ಬ್ರೈನ್ ಪವರ್ ಹೆಚ್ಚಿಸಲು ಇಲ್ಲಿದೆ ಸುಲಭ ಟಿಪ್ಸ್... ನೋ ಸೈಡ್ ಎಫೆಕ್ಟ್!

Written By: Nishmitha B

ಸಮಯವನ್ನ ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ಆದ್ರೆ ನಿಮ್ಮ ಮೆದುಳನ್ನು ಶಾರ್ಪ್ ಆಗಿ ಇಡುವುದರಿಂದ ನೀವು ಸಮಯವನ್ನ ಯೂಸ್‌ಫುಲ್ ಆಗಿ ಕಳೆಯಬಹುದು. ಇದು ನಿಮ್ಮ ಕೆಲಸ ಬೇಗ ಮಾಡಲು ಮಾತ್ರ ಸಹಕಾರಿಯಾಗುವುದಲ್ಲ ಬದಲಿಗೆ ನೀವು ಮಾಡುವ ಕೆಲಸ ಕ್ವಾಲಿಟಿಯಿರುವಂತೆ ನೋಡಿಕೊಳ್ಳುತ್ತದೆ.

ನಿಮ್ಮ ಮೆದುಳು ಶಾರ್ಪ್ ಆಗಿದ್ದರೆ ನೀವು ಎಲ್ಲಾ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಹುದು. ಹಾಗಾಗಿ ಮೆದುಳು ಶಾರ್ಪ್ ಆಗಿಟ್ಟುಕೊಳ್ಳಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ

ಧ್ಯಾನ:

ಸ್ಟ್ರೆಸ್ ನಿಮ್ಮ ಮೆದುಳನ್ನು ಡ್ಯಾಮೇಜ್ ಮಾಡುತ್ತದೆ. ಸ್ಟ್ರೆಸ್ ಕಡಿಮೆ ಮಾಡುವುದರಿಂದ ನಿಮ್ಮ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಟ್ರೆಸ್ ಹೋಗಲಾಡಿಸಲು ಧ್ಯಾನ ಬೆಸ್ಟ್ ವಿಧಾನ. ಪ್ರತಿ ದಿನ 15 ರಿಂದ 20 ನಿಮಿಷ ಧ್ಯಾನ ಮಾಡಿದ್ರೆ ಒಂದೇ ವಾರದಲ್ಲಿ ಬದಲಾವಣೆ ಆಗುವುದನ್ನು ನೀವು ಕಾಣಬಹುದು

ವ್ಯಾಯಾಮ:

ವ್ಯಾಯಾಮವು ಕೇವಲ ನಿಮ್ಮ ಶಾರೀಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಉತ್ತಮ. ವ್ಯಾಯಾಮವು ನಿಮ್ಮ ದೇಹವನ್ನು ಫಿಟ್ ಆಗಿರಿಸುತ್ತದೆ ಹಾಗೂ ಮೆದುಳನ್ನು ಶಾರ್ಪ್ ಆಗಿರಿಸುತ್ತದೆ. ವ್ಯಾಯಾಮದಿಂದ ನಿಮ್ಮ ನರಗಳು ಆರೋಗ್ಯವಾಗಿರುತ್ತದೆ ಇದರಿಂದ ನಿಮ್ಮ ಮೆದುಳು ಕೂಡಾ ಆರೋಗ್ಯಯುತವಾಗಿರುತ್ತದೆ

ಆರೋಗ್ಯಯುತ ಆಹಾರ ಸೇವಿಸಿ:

ಹೆಲ್ತಿ ಆಹಾರವು ನಿಮ್ಮ ದೇಹವನ್ನ ಶೇಪ್ ಆಗಿರಿಸುತ್ತದೆ. ಹೆಲ್ತಿ ಆಹಾರದಿಂದ ಹಾಗೂ ಡಯೆಟ್ ನಿಂದ ದೇಹ ಮಾತ್ರ ಶೇಪ್ ಆಗಿರುವುದಲ್ಲ ಜತೆಗೆ ಮೆದುಳು ಆರೋಗ್ಯಯುತವಾಗಿರುತ್ತದೆ. ಯಾವೆಲ್ಲಾ ಆಹಾರ ಸೇವಿಸಬೇಕು ಎಂಬ ಟಿಪ್ಸ್ ಇಲ್ಲಿದೆ

- ತರಕಾರಿ, ಹಣ್ಣುಗಳು ಹಾಗೂ ದವಸಧಾನ್ಯಗಳು
- ಗ್ರೀನ್ ಟೀ, ಕಾಫೀ, ಡಾರ್ಕ್ ಚಾಕಲೇಟ್, ಬೆರ್ರಿಸ್ ನಂತಹ ಹಣ್ಣುಗಳು, ಸ್ಪಿನಾಚ್ ಹಾಗೂ ಕ್ಯಾರೆಟ್‌ನಂತಹ ತರಕಾರಿ
- ಅತೀಯಾದ ಸಕ್ಕರೆ ಸೇವನೆ ಬೇಡ

 

ನಿದ್ರೆ:

ಸುಖವಾಗಿ ನಿದ್ರೆ ಮಾಡುವುದರಿಂದ ನಿಮ್ಮ ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ನಿದ್ರೆ ಮಾಡದೇ ಇರುವ ವ್ಯಕ್ತಿ ಸದಾ ಆಲಸಿಯಾಗಿರುತ್ತಾನೆ. ಹೊಸತೇನಾದ್ರು ಕಲಿಯಲು ಆಸಕ್ತಿ ತೋರಿಸುವುದಿಲ್ಲ. ಆದ್ರೆ ಚೆನ್ನಾಗಿ ನಿದ್ರೆ ಮಾಡಿದ ವ್ಯಕ್ತಿ ನಿದ್ರೆಯಿಂದ ಎದ್ದ ಬಳಿಕ ಆಕ್ಟೀವ್ ಆಗಿರುತ್ತಾನೆ. ಹೊಸತನ್ನು ಕಲಿಯಲು ಸದಾ ಸಿದ್ದನಾಗಿರುತ್ತಾನೆ.

ಕ್ಯಾಲ್ಕುಲೇಟಿಂಗ್:

ಈಗಂತೂ ಮೊಬೈಲ್ ಬಳಕೆ ಪ್ರಾರಂಭವಾದ ಮೇಲೆ ಎಲ್ಲರೂ ಕ್ಯಾಲ್ಕುಲೇಟಿಂಗ್ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಶಾಪಿಂಗ್ ವೇಳೆ, ಹೋಟೆಲ್ ಬಿಲ್ ವೇಳೆ ಪಟ್ ಪಟಾ ಎಂದು ಮೊಬೈಲ್‌ನಲ್ಲೇ ಎಲ್ಲಾ ಕ್ಯಾಲ್ಕುಲೇಟ್ ಮಾಡಿ ಬಿಡುತ್ತಾರೆ. ಇದರಿಂದ ನಿಮ್ಮ ಮೆದುಳು ಮತ್ತಷ್ಟು ಆಲಸಿಯಾಗುವುದು

ಶಾಪಿಂಗ್ ವೇಳೆ ಚಿಕ್ಕಪುಟ್ಟ ಲೆಕ್ಕಗಳಿಗೆಲ್ಲಾ ಮೆದುಳಲ್ಲೇ ಕ್ಯಾಲ್ಕುಲೇಟ್ ಮಾಡಿ. ಟ್ರಾಫಿಕ್ ಸಿಗ್ನಲ್, ಫ್ರೀ ಇದ್ದಾಗೆಲ್ಲಾ ನೀವೇ ನಿಮ್ಮಷ್ಟಕ್ಕೆ ಸಂಖ್ಯೆಗಳನ್ನ ಕೂಡಿಸುತ್ತಾ, ಕಳೆಯುತ್ತಾ ಇರಿ. ಇದರಿಂದ ನಿಮ್ಮ ಮೆದುಳು ಶಾರ್ಪ ಆಗುತ್ತದೆ

 

ಓದುವ ಅಭ್ಯಾಸ:

ಮೆದುಳು ಶಾರ್ಪ್ ಆಗಿಟ್ಟುಕೊಳ್ಳಲು ಇದು ಬೆಸ್ಟ್ ವ್ಯಾಯಾಮ. ವಿದ್ಯಾಭ್ಯಾಸ ಮುಗಿದ ಬಳಿಕ ಓದುದನ್ನು ಸ್ಟಾಪ್ ಮಾಡಬೇಡಿ. ಪತ್ರಿಕೆ, ಮ್ಯಾಗಜಿನ್, ಜರ್ನಲ್ಸ್ ಮುಂತಾದ ಪುಸ್ತಕಗಳನ್ನ ಓದುತ್ತಾ ಇರಿ. ಇದರಿಂದ ನಿಮ್ಮ ಮೆದುಳು ಆಕ್ಟೀವ್ ಆಗಿ ಇರುತ್ತದೆ

ಗೇಮ್ಸ್:

ಕೆಲವೊಂದು ಆಟಗಳನ್ನು ಆಡುವ ಮೂಲಕ ನಿಮ್ಮ ಮೆದುಳನ್ನ ಶಾರ್ಪ್ ಆಗಿಟ್ಟುಕೊಳ್ಳಬಹುದು. ಚೆಸ್, ಲೂಡೋ ಸೇರಿದಂತೆ ಇನ್ನಿತ್ತರ ಬೋರ್ಡ್ ಗೆಮ್ಸ್ ಹಾಗೂ ಕಂಪ್ಯೂಟರ್ ಗೇಮ್ಸ್ ಅಷ್ಟೇ ಅಲ್ಲ ಕಾರ್ಡ್ ಗೇಮ್ಸ್ ಗಳು ನಿಮ್ಮ ಮೆದುಳನ್ನ ಶಾರ್ಪ್ ಆಗಿರುವಂತೆ ನೋಡಿಕೊಳ್ಳುತ್ತದೆ.

ಎರಡು ಕೈಯಲ್ಲೂ ಕೆಲಸ ಮಾಡಿ:

ಎರಡೂ ಕೈಗಳಿಂದ ಯಾರು ಕೆಲಸ ಮಾಡುತ್ತಾರೋ ಅವರು ಶಾರ್ಪ್ ಆಗಿರುತ್ತಾರೆ. ಸಾಮಾನ್ಯವಾಗಿ ಬರೆಯಲು ವಿದ್ಯಾರ್ಥಿಗಳು ಒಂದೇ ಒಂದು ಕೈಯನ್ನು ಬಳಸುತ್ತಾರೆ. ಆದ್ರೆ ಇನ್ನು ಮುಂದೆ ಮತ್ತೊಂದು ಕೈಯಲ್ಲೂ ಕೂಡಾ ಬರೆಯಲು ಪ್ರಯತ್ನಿಸಿ. ಇದರಿಂದ ನಿಮ್ಮ ಮೆದುಳು ಶಾರ್ಪ್ ಆಗುತ್ತದೆ. ಬ್ರೈನ್ ಪವರ್ ಕೂಡಾ ಹೆಚ್ಚಾಗುತ್ತದೆ

 

 

English summary
There is no way to stop time. But you can make the best use of your time by keeping your brain sharp. It will not only help you finish your work at a faster rate but will also improve the quality of your work. You need not spend hours and hours to understand an issue and to solve it

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia