ಯುಕೆಯಲ್ಲಿ ಫ್ರೀ ಆಗಿ ಸ್ಟಡಿ ಮಾಡಬಹದು... ಹೇಗಂತೀರಾ ಇಲ್ಲಿ ಓದಿ!

Posted By:

ವಿದ್ಯಾರ್ಥಿಗಳಿಗೆ ಸ್ಟಡಿ ಮಾಡಲು ಜಗತ್ತಿನಲ್ಲಿರುವ ಬೆಸ್ಟ್ ದೇಶ ಅಂದ್ರೆ ಅದು ದಿ ಯುನಿಟೈಡ್ ಕಿಂಗ್‌ಡಮ್ .

ಎಜ್ಯುಕೇಶನ್‌ಗೆ ಈ ದೇಶ ಬಹಳ ಪ್ರಸಿದ್ಧಿ. ಅದಕ್ಕಾಗಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಯುಕೆಗೆ

ಹಾರುತ್ತಾರೆ.

ಇನ್ನು ಯುಕೆ ಅಲ್ಲಿ ಹೇಗೆ ಸ್ಟಡಿ ಮಾಡುವುದು, ಎಷ್ಟು ಖರ್ಚು ವೆಚ್ಚವಾಗ ಬಹುದು ಎಂದು ಮೂಗಿನ ಮೇಲೆ

ಬೆರಳು ಇಟ್ಟುಕೊಂಡ್ರ. ಚಿಂತಿ ಬಿಡಿ. ನೀವು ಯುಕೆಯಲ್ಲಿ ಫ್ರೀ ಆಗಿ ಸ್ಟಡಿ ಮಾಡಬಹುದು. ಅದಕ್ಕೆಂದೇ

ಸರ್ಕಾರವು ನಿಮಗೆ ಕೆಲವು ಸ್ಕೋಲರ್ ಶಿಪ್ ನೀಡುತ್ತದೆ. ಸರ್ಕಾರದ ಈ ಸ್ಕೋಲರ್ ಶಿಪ್ ಪ್ರಯೋಜನ ಪಡೆದುವಿದ್ಯಾಭ್ಯಾಸ ಪಡೆದುಕೊಳ್ಳಿ.ಸರ್ಕಾರ ಯುಕೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಟಡಿ ಮಾಡಲು ಯಾವೆಲ್ಲಾ ಸ್ಕೋಲರ್ ಶಿಪ್ ನೀಡುತ್ತದೆ ಎಂಬಕಂಪ್ಲೀಟ್ ಮಾಹಿತಿ ಇಲ್ಲಿದೆ

ಯುಕೆಯಲ್ಲಿ ಫ್ರೀ ಆಗಿ ಸ್ಟಡಿ ಮಾಡಬಹದು... ಹೇಗಂತೀರಾ ಇಲ್ಲಿ ಓದಿ!

ಬ್ರಿಟಿಷ್ ಚೆವೆನಿಂಗ್ ಸ್ಕೋಲರ್ ಶಿಪ್:

ಯುಕೆ ಫಾರೆನ್ ಹಾಗೂ ಕಾಮನ್‌ವೆಲ್ತ್ ಆಫೀಸ್ ಈ ಸ್ಕೋಲರ್ ಶಿಪ್ ಪರಿಚಯಿಸಿದ್ದಾರೆ. ಈ ಸ್ಕೋಲರ್

ಶಿಪ್‌ನಿಂದ ಫುಲ್ ಟೈಂ ಶಿಕ್ಷಣಭ್ಯಾಸ ಪಡೆಯಬಹುದು. ಯಾವ ಸಬ್‌ಜೆಕ್ಟ್ ಗೂ ಬೇಕಾದ್ರೂ ವಿದ್ಯಾರ್ಥಿಗಳು ಈ ಸ್ಕೋಲರ್ ಶಿಪ್ ಪಡೆಯಬಹುದಾಗಿದೆ

ಕಾಮನ್‌ವೆಲ್ತ್ ಸ್ಕೋಲರ್ ಶಿಪ್ ಫಾರ್ ಡೆವಲಪಿಂಗ್ ಕಾಮನ್ ವೆಲ್ತ್ ಕಂಟ್ರೀಸ್:

ಈ ಅಭಿವೃದ್ದಿ ಹೊಂದಿರುವ ದೇಶಗಳಲ್ಲಿ ಎಲ್ಲಾ ವಿದೇಶಿ ವಿದ್ಯಾರ್ಥಿಗಳಿಗೆ ಈ ಸ್ಕೋಲರ್ ಶಿಪ್ ಸೌಲಭ್ಯ

ಸಿಗಲಿದೆ. ಯಾರು ಮಾಸ್ಟರ್ ಡಿಗ್ರಿ ಇಲ್ಲ ಪಿಹೆಚ್ ಡಿ ಮಾಡಬೇಕಂದಿದ್ದೀರೋ ನೀವು ಈ ಸ್ಕೋಲರ್ ಶಿಪ್

ಸೌಲಭ್ಯ ಪಡೆಯಬಹುದಾಗಿದೆ

ಕಾಮನ್‌ವೆಲ್ತ್ ಶೇರ್‌ಡ್ ಸ್ಕೋಲರ್ ಶಿಪ್ ಸ್ಕೀಮ್:

ಯುಕೆಯಲ್ಲಿ ಯಾರು ಮಾಸ್ಟರ್ ಡಿಗ್ರಿ ಮಾಡಬೇಕೆಂದಿದ್ದಿರೋ ಅಂತಹ ಇಂಟರ್ನ್ಯಾಷನಲ್ ವಿದ್ಯಾರ್ಥಿಗಳು

ಈ ಸ್ಕೋಲರ್ ಶಿಪ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಚಾರ್ಲಸ್ ವ್ಯಾಲೇಸ್ ಇಂಡಿಯಾ ಟ್ರಸ್ಟ್ ಸ್ಕೋಲರ್ ಶಿಪ್:

ಇದು ಭಾರತೀಯ ವಿದ್ಯಾರ್ಥಿಗಳಿಗಾಗಿ ಇರುವ ಸ್ಕೋಲರ್ ಶಿಪ್ ಆಗಿದೆ. ವೈದ್ಯವಿದ್ಯಾರ್ಥಿಗಳಿಗೆ ಸ್ಪೇಶಲ್

ಆಗಿರುವ ಸ್ಕೋಲರ್ ಶಿಪ್ ಇದು. ಭಾರತದಿಂದ ಯುಕೆ ಗೆ ತೆರಳುವ ರಿಸರ್ಚ್ ವಿದ್ಯಾರ್ಥಿಗಳು ಈ ಸ್ಕೋಲರ್

ಶಿಪ್ ಸೌಲಭ್ಯ ಪಡೆಯಬಹುದಾಗಿದೆ

ಸಾಲ್ಟ್‌ಏರ್ ಸ್ಕೋಲರ್ ಶಿಪ್:

ಪದವಿ ಲೆವಲ್ ನಲ್ಲಿರುವ ವಿದ್ಯಾರ್ಥಿಗಳು ಈ ಸ್ಕೋಲರ್ ಶಿಪ್ ಸೌಲಭ್ಯ ಪಡೆಯಬಹುದಾಗಿದೆ. ಯುಎಸ್,

ಭಾರತ, ಪಾಕಿಸ್ತಾನ, ಕೆನಡಾ, ಚೀನಾ ಹಾಗೂ ಹಾಂಗ್‌ಕಾಂಗ್ ವಿದ್ಯಾರ್ಥಿಗಳು ಈ ಸ್ಕೋಲರ್ ಶಿಪ್ ಸೌಲಭ್ಯ

ಪಡೆಯಬಹುದಾಗಿದೆ.

ಯುಕೆಯಲ್ಲಿ ಫ್ರೀ ಆಗಿ ಸ್ಟಡಿ ಮಾಡಬಹದು... ಹೇಗಂತೀರಾ ಇಲ್ಲಿ ಓದಿ!

ಬ್ರಿಟಿಷ್ ಕೌನ್ಸಿಲ್ ಗ್ರೇಟ್ ಸ್ಕೋಲರ್ ಶಿಪ್ ಫಾರ್ ಇಂಡಿಯನ್ ಸ್ಟುಡೆಂಟ್ಸ್:

ಬ್ರಿಟಿಷ್ ಕೌನ್ಸಿಲ್ ಆಯೋಜನೆಯ ಈ ಸ್ಕೋಲರ್ ಶಿಪ್ ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ.

ಯುಕೆಯಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ಭಾರತೀಯ ವಿದ್ಯಾರ್ಥಿಗಳು ಈ ಸೌಲಭ್ಯ

ಪಡೆಯಬಹುದಾಗಿದೆ.

ಸರ್ಕಾರದಿಂದ ಸಿಗುವ ಸ್ಕೋಲರ್ ಶಿಪ್ ಗಳು ಇವಾಗಿದ್ದು, ಇದರ ಪ್ರಯೋಜನ ವಿದ್ಯಾರ್ಥಿಗಳು

ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಈ ಸ್ಕೋಲರ್ ಶಿಪ್ ಬಿಟ್ಟು ವಿದ್ಯಾರ್ಥಿಗಳಿಗೆ

ವಿಶ್ವವಿದ್ಯಾನಿಲಯದಿಂದಲೂ ಕೆಲವೊಂದು ಸ್ಕೋಲರ್ ಶಿಪ್ ಸಿಗುತ್ತದೆ ಅದರ ಬಗ್ಗೆಯೂ ತಿಳಿದುಕೊಂಡು

ಪ್ರಯೋಜನ ಪಡೆದುಕೊಳ್ಳಿ.

English summary
The United Kingdom, one of the best student countries in the world, is popular for its quality education besides physical geography. This is the reason why thousands of prospective international students fly to the United Kingdom year-on-year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia