ಆಕಾಶದಲ್ಲಿ ಹಾರಾಡಬೇಕೇ... ಏರೋನಾಟಿಕ್ಸ್ ಕೋರ್ಸ್ ಹಾಗೂ ಕೆರಿಯರ್ಸ್ ಬಗ್ಗೆ ಕಂಪ್ಲೀಟ್ ಡೀಟೆಲ್ಸ್

By Kavya

ಚಿಕ್ಕಂದಿನಿಂದ ಆಕಾಶದಲ್ಲಿ ಹೋಗುತ್ತಿದ್ದ ವಿಮಾನ ನೋಡಿ ನೀವು ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದಿರಾ.. ನಿಮಗೂ ಆಕಾಶದಲ್ಲಿ ಹಾರಾಡಬೇಕು ಎಂದು ಅನಿಸುತ್ತಿದೆಯಾ ಹಾಗಿದ್ರೆ ನಿಮ್ಮ ಕನಸು ಆದಷ್ಟು ಬೇಗ ನನಸು ಮಾಡಿಕೊಳ್ಳಿ. ಏರೋನಾಟಿಕ್ಸ್ ಗೆ ಸಂಬಂಧಪಟ್ಟ ಕೋರ್ಸ್ ಗಳ ಬಗ್ಗೆ ಕಂಪ್ಲೀಟ್ ಮಾಹಿತಿ ನಿಮಗಾಗಿ.

 

ಏರೋನಾಟಿಕ್ಸ್ ಇದೀಗ ಹಲವಾರು ಕೋರ್ಸ್ ಗಳನ್ನ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದೆ. ಇನ್ನು ಪಿಯುಸಿಯಲ್ಲಿ ನೀವು ಆಯ್ಕೆ ಮಾಡಿಕೊಂಡಿರುವಂತಹ ಆರ್ಟಸ್, ಸೈನ್ಸ್ ಹಾಗೂ ಇಂಜಿನಿಯರಿಂಗ್ ಪದವಿ ಮಾಡಿದವರೂ ಕೂಡಾ ಈ ಕೋರ್ಸ ಮಾಡಬಹುದು. ಏರೋನಾಟಿಕ್ಸ್ ಗೆ ಸಂಬಂಧಪಟ್ಟಂತೆ ಯಾವ ಕೋರ್ಸ ಮಾಡಿದ್ರೆ ಬೆಸ್ಟ್, ಕೋರ್ಸ್ ಗಳ ಸ್ಕೋಪ್ ಹೀಗೆ ಅನೇಕ ಮಾಹಿತಿ ಇಲ್ಲಿದೆ

ಏರೋನಾಟಿಕಲ್ ಇಂಜಿನಿಯರಿಂಗ್:

ಏರೋನಾಟಿಕಲ್ ಇಂಜಿನಿಯರಿಂಗ್:

ಏರ್‌ ಕ್ರಾಫ್ಟ್, ಮಿಸಲ್ಸ್ ಮತ್ತು ಸ್ಪೇಸ್ ಸ್ಯಾಟಲೈಟ್ಸ್ ವಿಷಯವನ್ನ ಏರೋನಾಟಿಕಲ್ ಇಂಜಿನಿಯರಿಂಗ್ ಕೋರ್ಸ್ ಒಳಗೊಂಡಿರುತ್ತದೆ. ಈ ಕೋರ್ಸ್ ಏರ್ ಕ್ರಾಫ್ಟ್ ಬಗ್ಗೆ ನಾಲೆಜ್ ಹಾಗೂ ಕಂಟ್ರೋಲ್ ಮಾಡುವುದು ಹೇಗೆ ಎಂಬುವುದು ತಿಳಿಸಿಕೊಡುತ್ತದೆ. ಡಿಸೈನ್, ಕಂಟ್ರೋಲ್, ಏರ್‌ಕ್ರಾಫ್ಟ್ ನ ಮೈಂಟೇನೆಂಸ್ ವಿಷಯವನ್ನ ಈ ಸಿಲೇಬಸ್ ಒಳಗೊಂಡಿದೆ.ಅಷ್ಟೇ ಅಲ್ಲ ಈ ವಿಷಯದ ಬಗ್ಗೆ ಥಿಯರಿಟಿಕಲ್ ಆಗಿಯೂ ಪ್ರ್ಯಾಕ್ಟಿಕಲ್ ಆಗಿಯೂ ಕಲಿಸಿಕೊಡಲಾಗುತ್ತದೆ.

ಈ ಕೋರ್ಸ್ ನಲ್ಲಿ ಬಿಇ, ಬಿಟೆಕ್, ಎಂಇ ಹಾಗೂ ಪಿಹೆಚ್ ಡಿ ಪದವಿ ಲಭ್ಯವಿದೆ.

ಏರೋಸ್ಪೇಸ್ ಇಂಜಿನಿಯರಿಂಗ್:

ಏರೋಸ್ಪೇಸ್ ಇಂಜಿನಿಯರಿಂಗ್:

ಡಿಸೈನ್, ಮ್ಯಾನುಫ್ಯಾಕ್ಚರ್, ಫಂಕ್ಷನಿಂಗ್, ಹಾಗೂ ಮೈಂಟೆನೆನ್ಸ್ ಆಫ್ ಏರ್‌ಕ್ರಾಫ್ಟ್, ಸ್ಪೇಸ್ ಕ್ರಾಫ್ಟ್, ಹಾಗೂ ಮಿಸಲ್ಸ್ ವಿಷಯವನ್ನ ಈ ಸಬ್‌ಜೆಕ್ಟ್ ಒಳಗೊಂಡಿದೆ. ಫಿಸಿಕಲ್ ಸೈನ್ಸ್ ಹಾಗೂ ಮ್ಯಾಥಮ್ಯಾಟಿಕ್ಸ್ ಕಾಂಬಿನೇಶನ್ ಸಬ್‌ಜೆಕ್ಟ್ ಇದು. ಏರ್ ವೈಹಿಕಲ್ಸ್, ಮ್ಯಾಥಮ್ಯಾಟಿಕ್ಸ್, ಮ್ಯಾಕಾನಿಕ್ಸ್, ಥರ್ಮೋಡಿನಮಿಕ್ಸ್, ಫ್ಲೈಟ್ ಪ್ರಿನ್ಸಿಪಲ್ಸ್, ಡಿಸೈನ್ಸ್ ಈ ಕೋರ್ಸ್ ಅಡಿಯಲ್ಲಿ ಬರುವ ಸಬ್‌ಜೆಕ್ಟ್.

ಈ ಕೋರ್ಸ್ ನಲ್ಲಿ ಬಿಇ, ಬಿಟೆಕ್, ಬಿಎಸ್ ಸಿ, ಎಂಎಸ್ ಸಿ, ಎಂಟೆಕ್ ಪದವಿ ಪಡೆಯಬಹುದು.

 

ಏರ್‌ಕ್ರಾಫ್ಟ್ ಮೈಂಟೆನೆನ್ಸ್ ಇಂಜಿನಿಯರಿಂಗ್:
 

ಏರ್‌ಕ್ರಾಫ್ಟ್ ಮೈಂಟೆನೆನ್ಸ್ ಇಂಜಿನಿಯರಿಂಗ್:

ಪೋಸ್ಟ್ ಪ್ರೊಡಕ್ಷನ್ ಮೈಂಟೆನೆನ್ಸ್ ಮೇಲೆ ಏರ್‌ಕ್ರಾಫ್ಟ್ ಮೈಂಟೆನೆನ್ಸ್ ಇಂಜಿನಿಯರಿಂಗ್ ಏರೋಡೈನಾಮಿಕ್ಸ್, ಸ್ಟ್ರಕ್ಚಲ್ ಅನಾಲಿಸಿಸ್, ಫ್ಲ್ಯೂಡ್ ಸೈನ್ಸ್, ಮೆಟೀರಿಯಲ್ ಡೈನಾಮಿಕ್ ಕಾನ್ಸೆಪ್ಟ್ ಮೂಲಕ ಫೋಕಸ್ ಮಾಡಲಾಗುತ್ತದೆ. ಈ ಕೋರ್ಸ್ ನಲ್ಲಿ ಕೆಮೆಸ್ಟ್ರಿ ಹಾಗೂ ಮ್ಯಾನಿಕ್ಸ್ ಪ್ರಮುಖ ಸಬ್‌ಜೆಕ್ಟ್ ಆಗಿದೆ.

ಈ ಕೋರ್ಸ್ ನಲ್ಲಿ ಬಿಇ, ಬಿಎಸ್ ಸಿ ಪದವಿ ಪಡೆಯಬಹುದಾಗಿದೆ. ಟೀಚಿಂಗ್, ಪಬ್ಲಿಶಿಂಗ್, ಇಂಜಿನಿಯರಿಂಗ್ ಹುದ್ದೆಗಳನ್ನ ಈ ಕೋರ್ಸ್ ಮಾಡಿರುವವರು ಅಲಂಕರಿಸಬಹುದು.

 

ಏರೋನಾಟಿಕಲ್ ಸೈನ್ಸ್:

ಏರೋನಾಟಿಕಲ್ ಸೈನ್ಸ್:

ಸೈನ್ಸ್ ಆಫ್ ಕ್ರಿಯೇಶನ್ ಮತ್ತು ಆಪರೇಶನ್ಸ್ ಆಫ್ ಏರ್‌ಕ್ರಾಫ್ಟ್ ವಿಷಯಕ್ಕೆ ಸಂಬಂಧಪಟ್ಟ ಕೋರ್ಸ್ ಏರೋನಾಟಿಕಲ್ ಸೈನ್ಸ್. ಇಂಜಿನಿಯರಿಂಗ್ ಡ್ರಾವಿಂಗ್, ಎಲೆಕ್ಟ್ರಿಸಿಟಿ, ಫ್ಯೂಲ್, ಮೆಟರೋಲಾಜಿ, ಎಕಾನಾಮಿಕ್ಸ್ ಮತ್ತು ಸೇಫ್ಟಿ ಗೈಡ್ ಲೈನ್ಸ್ ವಿಷಯದ ಮೇಲೆ ಈ ಸಬ್‌ಜೆಕ್ಟ್ ಇದೆ.

ಇದುವರೆಗೆ ಇದೊಂದು ವಿಜ್ಞಾನ ಕೋರ್ಸ್ ನಲ್ಲಿ ಬರುವ ವಿಷಯವಾಗಿದೆ. ಬಿಎಸ್ ಸಿ ಹಾಗೂ ಎಂಎಸ್ ಸಿ ವಿಷಯದಲ್ಲಿ ಈ ಕೋರ್ಸ್ ಮಾಡಬಹುದಾಗಿದೆ. ಫ್ಲೈಟ್ ಇಂಜಿನಿಯರ್, ಆಪರೇಟರ್, ಏರ್‌ಲೈನ್ ಪೈಲಟ್ ಹುದ್ದೆಗಳು ಈ ಕೋರ್ಸ್ ಮೇಲೆ ಅವಲಂಬಿತವಾಗಿದೆ

 

ಸ್ಪೇಸ್ ಇಂಜಿನಿಯರಿಂಗ್ ಆಂಡ್ ರಾಕೆಟ್ರಿ:

ಸ್ಪೇಸ್ ಇಂಜಿನಿಯರಿಂಗ್ ಆಂಡ್ ರಾಕೆಟ್ರಿ:

ಸ್ಪೇಸ್, ಸ್ಯಾಟಲೈಟ್ ಹಾಗೂ ರಾಕೆಟ್ಸ್ ವಿಷಯಕ್ಕೆ ಸಂಬಂಧಪಟ್ಟ ಸ್ಟಡಿಯೇ ಸ್ಪೇಸ್ ಇಂಜಿನಿಯರಿಂಗ್. ಸೋಲಾರ್ ಸಿಸ್ಟೆಮ್, ಪ್ಲ್ಯಾನೆಟ್ಸ್, ಗ್ಯಾಲಕ್ಸಿಸ್, ಹಾಗೂ ಕ್ಲೈಮೆಟ್ ಜತೆಗೆ ಇನ್ನಿತ್ತರ ಕಂಡೀಶನ್ಸ್ ಸಬ್‌ಜೆಕ್ಟ್ ಬಗ್ಗೆ ಈ ಕೋರ್ಸ್ ಕವರ್ ಮಾಡುತ್ತದೆ. ಮಾಸ್ಟರ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸಬ್‌ಜೆಕ್ಟ್ ಬಗ್ಗೆ ಆಫರ್ ಮಾಡಲಾಗುತ್ತದೆ. ನೀವು ಕೋರ್ಸ್ ನಿಂದ ಆಸ್ಟ್ರೋನಟ್ ಇಲ್ಲ ಸೈಂಟಿಸ್ಟ್ ಕೂಡಾ ಆಗಬಹುದು.

ಏರ್‌ಕ್ರಾಫ್ಟ್ ಡಿಸೈನ್ :

ಏರ್‌ಕ್ರಾಫ್ಟ್ ಡಿಸೈನ್ :

ವಾಹನ ಡಿಸೈನ್ ಮಾಡುವ ಕ್ರೇಜ್ ನಿಮಗಿದೆಯಾ ಹಾಗಿದ್ರೆ ಈ ಕೋರ್ಸ್ ನಿಮಗೆ ಬೆಸ್ಟ್. ನಿವು ಮ್ಯಾಜಾನಿಕಲ್ ಇಂಜಿನಿಯರಿಂಗ್, ಇಲ್ಲ ಇಂಜಿನಿಯರಿಂಗ್ ವಿಷಯಕ್ಕೆ ಸಂಬಂಧಪಟ್ಟ ಡೂಸೈನ್, ಶೇಪಿಂಗ್ ವಿಚಾರದಲ್ಲಿ ಪದವಿ ಇಲ್ಲ ಸ್ನಾತಕೋತ್ತರ ಪದವಿ ಪಡೆದಿದ್ದರೆ ನೀವು ಏರ್‌ ಕ್ರಾಫ್ಟ್ ವಿಷಯದಲ್ಲಿ ಎಂಟೆಕ್ ಮಾಡಬಹುದು. ಡಿಸೈನಿಂಗ್ ಟೆಕ್ನಿಕ್ಸ್ ಬಗ್ಗೆ ಈ ಕೋರ್ಸ್ ಕಂಪ್ಲೀಟ್ ಆಗಿ ನಿಮಗೆ ತಿಳಿಸಿಕೊಡುತ್ತದೆ

For Quick Alerts
ALLOW NOTIFICATIONS  
For Daily Alerts

English summary
Do Aeroplanes and the outer space fascinate you? Does flying excite you? Then you are probably meant to be a part of the skies! Check out the various courses in aeronautics you can take up on the road to your dream career.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X