BA... ನಂತರ ಮುಂದೇನು?

ಬಿಎ ಮಾಡುವುದೆಂದ್ರೆ ಅದು ಕೆರಿಯರ್ ಲೈಫ್ ನಲ್ಲಿ ಒಂದು ದೊಡ್ಡ ಮೈಲುಗಲ್ಲು ಇದ್ದಂತೆ

ಬಿಎ ಮಾಡುವುದೆಂದ್ರೆ ಅದು ಕೆರಿಯರ್ ಲೈಫ್ ನಲ್ಲಿ ಒಂದು ದೊಡ್ಡ ಮೈಲುಗಲ್ಲು ಇದ್ದಂತೆ. ಬಿಎ ಮಾಡಿ ಕಾನ್ವಿಕೇಶನ್ ನಲ್ಲಿ ಡಿಗ್ರಿ ಸರ್ಟಿಫಿಕೇಟ್ ಪಡೆದ ಕೂಡಲೇ ವಿದ್ಯಾರ್ಥಿಗಳು ಎದುರಿಸುವ ಬಹು ದೊಡ್ಡ ಸವಾಲು ಎಂದರೆ ಮುಂದೇನು ಎಂದು? . ಪದವಿ ಪಡೆದ ಬಳಿಕ ಮುಂದೆ ಅವರು ತೆಗೆದುಕೊಳ್ಳುವ ನಿರ್ಧಾರ ಅವರ ಭವಿಷ್ಯದ ಮೇಲೆ ಅವಲಂಭಿತವಾಗಿರುತ್ತದೆ. ಹಾಗೂ ಈ ಸವಾಲು ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಕೂಡಾ ಕಾಮನ್. ಇದರಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳು ಹೊರತಾಗಿಲ್ಲ.

BA... ನಂತರ ಮುಂದೇನು?

ಕಲಾ ವಿಭಾಗದಲ್ಲಿ ಪದವಿ ಪಡೆದರೆ ಮುಂದೆ ಕೆರಿಯರ್ ಅವಕಾಶ ಲಿಮಿಟ್ ಆಗಿರುತ್ತದೆ ಎಂಬುದು ತುಂಬಾ ಮಂದಿಯ ಅನಿಸಿಕೆ. ಆದ್ರೆ ಇದು ಹಳೆಯ ಕಾಲದ ಯೋಚನೆ ಇದೀಗ ಎಲ್ಲಾ ಬದಲಾಗಿದೆ. ಕಲಾ ವಿಭಾಗದಲ್ಲಿ ಪದವಿ ಪಡೆದವರಿಗೂ ಕೂಡಾ ಕೆರಿಯರ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಬಿಎ ಆದವರಿಗೆ ಮುಂದೆ ಯಾವೆಲ್ಲಾ ಕೋರ್ಸ್ ಮಾಡಿದ್ರೆ ಏನೆಲ್ಲಾ ಕೆರಿಯರ್ ಆಯ್ಕೆಗಳಿವೆ ಎಂಬುವುದು ನಾವು ನಿಮಗೆ ತಿಳಿಸುತ್ತೇವೆ ನೋಡಿ

ಬಿಎ ನಂತರದ ಕೆರಿಯರ್ ಆಯ್ಕೆ:

ಸ್ಟಾಫ್ ಸೆಲೆಕ್ಷನ್ ಕಮಿಷನ್, ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, ಬ್ಯಾಂಕ್‌ಗಳಲ್ಲಿ ಪ್ರೊಬಷನರಿ ಆಫೀಸರ್ ಹುದ್ದೆಗೆ ನಡೆಯುವ ಪರೀಕ್ಷೆಗಳಲ್ಲಿ ಬಿಎ ಪದವಿ ಪಡೆದ ವಿದ್ಯಾರ್ಥಿಗಳು ಪಾಲ್ಗೊಂಡು ಸರ್ಕಾರಿ ಹುದ್ದೆ ತಮ್ಮದಾಗಿಸಿಕೊಳ್ಳಬಹುದು. ಇನ್ನು ಖಾಸಾಗಿ ಹುದ್ದೆಗಳ ಬಗ್ಗೆ ಹೇಳುವುದಾದ್ರೆ ಬಿಎ ಪದವಿ ಪಡೆದ ವಿದ್ಯಾರ್ಥಿಗಳಿಗೆ ಯಾರಿಗೆ ಭಾಷೆಯ ಮೇಲೆ ಹಿಡಿತವಿದೆಯೋ ಅಂತಹ ವಿದ್ಯಾರ್ಥಿಗಳು ಕಸ್ಟಮರ್ ಕೇರ್ ಎಕ್ಸಕ್ಯುಟೀವ್ ಹುದ್ದೆಗೆ ಟ್ರೈ ಮಾಡಬಹುದು.

ಮಾಸ್ಟರ್ ಆಫ್ ಆಟ್ಸ್:

ಬಿಎ ಅಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಆಯ್ಕೆ. ದೇಶದ ಪ್ರಸಿದ್ಧ ಕಾಲೇಜುಗಳಲ್ಲಿ ಎಂಎ ಜತೆ ವಿಶೇಷ ಕೋರ್ಸ್ ಗಳನ್ನ ಆಫರ್ ಮಾಡುತ್ತಿದೆ. ಯಾರೂ ಟೀಚಿಂಗ್ ವೃತ್ತಿ ಮಾಡಬೇಕೆಂದು ಕನಸು ಕಾಣುತ್ತಿದ್ದೀರೋ ಅಂತಹವರು ಈ ಕೋರ್ಸ್ ಮಾಡಬಹುದು.

ಬ್ಯಾಚುಲರ್ ಆಫ್ ಲಾ (ಎಲ್‌ಎಲ್‌ಬಿ):

ಬಿಎ ಪದವಿ ಪಡೆದ ವಿದ್ಯಾರ್ಥಿಗಳು ಕಾನೂನನ್ನ ಪ್ರೊಫೆಶನ್ ಆಗಿ ತೆಗೆದುಕೊಳ್ಳಬಹುದು. ಬಿಎ ಬಳಿಕ ಎಲ್ಎಲ್‌ಬಿ ಕೋರ್ಸ್ ಮಾಡಿದ್ದಲ್ಲಿ ಸರ್ಕಾರಿ ಹಾಗೂ ಖಾಸಾಗಿ ಇಲಾಖೆಗಳಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆರಿಯರ್ ಪ್ರಾರಂಭಿಸಬಹುದು. ಕಾನೂನಿಗೆ ಸಂಬಂಧಪಟ್ಟ ಪರೀಕ್ಷೆಯಲ್ಲೂ ಪಾಲ್ಗೊಳ್ಳಬಹುದು.

ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ (ಎಂಬಿಎ):

ನಮ್ಮ ದೇಶದಲ್ಲಿ ಎಂಬಿಎ ಪದವಿ ತುಂಬಾ ಫೇಮಸ್ ಕೋರ್ಸ್ ಆಗಿದೆ. ಆದ್ರೆ ಈ ಕೋರ್ಸ್ ಮಾಡಿದ್ರೆ ಕೆರಿಯರ್ ಆಯ್ಕೆ ಲಿಮಿಟ್ ಆಗಿರುತ್ತದೆ. ಆದ್ರೆ ಈ ಕೋರ್ಸ್ ಮಾಡುದ್ರಿಂದ ನಿಮಗೆ ಖಾಸಾಗಿ ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ದುಡಿಯಲು ಬೇಕಾಗಿರುವ ಸ್ಕಿಲ್ ನಿಮ್ಮದಾಗಿರುತ್ತದೆ.

ಬ್ಯಾಚುಲರ್ ಆಫ್ ಎಜ್ಯುಕೇಶನ್ (ಬಿಎಡ್):

ಬಿಎ ಪದವೀಧರರು ಟೀಚಿಂಗ್ ಪ್ರೊಫೆಶನ್ ಅಲ್ಲಿ ಗುರುತಿಸಿಕೊಳ್ಳ ಬೇಕೆಂದಿದ್ದರೆ, ಬಿಎಡ್ ಕೋರ್ಸ್ ಮಾಡಿಕೊಳ್ಳಬಹುದು. ಇದರಿಂದ ಶಾಲೆಗಳಲ್ಲಿ ನಿಮಗೆ ಟೀಚಿಂಗ್ ಮಾಡುವ ಅವಕಾಶ ನಿಮ್ಮದಾಗುವುದು. ಅಷ್ಟೇ ಅಲ್ಲ ಈ ಕೋರ್ಸ್ ಮಾಡುವುದರಿಂದ ನಿಮ್ಮಲ್ಲಿ ಟೀಚಿಂಗ್ ಸ್ಕಿಲ್ ಹೆಚ್ಚಾಗುವುದು.

ಡಿಪ್ಲೋಮಾ ಕೋರ್ಸಸ್:

ಇನ್ನು ಬಿಎ ಮಾಡಿರುವ ವಿದ್ಯಾರ್ಥಿಗಳು ಮುಂದೆ ಕೆಲವೊಂದು ಡಿಪ್ಲೋಮಾ ಕೋರ್ಸ್ ಗಳನ್ನೂ ಕೂಡಾ ಮಾಡಬಹುದು. ಆನಿಮೇಶನ್, ಕಂಪ್ಯೂಟರ್ ಟೆಕ್ನಾಲಾಜಿ ಸೇರಿದಂತೆ ಹಲವಾರು ಕಂಪ್ಯೂಟರ್ ಕೋರ್ಸ್ ಗಳನ್ನ ಮಾಡಬಹುದು.

For Quick Alerts
ALLOW NOTIFICATIONS  
For Daily Alerts

English summary
The completion of a graduate degree is one of the biggest milestones in one's career. After the convocation ceremony, most of them might be satisfied and face a big question, 'what to do after this?' This question intimidates the fresh pass-outs until they draft a plan for the next stage. The decision they take after they graduate is very important and decides what the future will hold for them. This is common for every graduate and there is no exception for art students who possess a BA graduate degree.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X