ಸ್ಟಡಿ ಬ್ಲಾಕ್ ನಿಂದ ಹೊರಬರಲು ಇಲ್ಲಿದೆ ಕೆಲವು ಪರಿಹಾರ

ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಸ್ಟಡಿ ಬ್ಲಾಕ್ ಪದ ಹೆಚ್ಚು ಬಳಕೆಯಾಗುತ್ತಿರುತ್ತದೆ. ಕೆಲ ವಿದ್ಯಾರ್ಥಿಗಳಂತೂ ಪರೀಕ್ಷೆಯ ಸಂದರ್ಭಗಳಲ್ಲಿ ಈ ರೀತಿಯ ಸ್ಟಡಿ ಬ್ಲಾಕ್‍ಗೆ ಒಳಗಾಗುತ್ತಾರೆ.

By Kavya

ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಈ ಪದ ಹೆಚ್ಚು ಬಳಕೆಯಾಗುತ್ತಿರುತ್ತದೆ. ಕೆಲ ವಿದ್ಯಾರ್ಥಿಗಳಂತೂ ಪರೀಕ್ಷೆಯ ಸಂದರ್ಭಗಳಲ್ಲಿ ಈ ರೀತಿಯ ಸ್ಟಡಿ ಬ್ಲಾಕ್‍ಗೆ ಒಳಗಾಗುತ್ತಾರೆ. ಸ್ಟಡಿ ಬ್ಲಾಕ್ ಎಂದರೆ ಓದಿನ ನಡುವೆ ವಿದ್ಯಾರ್ಥಿಯು ಆಸಕ್ತಿ ಕಳೆದುಕೊಳ್ಳುವುದು ಎಂದರ್ಥ. ಆಷ್ಟೇ ಅಲ್ಲದೇ ಏನೂ ತೋಚದೆ ಒಂದು ರೀತಿಯ ಮಾನಸಿಕ ಹಿಂಸೆಯನ್ನು ಅನುಭವಿಸುವುದು. ಸ್ಟಡಿ ಬ್ಲಾಕ್ ನಿಂದ ಹೊರಬರಲು ಇಲ್ಲಿದೆ ಕೆಲವು ಪರಿಹಾರ.

ಸ್ಟಡಿ ಬ್ಲಾಕ್ ಹಲವು ಕಾರಣಗಳಿಂದ ಉಂಟಾಗುತ್ತದೆ, ಅದರಲ್ಲಿ ಪ್ರಮುಖವಾದುದೆಂದರೆ

ಸ್ಟಡಿ ಬ್ಲಾಕ್‍ನಿಂದ ಹೊರಬನ್ನಿ

ಸರಿಯಾದ ನಿದ್ರೆ

ಸರಿಯಾದ ನಿದ್ರೆ ಇಲ್ಲದಿರುವುದು ಸ್ಟಡಿ ಬ್ಲಾಕ್ ಗೆ ಪ್ರಮುಖ ಕಾರಣ. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಕನಿಷ್ಠ ಏಳು ಗಂಟೆಗಳ ನಿದ್ದೆಯ ಅವಶ್ಯಕತೆ ಇರುತ್ತದೆ.
ದೀರ್ಘವಾದ ಓದಿನ ನಡುವೆ ನಿದ್ದೆ ಮಾಡುವುದನ್ನು ನಿರ್ಲಕ್ಷಿಸಿದರೆ ನಿಮಗೆ ತೊಂದರೆ ತಪ್ಪಿದ್ದಲ್ಲ. ನೀವು ಓದುವಾಗ ತೂಕಡಿಕೆ ಬಂದು ನಿಮ್ಮ ಏಕಾಗ್ರತೆ ಕಡಿಮೆಯಾಗಬಹುದು. ಹಾಗಾಗಿ ನಿದ್ರಾಹೀನತೆಯಿಂದ ಹೊರಬರಲು ಓದಿನ ನಡುವೆ ಒಂದು ಚಿಕ್ಕ ನಿದ್ರೆಯ ಅಗತ್ಯವಿದೆ. ನೀವು ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲವೆಂದಾದರೆ ಒಂದು ಗಂಟೆ ನಿದ್ದೆ ನಂತರ ಓದುವುದು ಉತ್ತಮ. ಇದರಿಂದ ನೀವು ಲವಲವಿಕೆಯಿಂದ ಓದಿನಲ್ಲಿ ತೊಡಗಿಸಿಕೊಳ್ಳಬಹುದು.

ಹಸಿವು

ನಿದ್ರೆಯಂತೆಯೇ ಹಸಿವು ಕೂಡ ನಿಮ್ಮ ದೇಹವನ್ನು ಆಯಾಸಗೊಳಿಸುತ್ತದೆ. ಹಸಿವಿನಿಂದಲು ನಿಮಗೆ ಓದಿನಲ್ಲಿ ಆಸಕ್ತಿವಹಿಸಲು ಸಾಧ್ಯವಾಗದೆ ಇರಬಹುದು.
ಅದಕ್ಕಾಗಿ ನೀವು ಅತಿಯಾಗಿ ತಿನ್ನದೆ ನಿಯಮಿತ ಆಹಾರ ಸೇವಿಸುವುದು ಉತ್ತಮ. ಒಂದು ವೇಳೆ ಅತಿಯಾಗಿ ತಿಂದರೆ ಅದು ಕೂಡ ಮತ್ತೆ ನಿಮ್ಮನ್ನು ಆಯಾಸಗೊಳಿಸುವುದು. ನಿಮ್ಮ ಹಸಿವು ನೀಗಿದ ನಂತರ ಒಂದಷ್ಟು ದೂರ ಅಡ್ಡಾಡಿ ಮತ್ತೆ ಅಧ್ಯಯನಕ್ಕೆ ತೊಡಗುವುದರಿಂದ ನೀವು ಮತ್ತೆ ಚುರುಕಿನಿಂದ ಓದಬಹುದು.

ಮಾನಸಿಕ ಒತ್ತಡ

ಯಾವುದೇ ವ್ಯಕ್ತಿಯಾಗಲಿ ಏನೇ ಕೆಲಸ ಮಾಡಬೇಕೆಂದರು ಮಾನಸಿಕವಾಗಿ ಆರೋಗ್ಯವಾಗಿರಬೇಕು. ಅದರಲ್ಲೂ ಓದಿನ ವಿಚಾರಕ್ಕೆ ಬಂದರೆ ವಿದ್ಯಾರ್ಥಿಗಳ ತಮ್ಮ ಮನಸ್ಸಿನಲ್ಲಿ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳಬಾರದು. ಅನವಶ್ಯಕ ವಿಚಾರಗಳಿಂದ ಮಾನಸಿಕ ಒತ್ತಡ ಹೆಚ್ಚಿ ಓದಿನ ಕಡೆಗೆ ಏಕಾಗ್ರತೆ ಕಡಿಮೆಯಾಗಿ ಸ್ಟಡಿ ಬ್ಲಾಕ್‍ಗೆ ಒಳಗಾಗಬಹುದು. ಏಕಾಗ್ರತೆ ಹೆಚ್ಚಿಸಿಕೊಳ್ಳಲು ಧ್ಯಾನ ಅತ್ಯವಶ್ಯಕ, ಧ್ಯಾನದ ಮೂಲಕ ನೀವು ನಿಮ್ಮ ಮನಸ್ಸನ್ನು ವಿಂಗಡಿಸಿ ನಿಮಗೆ ಬೇಡದ ವಿಚಾರಗಳನ್ನೆಲ್ಲ ಅದರಲ್ಲಿ ತುಂಬಿಟ್ಟು ಕೇವಲ ಓದನ್ನು ಮಾತ್ರ ಒಂದು ಕಡೆ ಶೇಖರಿಸಬಹುದು. ಇದು ಅತ್ಯಂತ ಸುಲಭ, ಓದಿಗೂ ಮುನ್ನ ಕೆಲ ಕಾಲ ಕಣ್ಮುಚ್ಚಿ ಕುಳಿತು ದೀರ್ಘವಾಗಿ ಉಸಿರಾಡಬೇಕು ನಂತರ ನಿಧಾನವಾಗಿ ಕಣ್ಣು ತೆರೆದು ನಿಮ್ಮ ಇಡೀ ದೇಹವನ್ನು ಸಡಿಲಗೊಳಿಸಿಕೊಂಡು ಓದಿನ ಕಡೆಗೆ ಮುಖ ಮಾಡಬೇಕು. ಇದರಿಂದ ನಿಮ್ಮ ಏಕಾಗ್ರತೆ ಹೆಚ್ಚುವುದರ ಜೊತೆಗೆ ಅಧ್ಯಯನದಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಳ್ಳಬಹುದು.

ಆರೋಗ್ಯದ ಕಡೆ ಗಮನವಿರಲಿ

ಹಲವು ಬಾರಿ ವಿದ್ಯಾರ್ಥಿಗಳು ಓದಿನ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಅವರ ನಿರ್ಲಕ್ಷ್ಯವೇ ಅವರ ಭವಿಷ್ಯಕ್ಕೆ ಮುಳುವಾಗಬಹುದು.
ಪರೀಕ್ಷೆಯ ಸಂದರ್ಭದಲ್ಲೇ ಅನೇಕ ಮಂದಿ ಅನಾರೋಗ್ಯಕ್ಕೆ ಬಲಿಯಾಗುವುದುನ್ನು ನಾವು ಗಮನಿಸಬಹುದು. ಕೇವಲ ಸಣ್ಣದೊಂದು ತಲೆನೋವು ಮುಂದೆ ಇನ್ಯಾವುದೋ ದೊಡ್ಡ ಕಾಯಿಲೆಗೆ ಗುರಿಮಾಡಬಹುದು ಹಾಗಾಗಿ ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಯಾವುದೇ ತರಹದ ದೈಹಿಕ ಮತ್ತು ಮಾನಸಿಕ ತೊಂದರೆಯಿದ್ದರೂ ಅದು ನಿಮಗೆ ಮಾರಕ. ಆದ್ದರಿಂದ ಪರೀಕ್ಷೆ ವೇಳೆಯಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ.

ವಿರಾಮವಿರಲಿ

ದೀರ್ಘಕಾಲ ಓದುವುದರಿಂದ ನಿಮ್ಮ ಮನಸ್ಸಿಗೆ ಒತ್ತಡ ಹೆಚ್ಚಾಗಬಹುದು. ಇದರಿಂದಲೂ ಸ್ಟಡಿ ಬ್ಕಾಕ್ ಸಂಭವಿಸುತ್ತದೆ. ಹಾಗಾಗಿ ಓದಿನ ನಡುವೆಯು ಸ್ವಲ್ಪ ಮನಸ್ಸಿಗೆ ಮುದು ನೀಡುವ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಉದಾಹರಣೆಗೆ ನಿಮ್ಮಿಷ್ಟದ ಸಂಗೀತ ಕೇಳುವುದು, ಸ್ನೇಹಿತರೊಂದಿಗೆ ಮಾತನಾಡುವುದು ಅಥವಾ ಮನೆಕೆಲಸದಲ್ಲಿ ತೊಡಗಿಸಿಕೊಳ್ಳವುದು.ಈ ರೀತಿ ಮಾಡುವುದರಿಂದ ನಿಮ್ಮ ಓದಿನ ಕಡೆಗೆ ನಿಮ್ಮ ಆಸಕ್ತಿ ಮತ್ತಷ್ಟು ಹೆಚ್ಚುವುದು.

For Quick Alerts
ALLOW NOTIFICATIONS  
For Daily Alerts

English summary
Study is a temporary time in which a student is unable to study for various reasons.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X