ಇತಿಹಾಸ ವಿದ್ಯಾರ್ಥಿಗಳೇ... ಯಾವೆಲ್ಲಾ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು ಗೊತ್ತಾ?

By Kavya

ನೀವು ಇತಿಹಾಸ ವಿದ್ಯಾರ್ಥಿಯಾ...? ಹಾಗಿದ್ರೆ ನೀವು ಈ ಡೈಲಾಗ್ ಕೇಳಿರಬಹುದು ಅಲ್ವಾ.. ಇತಿಹಾಸ ಓದಿದ್ರೆ ಹೆಚ್ಚು ಕೆರಿಯರ್ ಸ್ಕೋಪ್ ಇರುವುದಿಲ್ಲ ಎಂದು. ಅದೆಲ್ಲಾ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ಹಿಸ್ಟರಿ ಓದಿದ್ರೆ ಯಾವೆಲ್ಲಾ ಜಾಬ್ ನಿಮ್ಮದಾಗಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ. ಮುಂದಕ್ಕೆ ಓದಿ.

ಹೆರಿಟೇಜ್ ಮ್ಯಾನೇಜರ್:
 

ಹೆರಿಟೇಜ್ ಮ್ಯಾನೇಜರ್:

ಪಾರಂಪರಿಕ ರಚನೆಗಳ ಮುತ್ತುವರ್ಜಿ ಇವರು ನೋಡಿಕೊಳ್ಳಬೇಕಾಗುತ್ತದೆ. ದೇಶದ ಹಾಗೂ ಜಗತ್ತಿನ ಹೆಮ್ಮೆಗೆ ಸಂಬಂಧಪಟ್ಟ ವಿಷಯಗಳ ಜವಬ್ದಾರಿ ಇವರ ಮೇಲಿರುತ್ತದೆ. ಬಜೆಟ್ ನಿರ್ವಹಣೆ, ಸರಿಯಾದ ಯೋಜನೆ, ನಿಧಿ ಸಂಗ್ರಹ, ನಿರ್ವಹಣೆ, ಸ್ಮಾರಕ ದೃಶ್ಯಗಳ ಪ್ರಚಾರ, ನಿಯಮಗಳು ಮತ್ತು ನಿಬಂಧನೆಗಳನ್ನ ರಚಿಸುವುದು ಇವರ ಕರ್ತವ್ಯವಾಗಿರುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಪ್ರವಾಸಿಗರಿಂದ ಫೀಡ್ ಬ್ಯಾಕ್ ಕೂಡಾ ಸಂಗ್ರಹಿಸುವ ಜವಬ್ದಾರಿ ಇವರದಾಗಿರುತ್ತದೆ. ಇತಿಹಾಸ ಸಬ್‌ಜೆಕ್ಟ್ ನಲ್ಲಿ ಎಂಎ ಮಾಡಿದ್ರೆ ಈ ಹುದ್ದೆಯನ್ನ ನೀವು ನಿಭಾಯಿಸಬಹುದು. ಇನ್ನು ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವೊಂದು ವಿಶೇಷ ಕೋರ್ಸ್ ಗಳು ಕೂಡಾ ಇದೆ.

ಆರ್ಕಿವಿಸ್ಟ್:

ಆರ್ಕಿವಿಸ್ಟ್:

ರೆಕಾರ್ಡ್ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ರಕ್ಷಿಸುವುದು ಇವರ ಹೊಣೆ. ಇತಿಹಾಸಕ್ಕೆ ಸಂಬಂಧಪಟ್ಟ ಪ್ರತಿಯೊಂದು ದಾಖಲೆ ಇವರ ಬಳಿ ಇರುತ್ತದೆ. ಎಕ್ಸಿಬಿಷನ್, ಪ್ರೆಸಂಟೇಶನ್ ಇವರ ಜವಾಬ್ದಾರಿಯಾಗಿರುತ್ತದೆ

ಇನ್ನು ಇತಿಹಾಸ ವಿಷಯದಲ್ಲಿ ಪದವಿ ಮುಗಿಸಿದವರು ಈ ಹುದ್ದೆ ಅಲಂಕರಿಸಬಹುದು. ಆದ್ರೆ ಇವರಿಗೆ ಇತಿಹಾಸದ ಮೂಲಭೂತ ಜ್ಞಾನ ಹಾಗೂ ರೆಕಾರ್ಡ್ ನಿರ್ವಹಣೆಯ ಬಗ್ಗೆ ತಿಳಿದಿರಬೇಕು.

ಮ್ಯೂಸಿಯಂ ಡೆರೆಕ್ಟರ್:

ಮ್ಯೂಸಿಯಂ ಡೆರೆಕ್ಟರ್:

ಇತಿಹಾಸ ವಿದ್ಯಾರ್ಥಿಗಳು ಮ್ಯೂಸಿಯಂ ಡೈರೆಕ್ಟರ್ ಕೂಡಾ ಆಗಬಹುದು. ಹಲವಾರು ಸ್ಟಾಫ್ ಗಳನ್ನು ಮ್ಯೂಸಿಯಂ ಹೊಂದಿರುತ್ತದೆ. ಕೆಲವೊಂದು ಮ್ಯೂಸಿಯಂ ಗಳು ಕೆಲವೊಂದು ಚಟುವಟಿಕೆಗಳನ್ನ ಆಯೋಜಿಸುತ್ತದೆ. ಮ್ಯೂಸಿಯಂನ ಒಟ್ಟು ನಿರ್ವಹಣೆ ಹಾಗೂ ನೋಡಿಕೊಳ್ಳುವುದು ಮ್ಯೂಸಿಯಂ ಡೈರೆಕ್ಟರ್ ಹೊಣೆಯಾಗಿರುತ್ತದೆ.

ರಾಜಕಾರಣಿ:
 

ರಾಜಕಾರಣಿ:

ರಾಜಕಾರಣಿಗಳು ಸರ್ಕಾರದ ಒಂದು ಅಂಗವಾಗಿರುತ್ತಾರೆ. ಪಾಲಿಟಿಕಲ್ ಸೈನ್ಸ್ ಇತಿಹಾಸ ವಿಷಯದಲ್ಲಿ ಬರುವ ಒಂದು ಸಬ್‌ಜೆಕ್ಟ್ ಆಗಿದೆ. ಇಲ್ಲಿ ದೇಶ ಹಾಗೂ ಜನರ ನಡುವಿನ ಮ್ಯಾನೇಜ್‌ಮೆಂಟ್ ಇರುತ್ತದೆ. ನೀವು ಪದವಿಯಲ್ಲಿ ನೇರವಾಗಿ ಪಾಲಿಟಿಕಲ್ ಸೈನ್ಸ್‌ ಸಬ್‌ಜೆಕ್ಟ್ ಆಯ್ಕೆ ಮಾಡಬಹುದು ಇಲ್ಲ, ಪದವಿಯಲ್ಲಿ ಇತಿಹಾಸ ಆಯ್ಕೆ ಮಾಡಿಕೊಂಡು ಬಳಿಕ ಪಾಲಿಟಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ರಾಜಕೀಯಕ್ಕೆ ಎಂಟ್ರಿ ಆಗಬಹುದು.

ಸಿವಿಲ್ ಸರ್ವೀಸ್ ಆಫೀಸರ್:

ಸಿವಿಲ್ ಸರ್ವೀಸ್ ಆಫೀಸರ್:

ಇತಿಹಾಸ ವಿಷಯದಲ್ಲಿ ಪದವಿ ಮಾಡಿದವರು ಸವಿಲ್ ಸರ್ವೀಸ್ ಆಫೀಸರ್ ಹುದ್ದೆಗಳನ್ನ ಅಲಂಕರಿಸಬಹುದು. ಸರ್ಕಾರಿ ನೌಕರರಾಗಬಹುದು. ಅದಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವೀಸ್ ಹಲವಾರು ಪರೀಕ್ಷೆಗಳನ್ನ ಆಯೋಜಿಸುತ್ತದೆ. ಐಪಿಎಸ್, ಐಎಎಸ್, ಐಎಫ್ ಎಸ್ ಹಾಗೂ ಇನ್ನಿತ್ತರ ಪರೀಕ್ಷೆಗಳನ್ನ ಬರೆದು ಪಾಸ್ ಮಾಡಿ ನೀವು ಈ ಹುದ್ದೆ ಅಲಂಕರಿಸಬಹುದು.

ಇಂತಹ ಪರೀಕ್ಷೆಗಳಿಗೆ ಇತಿಹಾಸ ಸಬ್‌ಜೆಕ್ಟ್ ನಿಂದ ಹೆಚ್ಚಿನ ಪ್ರಶ್ನೆಗಳನ್ನ ಕೇಳಲಾಗಿರುತ್ತದೆ. ಇತಿಹಾಸ ವಿದ್ಯಾರ್ಥಿಗಳು ಆರಾಮಾವಾಗಿ ಈ ಪರೀಕ್ಷೆ ಪಾಸ್ ಮಾಡಬಹುದು.

ಜರ್ನಲಿಸ್ಟ್:

ಜರ್ನಲಿಸ್ಟ್:

ಸುದ್ದಿಯನ್ನ ಸಂಗ್ರಹಿಸಿ ಜನರಿಗೆ ಬರವಣಿಗೆ ಇಲ್ಲ ಮಾತಿನ ರೂಪದಲ್ಲಿ ತಲುಪಿಸುವ ಜವಬ್ದಾರಿ ಜರ್ನಲಿಸ್ಟ್ ಅವರದು. ಇವರಿಗೆ ಇತಿಹಾಸ ಹಾಗೂ ಪ್ರಸ್ತುತ ಪ್ರಚಲಿತ ವಿದ್ಯಾಮಾನದ ಮಾಹಿತಿ ತಿಳಿದಿರಬೇಕು. ಬಿಎ ಅಲ್ಲಿ ಇತಿಹಾಸ ಮಾಡಿದ್ದರೆ ಸಾಕು ನೀವು ಕೂಡಾ ಈ ಫೀಲ್ಡ್‌ಗೆ ಇಳಿಯಬಹುದು. ಹೆಚ್ಚಿನ ಜರ್ನಲಿಸ್ಟ್ ಪದವಿ ಬಳಿಕ ಕೆರಿಯರ್ ಆರಂಭಿಸಿ ಆಮೇಲೆ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.

ಲೈಬ್ರೇರಿಯನ್:

ಲೈಬ್ರೇರಿಯನ್:

ಲ್ರೈಬ್ರರಿ ಮ್ಯಾನೇಜ್‌ಮೆಂಟ್ ನೋಡಿಕೊಳ್ಳುವವರು ಲೈಬ್ರೇರಿಯನ್ ಆಗಿರುತ್ತಾರೆ. ನೀವು ಲೈಬ್ರೇರಿಯನ್ ಆಗಬೇಕಾದ್ರೆ ಲೈಬ್ರಿಸೈನ್ಸ್ ಕೋರ್ಸ್ ಮಾಡಬೇಕು. ನೀವು ಇತಿಹಾಸ ಬ್ಯಾಕ್‌ಗ್ರೌಂಡ್ ಅವರಾಗಿದ್ದರೆ ಆರಾಮವಾಗಿ ಈ ಜಾಬ್ ನಿಮ್ಮದಾಗಿಸಿಕೊಳ್ಳಬಹುದು.

ವಕೀಲರು:

ವಕೀಲರು:

ವಕೀಲ ವೃತ್ತಿಗೆ ಇತಿಹಾಸ ಪ್ರಮುಖ ಸಬ್‌ಜೆಕ್ಟ್. ಲಾಯರ್ ಆಗಬೇಕಾದ್ರೆ ನೀವು ಬಿಎ ಮಾಡಿ, ಬಿಎಲ್ ಪದವಿ ಪಡೆಯಬೇಕು. ಯಾರೆಲ್ಲಾ ಕರಿ ಕೋಟ್ ಧರಿಸಿ ಲಾಯರ್ ಆಗಬೇಕೆಂದು ಬಯಸಿದ್ದೀರೋ ನೀವೆಲ್ಲಾ ಮೊದಲಿಗೆ ಹಿಸ್ಟರಿ ಸಬ್‌ಜೆಕ್ಟ್ ಓದಿರಬೇಕು

ಶಿಕ್ಷಕಿ:

ಶಿಕ್ಷಕಿ:

ಬಿಎ ಹಿಸ್ಟರಿ ಹಾಗೂ ಬಿಎಡ್ ಮಾಡಿದ ಮೇಲೆ ನೀವು ಇತಿಹಾಸ ಶಿಕ್ಷಕಿಯಾಗಬಹುದು. ಇನ್ನು ಕಾಲೇಜು ಪ್ರೊಫೆಸರ್ ಆಗಬೇಕಾದರೆ ನೀವು ಈ ಸಬ್‌ಜೆಕ್ಟ್ ನಲ್ಲಿ ಪಿಹೆಚ್ ಡಿ ಮಾಡಬೇಕು.

For Quick Alerts
ALLOW NOTIFICATIONS  
For Daily Alerts

English summary
Are you a history student and have people told you that this arts subject does not have much scope for a career? Then disprove them with the list of career opportunities mentioned here. History is one of the underestimated subjects that has broad prospects but not many are highlighted. Let's take a look at them.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X