ಪಾಲಿಟಿಕಲ್ ಸೈನ್ಸ್ ವಿದ್ಯಾರ್ಥಿಗಳೇ ಯಾವೆಲ್ಲಾ ಜಾಬ್ ನಿಮ್ಮದಾಗಿಸಿಕೊಳ್ಳಬಹುದು ಗೊತ್ತಾ?

Posted By:

ದಿನನಿತ್ಯ ನೀವು ರಾಜಕೀಯ ವಿಚಾರಗಳತ್ತ ಹೆಚ್ಚು ಗಮನ ಕೊಡುತ್ತೀರಾ... ಹಾಗಿದ್ರೆ ನೀವು ರಾಜ್ಯಶಾಸ್ತ್ರ ವಿಷಯದತ್ತ ನಿಮ್ಮ ಕೆರಿಯರ್ ರೂಪಿಸಿಕೊಳ್ಳಿ. ಸರ್ಕಾರಗಳ ರಚನೆಗಳನ್ನು ಹೋಲಿಸುವುದರ ಜೊತೆಗೆ ಕಾನೂನುಗಳ ಸೂತ್ರೀಕರಣಗಳ ಮೇಲೆ ಇವರು ಫೋಕಸ್ ಮಾಡಬೇಕಾಗುತ್ತದೆ. ನೀವು ಪಾಲಿಟಿಕಲ್ ಸೈನ್ಸ್ ವಿಷಯದಲ್ಲಿ ಪದವಿ, ಇಲ್ಲ ಸ್ನಾತಕೋತ್ತರ ಪದವಿ ಮಾಡಿದ್ದರೆ ಈ ಫೀಲ್ಡ್ ನಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಬಹುದು.

ಪಾಲಿಸಿ ಅನಾಲಿಸ್ಟ್ :

ನೀವು ಪದವಿ ಪಡೆದ ಕೂಡಲೇ ಪಾಲಿಸಿ ಅನಾಲಿಸ್ಟ್ ಆಗಿ ಕೆಲಸ ಪ್ರಾರಂಭಿಸಬಹುದು. ಯಾಕಂದ್ರೆ ನೀವು ಡಿಗ್ರಿ ಪಡೆಯುವಾಗಲೇ ಅದಕ್ಕೆ ಬೇಕಾಗಿರುವ ಕೌಶಲ್ಯ ಪಡೆದಿರುತ್ತೀರಿ. ಕ್ರಿಟಿಕಲ್ ಥಿಂಕಿಂಗ್, ಬರವಣಿಗೆ ಹಾಗೂ ರಿಸರ್ಚ್ ಸ್ಕಿಲ್ ಇವರಿಗೆ ಇರಲೇಬೇಕಾದ ಅರ್ಹತೆ

ಪಾಲಿಟಿಕಲ್ ಕಂಸಲ್ಟೆಂಟ್:

ನೀವು ಪಾಲಿಟಿಕಲ್ ಕಂಸಲ್ಟೆಂಟ್ ಆಗಿದ್ರೆ, ಎಲೆಕ್ಷನ್ ಟೈಂನಲ್ಲಿ ಅಭ್ಯರ್ಥಿಯ ಪ್ರಚಾರ ನಿಮ್ಮ ಹೊಣೆಯಾಗಿರುತ್ತದೆ. ನೀವು ಮತದಾರರನ್ನು ಓಲೈಸಿಕೊಳ್ಳುವ ಟ್ಯಾಲೆಂಟ್ ಹೊಂದಿರಬೇಕು ಹಾಗೂ ನಿಮ್ಮ ಅಭ್ಯರ್ಥಿಯ ಪರ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಬೇಕು. ಮಾಧ್ಯಮದವರ ಜತೆ ಕೂಡಾ ನಿಕಟ ಸಂಪರ್ಕ ಹೊಂದಿರಬೇಕು.

ಪಾಲಿಟಿಕಲ್ ಸೈಂಟಿಸ್ಟ್:

ಪಾಲಿಟಿಕಲ್ ಸೈಂಟಿಸ್ಟ್ ಅವರ ಮೊದಲ ಕೆಲಸವೇನೆಂದ್ರೆ ಎಲ್ಲಾ ಪಾಲಿಟಿಕಲ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಗೊತ್ತಿರಬೇಕು. ಪಾಲಿಟಿಕಲ್ ಸೈಂಟಿಸ್ಟ್ ಅವರು ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಮಾತ್ರವಲ್ಲದೇ ಚುನಾವಣೆ ಟೈಂನಲ್ಲಿ ಪಾಲಿಟಿಕಲ್ ಪಾರ್ಟಿಗೆ ಅಭ್ಯರ್ಥಿಗಳನ್ನ ನೇಮಕ ಮಾಡುವ ಹೊಣೆ ಕೂಡಾ ಇವರದು

ಪಬ್ಲಿಕ್ ರಿಲೇಶನ್ಸ್ ಸ್ಪೇಶಾಲಿಸ್ಟ್:

ಮಾಧ್ಯದವರ ಜತೆ ಸ್ಟೋರಿ ಶೇರ್ ಸೇರಿದಂತೆ ಇನ್ನಿತ್ತರ ಆಕ್ಟೀವಿಟಿಸ್ ಗಳಲ್ಲಿ ಇವರು ತಮ್ಮ ಕ್ಲೈಂಟ್ ಗಳ ಸಾರ್ವಜನಿಕ ಅಭಿಪ್ರಾಯದ ಮೇಲೆ ಶೀಘ್ರವಾಗಿ ಪ್ರಭಾವ ಬೀರುತ್ತಾರೆ. ಪಬ್ಲಿಕ್ ರಿಲೇಶನ್ಸ್ ಸ್ಪೇಶಾಲಿಸ್ಟ್ ಆಗಿ ನೀವು ಪ್ರೆಸ್‌ರಿಲೀಸ್ ಜತೆ ಪತ್ರಿಕಾ ಗೋಷ್ಟಿ ಏರ್ಪಡು ಮಾಡುವ ಸಾಮರ್ಥ್ಯ ನಿಮಗೆ ಇರಬೇಕು.

ಮಾರ್ಕೆಟಿಂಗ್ ರಿಸರ್ಚ್ ಅನಾಲಿಸ್ಟ್:

ಮಾರ್ಕೆಟಿಂಗ್ ರಿಸರ್ಚ್ ಅನಾಲಿಸ್ಟ್ ಆಗಿ ನೀವು ರಿಸರ್ಚ್ ಹಾಗೂ ಕ್ಲೈಂಟ್ ಮಾರ್ಕೆಟ್ ಬಗ್ಗೆ ತಿಳಿದಿರಬೇಕು. ಸುಧಾರಣೆಗಾಗಿ ಶಿಫಾರಸುಗಳನ್ನು ಒದಗಿಸುವುದರ ಜೊತೆಗೆ ಅವರು ತಮ್ಮ ಸಂಶೋಧನೆಗಳನ್ನು ಗ್ರಾಹಕರಿಗೆ ಪ್ರಸ್ತುತಪಡಿಸಬೇಕು

ಬಜೆಟ್ ಅನಾಲಿಸ್ಟ್:

ಕ್ರಿಟಿಕಲ್ ಥಿಂಕಿಂಗ್ ಜತೆ ಫೈನಾನ್ಸ್ ಬಗ್ಗೆ ಜ್ಞಾನವಿರಬೇಕು. ಬಜೆಟ್ ಅನಾಲಿಸ್ಟ್ ಆಗಿ ಎಫೆಕ್ಟೀವ್ ಬಜೆಟ್ ಲ್ಯಾನ್ ಮಾಡಬೇಕು. ಟಾರ್ಗಟ್ ಆಡಿಯನ್ಸ್ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರಬೇಕು. ಇನ್ನು ನಿಧಿಯು ಸರಿಯಾದ ಜಾಗಕ್ಕೆ ಸೇರುತ್ತಿದೆಯೇ ಎಂಬುದರ ಬಗ್ಗೆಯೂ ತಿಳಿದುಕೊಳ್ಳುವ ಜವಾಬ್ದಾರಿ ನಿಮ್ಮದಾಗಿರಬೇಕು

English summary
If you are one amongst the people fascinated about daily developments including politics, then you can consider a career in political science. Political science focuses majorly on the formulations of laws besides comparing the structures of governments

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia