ಮಲ್ಟಿಪಲ್ ಚಾಯ್ಸ್ ಎಕ್ಸಾಂನಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

Written By: Nishmitha B

ಮಲ್ಟಿಪಲ್ ಚಾಯ್ಸ್ ನಂತಹ ಪರೀಕ್ಷೆ ಪತ್ರಿಕೆಯಲ್ಲಿ ಒಂದೇ ಪ್ರಶ್ನೆಗೆ ಉತ್ತರ ಕಂಡುಹಿಡಿಯುದರಲ್ಲೇ ನಾವು ಹೆಚ್ಚಿನ ಸಮಯವನ್ನ ಕಳೆಯಬಹುದು. ಇದರಿಂದ ಪ್ರಶ್ನಾಪತ್ರಿಕೆ ಪೂರ್ಣವಾಗಿ ಉತ್ತರಿಸುವಲ್ಲಿ ನಾವು ವಿಫಲರಾಗಬಹುದು. ಅಂತಹ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಕೆಲವೊಂದು ಟಿಪ್ಸ್

ಇನ್ನು ಮಲ್ಟಿಪಲ್ ಆಯ್ಕೆಯ ಪ್ರಶ್ನೆಗೆ ನಾವು ತುಂಬಾ ಸಮಯ ವ್ಯಯಿಸುತ್ತೇವೆ. ಎಲ್ಲಾ ಆಯ್ಕೆಗಳು ಉತ್ತರವನ್ನೇ ಹೋಲುವುದರಿಂದ ನಾವು ಒಂದು ಕ್ಷಣ ಗೊಂದಲಕ್ಕೆ ಒಳಗಾಗುತ್ತೇವೆ. ಕೊನೆಗೆ ಏನೋ ಒಂದು ಗೆಸ್ ಮಾಡಿ ಉತ್ತರ ಬರೆಯುತ್ತೇವೆ

ಹಾಗಾಗಿ ಇಂತಹ ಪರೀಕ್ಷೆಗೆ ನಾವು ಬರೀ ಗೆಸ್ ಮಾಡಿ ಉತ್ತರ ಬರೆಯುತ್ತೇವೆ. ಇದರಿಂದ ನಿಮ್ಮ ಉತ್ತರ ತಪ್ಪಾಗಲೂ ಬಹುದು. ಅದಕ್ಕಾಗಿ ನಿಮಗೊಂದು ಸ್ಟಾಟಜಿ ಹೇಳಿಕೊಡುತ್ತೇವೆ. ಇಂತಹ ಪ್ರಶ್ನೆಗಳಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ ಎಂದು ತೋರಿಸಿ ಕೊಡುತ್ತೇವೆ

ಪ್ರಶ್ನೆಯನ್ನ ಅರ್ಥ ಮಾಡಿಕೊಳ್ಳಿ:

ಯಾವುದೇ ಪ್ರಶ್ನೆಗೆ ಉತ್ತರ ಬರೆಯುವ ಮುನ್ನ ಅದನ್ನ ಮೊದಲಿಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಪ್ರಶ್ನೆಯನ್ನ ಪೂರ್ತಿಯಾಗಿ ಓದದೇ ಜಂಪ್ ಮಾಡಿ ಅವಸರವಸರವಾಗಿ ಉತ್ತರಿಸಲು ಮುಂದಕ್ಕೆ ಹೋಗಬೇಡಿ. ಇಂತಹ ಪ್ರಶ್ನೆಗಳು ನಿಮ್ಮ ರೀಸನಿಂಗ್ ಕೆಪಾಸಿಟಿ ಪರೀಕ್ಷಿಸುತ್ತದೆ. ಹಾಗಾಗಿ ಮೊದಲಿಗೆ ಪ್ರಶ್ನೆಯನ್ನ ಪೂರ್ತಿಯಾಗಿ ಗಮನವಿಟ್ಟು ಓದಿಕೊಂಡು ಉತ್ತರಿಸಲು ಪ್ರಾರಂಭಿಸಿ

ಇನ್ನು ಪ್ರಶ್ನೆಗಳಲ್ಲೇ ಕೆಲವೊಮ್ಮೆ ಉತ್ತರ ಅಡಗಿರುತ್ತದೆ. ಇಲ್ಲ ಕೆಲವೊಮ್ಮೆ ಆ ಪ್ರಶ್ನೆ ಉತ್ತರ ನಿಮಗೆ ಗೊತ್ತಿದ್ದರೂ ನೀವು ಗೊಂದಲಕ್ಕೆ ಒಳಗಾಗಬಹುದು. ಹಾಗಾಗಿ ಇಂತಹ ಸಂದರ್ಭದಲ್ಲಿ ಮೊದಲಿಗೆ ಪ್ರಶ್ನೆಯನ್ನ ಅರ್ಥ ಮಾಡಿಕೊಳ್ಳುವುದು ಅಗತ್ಯ, ಪ್ರಶ್ನೆ ಅರ್ಥವಾದಾಗ ಮಾತ್ರ ಸುಲಭವಾಗಿ ಉತ್ತರಿಸಲು ಸಾಧ್ಯ

 

ಉತ್ತರವನ್ನ ಗಮನವಿಟ್ಟು ಪರಿಶೀಲಿಸಿ:

ಕೊಟ್ಟಿರುವ ಉತ್ತರಗಳನ್ನ ಚೆನ್ನಾಗಿ ಗಮನವಿಟ್ಟು ಓದಿ. ಕೆಲವೊಮ್ಮೆ ಮೊದಲ ಆಯ್ಕೆಯ ಉತ್ತರ ನೋಡಿ ಅದುವೇ ಸರಿಯಾದ ಉತ್ತರವೆಂದು ಭಾವಿಸಿ ಟಿಕ್ ಮಾಡಿ ಬಿಡುತ್ತೇವೆ. ಉಳಿದ ಉತ್ತರಗಳನ್ನ ಚೆಕ್ ಮಾಡಲು ಹೋಗುವುದಿಲ್ಲ. ಇದರಿಂದ ನಾವು ಬೇಗನೇ ಅಂಕ ಕಳೆದುಕೊಳ್ಳುತ್ತೇವೆ. ಕೆಲವೊಮ್ಮೆ ನಾವು ಓದದೇ ಇದ್ದ ಆಯ್ಕೆಯೂ ಕೂಡಾ ಉತ್ತರವಾಗಿರುವ ಸಂಭವವಿರುತ್ತದೆ. ಅಂದರೆ ಕೆಲವೊಮ್ಮೆ ಅದರಲ್ಲಿ ಎರಡೂ ಉತ್ತರವೂ ಸರಿ ಇರಬಹುದು ಆಗ ಆಯ್ಕೆ ಎ ಹಾಗೂ ಬಿ ಎಂದಿರುತ್ತದೆ. ನಾವು ಓದದೇ ಮೊದಲ ಆಯ್ಕೆಗೆ ಮಾತ್ರ ಟಿಕ್ ಮಾಡಿದ್ರೆ ಅಂಕ ಕಳೆದುಕೊಳ್ಳುತ್ತೇವೆ ಅಷ್ಟೆ

ಎಲ್ಲಾ ಉತ್ತರ ಸರಿಯಾಗಿದೆ ಹಾಗೂ ಎಲ್ಲಾ ಉತ್ತರ ತಪ್ಪಾಗಿದೆ ಇಂತಹ ಆಯ್ಕೆಗಳಿದ್ದರೆ ನೀವು ಹೆಚ್ಚು ಸಮಯ ವ್ಯಯಿಸಬೇಕಿಲ್ಲ ಬದಲಿಗೆ ಸರಿ ಹಾಗೂ ತಪ್ಪು ವಿಧಾನ ಮೂಲಕ ಸರಿಯಾದ ಆಯ್ಕೆಗೆ ಟಿಕ್ ಮಾಡಬಹುದು

 

ತಪ್ಪು ಉತ್ತರ ರಿಜೆಕ್ಟ್ ಮಾಡಿ :

ಕೆಲವೊಂದು ಪ್ರಶ್ನೆಗಳು ಹೆಚ್ಚು ಗೊಂದಲವನ್ನ ಒಳಗೊಂಡಿರುತ್ತದೆ. ಆದ್ರೆ ಇನ್ನು ಕೆಲವು ಪ್ರಶ್ನೆಗಳು ಸುಲಭವಾಗಿರಬಹುದು. ನಿಮಗೆ ಅದರಲ್ಲಿನ ಸರಿಯಾದ ಉತ್ತರ ಯಾವುದು ಅನ್ನುದಕ್ಕಿಂತ ಅಲ್ಲಿರುವ ತಪ್ಪು ಉತ್ತರ ಯಾವುದು ಎಂಬುದು ಗೊತ್ತಿರಬಹುದು. ಇಂತಹ ಸಯಮದಲ್ಲಿ ತಪ್ಪು ಉತ್ತರವನ್ನ ನೇರವಾಗಿ ರಿಜೆಕ್ಟ್ ಮಾಡಿಬಿಡಿ. ಇದರಿಂದ ಕೊನೆಯಲ್ಲಿ ಕೆಲವೇ ಕೆಲವು ಆಯ್ಕೆ ನಿಮ್ಮ ಮುಂದಿರುತ್ತದೆ. ಅದರಲ್ಲಿ ಸರಿಯಾದ ಉತ್ತರ ನೀವು ಆಯ್ಕೆ ಮಾಡಿಕೊಳ್ಳಿ

ಹತ್ತಿರದ ಪ್ರಶ್ನೆಗಳನ್ನ ಚೆಕ್ ಮಾಡಿಕೊಳ್ಳಿ

ಒಂದೇ ಪ್ರಶ್ನೆಯಲ್ಲಿ ಸ್ಟಕ್ ಆಗಿ ಕಂಪ್ಯೂಸ್ ಆಗಿದ್ದೀರಾ. ಹಾಗಿದ್ದಾಗ ಇಲ್ಲಿಯೊಂದು ಟ್ರಿಕ್ ಬಳಸಿ. ಆ ಪ್ರಶ್ನೆಯ ಮೇಲಿನ ಪ್ರಶ್ನೆ ಹಾಗೂ ಕೆಳಗಿನ ಪ್ರಶ್ನೆಯನ್ನ ಒಮ್ಮೆ ಚೆಕ್ ಮಾಡಿಕೊಳ್ಳಿ. ಮೇಲಿನ ಪ್ರಶ್ನೆ ಉತ್ತರ ಎ ಆಯ್ಕೆಯಾಗಿದ್ದರೆ, ಕೆಳಗಿನ ಪ್ರಶ್ನೆ ಉತ್ತರ ಡಿ ಆಗಿದ್ದರೆ ನಡುವಿನ ಪ್ರಶ್ನೆ ಉತ್ತರ ಕೂಡಾ ಇದೆರಡಲ್ಲಿ ಒಂದಾಗಿರುವ ಚ್ಯಾನ್ಸಸ್ ಹೆಚ್ಚಿರುತ್ತದೆ

ಅತೀ ಉದ್ದದ ಉತ್ತರವನ್ನ ಆಯ್ಕೆ ಮಾಡಿಕೊಳ್ಳಿ

ಇನ್ನು ಪರೀಕ್ಷೆಯಲ್ಲಿ ನಾಲ್ಕು ಆಯ್ಕೆಗಳಿದ್ದು, ಅದರಲ್ಲಿ ಒಂದು ಆಯ್ಕೆ ತುಂಬಾ ಉದ್ದದ ಫ್ಯಾರಾ ಆಗಿದ್ದರೆ ನೀವು ಕಣ್ಣುಮುಚ್ಚಿ ಆ ಆಯ್ಕೆಯನ್ನ ಟಿಕ್ ಮಾಡಿಕೊಳ್ಳಬಹುದು. ಯಾಕೆಂದ್ರೆ ಸರಿಯಾದ ಉತ್ತರವಿದ್ರೆ ಮಾತ್ರ ದೊಡ್ಡ ದೊಡ್ಡ ಪ್ಯಾರಾಗಳಲ್ಲಿ ನೀಡುತ್ತಾರೆ. ಇನ್ನು ತಪ್ಪು ಆಯ್ಕೆಯಾಗಿ ದೊಡ್ಡ ದೊಡ್ಡ ಉತ್ತರವನ್ನ ಅವರು ನೀಡುವುದಿಲ್ಲ. ಇದರಿಂದ ತಪ್ಪು ಉತ್ತರ ಬರೆಯಲು ಕೂಡಾ ಅವರು ಸಮಯ ವ್ಯರ್ಥ ಮಾಡಬೇಕಾಗುತ್ತದೆ. ಹಾಗಾಗಿ ಸರಿಯಾದ ಉತ್ತರವಿದ್ರೆ ಮಾತ್ರ ಅವರು ದೊಡ್ಡ ದೊಡ್ಡ ಪ್ಯಾರಾದಲ್ಲಿ ನೀಡುವುದರಿಂದ ಅದೇ ಸರಿಯಾದ ಉತ್ತರವೆಂದು ಟಿಕ್ ಮಾಡಿಕೊಳ್ಳಬಹುದು

English summary
If you have ever been stuck on a particular question thinking you have enough time, only to rush through the whole test later, then you need to read these tips.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia