂಕಿಗೆ ಒಳಗಾಗುವ ಬಗ್ಗೆ ಚಿಂತಿಸದೇ ಇರಲು ನಿಮ್ಮ ಡೆಸ್ಕ್ ಅನ್ನು ಮೊದಲೇ ಸ್ಯಾನಿಟೈಜ್ ಮಾಡಿಕೊಳ್ಳಿ. ಇದರಿಂದ ನೀವು ನಿಶ್ಚಿಂತೆಯಾಗಿ ಪರೀಕ್ಷೆಯನ್ನು ಬರೆಯಬಹುದು.

ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು

ಶಾಂತವಾಗಿರಿ ಮತ್ತು ಆತ್ಮವಿಶ್ವಾಸದಿಂದಿರಿ :

ಅಂತಿಮವಾಗಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು ಮತ್ತು ನಿಮ್ಮ ಪರೀಕ್ಷಾ ತಯಾರಿಯಲ್ಲಿ ನಂಬಿಕೆಯಿಡಬೇಕು. ಆಗ ಮಾತ್ರ ನೀವು ತುಂಬಾನೆ ಕಾಳಜಿಯಿಂದ ಪರೀಕ್ಷೆ ಬರೆಯಲು ನೆರವಾಗುತ್ತದೆ. ನಿಮ್ಮ ತಯಾರಿ, ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಆತ್ಮವಿಶ್ವಾಸವನ್ನು ಬಲವಾಗಿ ನಂಬಿ ಆಗ ಯಾವುದೇ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸುವುದಿಲ್ಲ. ನೀವೇ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯನ್ನು ಇಡಿ ಆಗ ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯ ಅಂಶಗಳು ನಿಮ್ಮನ್ನು ಸುಲಭವಾಗಿ ಪರೀಕ್ಷೆಯನ್ನು ಬರೆಯಲು ಸಹಕರಿಸುತ್ತವೆ. ಎಲ್ಲಾ UPSC ಆಕಾಂಕ್ಷಿಗಳಿಗೆ ನಾವು ಶುಭ ಹಾರೈಸುತ್ತೇವೆ.

For Quick Alerts
ALLOW NOTIFICATIONS  
For Daily Alerts

English summary
UPSC CSE prelims exam on june 5. Here is the last minute preparation tips for aspirants in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X