ಇದು ಕಂಪ್ಯೂಟರ್ ಯುಗ ಇಲ್ಲಿ ಪುಸ್ತಕ ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನ ಎಲ್ಲರ ಬದುಕಿಗೂ ಅತ್ಯಗತ್ಯ. ಇನ್ನೂ ಎಷ್ಟೇ ಓದಿದರೂ ಪದವಿ ಗಳಿಸಿದರೂ ನಮಗೆ ನಾವು ಓದಿದ ಕ್ಷೇತ್ರದಲ್ಲಿ ಉದ್ಯೋಗವಿಲ್ಲ ಅನ್ನುವ ಮಂದಿ ಹಲವಾರು. ಓದಿದ್ದೇನೆ ಕೆಲಸ ಸಿಕ್ಕಿಲ್ಲ, ಕೆಲಸ ಸಿಕ್ಕಿದೆ ಆದರೆ ಅದು ನನ್ನ ವಿದ್ಯಾರ್ಹತೆಗೆ ಹೊಂದುವಂತದ್ದಲ್ಲ ಹೀಗೆ ಹಲವಾರು ಕಾರಣಗಳನ್ನು ನೀಡುತ್ತೇವೆ. ಸರಿ ಈಗಿರುವ ಅರ್ಹತೆಗಳಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವ ಬದಲು ಈಗಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಗಳನ್ನು ಹೊಂದಿರುವ ವೆಬ್‌ಡಿಸೈನ್ ಕೋರ್ಸ್ ಮಾಡಿ ಕೈ ತುಂಬಾ ಸಂಪಾದಿಸಿ. ಇದರಿಂದ ಒಂದೆಡೆ ನಿಮಗೆ ಉದ್ಯೋಗ ಸೃಷ್ಟಿ ಆಯಿತು ಮತ್ತು ಇನ್ನೊಂದೆಡೆ ನಿಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಕ್ಕಂತಾಯಿತು ಅಲ್ಲವೇ.
ಹೌದು ಏನಿದು ವೆಬ್ ಡಿಸೈನ್? ಏನೆಲ್ಲಾ ಅಂಶಗಳನ್ನು ಇದು ಒಳಗೊಂಡಿರುತ್ತೆ ಮತ್ತೆ ಇದರ ಕಲಿಕೆಗೆ ಏನು ಮಾಡಬೇಕು? ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್
ವೆಬ್ ಡಿಸೈನ್ ಅಂದರೇನು?
ವೆಬ್‌ಡಿಸೈನ್ ಅಂದರೆ ವೆಬ್‌ಸೈಟ್‌ಗಳನ್ನು ಸೃಷ್ಟಿಸುವುದು ಮತ್ತು ಅಪಡೇಟ್ ಮಾಡುವುದು ಎಂದೇ ಅರ್ಥ. ವೆಬ್‌ಡಿಸೈನ್‌ಗಳಲ್ಲಿ ಗ್ರಾಫಿಟ್ ಡಿಸೈನ್ ಮತ್ತು ಇಂಟರ್‌ಫೇಸ್ ಡಿಸೈನ್ ಎಂಬ ಎರಡು ಬಹು ಮುಖ್ಯ ಅಂಶಗಳಿರುತ್ತವೆ. ವೆಬ್‌ಡಿಸೈನರ್ ಗಳು ಕ್ಲೈನ್ಟ್‌ಗಳು ಕೇಳುವ ಮತ್ತು ಅವರ ಅಗತ್ಯಗಳಿಗನುಗುಣವಾಗುವ ವೆಬ್‌ಸೈಟ್ ಅನ್ನು ಡಿಸೈನ್ ಮಾಡುವುದು ವೆಬ್‌ಡಿಸೈನರ್‌ನ ಕೆಲಸವಾಗಿರುತ್ತದೆ.
ವೆಬ್‌ಡಿಸೈನ್ ಎನ್ನುವುದು ಒಂದು ಉತ್ತಮ ಲಾಭದಾಯಕ ಉದ್ಯೋಗವೆಂದೇ ಹೇಳಬಹುದು. ಇಂದಿನ ದಿನಗಳಲ್ಲಿ ಅನೇಕ ಕಂಪೆನಿಗಳು ವೆಬ್‌ಡಿಸೈನ್ ನಲ್ಲಿ ಸರ್ಟಿಫಿಕೇಟ್‌ವುಳ್ಳ ಮತ್ತು ಡಿಸೈನಿಂಗ್ ಸ್ಕಿಲ್ಸ್ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಲೇ ಇದೆ. ವೆಬ್‌ಡಿಸೈನ್ ನಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಹೊರತು ಪಡಿಸಿ ಬೇರೆಲ್ಲಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ವೆಬ್‌ಡಿಸೈನ್ ಕೋರ್ಸ್ ಮಾಡಬಹುದು. ಇದರಿಂದ ನೀವು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು.
ಇಲ್ಲಿ ಕೆಲವು ಉಚಿತ ವೆಬ್‌ಡಿಸೈನ್ ಆನ್‌ಲೈನ್ ಕೋರ್ಸ್‌ಗಳ ವಿವರಗಳನ್ನು ನೀಡಿಲಿದ್ದೇವೆ ಒಮ್ಮೆ ಓದಿ ಪ್ರಯೋಜನ ಪಡೆದುಕೊಳ್ಳಿ
ವಿನ್ಯಾಸ ಚಿಂತನೆಯ ಕೋರ್ಸ್: ಮೈಕ್ರೋಸಾಫ್ಟ್
ವಿನ್ಯಾಸ ಚಿಂತನೆಯ ಕೋರ್ಸ್ ಅನ್ನು ಮೈಕ್ರೋಸಾಫ್ಟ್ ನೀಡಿರುತ್ತದೆ. ಇಲ್ಲಿ ಅಭ್ಯರ್ಥಿಗಳು ಬಳಕೆದಾರರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳಲು ಹೇಗೆ ಆಳವಾದ ಸಂದರ್ಶನ ಮತ್ತು ಸಮೀಕ್ಷೆಗಳನ್ನು ನಡೆಸುವುದು ಎಂಬುದನ್ನು ಕಲಿಯುತ್ತಾರೆ. ವಿನ್ಯಾಸ ಚಿಂತನೆಯ ಮೂಲ ಮಾದರಿ ಉಪಕರಣಗಳ ಬಗ್ಗೆ ಸಹ ಕಲಿಯುತ್ತಾರೆ. ಇದಿಷ್ಟು ಬೇಸಿಕ್ ಕಲಿಕೆಯನ್ನು ಇಲ್ಲಿ ಮಾಡಬಹುದು.
ಐದು ವಾರಗಳ ಕೋರ್ಸ್ ಇದಾಗಿದ್ದು, ಒಂದು ವಾರದಲ್ಲಿ 3 ರಿಂದ 4 ಗಂಟೆಗಳ ಕಾಲ ಕಲಿಕೆಗೆ ವಿನಿಯೋಗಿಸಬೇಕಿರುತ್ತದೆ. ಈ ಕಲಿಕೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರಮಾಣಪತ್ರವನ್ನು ಪಡೆಯಲು ಅಂದಾಜು 6,812/-ರೂ ಪಾವತಿಸಬೇಕಿರುತ್ತದೆ.
ಆಂಡ್ರಾಯ್ಡ್ ಬಳಸಿ ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್ ಮಾಡುವುದು: ಹಾಂಗ್ ಕಾಂಗ್ ಯೂನಿವರ್ಸಿಟಿ ಆಫ್ ಸೈನ್ಸ್ ಮತ್ತು ಟೆಕ್ನಾಲಜಿ
ಅಭ್ಯರ್ಥಿಗಳು ಆಂಡ್ರಾಯ್ಡ್ ಬಳಸಿಕೊಂಡು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುವ ವಿಧಾನವನ್ನು ಕಲಿಯಬಹುದು. ಆಂಡ್ರಾಯ್ಡ್ ನಲ್ಲಿ ಗ್ರಾಫಿಕ್ಸ್ ಮತ್ತು ಮಲ್ಟಿ ಮೀಡಿಯಾದ ಬೇಸಿಕ್ಸ್ ಹೊರತುಪಡಿಸಿ ಆಂಡ್ರಾಯ್ಡ್ ಅಪ್ಲಿಕೇಶನ್ ನ ಎಲ್ಲಾ ಬೇಸಿಕ್ ಅಂಶಗಳನ್ನು ನೀವು ಇಲ್ಲಿ ತಿಳಿಯಬಹುದು.
ಆರು ವಾರಗಳ ಕೋರ್ಸ್ ಇದಾಗಿದ್ದು ಒಂದು ವಾರಕ್ಕೆ ಕನಿಷ್ಟ 3 ರಿಂದ 5 ಗಂಟೆಗಳಷ್ಟು ಸಮಯವನ್ನು ವಿನಿಯೋಗಿಸಬೇಕು.
ನೊಂದಾಯಿತ ಅಭ್ಯರ್ಥಿಗಳು ಪ್ರಮಾಣಪತ್ರಕ್ಕಾಗಿ ಅಂದಾಜು 6,812/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ವಿನ್ಯಾಸ ಚಿಂತನೆಯ ಕೋರ್ಸ್- ಯುಎಕ್ಸ್ ಮತ್ತು ಅಡ್ವಾನ್ಸ್ಡ್ ಟಾಪಿಕ್ಸ್ : ಮೈಕ್ರೋಸಾಫ್ಟ್
ವಿನ್ಯಾಸ ಚಿಂತನೆಯ ಕೋರ್ಸ್ ನಂತರ ಈ ಕೋರ್ಸ್ ಅನ್ನು ಮಾಡಬಹುದು. ಇಲ್ಲಿ ವ್ಯಕ್ತಿಯ ಮತ್ತು ಕಂಪ್ಯೂಟರ್ ನಡುವಿನ ಪರಸ್ಪರ ಕ್ರಿಯೆಗಳ ಬಗ್ಗೆ ಅರಿವು ಮೂಡಿಸುವ ಬಗೆಗೆ ತಿಳಿಸಲಾಗುವುದು. ಬಳಕೆದಾರರ ಇಂಟರ್ ಫೈಂಡಿಂಗ್ ,ಬಳಕೆದಾರರ ವಿನ್ಯಾಸದ ರೀತಿ ಮತ್ತು ವಾಸ್ತುಶಿಲ್ಕದ ಮೂಲ ತತ್ವ ಹೊರತುಪಡಿಸಿ ಇನ್ನಿತರೆ ವಿಚಾರಗಳನ್ನು ಕಲಿಯುವ ಅವಕಾಶವನ್ನು ನೀಡಲಾಗುವುದು.
ನಾಲ್ಕು ವಾರಗಳ ಕಲಿಕೆ ಇದಾಗಿದ್ದು ಒಂದು ವಾರಕ್ಕೆ ಕನಿಷ್ಟ 5 ರಿಂದ 6 ಗಂಟೆಗಳಷ್ಟು ಸಮಯವನ್ನು ವಿನಿಯೋಗಿಸಬೇಕಿರುತ್ತದೆ. ಈ ಕೋರ್ಸ್‌ಗಳಿಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರಮಾಣಪತ್ರವನ್ನು ಪಡೆಯಲು 6,812/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಬಳಕೆದಾರರ ವಿನ್ಯಾಸ ಮೌಲ್ಯಮಾಪನ: ಮಿಚಿಗನ್ ವಿಶ್ವವಿದ್ಯಾಲಯ
ಬಳಕೆದಾರರ ವಿನ್ಯಾಸದ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದರ ಜೊತೆಗೆ ಹೇಗೆ ಬಳಕೆದಾರರ ವಿನ್ಯಾಸವನ್ನು ಅಭಿವೃದ್ಧಿ ಪಡಿಸಬಹುದು ಎನ್ನುವುದನ್ನು ಇಲ್ಲಿ ಕಲಿಯಬಹುದು.
ನಾಲ್ಕುವಾರಗಳ ಕೋರ್ಸ್ ಇದಾಗಿದ್ದು,ವಾರಕ್ಕೆ 3 ರಿಂದ 4 ನಾಲ್ಕು ಗಂಟೆಗಳಷ್ಟು ಸಮಯವನ್ನು ವಿನಿಯೋಗಿಸಿ ಈ ಕೋರ್ಸ್ ಮಾಡಬಹುದು. ನೊಂದಾಯಿತ ಅಭ್ಯರ್ಥಿಗಳು ಪ್ರಮಾಣಪತ್ರವನ್ನು ಪಡೆಯಲು 6,812/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಯುಎಕ್ಸ್ ಡಿಸೈನ್: ಮಿಚಿಗನ್ ವಿಶ್ವವಿದ್ಯಾಲಯ
ಮಿಚಿಗನ್ ವಿಶ್ವವಿದ್ಯಾಲಯವು ಅಭ್ಯರ್ಥಿಗಳು (ಯುಎಕ್ಸ್) ವಿನ್ಯಾಸ ಪ್ರಕ್ರಿಯೆಯಲ್ಲಿ ಸ್ವತಃ ತೊಡಗಿಕೊಳ್ಳುವಂತೆ ಮಾಡುತ್ತದೆ. ಅಭ್ಯರ್ಥಿಗಳು ಇಂಟರ್ಫೇಸ್ ವೈರ್‌ಫ್ರೇಮ್ಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದನ್ನು ಕುರಿತು ಇಲ್ಲಿ ಕಲಿಯುತ್ತಾರೆ. ಈ ಪಠ್ಯಕ್ರಮವು ಯೂನಿವರ್ಸಿಟಿ ಆಫ್ ಮಿಚಿಗನ್ ನೀಡುವ ಬಳಕೆದಾರ ಅನುಭವಿಗಳ (ಯುಎಕ್ಸ್)ಸಂಶೋಧನೆ ಮತ್ತು ವಿನ್ಯಾಸ ಮೈಕ್ರೋ ಮಾಸ್ಟರ್ಸ್‌ನ ಭಾಗವಾಗಿರುತ್ತದೆ.
ಮೂರು ವಾರಗಳ ಕೋರ್ಸ್ ಇದಾಗಿದ್ದು ವಾರಕ್ಕೆ 3 ರಿಂದ 5 ಗಂಟೆಗಳ ಕಾಲ ಸಮಯವನ್ನು ಮೀಸಲಿಡಬೇಕಿರುತ್ತದೆ.
ವೆಬ್ ವಿನ್ಯಾಸದಲ್ಲಿ ಈ ಉಚಿತ ಆನ್‌ಲೈನ್ ಶಿಕ್ಷಣವು ಎಡ್‌ಎಕ್ಸ್‌ನಲ್ಲಿ (edX) ಲಭ್ಯವಿದ್ದು, ಇದು ಆನ್‌ಲೈನ್ ಕಲಿಕೆಯ ತಾಣ ಮತ್ತು ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ ಒದಗಿಸುವ ಕೆಲಸವನ್ನು ಮಾಡುತ್ತದೆ. ಎಡ್‌ಎಕ್ಸ್ ಅನ್ನು2012 ರಲ್ಲಿ ವಿಶ್ವದ ಅಗ್ರ ವಿಶ್ವವಿದ್ಯಾಲಯಗಳಾದ ಹಾವರ್ಡ್ ಯೂನಿವರ್ಸಿಟಿ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ಥಾಪಿಸಲಾಗಿದೆ.