ಸ್ಮಾರ್ಟ್ ಸ್ಟಡಿ ಅಂದರೇನು? ಸ್ಮಾರ್ಟ್ ಸ್ಟಡಿ ಮಾಡುವುದಾದರೂ ಹೇಗೆ?

Posted By:

ಇವತ್ತಿನ ಟಾಪಿಕ್ ಸ್ಮಾರ್ಟ್ ಸ್ಟಡಿ ಅಂದರೇನು? ಸ್ಮಾರ್ಟ್ ಸ್ಟಡಿ ಮಾಡುವುದಾದರೂ ಹೇಗೆ?. ಈ ಟಾಪಿಕ್ ಮೂಲ ಉದ್ದೇಶ ಏನಂದ್ರೆ ಅನಗತ್ಯ ವಿಚಾರವನ್ನ ನೆಗ್ಲೆಕ್ಟ ಮಾಡಿ ಪ್ರಮುಖ ವಿಷಯದತ್ತ ಫೋಕಸ್ ಮಾಡುವುದಾಗಿದೆ.

ಹೆಚ್ಚಿನ ವಿದ್ಯಾರ್ಥಿಗಳು ದಿನದ ೨೪ ಗಂಟೆ ಕೂಡಾ ಓದುತ್ತಾ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ದಿನಕ್ಕೆ ಬರೀ ೨ ಗಂಟೆ ಮಾತ್ರ ಓದುತ್ತಾರೆ. ಎಷ್ಟೇ ಓದಿದ್ರು ಒಬ್ಬರೇ ವಿನ್ ಆಗಲು ಸಾಧ್ಯ ಹಾಗೂ ಕೆಲವೇ ಮಂದಿ ರ್ಯಾಂಕ್ ಪಡೆಯಲು ಸಾಧ್ಯ ಜತೆ ಇನ್ನೂ ಕೆಲವರು ಡಿಸ್ಟಿಂಕ್ಷನ್ ಪಡೆಯಲು ಸಾಧ್ಯ. ಇನ್ನು ಕೆಲವು ವಿದ್ಯಾರ್ಥಿಗಳು ಶ್ರಮಪಟ್ಟು ಓದಿದರೂ ಕನಿಷ್ಟ ಅಂಕ ಪಡೆದು ಪಾಸಾಗುತ್ತಾರೆ. ಇನ್ನು ಕೆಲವರು ಅತೀ ಕಡಿಮೆ ಅವಧಿಯಲ್ಲಿ ಓದಿ ಅತೀ ಹೆಚ್ಚು ಅಂಕ ಗಳಿಸುತ್ತಾರೆ ಅದು ಹೇಗೆ ಸಾಧ್ಯ. ಈ ಪ್ರಶ್ನೆಗೆ ಉತ್ತರ ಸಿಂಪಲ್ ಅವರು ಸ್ಮಾರ್ಟ್ ಆಗಿ ಓದುತ್ತಾರೆ

ಸ್ಮಾರ್ಟ್ ಸ್ಟಡಿ ಅಂದರೇನು? ಸ್ಮಾರ್ಟ್ ಸ್ಟಡಿ ಮಾಡುವುದಾದರೂ ಹೇಗೆ?

ತಯಾರಿ:

ಸಬ್‌ಜೆಕ್ಟ್ ನಲ್ಲಿ ಪ್ರಮುಖ ಟಾಪಿಕ್ ಯಾವುದೆಂದು ಆಯ್ಕೆ ಮಾಡುವುದು ತುಂಬಾ ಚ್ಯಾಲೆಂಜಿಂಗ್ ವಿಷಯ. ಅಷ್ಟೇ ಅಲ್ಲ ಇದು ಸುಲಭ ಇರಬಹುದು ಇಲ್ಲ ಕಷ್ಟ ಇರಬಹುದು ಇದು ನಿಮ್ಮ ಮೇಲೆ ಅವಲಂಭಿತವಾಗಿದೆ. ಇನ್ನು ಟಾಪಿಕ್ ಆಯ್ಕೆ ಮಾಡುವುದಕ್ಕಿಂತ ಟೈಂ ಮ್ಯಾನೇಜ್‌ಮೆಂಟ್ ಮಾಡುವುದು ಇನ್ನೂ ಚ್ಯಾಲೆಂಜ್ ವಿಷಯ. ಪ್ರತಿದಿನ ಓದುವಾಗ ಟೈಂ ಟೇಬಲ್ ಸೆಟ್ ಮಾಡಿಕೊಂಡು ಓದುವುದು ಮುಖ್ಯ

ಹಿರಿಯರ ಅಡ್ವೈಸ್ ಗೆ ನೀವು ಕಾಯುತ್ತಿದ್ದೀರಾ.. ಹಾಗಿದ್ರೆ ಟೀಚರ್ ಸೇರಿದಂತೆ ನಿಮ್ಮ ಸೀನಿಯರ್ಸ್, ಮೆಂಟರ್ಸ್ ಅವರ ಸಹಾಯ ಪಡೆದುಕೊಳ್ಳಿ. ಫೋಕಸ್ ಮೈಂಡ್ ಸೆಟ್ ಮಾಡಿಕೊಂಡು ಗಮನವಿಟ್ಟು ಓದಿ. ಇದೀಗ ಓದಲು ನೀವು ತಯಾರಿ ಮಾಡುತ್ತಿದ್ದರೆ, ಪಾಸಿಟೀವ್ ನೋಟ್ಸ್ ನಿಂದ ಓದಲು ಪ್ರಾರಂಭಿಸಿ. ಅಷ್ಟೇ ಅಲ್ಲ ಕ್ರಮವಾಗಿ ನಿದ್ರೆ ಕೂಡಾ ಮಾಡಿ ಹಾಗೂ ಹೆಲ್ತಿ ಆಹಾರ ಸೇವಿಸಿ ಆರೋಗ್ಯದತ್ತ ಕೂಡಾ ಗಮನವಿರಲಿ

ಸ್ಮಾರ್ಟ್ ಸ್ಟಡಿ ಅಂದರೇನು? ಸ್ಮಾರ್ಟ್ ಸ್ಟಡಿ ಮಾಡುವುದಾದರೂ ಹೇಗೆ?

ಚಿಕ್ಕ ನೋಟ್ಸ್ ತಯಾರು ಮಾಡಿಕೊಳ್ಳಿ:

ನಮ್ಮಲ್ಲಿ ಎಷ್ಟು ಜನ ಓದುವಾಗ ಪ್ರಮುಖ ವಿಷಯ ಬಂದ್ರೆ ಅದನ್ನ ನೋಟ್ಸ್ ಮಾಡಿಕೊಳ್ಳುತ್ತೀರಿ? ೧೦ ಸಲ ಓದುವುದು ಒಂದು ಸಲ ನೋಟ್ಸ್ ಮಾಡಿಕೊಳ್ಳುವುದಕ್ಕೆ ಸಮಾನ. ಹಾಗಾಗಿ ಬರೆದು ಓದಿ ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ. ಸ್ಮಾರ್ಟ್ ಆಗಿ ಓದಲು ಇದು ಇರುವ ಒಂದು ಟೆಕ್ನಿಕ್ ಆಗಿದೆ

ಹಾಗಾಗಿ ಓದುವಾಗ ನೀವು ಒಂದು ಚಿಕ್ಕ ನೋಟ್ಸ್ ಮಾಡಿಕೊಳ್ಳಿ. ಆ ನೋಟ್ಸ್ ಚಿಕ್ಕದಿದ್ದು ಹ್ಯಾಂಡಿ ಆಗಿರಬೇಕು. ಮಲ್ಟಿಪಲ್ ಸಬ್‌ಜೆಕ್ಟ್ ಬಗ್ಗೆ ಹೇಳುವುದಾದರೆ ಪ್ರತಿದಿನ ಸಬ್‌ಜೆಕ್ಟ್ ನ ಆಳಕ್ಕೆ ಓಗಿ ಸ್ಟಡಿ ಮಾಡಿ

ಗಣಿತ, ಇತಿಹಾಸ, ಫಿಸಿಕ್ಸ್, ಕೆಮೆಸ್ಟ್ರಿ ವಿಷಯಕ್ಕೆ ನೀವು ತಯಾರಿ ಮಾಡಿಕೊಳ್ಳುತ್ತಿದ್ದೀರಿ ಎಂದಾದ್ರೆ ನೀವು ಪ್ರತಿದಿನ ಓದುವುದು ಬೆಸ್ಟ್. ಇದರಿಂದ ನೀವು ಬೇಗನೇ ಓದಿ ಮುಗಿಸುತ್ತೀರಿ.

ಇನ್ನು ನೀವು ಓದಿರುವುದು ನಿಮ್ಮ ಮೈಂಡ್‌ನಲ್ಲಿ ಉಳಿಯಲ್ಲ ಅಂತಾದ್ರೆ ನೀವು ಈ ವಿಧಾನ ಫಾಲೋ ಮಾಡುವುದು ಬೆಸ್ಟ್. ಇದರಿಂದ ನಿಮಗೆ ಸ್ಟಡೀಸ್ ಮೇಲೆ ಫೋಕಸ್ ಮಾಡಲು ಸಾಧ್ಯವಾಗುವುದು

ಇನ್ನು ಬೆಸ್ಟ್ ಸುಡೆಂಟ್ಸ್ ಓದುವಾಗ ಓದಿನತ್ತನೇ ಗಮನ ಕೊಡುತ್ತಾರೆ. ಹಾಗೂ ಓದುವಾಗ ಟಿವಿ, ಮೊಬೈಲ್ ನಿಂದ ದೂರವಿರುತ್ತಾರೆ. ಗಮನಸೆಳಯುವ ಯಾವುದೇ ಕೆಲಸದಿಂದಲೂ ತಮ್ಮನ್ನ ದೂರವಿರಿಸಿ ಓದಿನತ್ತ ಫೋಕಸ್ ಮಾಡುತ್ತಾರೆ

ಓದುವ ವಿಷಯ ಅರ್ಥ ಮಾಡಿಕೊಳ್ಳಿ:

ಹೆಚ್ಚಿನ ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಳ್ಳುತ್ತಾರೆ. ಇದು ಸುಲಭ ಆದ್ರೆ ಅಷ್ಟೇ ಡೇಂಜರಸ್ ಕೂಡಾ. ಒಂದು ವೇಳೆ ನೀವು ಮೊದಲು ಓದಿರುವ ಪಾಯಿಂಟ್ ಮರೆತು ಹೋದರೆ ನಂತರ ಓದಿರುವುದು ಯಾವುದು ಕೂಡಾ ನೆನಪಿನಲ್ಲಿ ಉಳಿಯುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕಂಠಪಾಠ ಮಾಡಬೇಡಿ. ಸ್ವಲ್ಪ ಜಾಸ್ತಿ ಎಫರ್ಟ್ ಹಾಕಿ ಓದಿ. ಆಗ ಮಾತ್ರ ಓದಿರುವುದು ನೆನಪಿನಲ್ಲಿ ಉಳಿಯುತ್ತದೆ

ಹಾಗಾಗಿ ಇನ್ನು ಮುಂದೆ ಓದುವಾಗ ನಾವು ಹೇಳಿರುವ ಈ ಎಲ್ಲಾ ಟೆಕ್ನಿಕ್ ಗಳನ್ನ ಬಳಸಿಕೊಳ್ಳಿ. ಈ ಟೆಕ್ನಿಕ್ ಗಳನ್ನ ಮೈಂಡ್‌ನಲ್ಲಿಟ್ಟುಕೊಂಡು, ನೀವು ಓದುವ ಕಾನ್ಸಪ್ಟ್ ಎಂಜಾಯ್ ಮಾಡಿಕೊಂಡು ಓದಿ.

ನಾವು ಹೇಳಿರುವ ವಿಧಾನಗಳನ್ನು ನೀವು ಅನುಸರಿಸಿದರೆ, ನಾವು ಲಿಖಿತ ಪರೀಕ್ಷೆಯಲ್ಲಿ ಸರಾಗವಾಗಿ ಬರೆಯುತ್ತಾ ಹೋಗಬಹುದು. ಕಾಂಫಿಡೆಂಟ್ ಆಗಿದ್ರೆ ನಿಮ್ಮ ರಿಸಲ್ಟ್ ಕೂಡಾ ಬೆಟರ್ ಆಗಿರುತ್ತದೆ. ಒಂದು ಬಾರಿ ಥಿಯರಿ ಸರಿಯಾಗಿ ಅರ್ಥ ಮಾಡಿಕೊಂಡ್ರೆ, ಪರೀಕ್ಷೆಯಲ್ಲಿ ಹೆಚ್ಚಿನ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಬಹುದು

English summary
The objective and goal of this article is to help you reduce the unproductive areas of your study and focus on the important ones

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia