UPSC Mains Exam 2022 : ಯುಪಿಎಸ್ಸಿ ಮುಖ್ಯ್ ಪರೀಕ್ಷಾ ತಯಾರಿಗೆ ಸಲಹೆಗಳು ಇಲ್ಲಿವೆ

ಯುಪಿಎಸ್‌ಸಿ ನಾಗರಿಕ ಸೇವೆ ಪರೀಕ್ಷೆ (ಸಿಎಸ್‌ಇ), ವಾರ್ಷಿಕವಾಗಿ ನಡೆಸುವ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಪರೀಕ್ಷೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದ್ದು ಪ್ರಿಲಿಮಿನರಿ, ಪ್ರಮುಖ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಯುಪಿಎಸ್‌ಸಿ ನಾಗರಿಕ ಸೇವೆ ಪರೀಕ್ಷೆ (ಸಿಎಸ್‌ಇ) ಪ್ರಿಲಿಮಿನರಿ ಫಲಿತಾಂಶವನ್ನು ಜೂನ್ 22, 2022 ರಂದು ಪ್ರಕಟಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸೆಪ್ಟೆಂಬರ್ 16, 2022ರಂದು ನಡೆಯುವ ಮುಖ್ಯ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುತ್ತಾರೆ. ಆಕ್ಷಾಂಕ್ಷಿಗಳು ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕೆಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.

ಯುಪಿಎಸ್ಸಿ ಮುಖ್ಯ ಪರೀಕ್ಷಾ ತಯಾರಿಗೆ ಪ್ರಮುಖ ಸಲಹೆಗಳು

ಯುಪಿಎಸ್ಸಿ ಮುಖ್ಯ ಪರೀಕ್ಷಾ ತಯಾರಿಗೆ ಸಲಹೆಗಳು :

1. ದಿನನಿತ್ಯದ ಸುದ್ದಿಗಳೊಂದಿಗೆ ಅಪ್‌ಡೇಟ್ ಆಗಿ :

ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕೇಳಲಾದ ಹೆಚ್ಚಿನ ಪ್ರಶ್ನೆಗಳು ಅಭಿಪ್ರಾಯ ಆಧಾರಿತವಾಗಿರುವುದರಿಂದ, ಆಕಾಂಕ್ಷಿಗಳು ತಮ್ಮ ಉತ್ತರಗಳನ್ನು ಸಂಬಂಧಿತ ಉದಾಹರಣೆಗಳೊಂದಿಗೆ ಉತ್ತರಿಸುವ ಅಗತ್ಯವಿದೆ. ಆದ್ದರಿಂದ
ಆಕಾಂಕ್ಷಿಗಳು ಪ್ರಸ್ತುತ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅಭ್ಯರ್ಥಿಗಳು ತಮ್ಮ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಚಿಂತನೆಯನ್ನು ಬಲಪಡಿಸಿಕೊಳ್ಳಲು ಪ್ರತಿದಿನ ಪತ್ರಿಕೆಗಳನ್ನು ಓದುವುದು ಸಹ ಮುಖ್ಯವಾಗಿದೆ.

2. ಬರವಣಿಗೆ ಅಭ್ಯಾಸ ಮಾಡಿ :

ಪರೀಕ್ಷೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಪ್ರಬಂಧ ಬರವಣಿಗೆಯನ್ನು ಅಭ್ಯಾಸ ಮಾಡಲು ಆಕಾಂಕ್ಷಿಗಳು ಸಾಧ್ಯವಾದಷ್ಟು ಸಮಯವನ್ನು ಹೂಡಿಕೆ ಮಾಡಬೇಕು. ಇದು ಆಕಾಂಕ್ಷಿಗಳಿಗೆ ತಮ್ಮ ಆಲೋಚನೆಗಳು ಮತ್ತು ಬರವಣಿಗೆಯ ವೇಗದ ನಡುವೆ ಸಂಪರ್ಕವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

3. ಪರಿಷ್ಕರಣೆ ಮತ್ತು ಸಮಯ ನಿರ್ವಹಣೆ ಅಗತ್ಯ :

ಮುಖ್ಯ ಪರೀಕ್ಷೆಗೆ ಲಭ್ಯವಿರುವ ಅಧ್ಯಯನ ಸಾಮಗ್ರಿಗಳನ್ನು ಅಧ್ಯಯನ ಮಾಡಿರುವ ಆಕಾಂಕ್ಷಿಗಳು ಪ್ರತಿದಿನ ಎಲ್ಲಾ ವಿಷಯಗಳನ್ನು ಪರಿಷ್ಕರಿಸುವತ್ತ ಗಮನಹರಿಸಬೇಕು. ಆಕಾಂಕ್ಷಿಗಳು ಕಂಠಪಾಠ ಮಾಡುವುದು ಸುಲಭವಾದ್ದರಿಂದ ಒಂದೇ ರೀತಿಯ ಸಮಸ್ಯೆಗಳು ಮತ್ತು ವಿಷಯಗಳನ್ನು ಕ್ಲಬ್ ಮಾಡುವ ಮೂಲಕ ತಮ್ಮ ಪರಿಷ್ಕರಣೆಯನ್ನು ಯೋಜಿಸಬೇಕು. ಆಕಾಂಕ್ಷಿಗಳಿಗೆ ಗಮನಾರ್ಹವಾಗಿ ಸಹಾಯ ಮಾಡುವ ಇತರ ಕೌಶಲ್ಯಗಳಲ್ಲಿ ಸಮಯ ನಿರ್ವಹಣೆ ಒಂದು ಮುಖ್ಯವಾಗಿದೆ. ತಮ್ಮ ಸಮಯ ನಿರ್ವಹಣೆ ಮಾಡುವ ಮೂಲಕ ಆಕಾಂಕ್ಷಿಗಳು ಪರೀಕ್ಷೆಯ ಸಮಯದಲ್ಲಿ ತಮ್ಮ ಸಮಯವನ್ನು ಸಮಾನವಾಗಿ ವಿಭಜಿಸುವುದನ್ನು ಖಚಿತಪಡಿಸಿಕೊಳ್ಳಬಹುದು.

4. ಅಧ್ಯಯನ ಸಾಮಗ್ರಿಗಳನ್ನು ಪರಿಷ್ಕರಿಸಿ :

ಆಕಾಂಕ್ಷಿಗಳು ಅಧ್ಯಯನಕ್ಕಾಗಿ ಹೊಸ ಕಲಿಕೆಯ ಸಂಪನ್ಮೂಲಗಳನ್ನು ತೆಗೆದುಕೊಳ್ಳುವ ಬದಲು ಅವರು ಮೊದಲಿನಿಂದಲೂ ಅಧ್ಯಯನ ಮಾಡಿದ ಸಾಮಗ್ರಿಗಳಿಗೆ ಒತ್ತು ನೀಡುವುದು ಒಳಿತು.
ಅಂತಿಮ ಕ್ಷಣದ ಹೊಸ ವಿಷಯಗಳ ಅಧ್ಯಯನವು ಮನಸ್ಸಿಗೆ ಗೊಂದಲವನ್ನು ಉಂಟುಮಾಡಬಹುದು. ಕೊನೆಯ ಕ್ಷಣದಲ್ಲಿ ಸಂಪೂರ್ಣ ಪಠ್ಯಕ್ರಮವನ್ನು ಓದುವ ಬದಲು ತಮ್ಮ ಟಿಪ್ಪಣಿಗಳನ್ನು ಓದುವುದು ಸುಲಭ.

5. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ :

ಪರೀಕ್ಷೆ ಸಮೀಪಿಸುತ್ತಿದ್ದಂತೆ ಒತ್ತಡದ ಪ್ರಮಾಣ ಹೆಚ್ಚಳವಾಗುತ್ತದೆ. ಈ ಸಂದರ್ಭದಲ್ಲಿ ಆಕಾಂಕ್ಷಿಗಳು ಪೌಷ್ಠಿಕಾಂಶದ ಆಹಾರವನ್ನು ಹೊಂದಲು ಮತ್ತು ಚೆನ್ನಾಗಿ ನಿದ್ರೆ ಮಾಡಲು ಸಲಹೆ ನೀಡಲಾಗುತ್ತದೆ.
ಪರೀಕ್ಷೆಯ ಸಮಯದಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ಏಕಾಗ್ರತೆ ಮುಖ್ಯವಾಗಿರುವುದರಿಂದ ದೇಹವು ವಿಶ್ರಾಂತಿಯಿಂದಿರಲು ಅನಕೂಲವಾಗುತ್ತದೆ.

ಈ ಎಲ್ಲಾ ಅಂಶಗಳು ಅತ್ಯಗತ್ಯವಾಗಿದ್ದರೂ ಪರೀಕ್ಷಾರ್ಥಿಯು ಸಕಾರಾತ್ಮಕ ಮನೋಭಾವ ಮತ್ತು ನಂಬಿಕೆಯನ್ನು ಹೊಂದಿರುವುದು ಹೆಚ್ಚು ಮುಖ್ಯ. ಇದರಿಂದ ಪರೀಕ್ಷೆಯಲ್ಲಿ ಉತ್ತಮವಾಗಿ ಹೊರಹೊಮ್ಮಲು ನಿಮಗೆ ಸಹಾಯ ಮಾಡುತ್ತದೆ.

For Quick Alerts
ALLOW NOTIFICATIONS  
For Daily Alerts

English summary
UPSC main exam scheduled on september 16. Here is the last minute preparation tips.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X