ಕೆಲಸದಲ್ಲಿ ಪ್ರಮೋಶನ್ ಬೇಕಾ... ಈ ಅಭ್ಯಾಸ ನಿಮ್ಮದಾಗಿಸಿಕೊಂಡ್ರೆ ಪ್ರಮೋಶನ್ ಗ್ಯಾರಂಟಿ !

ಪ್ರತಿ ದಿನ ಬೆಳಗ್ಗೆ ಎದ್ದು ತಯಾರಾಗಿ ಆಫೀಸ್ ಹೋಗುವುದು ನಿಮಗೆ ಬೋರ್ ಎನಿಸಿರಬಹುದು. ವಾರಕ್ಕೆ ಎರಡು-ಮೂರು ದಿನವಂತೂ ಕೆಲಸ ಮಾಡಲು ಮನಸ್ಸೇ ಇರುವುದಿಲ್ಲ. ಆಫೀಸ್ ಹೋಗಲು ನಿಮಗೆ ಮೂಡ್ ಇಲ್ಲದೇ ಇರಬಹುದು. ನಿಮ್ಮ ಜೀವನದಲ್ಲೂ ಹೀಗೆ ಆಗುತ್ತಿದ್ದರೆ ನೀವು ಕೆಲವೊಂದು ಅಭ್ಯಾಸಗಳನ್ನ ರೂಢಿಸಿಕೊಳ್ಳಿ. ಇದರಿಂದ ಆಫೀಸ್ ವಾತಾವರಣ ಕೂಡಾ ಚೆನ್ನಾಗಿರುತ್ತದೆ. ಇದರಿಂದ ನಿಮ್ಮ ಬಾಸ್ ಕೂಡಾ ಖುಷಿಯಾಗುತ್ತಾರೆ. ಅಷ್ಟೇ ಅಲ್ಲ ಬಾಸ್ ಖುಷಿಯಾಗುವುದರಿಂದ ನಿಮ್ಮ ಪ್ರಮೋಶನ್ ಕೂಡಾ ಬೇಗ ಬೇಗನೆ ಸಿಗುತ್ತದೆ.

ಕೆಲವೊಮ್ಮೆ ನಮಗೆ ಆಫೀಸ್‌ನಲ್ಲಿ ಹೇಗೆ ಫೀಲ್ ಆಗುತ್ತೆ ಎಂದ್ರೆ ಯಾವುದೋ ಪಂಜರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು . ಬರೀ ಹಣಕ್ಕಾಗಿ ಕತ್ತೆ ತರಹ ದುಡಿಯುತ್ತಿದ್ದೇವೆ ಎಂದು ನಿಮಗೆ ಅನಿಸಬಹುದು. ಆದ್ರೆ ಒಂದು ತಿಳಿದುಕೊಳ್ಳಿ ಈ ಜಗತ್ತಿನಲ್ಲಿ ಅದೆಷ್ಟೋ ಮಂದಿ ಕೆಲಸವಿಲ್ಲದೇ ಇದ್ದಾರೆ. ಅವರು ಕೆಲಸ್ಕಾಗಿ ಹಗಲು ರಾತ್ರಿ ಎನ್ನದೇ ಹುಡುಕಾಡುತ್ತಿದ್ದಾರೆ. ಹಾಗಾಗಿ ಈಗ ಇರುವ ಕೆಲಸದಲ್ಲೇ ಉತ್ಸಾಹ ತೋರಿ ಅಭಿವೃದ್ಧಿ ಕಾಣಲು ಮುಂದಾಗಿ. ಪ್ರಮೋಶನ್ ಗಾಗಿ ಪ್ರಯತ್ನ ಪಡಿ, ಇನ್ನು ಕೆಲವೊಂದು ಅಭ್ಯಾಸಗಳನ್ನ ನಿಮ್ಮದಾಗಿಸಿಕೊಂಡರೆ ನೀವು ಕೂಡಾ ಸುಲಭವಾಗಿ ಪ್ರಮೋಶನ ಪಡೆಯಬಹುದು.

 

ಬನ್ನಿ ನಿಮ್ಮ ಯಾವ ಅಭ್ಯಾಸದಿಂದ ನೀವು ಬಾಸ್ ಮನಗೆಲ್ಲಬಹುದು ಎಂಬುವುದು ಇಲ್ಲಿದೆ

ಹಾವ-ಭಾವದಿಂದ ಇಂಪ್ರೇಸ್ ಮಾಡಿ:

ಪ್ರಮೋಶನ್ ಗಾಗಿ ನೀವು ನಿಮ್ಮ ಬಾಸ್ ಗೆ ಬಕೆಟ್ ಹಿಡಿದು ನೀವು ಇಂಪ್ರೇಸ್ ಮಾಡುವ ಅಗತ್ಯವಿಲ್ಲ. ಕೆಲವೊಮ್ಮೆ ಬಕೆಟ್ ಹಿಡಿಯುವ ಉದ್ಯೋಗಿಗಳು ಬಾಸ್ ಗೆ ಇಷ್ಟವಾಗುವುದಿಲ್ಲ. ನೀವು ನಿಮ್ಮ ಹಾವ ಭಾವದಿಂದ ಬಾಸನ್ನ ಇಂಪ್ರೇಸ್ ಮಾಡಲು ಪ್ರಯತ್ನಿಸಿ. ಗುಡ್ ಮಾರ್ನಿಂಗ್, ಬರ್ತ್ ಡೇ ವಿಶಸ್ ಮುಂತಾದ ವಿಶ್ ಮಾಡುವ ಮೂಲಕವೂ ನೀವು ಬಾಸ್ ಅವರನ್ನ ಮೆಚ್ಚಿಸಬಹುದು.

ಪ್ಲ್ಯಾನ್ ಮಾಡಿ ಕೆಲಸ ಮಾಡಿ:

ನೀವು ಹಿಡಿಯುವ ಬಕೆಟ್ ಗಿಂತ ನಿಮ್ಮ ಈ ಸ್ವಭಾವ ಬಾಸ್ ಗೆ ಬೇಗನೆ ಇಷ್ಟವಾಗಬಹುದು. ಅಷ್ಟೇ ಅಲ್ಲ ಮೊದಲಿಗೆ ಈ ವಿಷಯವನ್ನ ಗಮನದಲ್ಲಿಟ್ಟುಕೊಳ್ಳುವುದು ಬೆಸ್ಟ್. ಯಾರು ಪ್ಲ್ಯಾನ್ ಮಾಡಿ ಕೆಲಸ ಮಾಡುತ್ತಾರೆ ಹಾಗೆಯೇ ಡೆಡ್ ಲೈನ್ ಗಿಂತ ಮೊದಲೇ ಕೆಲಸ ಮಾಡಿ ಮುಗಿಸ್ತಾರೋ ಅವರು ಬಾಸ್ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ಕೆಲಸವನ್ನ ಪ್ಲ್ಯಾನ್ ಮಾಡಿ ಮಾಡುವುದರಿಂದ ನಿಮ್ಮ ಸ್ಟೇಟಸ್ ಕೂಡಾ ಹೆಚ್ಚುತ್ತದೆ ಅಷ್ಟೇ ಅಲ್ಲ ಪಾಸಿಟೀವ್ ವಾತಾವರಣ ಕೂಡಾ ನಿರ್ಮಾಣವಾಗುತ್ತದೆ. ಡೆಡ್ ಲೈನ್ ಹಾಗೂ ಕೆಲಸದ ವೇಗದ ಬಗ್ಗೆ ಗಮನಕೊಡಿ. ದಿನ ಪ್ರಾರಂಭವಾಗುವ ವೇಳೆ ಕೆಲಸ ಬಗ್ಗೆ ಒಂದು ಲಿಸ್ಟ್ ಮಾಡಿಕೊಳ್ಳಿ.

ಆಫೀಸ್ ಟೈಂ ಬಗ್ಗೆ ಇರಲಿ ಗಮನ:

ಆಫೀಸ್ ಕೆಲಸವನ್ನ ಮನೆಗೆ ತೆಗೆದುಕೊಂಡು ಹೋಗಿ, ಮನೆಯಲ್ಲೂ ಆಫೀಸ್ ಕೆಲಸ ಮಾಡಿದ್ರೆ ನಿಮ್ಮ ಬಾಸ್ ಖಂಡಿತ ಖುಷಿ ಯಾಗುತ್ತಾರೆ ಆದ್ರೆ ಇದರಿಂದ ನಿಮ್ಮ ಫ್ಯಾಮಿಲಿಗೆ ತೊಂದರೆ ಆಗಬಹುದು. ಆದ್ರೆ ಆಫೀಸ್ ಕೆಲಸ ಮನೆಯಲ್ಲಿ ಮಾಡುವುದರಿಂದ ಬಾಸ್ ಖುಷಿಯಾಗುತ್ತಾರೆ ಎಂದು ನೀವು ಅಂದು ಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ. ಒಂದು ವೇಳೆ ಆಫೀಸ್‌ನಲ್ಲಿ ಆಫೀಸ್ ಟೈಂ ಒಳಗೆನೆ ನೀವು ಕೆಲಸ ಮಾಡಿ ಮುಗಿಸಿದ್ರೆ ನಿಮ್ಮ ಬಾಸ್ ನಿಮ್ಮ ಬಗ್ಗೆ ದುಪ್ಪಟ್ಟು ಖುಷಿಪಡುತ್ತಾರೆ ಅಷ್ಟೇ ಅಲ್ಲ ಹೆಮ್ಮೆ ಕೂಡಾ ಪಡುತ್ತಾರೆ.

 

ಬ್ರೇಕ್ ತೆಗೆದುಕೊಳ್ಳಿ:

ಬಾಸ್ ವಿಚಾರಬಿಟ್ಟು ನೀವು ಆಫೀಸ್‌ನಲ್ಲಿ ಖುಷಿ ಖುಷಿಯಾಗಿ ಕೆಲಸ ಮಾಡಬೇಕು ಅಂದುಕೊಂಡ್ರೆ ಕೆಲಸದ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳಿ. ಇದರಿಂದ ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚುತ್ತದೆ. ಪ್ರೊಡಕ್ಟಿವಿಟಿ ಹೆಚ್ಚಿದಂತೆ ನಿಮಗೆ ಕೆಲಸ ಮಾಡುವ ಉತ್ಸಾಹ ಕೂಡಾ ಹೆಚ್ಚುತ್ತದೆ. ಇದರಿಂದ ನಿಮ್ಮ ಬಾಸ್ ಗೂ ಖುಷಿಯಾಗುತ್ತದೆ. ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಂಡು ಕೆಲಸ ಮಾಡುವುದು ಬೆಸ್ಟ್ ಎಂದು ಕೆಲವೊಂದು ರಿಸರ್ಚ್ ನಿಂದಲೂ ತಿಳಿದುಬಂದಿದೆ. ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಳ್ಳುವುದರಿಂದ ನಿಮ್ಮ ಮೂಡ್ ಕೂಡಾ ಫ್ರೆಶ್ ಆಗುತ್ತದೆ ಅಷ್ಟೇ ಅಲ್ಲ ಕೆಲಸ ಮಾಡಲು ನಿಮ್ಮ ಮನಸ್ಸು ಕೂಡಾ ಉತ್ಸಾಹ ತೋರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Nobody likes ask for promotion. the good news is is your boss is paying attention and your actions are speaking for themselves.you may not have to ask. If you love your job, the time may come when you feel you are ready to move into a role with new responsibilities. If you want to get a promotion, keep a good behavior, good attitude and show how valuable you are to the company.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more