ಆಹಾರ ಪ್ರಿಯರಿಗೆ ಯಾವೆಲ್ಲಾ ಜಾಬ್ ಬೆಸ್ಟ್‌

Written By: Nishmitha B

ನೀವು ಆಹಾರ ಪ್ರಿಯರೇ... ನಿಮಗೆ ತಿನ್ನುದೆಂದ್ರೆ ತುಂಬಾ ಇಷ್ಟವಾ. ಹಾಗಿದ್ರೆ ನಿಮ್ಮ ಅಭಿರುಚಿಗೆ ತಕ್ಕಂತ ಕೆಲವೊಂದು ಜಾಬ್ ಗಳಿವೆ. ಆ ಜಾಬ್ ಗಳನ್ನ ನಿಮ್ಮ ಕೆರಿಯರ್ ಲೈಫ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಆ ಜಾಬ್ ಗಳು ಯಾವೆಲ್ಲಾ ಎಂಬ ಮಾಹಿತಿ ಇಲ್ಲಿದೆ ಓದಿ

ಡಯೆಟಿನ್:

ಡಯೆಟಿನ್ ಗಳು ಹೆಲ್ತ್ ಪ್ರೊಫೆಶನಲ್ಸ್ ಆಗಿರುತ್ತಾರೆ. ಇವರು ಜನರಿಗೆ ಯಾವ ರೀತಿಯ ಆಹಾರ ಸೇವಿಸಬೇಕು ಎಂದು ಅಡ್ವೈಸ್ ಮಾಡುವವರಾಗಿರುತ್ತಾರೆ. ಇವರು ಫುಡ್ ಚಾರ್ಟ್ ತಯಾರು ಮಾಡುತ್ತಾರೆ. ಮತ್ತು ಯಾವ ಸಮಯದಲ್ಲಿ ಎಂತಹ ಆಹಾರ ಸೇವಿಸಬೇಕು ಎಂದು ಸೂಚನೆ ನೀಡುತ್ತಾರೆ. ನೀವು ಡಯೆಟಿನ್ ಆಗಬೇಕು ಎಂದು ಕೊಂಡಿದ್ರೆ ನ್ಯೂಟ್ರಿಶನ್ ಹಾಗೂ ಡಯೆಟಿಕ್ ವಿಷಯದಲ್ಲಿ ಪದವಿ ಪಡೆದಿರಬೇಕು

ಹೊಟೇಲ್ ಶೆಫ್:

ಇವರು ಕುಕ್ಕಿಂಗ್ ನಲ್ಲಿ ಎಕ್ಸ್‌ಪರ್ಟ್ ಆಗಿರಬೇಕು. ನೀವು ಕಿಚನ್ ಅಸಿಸ್ಟೆಂಟ್ ಆಗಿ ಕೆಲಸ ಪ್ರಾರಂಭಿಸಬೇಕು. ಬಳಿಕ ಹೆಡ್ ಶೆಫ್ ಹಾಗೂ ಎಕ್ಸ್‌ಕ್ಯುಟೀವ್ ಶೆಫ್ ತನಕ ನೀವು ಪ್ರಮೋಶನ್ ಪಡೆಯಬಹುದು.

ಇನ್ನು ನೀವು ಶೆಫ್ ಆಗಬೇಕಾದ್ರೆ ಹೋಟೆಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ನಿಮ್ಮ ಶೈಕ್ಷಣಿಕ ಸರ್ಟಿಫಿಕೇಟ್ ಗಿಂತ ನಿಮ್ಮ ಅನುಭವ ಸರ್ಟಿಫಿಕೇಟ್ ಇಲ್ಲಿ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ

 

ಫುಡ್ ಟ್ರಕ್ ಮಾಲೀಕಿ:

ಫುಡ್ ಟ್ರಕ್ ಅಂದ್ರೆ ಮೊಬೈಲ್ ವ್ಯಾನ್ ಇಲ್ಲ ಮಿನಿ ರೆಸ್ಟೋರೆಂಟ್ ಎಂದೇ ಕರೆಯಬಹುದು. ನೀವು ಟ್ರಕ್ಸ ನಲ್ಲಿ ರೆಸ್ಟೋರೆಂಟ್ ವ್ಯವಹಾರ ನಡೆಸುತ್ತಿದ್ದರೆ ಅದು ಕೂಡಾ ಬೆಸ್ಟ್. ಇನ್ನು ಜನ ಸೇರುವಲ್ಲಿ ನಿಮ್ಮ ಟ್ರಕ್ ನ್ನು ಸ್ಥಳಾಂತರಿಸಬಹುದು. ಯಾವಾಗ ಬೇಕಾದ್ರೂ ಎಲ್ಲಿ ಬೇಕಾದ್ರು ನೀವು ಟ್ರಕ್ ಕೊಂಡೊಯ್ಯಬಹುದು. ನಿಮಗೆ ನಿಮ್ಮದೇ ಟ್ರಕ್ ಇದ್ರೆ ನಿಮಗೆ ಅಡುಗೆ ಮಾಡುವುದರ ಬಗ್ಗೆ ಜ್ಞಾನ ಇರಬೇಕು ಜತೆಯಲ್ಲಿ ಡ್ರೈವಿಂಗ್ ಕೂಡಾ ಗೊತ್ತಿರಬೇಕು

ರೆಸಿಪಿ ಟೆಸ್ಟರ್:

ಇದು ಸುಲಭವಾದ ಹುದ್ದೆ ಎಂದು ನಿಮಗೆ ಅನಿಸಬಹುದು. ಅಷ್ಟೃ ಅಲ್ಲ ಇದು ಐಷರಾಮಿ ಉದ್ಯೋಗ ಕೂಡಾ. ನೀವು ಫುಡೀ ಆಗಿದ್ದರೆ ಈ ಜಾಬ್ ಗೆ ಟ್ರೈ ಮಾಡಬಹುದು. ನೀವು ವಿವಿಧ ರೀತಿಯ ಟೇಸ್ಟ ನ ಅಡುಗೆ ಸವಿಯಬಹುದು. ಇದಕ್ಕೆ ಇರಬೇಕಾದ ಅರ್ಹತೆ ಅಂದರೆ ನಿಮಗೆ ಟೇಸ್ಟ್ ನೋಡುವ ಕೌಶಲ್ಯವಿರಬೇಕು. ಫುಡ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿರಬೇಕು

ಫುಡ್ ಜರ್ನಲಿಸ್ಟ್:

ಫುಡ್ ಜರ್ನಲಿಸ್ಟ್ ಅವರು ಫುಡ್ ಟೇಸ್ಟ್ ನೋಡಿ ಅದರ ಬಗ್ಗೆ ರಿವ್ಯೂ ಬರೆಯಬೇಕು. ಇದು ರೆಸ್ಟೋರೆಂಟ್ ಗಳು ತಮ್ಮ ಆಹಾರವನ್ನ ಪ್ರೊಮೋಟ್ ಮಾಡಲು ಬೆಸ್ಟ್ ವಿಧಾನ. ನೀವು ಫುಡ್ ಜರ್ನಲಿಸ್ಟ್ ಆಗಿದ್ದರೆ ನಿಮಗೆ ರೆಸ್ಟೋರೆಂಟ್ ಗಳಿಂದ ಫ್ರೀ ಫುಡ್ ಆಫರ್ ಕೂಡಾ ಸಿಗುವುದು. ಇನ್ನು ಈ ಹುದ್ದೆಗೆ ನೀವು ವೃತ್ತಿಪರ ಜರ್ನಲಿಸ್ಟ್ ಆಗಿರಬೇಕೆಂದಿಲ್ಲ ಬದಲಿಗೆ ನಿಮ್ಮದೆ ಬ್ಲಾಗ್ ನಡೆಸುವವರು ಕೂಡಾ ಆಗಿರಬಹುದು. ನಿಮ್ಮ ಬ್ಲಾಗ್‌ನಲ್ಲಿ ಫುಡ್ ಬಗ್ಗೆ ರಿವ್ಯೂ ಬರೆಯಬಹುದು

ಬೇಕರ್:

ಬೇಕಿಂಗ್ ಎಂಬುವುದು ಒಂದು ರಿಲಾಕ್ಸಿಂಗ್ ಆರ್ಟ್ ಇದ್ದಂಗೆ. ಕೇಕ್ ಮಾಡುವುದು, ಚಾಕಲೇಟ್ ತಯಾರಿಸುವುದು ಇದೆಲ್ಲಾ ಬೇಕಿಂಗ್ ವಿಭಾಗದಲ್ಲಿ ಬರುತ್ತದೆ. ನಿಮಗೆ ಬೇಕರಿ ಶಾಪ್, ಬೇಕರಿ ಫುಡ್ ಹೋಮ್ ಡೆಲಿವರಿ ಬ್ಯುಸಿನೆಸ್ ನಿಮಗೆ ಇದ್ರೆ ನೀವು ಆರಾಮವಾಗಿ ಈ ಬ್ಯುಸಿನೆಸ್ ಮಾಡಬಹುದು

ಇನ್ನು ಬೇಕರ್ ಆಗಲು ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ. ಇನ್ನು ನೀವು ಬೇಕರಿ ಸ್ಟಾರ್ಟ್ ಮಾಡಬೇಕು ಅಂದುಕೊಂಡಿದ್ರೆ ಅದಕ್ಕಾಗಿ ಅನೇಕ ಆನ್‌ಲೈನ್ ಕೋರ್ಸ್ ಗಳಿವೆ ನೀವು ಟ್ರೈ ಮಾಡಬಹುದು

 

 

ಕ್ಯಾಟರಿಂಗ್:

ಇಲ್ಲಿ ಮ್ಯಾನ್ ಪವರ್ ಹೆಚ್ಚಿರಬೇಕಾಗುತ್ತದೆ. ಯಾಕೆಂದ್ರೆ ಅದೆಷ್ಟೋ ಮಂದಿಗೆ ಒಂದೇ ಟೈಂನಲ್ಲಿ ಆಹಾರ ಸರ್ವ್ ಮಾಡುವ ಕ್ಯಾಪಸಿಟಿ ಇವರಿಗೆ ಇರಬೇಕಾಗುತ್ತದೆ. ಕಿಚನ್ ಅಸಿಸ್ಟೆಂಟ್ ಹಾಗೂ ಕುಕ್ ಸೇರಿಂದತೆ ಅನೇಕ ಮಂದಿ ಈ ಕ್ಯಾಟರಿಂಗ್ ಯೂನಿಟ್ ಅಲ್ಲಿ ಇರುತ್ತಾರೆ. ಇಲ್ಲಿ ಕ್ಯಾಟರ್ ಹಸಿ ತರಕಾರಿ ಹಾಗೂ ಇತರ ವಸ್ತುಗಳನ್ನ ನೀಡುತ್ತಾರೆ. ಅದರಲ್ಲಿ ಕುಕ್ ರುಚಿಕರವಾದ ಅಡುಗೆ ಮಾಡಬೇಕಾಗುತ್ತದೆ.

ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಯಾರು ಪದವಿ ಪಡೆದಿರುತ್ತಾರೋ ಅವರು ಈ ಬ್ಯುಸಿನೆಸ್ ಕೈಗೆತ್ತಿಕೊಳ್ಳಬಹುದು.

 

ಲೇಖಕ:

ಈಗಂತೂ ಆನ್‌ಲೈನ್‌ಗಳಲ್ಲಿ ವಿವಿಧ ವಿವಿಧ ರೀತಿಯ ಡಿಫರೆಂಟ್ ಖಾದ್ಯಗಳನ್ನ ಮಾಡುವುದು ಹೇಳಿ ಕೊಡುತ್ತಾರೆ. ನಿಮಗೂ ಅದೇ ರೀತಿ ಹೊಸ ಹೊಸ ರೆಸಿಪ್ ಮಾಡುವ ಹಂಬಲವಿದ್ರೆ ನೀವು ಕೂಡಾ ತಯಾರಿಸಿ ಅದು ಸಕಸ್ಸ್ ಆದ್ರೆ ಪುಸ್ತಕದ ಮೂಲಕ ಹೊರತನ್ನಿ. ಅಷ್ಟೇ ಅಲ್ಲ ಯೂಟ್ಯೂಬ್ ವಿಡಿಯೋ ಮೂಲಕ ಕೂಡಾ ನಿಮ್ಮ ಅಡುಗೆಯನ್ನ ಪರಚಯಿಸಬಹುದು. ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿ

ಫುಡ್ ಸೇಫ್ಟಿ ಆಫೀಸರ್:

ಅಡುಗೆ ವಿಚಾರದಲ್ಲಿ ಆರೋಗ್ಯ, ನ್ಯೂಟ್ರಿಶನ್ ಹಾಗೂ ಟೇಸ್ಟ್ ಮಾತ್ರ ಇಲ್ಲಿ ಪ್ರಮುಖವಲ್ಲ ಜತೆಗೆ ಸ್ವಚ್ಛತೆ ಹಾಗೂ ಭದ್ರತೆ ಕೂಡಾ ಪ್ರಮುಖ ಪಾತ್ರವಹಿಸುತ್ತದೆ. ಫುಡ್ ಸೇಫ್ಟಿ ಕಾರ್ಪೋರೇಶನ್ ಅಡಿಯಲ್ಲಿ ಈ ವಿಭಾಗ ಬರುತ್ತದೆ.

ಫುಡ್ ಫೋಟೋಗ್ರಾಫರ್:

ಇತ್ತೀಚಿಗಿನ ದಿನಗಳಲ್ಲಿ ಸ್ಟಿಲ್ಸ್ ಫೋಟೋ ತೆಗೆಯುದನ್ನ ಫೋಟೋಗ್ರಾಫಿ ಅಂತಾರೆ. ಫುಡ್ ಫೀಲ್ಡ್‌ನಲ್ಲಿ ಇಂಟ್ರೆಸ್ಟ್ ಇರೋರು ಈ ವೃತ್ತಿ ತಮ್ಮದಾಗಿಸಿಕೊಳ್ಳಬಹುದು. ಈ ಫುಡ್ ಫೋಟೋಗ್ರಾಫಿಯಲ್ಲಿ ಮುಖ್ಯವಾಗಿ ಫುಡ್ ಸ್ಟೈಲಿಂಗ್ ಬಗ್ಗೆ ನೀವು ತಿಳಿದುಕೊಂಡಿರಬೇಕು. ಫೋಟೋ ಕ್ಲಿಕ್ಕಿಸಿ ಬಳಿಕ ಅದು ಆಕರ್ಷಕವಾಗಿ ಕಾಣುವಂತೆ ಎಡಿಟ್ ಮಾಡುವ ಜ್ಞಾನ ನಿಮಗಿರಬೇಕು. ಈ ಕೆರಿಯರ್ ಗೆ ಫೋಟೋಗ್ರಾಫಿ ಸಂಬಂಧಪಟ್ಟ ಕೋರ್ಸ್ ಗಳನ್ನ ಮಾಡಬಹುದು

ಫಾರ್ಮರ್:

ಇನ್ನು ನೀವು ಕೃಷಿಯತ್ತ ಕೂಡಾ ಮುಖ ಮಾಡಬಹುದು. ಈಗಂತೂ ವ್ಯವಸಾಯಕ್ಕೆ ಅನೇಕ ತಂತ್ರಜ್ಞಾನಗಳು ಬಂದಿವೆ. ಅವುಗಳನ್ನ ಬಳಸಿ ಫಾರ್ಮಿಂಗ್, ವರ್ಟಿಕಲ್ ಫಾರ್ಮಿಂಗ್, ಕಿಚನ್ ಗಾರ್ಡನಿಂಗ್ ಮಾಡಬಹುದು.

ಮೊದಲಿಗೆ ಚಿಕ್ಕ ಚಿಕ್ಕ ತರಕಾರಿಗಳನ್ನ ಬೆಳೆದು ಪ್ರಯತ್ನ ಮಾಡಿ. ಅಗ್ರಿಕಲ್ಚರ್ ವಿಷಯದಲ್ಲಿ ಪದವಿ ಪಡೆದಿದದ್ರೆ ಯಶಸ್ವೀಯಾಗಿ ಬೇಸಾಯ ಮಾಡಬಹುದು. ಆದ್ರೂ ವ್ಯವಸಾಯಕ್ಕೆ ಶಿಕ್ಷಣಾಭ್ಯಾಸದ ಅಗತ್ಯವಿಲ್ಲ. ಮುಖ್ಯವಾಗಿ ಮನಸ್ಸಿರಬೇಕು.

 

ಕೆಮಿಸ್ಟ್:

ವಿವಿಧ ಆಹಾರಗಳಲ್ಲಿ ಇರುವ ಫ್ಲೇವರ್ಸ್, ಎಸ್ಸೆನ್ಸ್, ಹಾಗೂ ಆರೋಮಾಸ್ ಕೆಮಿಸ್ಟ್ ಅವರಿಂದ ತಯಾರಿಸಲ್ಪಡುತ್ತದೆ. ಫುಡ್ ರುಚಿ ಮತ್ತಷ್ಟು ಹೆಚ್ಚಿಸಲು ಅವರು ಕೆಲವೊಂದು ರುಚಿಕರ ವಸ್ತುಗಳನ್ನ ಸೇರಿಸುತ್ತಾರೆ. ಫುಡ್ ಸೈನ್‌ನಲ್ಲಿ ಅಥವಾ ಕೆಮಿಸ್ಟ್ ವಿಭಾಗದಲ್ಲಿ ಪದವಿ ಪಡೆದಿದ್ದರೆ ಸಾಕು ನೀವು ಈ ವೃತ್ತಿ ಸ್ಟಾರ್ಟ್ ಮಾಡಬಹುದು. ಇನ್ನು ನೀವು ಮಾಸ್ಟರ್ ಡಿಗ್ರಿ ಮಾಡಿದ್ದಲ್ಲಿ, ನಿಮ್ಮ ಫ್ಲೇವರ್ ಕಂಡುಹಿಡಿಯಬಹುದು, ಹಾಗೂ ಅದಕ್ಕೆ ಪೇಟೆಂಟ್ ಮಾಡಿ ಮಾರಾಟ ಮಾಡಬಹುದು

 

 

English summary
Are you a foodie who has often heard the dialogue: You are fit only for eating? Well, if you have ever been embarrassed about your finesse for eating, then it's time to shoo that guilt away and instead take pride in it. There are an array of professions just for foodies that you must know. Check them out and make your career choice effectively.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia