ಪಿಯುಸಿ ನಂತರ ಯಾವ ಕೋರ್ಸ್‌ ಮಾಡಿದ್ರೆ ಅತೀ ಹೆಚ್ಚು ಸಂಬಳ ಪಡೆಯಬಹುದು ಗೊತ್ತಾ ?

ಪಿಯುಸಿ ನಂತರ ಮುಂದೇನು ? ಯಾವ ಕೋರ್ಸ್‌ ಮಾಡಿದರೆ ಬೇಗ ಕೆಲಸ ಸಿಗತ್ತೆ? ಯಾವ ಕೋರ್ಸಿಗೆ ಸ್ಕೋಪ್ ಜಾಸ್ತಿ ಇದೆ? ಏನು ಮಾಡಿದರೆ ಉತ್ತಮ ಸಂಬಳ ಸಿಗುವ ಕೆಲಸ ಸಿಗತ್ತೆ? ಅಬ್ಬಬ್ಬಾ ಏನೆಲ್ಲಾ ಪ್ರಶ್ನೆಗಳು ತಲೆಯೊಳಗೆ ಹೊಕ್ಕಿ ಬಿಡುತ್ತವೆ ಅಂದ್ರೆ, ಯಾವುದಕ್ಕೆ ಸಲೂಷನ್ ಹುಡುಕೋದು ಅನ್ನೋದೆ ದೊಡ್ಡ ಪ್ರಶ್ನೆಯಾಗಿ ಬಿಡತ್ತೆ. ಈ ಬಗ್ಗೆ ಸ್ನೇಹಿತರ ಬಳಿ ಚರ್ಚೆ ಮಾಡೋದಾ? ತಂದೆ ತಾಯಿ ಹತ್ರ ಕೇಳೋದಾ? ಶಿಕ್ಷಕರನ್ನೇ ಮಾತನಾಡಿಸೋದು ಒಳಿತಾ? ಅವರೆಲ್ಲಾ ನನ್ನ ಆಸಕ್ತಿ ವಿಷಯದ ಬಗೆಗೆ ಬೆಂಬಲ ನೀಡುತ್ತಾರಾ ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ನನ್ನ ತಲೆಯೊಳಗೂ ಇತ್ತು. ಹಾಗೆ ಈಗ ನಿಮ್ಮ ತಲೆಯೊಳಗೂ ಓಡಾಡ್ತಿದೆ ಅಲ್ವಾ?

 

ಹೌದು ಈ ಆಧುನಿಕ ಯಾಂತ್ರಿಕ ಬದುಕಿಗೆ ಶಿಕ್ಷಣ ಅತ್ಯಗತ್ಯ ಜೊತೆಗೆ ಉತ್ತಮ ಕೆಲಸವೂ ಅಗತ್ಯ. ಜೀವನವನ್ನು ಉನ್ನತ ರೀತಿಯಲ್ಲಿ ಸಾಗಿಸಲು ಎಷ್ಟು ಸಂಬಳವಿದ್ದರೂ ಸಾಲೋದಿಲ್ಲ ಹಾಗಾಗಿ ನಾವಿವತ್ತು ಪಿಯುಸಿ ಓದಿದ ವಿದ್ಯಾರ್ಥಿಗಳು ಯಾವೆಲ್ಲಾ ಕೋರ್ಸ್‌ ಮಾಡಿದ್ರೆ ಕೈ ತುಂಬಾ ಸಂಬಳ ಪಡೆಯಬಹುದು ಅನ್ನುವ ಪುಟ್ಟ ಮಾಹಿತಿಯನ್ನು ನೀಡ್ತಿದ್ದೇವೆ. ಇದನ್ನ ಓದಿದ ನಂತರ ನೀವೆ ಯೋಚನೆ ಮಾಡಿ. ಇಲ್ಲಿ ನೀಡಲಾಗಿರುವುದರಲ್ಲಿ ಯಾವ ಕೋರ್ಸ್‌ ನಿಮ್ಮ ಆಸಕ್ತಿಗೆ ಸೂಕ್ತವಾಗಿದೆ ಮತ್ತು ಯಾವುದು ಸುಲಭವಾಗಿದೆ ? ಹಾಗೆ ಯಾವ ಕೋರ್ಸ್‌ ನಿಮಗಿಷ್ಟ ಎಂದು ಗುರುತಿಸಿ ಅಧ್ಯಯನ ಮಾಡಿ ಆಗ ಖಂಡಿತವಾಗಿಯೂ ನಿಮ್ಮ ವೃತ್ತಿ ಬದುಕು ಚೆನ್ನಾಗಿರತ್ತೆ ಜೊತೆಗೆ ಉತ್ತಮ ಸಂಬಳವೂ ಸಿಗತ್ತೆ.

ಪಿಯುಸಿ ನಂತರ ಅತೀ ಹೆಚ್ಚು ಸಂಬಳ ಪಡೆಯಬಹುದಾದ ಕೋರ್ಸ್‌ಗಳ ಮಾಹಿತಿ

1. ಚಾರ್ಟೆಡ್ ಅಕೌಂಟೆನ್ಸಿ:

1. ಚಾರ್ಟೆಡ್ ಅಕೌಂಟೆನ್ಸಿ:

ಚಾರ್ಟೆಡ್ ಅಕೌಂಟೆಂಟ್ ಅತಿ ಹೆಚ್ಚು ಸಂಬಳ ಗಿಟ್ಟಿಸಿಕೊಳ್ಳುವಂತಹ ಒಂದು ಉದ್ಯೋಗ ಅಂತಾನೆ ಹೇಳಬಹುದು. ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಕೋರ್ಸ್‌ ಅನ್ನು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಮಾಡಬಹುದು. ಸಿಎ ಕೋರ್ಸ್ ಮಾಡಲು ಮೂರು ಹಂತಗಳಿರುತ್ತವೆ ಅವುಗಳೆಂದರೆ
1. ಕಾಮನ್ ಪ್ರೊಫಿಷಿಯನ್ಸಿ ಟೆಸ್ಟ್ (ಸಿಪಿಟಿ)
2. ಇಂಟಿಗ್ರೇಟೆಡ್ ಪ್ರೊಫೆಷನಲ್ ಕಾಂಪಿಟೆನ್ಸ್ ಕೋರ್ಸ್‌ (ಐಪಿಸಿಸಿ)
3. ಫೈನಲ್ ಎಕ್ಸಾಮಿನೇಷನ್

ಈ ಮೂರು ಹಂತಗಳನ್ನು ಕಂಪ್ಲೀಟ್ ಮಾಡಿದ ನಂತರ ನೀವು ಚಾರ್ಟೆಡ್ ಅಕೌಂಟೆಂಟ್ ಆಗುತ್ತೀರಿ. ಈ ಕೋರ್ಸ್‌ ಮಾಡಲು ತುಂಬಾನೆ ತಾಳ್ಮೆ ಮತ್ತು ಹೆಚ್ಚು ಶ್ರಮ ಅಗತ್ಯ. ಆದರೆ ಒಂದು ಬಾರಿ ನೀವು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರೆ ಮುಗೀತು ಆರಂಭಿಕ ಹಂತದಲ್ಲೇ ಉತ್ತಮ ವೇತನವನ್ನು ಪಡೆಯಬಹುದು. ಉದಾಹರಣೆಗೆ ಚಾರ್ಟೆಡ್ ಅಕೌಂಟೆಂಟ್‌ ಆದರೆ ವರ್ಷಕ್ಕೆ 30 ರಿಂದ 35 ಲಕ್ಷದವರೆಗೂ ಸಂಬಳವನ್ನು ಪಡೆಯಬಹುದು.

2. ಫ್ಯಾಷನ್ ಡಿಸೈನಿಂಗ್‌ ನಲ್ಲಿ ಬ್ಯಾಚುಲರ್ ಪದವಿ:
 

2. ಫ್ಯಾಷನ್ ಡಿಸೈನಿಂಗ್‌ ನಲ್ಲಿ ಬ್ಯಾಚುಲರ್ ಪದವಿ:

ಇದೊಂದು ಕ್ರಿಯಾಶೀಲ ಜಗತ್ತು ಇಲ್ಲಿ ಕಲೆಗೆ ಬೆಲೆ. ಹೌದು ಎಲ್ಲರಂತೆ ತಾನೂ ಓದಿ ದುಡಿಯುವುದು ಒಂದೆಡೆಯಾದರೆ, ತನ್ನಲ್ಲಿರುವ ಕ್ರಿಯೇಟಿವಿಟಿಯಿಂದ ಉತ್ತಮ ಉದ್ಯೋಗ ಮತ್ತು ಸಂಬಳ ಗಿಟ್ಟಿಸಿಕೊಳ್ಳುವುದು ಇನ್ನೊಂದು ಕಲೆ. ಈಗೆಲ್ಲಾ ಟ್ರೆಂಡ್ ಅನ್ನೋದೆ ಫ್ಯಾಷನ್ ಹಾಗಾಗಿ ಫ್ಯಾಷನ್‌ ಡಿಸೈನರ್ ಗಳಿಗೆ ಹೆಚ್ಚು ಬೇಡಿಕೆ ಇದೆ. ಚಿಕ್ಕ ಮಕ್ಕಳಿಂದ ಹಿಡಿದೂ ವೃದ್ಧರ ವರೆಗೂ ಫ್ಯಾಷನ್ ಅನ್ನೋದೆ ಗುಂಗಾಗಿ ಬಿಟ್ಟಿದೆ ಹಾಗಾಗಿ ನೀವು ಒಮ್ಮೆ ಈ ಕೋರ್ಸ್‌ ಮಾಡಿ ನಂತರ ನಿಮ್ಮ ಶ್ರಮದಿಂದ ಒಮ್ಮೆ ಫೇಮಸ್ ಆದ್ರೆ ಸಾಕು ಕೈತುಂಬಾ ಕೆಲಸ ಮತ್ತು ಸಂಬಳ ನಿಮ್ಮ ಬಳಿಯೇ ಬರುತ್ತದೆ.

ಯಾವೆಲ್ಲಾ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳಿವೆ:
* ಬಿ.ಡಿಇಎಸ್‌ (B.Des. ) ಫ್ಯಾಷನ್ ಡಿಸೈನ್
* ಬಿ.ಡಿಇಎಸ್‌ (B.Des. ) ಲೆಧರ್ ಡಿಸೈನ್
* ಬಿ.ಡಿಇಎಸ್‌ (B.Des. ) ಅಸ್ಸೆಸರಿ ಡಿಸೈನ್
* ಬಿ.ಡಿಇಎಸ್‌ (B.Des. ) ಫ್ಯಾಷನ್ ಕಮ್ಯುನಿಕೇಷನ್

ನೀವು ಫ್ಯಾಷನ್ ಡಿಸೈನರ್ ಆಗಿ ಸಂಬಳ ಪಡೆಯೋಕೆ ಪ್ರಾರಂಭಿಸಿದರೆ ವರ್ಷಕ್ಕೆ 4 ರಿಂದ 5 ಲಕ್ಷದವರೆಗೂ ಹಣವನ್ನು ಗಳಿಸಬಹುದು.

3. ಬ್ಯಾಚುಲರ್ ಆಫ್ ಲಾ:

3. ಬ್ಯಾಚುಲರ್ ಆಫ್ ಲಾ:

ವಕೀಲ ವೃತ್ತಿ ತುಂಬಾನೆ ಶ್ರೇಷ್ಠ ಅನ್ನೋ ಮಾತಿದೆ ಹಾಗೆ ಒಂದು ಕೇಸ್ ಅನ್ನು ಬೇಗ ಗೆದ್ದರೆ ಸಾಕು ಉತ್ತಮ ಸಂಬಳ ಪಡೆಯಬಹುದು. ಈ ರೀತಿ ವಕೀಲ ವೃತ್ತಿಯಲ್ಲಿ ಒಂದು ತಿಂಗಳಲ್ಲೇ ಹೆಚ್ಚು ಸಂಬಳವನ್ನು ಪಡೆಯಬಹುದು.

ನೀವು ವಕೀಲ / ವಕೀಲೆಯಾಗಬೇಕು ಅಂದ್ರೆ ಎಲ್‌ಎಲ್‌ಬಿ ಪದವಿಯನ್ನು ಬಾರ್‌ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮಾಡಿರಬೇಕು ಮತ್ತು ಅಭ್ಯರ್ಥಿಗಳು ಆಲ್‌ ಇಂಡಿಯಾ ಬಾರ್ ಎಕ್ಸಾಮಿನೇಷನ್ (ಎಐಬಿಇ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇಷ್ಟು ಮಾಡಿದ್ರೆ ಸಾಕು ನೀವು ವಕೀಲ ವೃತ್ತಿಯಲ್ಲಿ ತೊಡಗಬಹುದು. ಇನ್ನೂ ವಕೀಲ / ವಕೀಲೆ ವೃತ್ತಿಯಲ್ಲಿ ವರ್ಷಕ್ಕೆ 8 ರಿಂದ 10 ಲಕ್ಷದ ವರೆಗೂ ವೇತನವನ್ನು ಪಡೆಯಬಹುದು.

4. ಬಿ.ಎಸ್ಸಿ ಇನ್ ಮೆಕ್ಯಾನಿಕಲ್ ಅಥವಾ ಮರೈನ್ ಇಂಜಿನಿಯರಿಂಗ್:

4. ಬಿ.ಎಸ್ಸಿ ಇನ್ ಮೆಕ್ಯಾನಿಕಲ್ ಅಥವಾ ಮರೈನ್ ಇಂಜಿನಿಯರಿಂಗ್:

ನಿಮಗೆ ಟ್ರ್ಯಾವೆಲ್ ಮಾಡೋದಂದ್ರೆ ತುಂಬಾನೆ ಇಷ್ಟಾನಾ? ಇನ್ನೂ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡೋದಂದ್ರೆ ಖುಷಿನಾ ? ಹೊಸ ವ್ಯಕ್ತಿಗಳನ್ನ ಪರಿಚಯ ಮಾಡ್ಕೊಳೋದು ಅಂದ್ರೆ ಒಂಥರಾ ಸಂಭ್ರಮನಾ? ಹಾಗಿದ್ರೆ ತಡ ಮಾಡ್ಬೇಡಿ ನಿಮಗೆ ಈ ಮರ್ಚಾಂಟ್ ನೇವಿ ವೃತ್ತಿ ತುಂಬಾನೆ ಪರ್ಫೆಕ್ಟ್ ಜಾಬ್. ಮರ್ಚಾಂಟ್ ನೇವಿ ವೃತ್ತಿ ಮಾಡೋಕೆ ಇಷ್ಟ ಪಡುವವರು ಬಿ.ಎಸ್ಸಿ ಇನ್ ಮೆಕ್ಯಾನಿಕಲ್ ಅಥವಾ ಮರೈನ್ ಇಂಜಿನಿಯರಿಂಗ್ ಕೋರ್ಸ್‌ ಅನ್ನು ಮಾಡಬಹುದು.

ಈ ಕೆಲಸಕ್ಕೆ ಸೇರಿದರೆ ತಿಂಗಳಿಗೆ 7 ರಿಂದ 8 ಲಕ್ಷದವರೆಗೂ ವೇತನವನ್ನು ಪಡೆಯಬಹುದು ಗೊತ್ತಾ? ಹಾಗೆ ಬೇರೆ ಉದ್ಯೋಗಗಳಿಗೆ ಹೋಲಿಸಿದರೆ ವರ್ಷಕ್ಕೆ ಹೆಚ್ಚು ವೇತನವನ್ನು ಪಡೆಬಹುದು.

5. ಬಿಸಿಎಸ್‌ ಅಥವಾ ಎಂಎಸ್‌ ಇನ್ ಕಂಪ್ಯೂಟರ್ ಸೈನ್ಸ್:

5. ಬಿಸಿಎಸ್‌ ಅಥವಾ ಎಂಎಸ್‌ ಇನ್ ಕಂಪ್ಯೂಟರ್ ಸೈನ್ಸ್:

ಕೆಲಸ ತುಂಬಾನೆ ಲಾಭದಾಯಕವಾಗಿರಬೇಕು ಮತ್ತು ಇಷ್ಟವಾಗುವ ಕೆಲಸ ನಿಮ್ಮದಾಗಬೇಕು ಅಂದ್ರೆ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಸಿಎಸ್‌ ಅಥವಾ ಎಂಎಸ್ ಕೋರ್ಸ್‌ ಮಾಡಿ. ಈ ಕೋರ್ಸ್‌ ಮಾಡಿದ್ರೆ ಸಾಫ್ಟ್‌ವೇರ್ ಇಂಜಿನಿಯರ್ ಆಗಬಹುದು. ಐಟಿ ಕ್ಷೇತ್ರದಲ್ಲಿ 10 ರಿಂದ 20 ವರ್ಷಗಳ ಕೆಲಸದ ಅನುಭವ ಪಡೆದರೆ ನಂತರ ವರ್ಷಕ್ಕೆ 22 ಲಕ್ಷ ವೇತನವನ್ನು ಪಡೆಯಬಹುದು ಗೊತ್ತಾ?

6. ಪೈಲಟ್ ಟ್ರೈನಿಂಗ್ ಸ್ಕೂಲ್:

6. ಪೈಲಟ್ ಟ್ರೈನಿಂಗ್ ಸ್ಕೂಲ್:

ಪಿಯುಸಿ ಸೈನ್ಸ್‌ ಬ್ಯಾಕ್‌ಗ್ರಾಂಡ್‌ನಿಂದ ಬಂದ ವಿದ್ಯಾರ್ಥಿಗಳು ಕಮರ್ಷಿಯಲ್ ಪೈಲಟ್ ಪ್ರೊಫೆಷನ್‌ಗೆ ಹೋಗಬಹುದು. ಈ ಪ್ರೊಫೆಷನ್‌ಗೆ ಹೋಗಬೇಕು ಅಂತ ಆಸೆ ಇದ್ದರೆ ಪಿಯುಸಿ ನಂತರ ಏರ್ ಫ್ಲೈಯಿಂಗ್ ಸ್ಕೂಲ್‌ಗೆ ಸೇರಿಕೊಳ್ಳಬೇಕಿರುತ್ತದೆ. ತರಬೇತಿ ಪಡೆದ ನಂತರ ಕಮರ್ಷಿಯಲ್ ಪೈಲಟ್ ಉದ್ಯೋಗಕ್ಕೆ ಸೇರಿಕೊಂಡ ನಂತರ 15 ರಿಂದ 20 ವರ್ಷ ಕೆಲಸದ ಅನುಭವ ಉಳ್ಳ ಅಭ್ಯರ್ಥಿಗಳು ವರ್ಷಕ್ಕೆ 35 ಲಕ್ಷದವರೆಗೂ ವೇತನವನ್ನು ಪಡೆಯಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving details of jobs which could get high salary after class 12th.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X