ಡಿಗ್ರಿಗೆ ಗುಡ್‌ ಬೈ ಹೇಳಿದ್ರೆ ಲೈಫ್ ನಲ್ಲಿ ಏನೆಲ್ಲಾ ಮಿಸ್ ಮಾಡ್ಕೋಳ್ತೀರಾ ಗೊತ್ತಾ

Posted By:

ನಿಮ್ಮ ಕೆರಿಯರ್ ಲೈಫ್ ನೀವು ಪಡೆದ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಇದು ನಿಜ ಕೂಡಾ. ಆದ್ರೆ ನೀವು ಹೇಳಬಹುದು ಕೆಲವರು ಏನೂ ಕಲಿಯದಿದ್ದರೂ ಇಂದಿಗೂ ಉತ್ತಮ ಸ್ಥಾನದಲ್ಲಿ ಇದ್ದಾರೆ ಎಂದು. ಆದ್ರೆ ಅಂತಹ ಜನರ ಸಂಖ್ಯೆ ಕೇವಲ ಬೆರಳಣಿಕೆ ಮಾತ್ರ ನೆನಪಿಟ್ಟುಕೊಳ್ಳಿ. ಎಜ್ಯುಕೇಶನ್ ಇಲ್ಲ ಅಂದ್ರೆ ಏನೋ ಲಕ್‌ನಿಂದ ಅವರು ಮೇಲೆ ಬಂದಿರಬಹುದು. ಆದ್ರೆ ಎಲ್ಲಾ ಸಮಯದಲ್ಲಿ ಲಕ್ ವರ್ಕೌಟ್ ಆಗಲ್ಲ. ಹಾಗಾಗಿ ನೀವು ನಿಜವಾಗಿಯೂ ಉತ್ತಮ ಶಿಕ್ಷಣ ಪಡೆದಿದ್ದರೆ ಅದು ಯಾವತಿದ್ರೂ ನಿಮ್ಮ ಕೆರಿಯರ್ ಲೈಫ್ ಗೆ ಒಂದು ಪ್ಲಸ್ ಪಾಯಿಂಟ್ ನೆನಪಿಟ್ಟುಕೊಳ್ಳಿ

ಇತ್ತೀಚಿಗಿನ ದಿನಗಳಲಂತೂ ಮಾಸ್ಟರ್ ಡಿಗ್ರಿ ಪಡೆದವರಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇನ್ನೂ ವೇತನ ವಿಷಯ ಬಂದಾಗಲೂ ಉಳಿದ ಅಭ್ಯರ್ಥಿಗಳಿಗಿಂತ ಮಾಸ್ಟರ್ ಡಿಗ್ರಿ ಪಡೆದವರು ಹೆಚ್ಚಿನ ವೇತನ ಪಡೆಯುತ್ತಾರೆ. ಇನ್ನೂ ಇಂತಹ ವ್ಯತ್ಯಾಸ ಕೆಲಸ ಮಾಡುವ ಸ್ಥಳದಲ್ಲಿ ನಡೆಯುತ್ತೆ ಕೂಡಾ.

ಇನ್ನೂ ಇತ್ತೀಚಿಗಿನ ದಿನಗಳಲ್ಲಿ ಒಂದು ಕೆಲಸ ಸಿಗಬೇಕಾದ್ರೆ ಎಷ್ಟೋ ಕಾಂಪಿಟೇಶನ್ ಇರುತ್ತದೆ. ಹಾಗಾಗಿ ನಾವು ನಿಮಗೆ ಏನು ಸಲಹೆ ನೀಡುವುದೆಂದ್ರೆ ಪದವಿ ಮುಗಿದ ಕೂಡಲೇ ಶಿಕ್ಷಣಾಭ್ಯಾಸ ಅರ್ಧಕ್ಕೆ ಮೊಟಕು
ಗೊಳಿಸಬೇಡಿ ಬದಲಿಗೆ ಸ್ನಾತಕೋತ್ತರ ಮಾಸ್ಟರ್ ಡಿಗ್ರಿ ಪಡೆಯಿರಿ.ಸ್ನಾತಕೋತ್ತರ ಪದವಿ ಪಡೆಯುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುವುದು ಮುಂದಿದೆ ಓದಿ

ರೆಸ್ಯೂಮ್ ನಲ್ಲಿ ಹೆಚ್ಚುವರಿ ಸ್ಟಾರ್

ಜಾಬ್ ಮಾರ್ಕೆಟ್ ಇದೀಗ ಫುಲ್ ಕಾಂಪಿಟೇಶನ್ ನಿಂದ ತುಂಬಿರುತ್ತದೆ. ಹಾಗಾಗಿ ನೀವು ಹೆಚ್ಚು ಕಲಿತಷ್ಟು ಒಳ್ಳೆಯದು. ಒಂದು ಹುದ್ದೆಗೆ ಹೆಚ್ಚು ಸ್ಪರ್ಧೆ ಏರ್ಪಟ್ಟಾಗ ಹೆಚ್ಚು ಕಲಿತವರಿಗೆ ಆ ಅವಕಾಶ ನೀಡುತ್ತಾರೆ. ಮಾಸ್ಟರ್ ಡಿಗ್ರಿ ಪಡೆದವರಿಗೆ ಹೆಚ್ಚು ಟೆಕ್ನಿಕಲ್ ಜ್ಞಾನವಿರುತ್ತದೆ. ಹಾಗಾಗಿ ಅವರ ರೆಸ್ಯೂಮ್ ನಲ್ಲಿ ಹೆಚ್ಚು ಸ್ಟಾರ್ ಗಳು ಸೇರ್ಪಡೆಯಾಗುತ್ತದೆ.

ಹೆಚ್ಚು ತಿಳಿದುಕೊಂಡಿರುತ್ತಾರೆ:

ಮಾಸ್ಟರ್ ಡಿಗ್ರಿ ಎಂದರೆ ಒಂದು ವಿಶೇಷ ಸಬ್‌ಜೆಕ್ಟ್ ನಲ್ಲಿ ಸ್ಪೇಶಲ್ ಕೋರ್ಸ್ ಮಾಡಿರುವುದು. ಪದವಿ ಮಾಡಿದವರಿಗೆ ಹೋಲಿಸಿದ್ರೆ ಸ್ನಾತಕೋತ್ತರ ಪದವಿ ಮಾಡಿದ ಅಭ್ಯರ್ಥಿಗಳು ವಿಶೇಷ ಸಬ್‌ಜೆಕ್ಟ್ ನಲ್ಲಿ ಹೆಚ್ಚು ಕಾಂಫಿಡೆಂಟ್ ಆಗಿರುತ್ತಾರೆ ಮತ್ತು ತಿಳಿದುಕೊಂಡಿರುತ್ತಾರೆ. ಹಾಗಾಗಿ ನೇಮಕಾತಿ ಮಾಡುವವರು ಕೂಡಾ ಹೆಚ್ಚು ಜ್ಞಾನ ಇರುವ ಹಾಗೂ ಹೆಚ್ಚು ಪದವಿ ಪಡೆದಿರುವ ಅಭ್ಯರ್ಥಿಗಳನ್ನ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ

ನಿಮ್ಮ ವ್ಯಕ್ತಿತ್ವ ಬಿಂಬಿಸುತ್ತದೆ:

ನಿಮ್ಮ ಉನ್ನತ ಮಟ್ಟದ ಕೋರ್ಸ್ ನಿಮ್ಮ ಜ್ಞಾನವನ್ನ ಅವಲಂಭಿಸಿರುತ್ತದೆ. ಒಂದೇ ಸಬ್‌ಜೆಕ್ಟ್ ಇಲ್ಲ ಸಂಬಂಧಿತ ಸಬ್‌ಜೆಕ್ಟ್ ನಲ್ಲಿ ನೀವು ಹೆಚ್ಚುವರಿ ಕೋರ್ಸ್ ಮಾಡಿರಬಹುದು. ಇಲ್ಲ ನೀವು ಹೆಚ್ಚುವರಿ ಶಿಕ್ಷಣ ಕೂಡಾ ಪಡೆದಿರಬಹುದು. ಇದರಿಂದ ನಿಮ್ಮ ಸ್ಕಿಲ್ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ರೆಸ್ಯೂಮ್ ವಾಲ್ಯೂ ಕೂಡಾ ಹೆಚ್ಚಾಗುತ್ತದೆ. ಇದು ನಿಮಗೆ ಕೆರಿಯರ್ ಚೇಂಜ್ ಮಾಡಲು ಇಲ್ಲ ಶಿಫ್ಟ್ ಮಾಡಲು ಸಹಾಯ ಮಾಡುತ್ತದೆ

ವೃತ್ತಿ ಜೀವನ ಪ್ರಗತಿ:

ವೃತ್ತಿ ಜೀವನದಲ್ಲಿ ಪ್ರಗತಿ ಆಗಬೇಕೆಂದು ಎಲ್ಲರ ಕನಸಾಗಿರುತ್ತದೆ. ನೀವು ಕೂಡಾ ಬೆಸ್ಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೂ ನಿಮ್ಮ ಕೆಲಸ ಗುರುತಿಸಲ್ಪಟ್ಟಿಲದಿದ್ದರೆ ಚಿಂತೆ ಬಿಡಿ. ನೀವು ಕೂಡಾ ಮಾಸ್ಟರ್ ಡಿಗ್ರಿ ಮಾಡಿ. ದೂರ ಶಿಕ್ಷಣದ ಮೂಲಕ ಮಾಸ್ಟರ್ ಡಿಗ್ರಿ ಪಡೆಯಿರಿ. ಇದರಿಂದ ಖಂಡಿತ ನೀವು ಕೂಡಾ ಇತರರಂತೆ ವೃತ್ತಿ
ಜೀವನದಲ್ಲಿ ಪ್ರಗತಿ ಹೊಂದುತ್ತೀರಿ

ಹೆಚ್ಚು ಸಂಪಾದನೆ:

ಇನ್ನು ಕಂಪನಿಗಳಲ್ಲಿ ಕೆಲಸ ನೀಡುವಾಗ ನಿಮ್ಮ ವಿದ್ಯಾರ್ಹತೆ ಆಧಾರದ ಮೇಲೆ ನಿಮಗೆ ಕೆಲಸ ನೀಡುತ್ತಾರೆ ಮಾತ್ರವಲ್ಲದೇ ವೇತನ ಕೂಡಾ ನಿರ್ಧರಿಸುತ್ತಾರೆ. ಹಾಗಾಗಿ ನೀವು ಮಾಸ್ಟರ್ ಡಿಗ್ರಿ ಮಾಡಿ ಕೆಲಸ ಹುಡುಕಿದ್ರೆ ನಿಮ್ಮ ವೇತನ ಪ್ಯಾಕೇಜ್ ಕೂಡಾ ಚೆನ್ನಾಗಿರುತ್ತೆ. ಹಾಗಾಗಿ ಮಾಸ್ಟರ್ ಡಿಗ್ರಿ ಮಾಡಿದ್ರೆ ನೀವು ಇತರರಿಗಿಂತ ಹೆಚ್ಚು ವೇತನ ಕೂಡಾ ಪಡೆಯಬಹುದು

English summary
Only a good academic background can take you to the next stage of your career. And this is a known fact. You might have found a few guys who've done exceptionally well in their career with a not-very-great educational background, however, this will not work every time. One should have a good academic background to advance in his/her career

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia